Salary Hike: ರಿಸೈನ್ ಮಾಡಿದ ಉದ್ಯೋಗಿಗಳಿಗೆ ಬಂಪರ್ ಆಫರ್, ನೋಟಿಸ್‌ ಪಿರಿಯಡ್​ನಲ್ಲಿ ಭರ್ಜರಿ ಸಂಬಳ!

ಕೆಲವು ಉದ್ಯೋಗಿಗಳು ಹೇಗಿದ್ದರೂ ನಮ್ಮದು ನೋಟಿಸ್‌ ಅವಧಿ ಅಂತಾ ಕೆಲಸದ ಬಗ್ಗೆ ಗಮನ ಹರಿಸದೇ ಬೇಕಾಬಿಟ್ಟಿ ಕೆಲಸ ಮಾಡುತ್ತಾರೆ. ಹೀಗೆ ಕಚೇರಿಯಿಂದ ನಿರ್ಗಮಿಸುವ ಉದ್ಯೋಗಿಗಳನ್ನು ಪ್ರೋತ್ಸಾಹಿಸುವ ಪ್ರಯತ್ನದಲ್ಲಿ, ಯುಎಸ್ ಮೂಲದ ಕಂಪನಿಯು ಉದ್ಯೋಗಿಗಳಿಗೆ ಅವರ ನೋಟಿಸ್ ಅವಧಿಯಲ್ಲಿ ಶೇಕಡಾ 10ರಷ್ಟು ಹೆಚ್ಚಳವನ್ನು ನೀಡುವುದಾಗಿ ಹೇಳಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಒಂದು ಖಾಸಗಿ ಕಂಪನಿಯಲ್ಲಿ (Private company) ಉದ್ಯೋಗ ಮಾಡುವ ಉದ್ಯೋಗಿಗಳು ತಮ್ಮ ಕೆಲಸವನ್ನು ಬದಲಾಯಿಸುವ ವೇಳೆ ನಿಯಮಾನುಸಾರ ನೋಟಿಸ್‌ ಪೀರಿಯಡ್‌ ಅನ್ನು ಪೂರ್ತಿಗೊಳಿಸಲೇ ಬೇಕು. ಇಂತಿಷ್ಟು ದಿನ ಅಂತಿರುವ ನೋಟಿಸ್ ಅವಧಿಯನ್ನು (Notice period) ಪೂರ್ಣಗೊಳಿಸಿದಲ್ಲಿ ಮಾತ್ರ ಕಂಪನಿ ಉದ್ಯೋಗಿಗಳನ್ನು ಬೇರೆ ಸಂಸ್ಥೆಗೆ ಹೋಗಲು ಅನುಮತಿ ನೀಡುತ್ತದೆ. ಇನ್ನು ಕೆಲವು ಉದ್ಯೋಗಿಗಳು ಹೇಗಿದ್ದರೂ ನಮ್ಮದು ನೋಟಿಸ್‌ ಅವಧಿ ಅಂತಾ ಕೆಲಸದ ಬಗ್ಗೆ ಗಮನ ಹರಿಸದೇ ಬೇಕಾಬಿಟ್ಟಿ ಕೆಲಸ (Work) ಮಾಡುತ್ತಾರೆ. ಹೀಗೆ ಕಚೇರಿಯಿಂದ ನಿರ್ಗಮಿಸುವ ಉದ್ಯೋಗಿಗಳನ್ನು ಪ್ರೋತ್ಸಾಹಿಸುವ ಪ್ರಯತ್ನದಲ್ಲಿ, ಯುಎಸ್ ಮೂಲದ ಕಂಪನಿಯು ಉದ್ಯೋಗಿಗಳಿಗೆ (Employees) ಅವರ ನೋಟಿಸ್ ಅವಧಿಯಲ್ಲಿ ಶೇಕಡಾ 10ರಷ್ಟು ಹೆಚ್ಚಳವನ್ನು ನೀಡುವುದಾಗಿ ಹೇಳಿದೆ.

ರಾಜೀನಾಮೆ ನೀಡಿದ ಉದ್ಯೋಗಿಗಳಿಗೆ ಶೇ.10ರಷ್ಟು ಹೆಚ್ಚುವರಿ ವೇತನ
ನೋಟಿಸ್‌ ಅವಧಿಯಲ್ಲಿ ಕಾರ್ಯ ಕ್ಷಮತೆ ಹೆಚ್ಚಿಸಲು ಮತ್ತು ರಾಜೀನಾಮೆ ನೀಡಿದ ನೌಕರರ ನಿರ್ಧಾರವನ್ನು ಗೌರವಿಸಲು ನಾವು ಅವರಿಗೆ ಸಂಬಳ ಹೆಚ್ಚಿಸಿದ್ದೇವೆ ಎಂದು ಯುಎಸ್‌ ಮಾರ್ಕೆಟಿಂಗ್‌ ಕಂಪನಿಯಾದ ಗೊರಿಲ್ಲಾವು ತಿಳಿಸಿದೆ. ಈ ಬಗ್ಗೆ ಲಿಂಕ್ಡ್‌ಇನ್‌ನಲ್ಲಿ, ಮಾರ್ಕೆಟಿಂಗ್ ಕಂಪನಿ ಗೊರಿಲ್ಲಾದ ಸಂಸ್ಥಾಪಕ ಜಾನ್ ಫ್ರಾಂಕೊ ಅವರು ಪೋಸ್ಟ್ ಮಾಡಿದ್ದಾರೆ. ಜಾನ್ ಫ್ರಾಂಕೊ ಅವರು ಹೊರಹೋಗುವ ಉದ್ಯೋಗಿ, ಹೊಸ ಉದ್ಯೋಗಿ ಮತ್ತು ಕಂಪನಿಯ ನಡುವೆ 'ಸುಗಮ ಪರಿವರ್ತನೆ' ಎಂಬ ಯೋಜನೆಯನ್ನು ಲಿಂಕ್ಡ್‌ಇನ್‌ ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Indian Inflation: ಭಾರತದಲ್ಲಿನ ಹಣದುಬ್ಬರದ ಒತ್ತಡ ಅಷ್ಟೇನೂ ದೊಡ್ಡದಲ್ಲ: HSBC ಮುಖ್ಯ ಕಾರ್ಯನಿರ್ವಾಹಕ

ಮೂರು ತಿಂಗಳ ನೋಟಿಸ್ ಅವಧಿಯನ್ನು ಪೂರೈಸುವ ಉದ್ಯೋಗಿಯ ಪ್ರಕ್ರಿಯಾ ವಿಧಾನವು, ಕಂಪನಿಯು ಮುಂದೆ ಸಾಗಲು, ಹೊಸ ವ್ಯಕ್ತಿಯನ್ನು ನೇಮಿಸಿಕೊಳ್ಳಲು ಮತ್ತು ಅವರೆಲ್ಲರ ನಡುವೆ ಸುಗಮ ಸ್ಥಿತ್ಯಂತರವನ್ನು ನಡೆಸಲು ಅನುವು ಮಾಡಿಕೊಡುತ್ತದೆ ಎಂದು ಫ್ರಾಂಕೊ ಹೇಳಿದ್ದಾರೆ. ಲಿಂಕ್ಡ್‌ಇನ್‌ ನಲ್ಲಿ ಫ್ರಾಂಕೊ "ನಮ್ಮ ಉದ್ಯೋಗಿಗಳಲ್ಲಿ ಯಾರಾದರೂ ರಾಜೀನಾಮೆ ನೀಡಿದರೆ, ಅವರು ನೋಟಿಸ್ ಅವಧಿಯ ಭಾಗವಾಗಿ 6 ​​ತಿಂಗಳು ಕೆಲಸ ಮಾಡಬೇಕಾಗುತ್ತದೆ. ಆದರೆ ನಾವು ನೌಕರರ ಮೇಲೆ ಕಠಿಣ ನಿಯಮಗಳನ್ನು ಹಾಕಲು ಬಯಸುವುದಿಲ್ಲ. ಇದಲ್ಲದೆ ಅವರು ಹೊಸ ಉದ್ಯೋಗವನ್ನು ಹುಡುಕಲು ಸ್ವಲ್ಪ ಸಮಯ ಹಿಡಿಯುತ್ತದೆ.

ಅದಕ್ಕಾಗಿಯೇ ಅವರು ಕೇವಲ 3 ತಿಂಗಳಲ್ಲಿ ಬಿಡುವಂತೆ ಹೊಸ ನೀತಿ ತಂದಿದ್ದೇವೆ. ಉಳಿದ ಮೂರು ತಿಂಗಳಿಗೆ ಶೇ 10ರಷ್ಟು ಹೆಚ್ಚುವರಿ ವೇತನವನ್ನೂ ಅವರಿಗೆ ನೀಡುತ್ತೇವೆ." ಎಂದು ಬರೆದುಕೊಂಡಿದ್ದಾರೆ. ಉದ್ಯೋಗಿಗಳು ಕಂಪನಿ ಬಿಟ್ಟು ಹೋದ ನಂತರ ಕಂಪನಿ ಹೇಗೆ ಇದಕ್ಕೆ ತಯಾರಿ ಮಾಡಿಕೊಳ್ಳಬೇಕು ಎಂಬುವುದಕ್ಕೆ ನಮಗೆ ಇದು ಸಮಯವನ್ನು ನೀಡುತ್ತದೆ" ಎಂದು ಫ್ರಾಂಕೊ ಪೋಸ್ಟ್‌ ನಲ್ಲಿ ಬರೆದಿದ್ದಾರೆ.

ಸಿಕ್ಕಾಪಟ್ಟೆ ಲೈಕ್ ಹಾಗು ಕಾಮೆಂಟ್ ಗಳನ್ನೂ ಪಡೆದುಕೊಂಡಿದೆ ಈ ಪೋಸ್ಟ್ 
ಫ್ರಾಂಕೊ, ಕಂಪನಿಯ ಒಬ್ಬ ಉದ್ಯೋಗಿಯ ಉದಾಹರಣೆಯನ್ನು ಸಹ ಪ್ರಸ್ತುತಪಡಿಸಿದರು. ಉದ್ಯೋಗಿಯೊಬ್ಬರ ನೋಟಿಸ್‌ ಅವಧಿಯಲ್ಲಿ ಸಂಬಳವನ್ನು 10% ಹೆಚ್ಚಿಸಿದ್ದೇವೆ ಮತ್ತು ಬೇರೆ ಉದ್ಯೋಗಿಗಳಿಗಾಗಿ ನಮ್ಮ ಹುಡುಕಾಟವನ್ನು ಪ್ರಾರಂಭಿಸಿದ್ದೇವೆ ಎಂದಿದ್ದಾರೆ. ಉದ್ಯಮದ ವೀಕ್ಷಕರ ಪ್ರಕಾರ, ಕಡಿಮೆ ಉದ್ಯೋಗದ ಕೊಡುಗೆಗಳ ಹೊರತಾಗಿಯೂ, 25-35% ಅಭ್ಯರ್ಥಿಗಳು ಸೇರುವ ಮೊದಲು ಬಹುತೇಕ ವಲಯಗಳಲ್ಲಿ ಕೈಬಿಡುತ್ತಿದ್ದಾರೆ ಎಂದು ವರದಿ ಮಾಡಿದ್ದಾರೆ. ಎರಡು ದಿನಗಳ ಹಿಂದೆ ಹಂಚಿಕೊಂಡ ಪೋಸ್ಟ್‌ಗೆ 14,000 ಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಮತ್ತು 500 ಕ್ಕೂ ಹೆಚ್ಚು ಕಾಮೆಂಟ್‌ಗಳು ಬಂದಿವೆ.

ಇದನ್ನೂ ಓದಿ:  Personal Loan: ಈ ಕಾರಣಗಳಿಗೋಸ್ಕರ ಮಾತ್ರ ಲೋನ್​ ತಗೋಬೇಡಿ, ಆಮೇಲೆ ತಲೆ ಮೇಲೆ ಕೈ ಹೊತ್ತು ಕೂರಬೇಕಾಗುತ್ತೆ!

ಫ್ರಾಂಕೋ ಪೋಸ್ಟ್‌ ಗೆ ಕಾಮೆಂಟ್‌ ಮಾಡಿದ ಬಳಕೆದಾರರೊಬ್ಬರು "ಇದು ಖಂಡಿತ ಆಸಕ್ತಿದಾಯಕ ವಿಧಾನವಾಗಿದೆ, ಆದರೆ 10% ಹೆಚ್ಚಳದಿಂದ ಪ್ರಯೋಜನ ಪಡೆಯದಿರುವ ನಿಮ್ಮ ನಿಷ್ಠಾವಂತ ಉದ್ಯೋಗಿಗಳಿಗೆ ಇದು ಏನು ಹೇಳುತ್ತದೆ?" ಎಂದು ಕೇಳಿದ್ದಾರೆ . ಇದಕ್ಕೆ, ಫ್ರಾಂಕೊ ಉತ್ತರಿಸಿ, "ಅವರು ಸಾಮಾನ್ಯವಾಗಿ ವಾರ್ಷಿಕವಾಗಿ 10% + ಹೆಚ್ಚಳವನ್ನು ಪಡೆಯುತ್ತಿದ್ದಾರೆ, ಹೆಚ್ಚುವರಿಯಾಗಿ, ಉದ್ಯೋಗದ ಅನುಭವವು ಪ್ರಬಲವಾಗಿದೆ ಎಂದು ಉತ್ತರಿಸಿದ್ದಾರೆ.
Published by:Ashwini Prabhu
First published: