• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Successful Story: ದೇಶದ ನೀರಿನ ಸಮಸ್ಯೆಗೆ ಪರಿಹಾರ ಕೊಡಿಸಲು ಕಾರ್ಪೊರೇಟ್ ಜಾಬ್ ತೊರೆದ ಬ್ಯಾಂಕರ್! ಇವರ ಸಾಧನೆ ನಿಮ್ಮೆಲ್ಲರಿಗೂ ಸ್ಫೂರ್ತಿ

Successful Story: ದೇಶದ ನೀರಿನ ಸಮಸ್ಯೆಗೆ ಪರಿಹಾರ ಕೊಡಿಸಲು ಕಾರ್ಪೊರೇಟ್ ಜಾಬ್ ತೊರೆದ ಬ್ಯಾಂಕರ್! ಇವರ ಸಾಧನೆ ನಿಮ್ಮೆಲ್ಲರಿಗೂ ಸ್ಫೂರ್ತಿ

ಸುಬ್ರಹ್ಮಣ್ಯ ಕುಸ್ನೂರ್

ಸುಬ್ರಹ್ಮಣ್ಯ ಕುಸ್ನೂರ್

ಅಮೂಲ್ಯವಾದ ಸಂಪನ್ಮೂಲವಾದ ಜಲವನ್ನು ಸಂರಕ್ಷಿಸಲು ನಾವು ಈಗಲೇ ಕಾರ್ಯನಿರ್ವಹಿಸಲು ಪ್ರಾರಂಭಿಸದಿದ್ದರೆ, ಹವಾಮಾನ ಬದಲಾವಣೆಯು ಮುಂದಿನ ದಿನಗಳಲ್ಲಿ ಭಾರತದ ನೀರಿನ ಬಿಕ್ಕಟ್ಟನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

  • Share this:

ಬಿರುಬೇಸಿಗೆಯಲ್ಲಿ ನೆತ್ತಿಯನ್ನು ಸುಡುವ ಬಿಸಿಲಿನ (SUN) ಝಳ ಒಂದೆಡೆಯಾದರೆ ಹನಿ ನೀರು (Water) ಸಿಗದೇ ಪರದಾಡುತ್ತಿರುವ ಅದೆಷ್ಟೋ ಹಳ್ಳಿಗಳು (Villages)  , ಗ್ರಾಮಗಳು, ಪ್ರಜೆಗಳು ನಮ್ಮ ದೇಶದಲ್ಲಿದ್ದಾರೆ. ಎಷ್ಟೋ ಕಿಲೋಮೀಟರ್ ನಡೆದು ನೀರು ತರುವಂತಹ ಪರಿಸ್ಥಿತಿ ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಕಾಣಬಹುದು. ಬಿಸಿಲು ಹೆಚ್ಚಾದಂತೆ ಬತ್ತುವ ಬಾವಿ, ನದಿ, ಹಳ್ಳ ಕೊಳ್ಳಗಳು ಇವುಗಳನ್ನೇ ಜೀವನಾಧಾರಕ್ಕೆ ಆಶ್ರಯಿಸಿರುವ ಹಳ್ಳಿಗರು, ಗ್ರಾಮಸ್ಥರು. ಹಾಗಾಗಿ ನೀರಿನ ತತ್ವಾರ ಉಂಟಾದಾಗ ನೀರಿಗಾಗಿ ಹಪಹಪಿಸುವ ಪರಿಸ್ಥಿತಿ ಇದ್ದೇ ಇರುತ್ತದೆ. ಅನಿಯಮಿತ ಮಾನ್ಸೂನ್ ಹಾಗೂ ನೀರಿನ ಸಂಪನ್ಮೂಲಗಳ ಅತಿಯಾದ ಶೋಷಣೆಯಿಂದ ಅಂತರ್ಜಲ ಮಟ್ಟವು ಆತಂಕಕಾರಿ ಮಟ್ಟಕ್ಕೆ ಕುಸಿದಿದೆ ಎಂದು ವರದಿಗಳು ತಿಳಿಸುತ್ತಿವೆ.


ಅಂತರ್ಜಲವು ಭಾರತದ ಗ್ರಾಮೀಣ ಕುಡಿಯುವ ನೀರಿನ ಶೇಕಡಾ 80 ರಷ್ಟು, ನಗರ ಕುಡಿಯುವ ನೀರಿನ ಶೇಕಡಾ 50 ರಷ್ಟು ಮತ್ತು ಸುಮಾರು ಮೂರನೇ ಎರಡರಷ್ಟು ನೀರಾವರಿ ಅಗತ್ಯಗಳನ್ನು ಒದಗಿಸುತ್ತದೆ.


ವಿಶ್ವದ ಅತಿದೊಡ್ಡ ಅಂತರ್ಜಲವನ್ನು ಹೊರತೆಗೆಯುವ ದೇಶ


ಇತ್ತೀಚಿನ ವಿಶ್ವಬ್ಯಾಂಕ್ ವರದಿಯ ಪ್ರಕಾರ ಭಾರತವು ವಿಶ್ವದ ಅತಿದೊಡ್ಡ ಅಂತರ್ಜಲವನ್ನು ಹೊರತೆಗೆಯುವ ದೇಶವಾಗಿದೆ, ಇದು ವಾರ್ಷಿಕ 244.92 ಶತಕೋಟಿ ಘನ ಮೀಟರ್ ಅಂತರ್ಜಲವನ್ನು ಹೊರತೆಗೆಯುತ್ತಿದೆ ಎಂಬ ಅಂಶವನ್ನು ಬಹಿರಂಗಪಡಿಸಿದೆ. ಈ ಪರಿಣಾಮವಾಗಿ ಕೇಂದ್ರೀಯ ಅಂತರ್ಜಲ ಮಂಡಳಿಯ ಅಂಕಿಅಂಶಗಳ ಪ್ರಕಾರ ಭಾರತದಲ್ಲಿನ 700 ಜಿಲ್ಲೆಗಳಲ್ಲಿ 256 ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ನಿರ್ಣಾಯಕ ಮಟ್ಟಕ್ಕೆ ತಲುಪಿದ್ದು ಇನ್ನು ಕೆಲವೆಡೆ ಅಂತರ್ಜಲ ಮಟ್ಟವೇ ಬತ್ತಿಹೋಗಿದೆ.\


ಇದನ್ನೂ ಓದಿ: ಹೆಣ್ಮಕ್ಕಳಿಗೆ ಹೇಳಿ ಮಾಡಿಸಿದ ಬ್ಯುಸಿನೆಸ್​ ಇದು, ಸಮ್ಮರ್​ನಲ್ಲಿ ಶುರು ಮಾಡಿದ್ರೆ ಕೈ ತುಂಬಾ ಕಾಸು!


ವಾಟರ್ ಪಾಸಿಟಿವಿಟಿ ಎಂದರೇನು?


ಅಮೂಲ್ಯವಾದ ಸಂಪನ್ಮೂಲವಾದ ಜಲವನ್ನು ಸಂರಕ್ಷಿಸಲು ನಾವು ಈಗಲೇ ಕಾರ್ಯನಿರ್ವಹಿಸಲು ಪ್ರಾರಂಭಿಸದಿದ್ದರೆ, ಹವಾಮಾನ ಬದಲಾವಣೆಯು ಮುಂದಿನ ದಿನಗಳಲ್ಲಿ ಭಾರತದ ನೀರಿನ ಬಿಕ್ಕಟ್ಟನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.


ಇಂತಹ ಒಂದು ಪ್ರಯತ್ನದಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಅಕ್ವಾಕ್ರಾಫ್ಟ್‌ನ ಸಂಸ್ಥಾಪಕ ಮತ್ತು ಸಿಇಒ ಸುಬ್ರಹ್ಮಣ್ಯ ಕುಸ್ನೂರ್ ತಮ್ಮ ಕಾರ್ಪೋರೇಟ್ ವೃತ್ತಿಯನ್ನೇ ತೊರೆದು ನೀರೆಂಬ ಅಮೂಲ್ಯ ನಿಧಿಯನ್ನು ಸಂರಕ್ಷಿಸುವ ಗುರುತರ ಜವಾಬ್ದಾರಿಯನ್ನು ಕೈಗೆತ್ತಿಕೊಂಡರು. 2010 ರಲ್ಲಿ ಕಾರ್ಪೊರೇಟ್ ಕೆಲಸವನ್ನು ತೊರೆದ ಮಾಜಿ ಬ್ಯಾಂಕರ್, 2030 ರ ವೇಳೆಗೆ ಭಾರತವನ್ನು ಧನಾತ್ಮಕವಾಗಿ ಮಾಡುವ ಗುರಿಯೊಂದಿಗೆ ಸಾಮಾಜಿಕ ಉದ್ಯಮವನ್ನು ಸ್ಥಾಪಿಸಿದರು.


ವಾಟರ್ ಪಾಸಿಟಿವಿಟಿ, ಎಂದರೆ ನಾವು ಹೊರತೆಗೆಯುವುದಕ್ಕಿಂತ ಹೆಚ್ಚಿನ ನೀರನ್ನು ಮರಳಿ ಪರಿಸರಕ್ಕೆ ಹಿಂತಿರುಗಿಸುವುದಾಗಿದೆ. ಇಂತಹುದೇ ಉದ್ದೇಶವನ್ನು ಹೊಂದಿರುವ ಸುಬ್ರಹ್ಮಣ್ಯ ಅವರು ಅಕ್ವಾಕ್ರಾಫ್ಟ್ ಸಂಸ್ಥೆಯನ್ನು ಹುಟ್ಟುಹಾಕಿದ್ದು ವಾಟರ್ ಪಾಸಿಟಿವಿಟಿ ಅಂಶವನ್ನು ಜಾರಿಗೆ ತರಲು ಸಂಸ್ಥೆಯನ್ನು ವೇದಿಕೆಯನ್ನಾಗಿ ಬಳಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.


ಸಮಸ್ಯೆಗಳನ್ನು ಗುರುತಿಸಲು ಮತ್ತು ಪರಿಹಾರಗಳನ್ನು ಕಂಡುಹಿಡಿಯಲು ಪರಿಶ್ರಮ ವಹಿಸಿರುವ ಸುಬ್ರಹ್ಮಣ್ಯ ಅಸ್ತಿತ್ವದಲ್ಲಿರುವ ತಂತ್ರಜ್ಞಾನ ಮತ್ತು ನಮ್ಮ ನಾವೀನ್ಯತೆಗಳೊಂದಿಗೆ ನಾವು ಪ್ರಸ್ತುತ ಕುಡಿಯುವ ನೀರು, ನೈರ್ಮಲ್ಯ, ಒಳಚರಂಡಿ ಸೇರಿದಂತೆ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ.


ಭಾರತದ ನೀರಿನ ಬಿಕ್ಕಟ್ಟಿನ ಮೂಲ


ಅವರು ಹೇಳುವ ಪ್ರಕಾರ ನೀರನ ಬಿಕ್ಕಟ್ಟಿನ ಮೂಲಕ್ಕೆ ಪ್ರಧಾನ ಕಾರಣ ಮಳೆಯಾಗಿದೆ. ಋತುಮಾನಕ್ಕೆ ಅನುಸಾರವಾಗಿ ದೇಶದಲ್ಲಿ ಮಳೆ ಸುರಿಯುತ್ತದೆ.\ ಭಾರತದ ಶೇಕಡಾ 80 ರಷ್ಟು ಭಾಗಕ್ಕೆ ಅಂತರ್ಜಲವನ್ನೇ ಆಶ್ರಯಿಸಿಕೊಂಡಿದ್ದೇವೆ. ಬೋರ್‌ವೆಲ್‌ಗಳು ಅಗಾಧವಾಗಿ ಅಂತರ್ಜಲದ ನೀರನ್ನು ಕೊರೆಯುತ್ತಿರುವುದರಿಂದ ಅಂತರ್ಜಲ ಮಟ್ಟ ಕುಸಿದಿದೆ ಎಂಬುದು ಅವರ ಹೇಳಿಕೆಯಾಗಿದೆ.


ರಾಸಾಯನಿಕಗಳು, ವಿದ್ಯುತ್ ಇಲ್ಲದೆ ನೀರನ್ನು ಶುದ್ಧೀಕರಿಸುವುದು


ಸುಬ್ರಹ್ಮಣ್ಯ ಸ್ಥಾಪಿಸಿರುವ ಸಂಸ್ಥೆ ಆಕ್ವಾಕ್ರಾಫ್ಟ್ ನೀರಿನ ವ್ಯರ್ಥ ಮತ್ತು ಕೆಸರು ತಡೆಯುವ ಶುದ್ಧೀಕರಣ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸಿದೆ. ಈ ಪ್ರಕ್ರಿಯೆಗೆ ವಿದ್ಯುತ್ ಅಗತ್ಯವಿಲ್ಲ ಗುರುತ್ವಾಕರ್ಷಣೆಯ ಮೇಲೆ ಕೆಲಸ ಮಾಡುತ್ತದೆ ಮತ್ತು ಇಡೀ ಹಳ್ಳಿಗೆ ನೀರು ಸರಬರಾಜು ಮಾಡಬಹುದು.


ಶೌಚಾಲಯಗಳ ನೀರನ್ನು ಮರುಬಳಕೆ ಮಾಡುವುದು


ಶೌಚಾಲಯದ ಸರಾಸರಿ ಫ್ಲಶ್ 6-8 ಲೀಟರ್ ನೀರನ್ನು ಬಳಸುತ್ತದೆ. ಅಕ್ವಾಕ್ರಾಫ್ಟ್ ಜೈವಿಕ-ಶೌಚಾಲಯಗಳಿಗಾಗಿ ಬಯೋಡೈಜೆಸ್ಟರ್ ಅನ್ನು ಅಭಿವೃದ್ಧಿಪಡಿಸಿದೆ, ಇದು ಈ ವ್ಯರ್ಥವನ್ನು ಕಡಿಮೆ ಮಾಡಲು ಮಲವನ್ನು ದ್ರವ ಗೊಬ್ಬರವಾಗಿ ಪರಿವರ್ತಿಸುತ್ತದೆ, ನೀರನ್ನು ಬಳಸಿ ಅದನ್ನು ಫ್ಲಶ್ ಮಾಡುವ ಅಗತ್ಯವನ್ನು ತೆಗೆದುಹಾಕುತ್ತದೆ ಎಂಬುದು ಸುಬ್ರಹ್ಮಣ್ಯ ಅವರ ಹೇಳಿಕೆಯಾಗಿದೆ.




2010 ರಲ್ಲಿ ಕರ್ನಾಟಕದ ಕಲಬುರಗಿಯಲ್ಲಿ ತಮ್ಮ ಮೊದಲ ಯೋಜನೆಯನ್ನು ನಿರ್ಮಿಸಿದ ಸಂಸ್ಥೆ, ಪ್ರಸ್ತುತ ಭಾರತದಾದ್ಯಂತ ಒಂಬತ್ತು ರಾಜ್ಯಗಳಲ್ಲಿ 4,000 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸ್ಥಾಪನೆಗಳನ್ನು ಹುಟ್ಟುಹಾಕಿದೆ.


ಸಮುದಾಯ ಮಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆಯ ನಿವಾರಣೆ, ಶಾಲೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಜೈವಿಕ ಶೌಚಾಲಯಗಳಂತಹ ವಿವಿಧ ರೀತಿಯ ಪರಿಹಾರಗಳನ್ನು ಸಂಸ್ಥೆ ನಿರ್ಮಿಸಿದೆ ಎಂದು ಸುಬ್ರಹ್ಮಣ್ಯ ತಿಳಿಸಿದ್ದಾರೆ. ನೀರಿನ ಎಟಿಎಂಗಳ ಸಂಯೋಜನೆಯನ್ನು ಸಹ ನಿರ್ಮಿಸಿರುವುದಾಗಿ ಸುಬ್ರಹ್ಮಣ್ಯ ಹೆಮ್ಮೆಯಿಂದ ಹೇಳುತ್ತಾರೆ.


ಸುಸ್ಥಿರ ನೀರಿನ ಬಳಕೆಗೆ ಸುಬ್ರಹ್ಮಣ್ಯ ಕುಸ್ನೂರು ನೀಡಿರುವ ಸಲಹೆಗಳು


  • ಮಳೆನೀರು ಕೊಯ್ಲು ಆರಂಭಿಸುವುದು

  • ಕೊಳಚೆ ನೀರಿನ ಮರುಬಳಕೆ ಮಾಡುವುದು

  • ತೋಟಗಾರಿಕೆ ಹಾಗೂ ಗೃಹಪಯೋಗಕ್ಕಾಗಿ ಮರುಬಳಕೆಯ ನೀರನ್ನು ಬಳಸುವುದು

  • ಶವರ್ ಬದಲಿಗೆ ಬಕೆಟ್ ಬಳಕೆ

  • ಬ್ರಷ್ ಮಾಡುವಾಗ ಮತ್ತು ಶೇವಿಂಗ್ ಮಾಡುವಾಗ ಟ್ಯಾಪ್ ಅನ್ನು ತೆರೆದಿಡದೇ ಇರುವುದು

  • ಪಾತ್ರೆ ತೊಳೆಯುವಾಗ ಬಟ್ಟೆ ತೊಳೆಯುವಾಗ ನಲ್ಲಿಯನ್ನು ತೆರೆದಿಡದೇ ಇರುವುದು

  • ಪ್ರತಿದಿನ ಕಾರು ತೊಳೆಯುವುದನ್ನು ನಿಲ್ಲಿಸಿ.

top videos
    First published: