Business: ಆಡುವ ವಯಸ್ಸಲ್ಲಿ ಬ್ಯುಸಿನೆಸ್ ಮಾಡಿ ತಿಂಗಳಿಗೆ ಲಕ್ಷಗಟ್ಟಲೆ ದುಡಿಯುತ್ತಿರುವ 13ರ ಪೋರಿ

ಅವಳ ಹೆಸರು ಅನೌಷ್ಕ ಪೊಡ್ಡಾರ್. ಹದಿಹರೆಯದವರ ವಯಸ್ಸಿನ ವೈಯುಕ್ತಿಕ ಕಾಳಜಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು, ಪರ್ಸನಲ್‍ ಕೇರ್ ಉತ್ಪನ್ನಗಳ ಉದ್ಯಮವನ್ನು ಆರಂಭಿಸಿದ ಶಾಲೆಗೆ ಹೋಗುವ 13 ರ ಬಾಲೆ ಇವಳು.

13 ವರ್ಷದ ಉದ್ಯಮಿ

13 ವರ್ಷದ ಉದ್ಯಮಿ

  • Share this:

ಓದುವ ವಯಸ್ಸಿನ ಮಕ್ಕಳು, ಒಮ್ಮೊಮ್ಮೆ ದೊಡ್ಡವರನ್ನು ಮೂಗಿನ ಮೇಲೆ ಬೆರಳಿಡುವಂತೆ ಮಾಡುವ ಸಾಧನೆಗಳನ್ನು ತೋರಿದ ಸುದ್ದಿಗಳನ್ನು ಆಗಾಗ ಕೇಳುತ್ತಿರುತ್ತೇವೆ. ಕಲೆ, ಸಾಹಸ, ಸಂಸ್ಕೃತಿ - ಹೀಗೆ ಹಲವು ರಂಗಗಳಲ್ಲಿ ಮಕ್ಕಳ ವಯಸ್ಸಿಗೆ ಮೀರಿದ ಸಾಧನೆಗಳನ್ನು ನೋಡಿ ನಾವು ಅಚ್ಚರಿ ಪಡುವುದು ಕೂಡ ಉಂಟು. ಆದರೆ, ಉದ್ಯಮ ಕ್ಷೇತ್ರವನ್ನು ಪ್ರವೇಶಿಸಿ, ತಿಂಗಳಿಗೆ ಲಕ್ಷಗಟ್ಟಲೆ ಆದಾಯ ಪಡೆಯುವ ವಿದ್ಯಾರ್ಥಿಗಳ (Students) ಕಥೆ ಕೇಳಿದ್ದೀರಾ..? ಇಲ್ಲವಾದಲ್ಲಿ, ಅಂತಹ ವಿದ್ಯಾರ್ಥಿನಿಯೊಬ್ಬಳ ಕಥೆ ಇಲ್ಲಿದೆ. ಅವಳ ಹೆಸರು ಅನೌಷ್ಕ ಪೊಡ್ಡಾರ್. ಹದಿಹರೆಯದವರ ವಯಸ್ಸಿನ ವೈಯುಕ್ತಿಕ ಕಾಳಜಿಗೆ (Personal Care) ಸಂಬಂಧಿಸಿದ ಸಮಸ್ಯೆಗಳನ್ನು (Problems) ಅರ್ಥ ಮಾಡಿಕೊಂಡು, ಪರ್ಸನಲ್‍ ಕೇರ್ ಉತ್ಪನ್ನಗಳ ಉದ್ಯಮವನ್ನು ಆರಂಭಿಸಿದ ಶಾಲೆಗೆ ಹೋಗುವ 13 ರ ಬಾಲೆ ಇವಳು.


“ಹದಿಹರೆಯದವರು, ಮೊಡವೆ, ಕಪ್ಪು ಕಲೆ ಮತ್ತು ಚರ್ಮದಲ್ಲಿನ ಬಿರುಕು ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಾರೆ ಹಾಗೂ ಅವರಿಗೆ ಕೂದಲು ಮತ್ತು ಚರ್ಮದ ವಿವಿಧ ಪ್ರಕಾರಗಳಿಗೆ ಸರಿಯಾದ ಪೋಷಣೆಯ ಅಗತ್ಯವಿದೆ ಎಂಬುವುದು ನನಗೆ ತಿಳಿದಿತ್ತು. ಕಳೆದ ವರ್ಷ, ನಾನು ಅಮ್ಮ ಬಳಸುವ ಜನಪ್ರಿಯ ಬ್ರ್ಯಾಂಡ್‌ನ ಉತ್ಪನ್ನಗಳನ್ನು ಬಳಸಿ, ಚರ್ಮದ ಅಲರ್ಜಿಗೆ ತುತ್ತಾಗಿದ್ದೆ.


ಸಂಶೋಧನೆ ಮಾಡಿ ಹೊಸ ಐಡಿಯಾ ಹುಡುಕಿದ ಬಾಲೆ

ದೊಡ್ಡವರಿಗೆ ಮತ್ತು ಮಕ್ಕಳಿಗೆ ಭಾರತದಲ್ಲಿ ಹಲವು ಬಗೆಯ ವೈಯುಕ್ತಿಕ ಆರೈಕೆ ಉತ್ಪನ್ನಗಳಿವೆ, ಆದರೆ ಹದಿಹರೆಯದವರಿಗೆ ಕೆಲವೇ ಕೆಲವು ವೈಯುಕ್ತಿಕ ಆರೈಕೆ ಉತ್ಪನ್ನಗಳಿಗೆ ಎಂಬುದನ್ನು ನಾನು ಸಂಶೋಧನೆಯಿಂದ ಅರಿತುಕೊಂಡೆ” ಎನ್ನುತ್ತಾರೆ ಅನೌಷ್ಕಾ.


ಧೀರೂಬಾಯಿ ಅಂಬಾನಿ ಶಾಲೆಯ ವಿದ್ಯಾರ್ಥಿನಿ


ಮುಂಬೈಯ ಧೀರೂಬಾಯಿ ಅಂಬಾನಿ ಶಾಲೆಯ ವಿದ್ಯಾರ್ಥಿನಿ ಆಗಿರುವ ಅನೌಷ್ಕಾಗೆ ಉದ್ಯಮ ಕ್ಷೇತ್ರದಲ್ಲಿ ಏನಾದರೂ ದೊಡ್ಡದ್ದನ್ನು ಸಾಧಿಸುವ ಬಯಕೆ. ಎಲೋನ್ ಮಸ್ಕ್, ಸ್ಟೀವ್ ಜಾಬ್ಸ್ ಮತ್ತು ಬಿಲ್‍ಗೇಟ್ಸ್‌ನಂತಹ ಉದ್ಯಮ ಕ್ಷೇತ್ರದ ತಾರೆಗಳು ಆಕೆಗೆ ಮಾದರಿ.


ಸ್ನ್ಯಾಝ್ ಎಂಬ ಪರ್ಸನಲ್ ಕೇರ್ ಉತ್ಪನ್ನ

ತನ್ನಂತೆಯೇ ಅನೇಕರು, ಸೂಕ್ತ ವೈಯಕ್ತಿಕ ಕಾಳಜಿ ಉತ್ಪನ್ನಗಳ ಕೊರತೆಯನ್ನು ಎದುರಿಸುತ್ತಿದ್ದಾರೆ ಎಂಬುವುದನ್ನು ಕಂಡುಕೊಂಡ ಅನೌಷ್ಕಾ, ಹದಿಹರೆಯದವರನ್ನು ಕೇಂದ್ರೀಕರಿಸಿ ಸ್ನ್ಯಾಝ್ ಎಂಬ ಪರ್ಸನಲ್ ಕೇರ್ ಉತ್ಪನ್ನ ಸರಣಿಯನ್ನು ಆರಂಭಿಸಲು ನಿರ್ಧರಿಸಿದರು.


ಇದರ ಗುರಿ ಏನು?

ಅನೌಷ್ಕಾ ಹೇಳುವ ಪ್ರಕಾರ, ಸ್ನ್ಯಾಝ್ ಉತ್ಪನ್ನವನ್ನು ಹದಿಹರೆಯದವರ ಅಗತ್ಯಕ್ಕೆ ತಕ್ಕಂತೆ ವಿನ್ಯಾಸ ಮಾಡಲಾಗಿದೆ ಮತ್ತು ಅದು ಮೊಡವೆ ಹಾಗೂ ಕೂದಲು ಒಡೆಯುವುದು ಮುಂತಾದ ಸಾಮಾನ್ಯ ಸಮಸ್ಯೆಗಳನ್ನು ಪರಿಹರಿಸುತ್ತವೆ. ಹದಿಹರೆಯದವರಿಗೆ ತಮ್ಮ ವೈಯುಕ್ತಿಕ ಆರೈಕೆಯ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಸಹಾಯ ಮಾಡುವ ಗುರಿ ಸ್ನ್ಯಾಝ್‍ನದ್ದು.


ಇದನ್ನೂ ಓದಿ: ನಿಮ್ಮ ವೃತ್ತಿಜೀವನದ ಆರಂಭದಲ್ಲೇ ಮನೆ ಖರೀದಿಸೋ ಪ್ಲಾನ್ ಮಾಡಿದ್ದೀರಾ? ಹಾಗಾದ್ರೆ ಈ ವಿಚಾರ ತಿಳಿಯಲೇಬೇಕು

“ಬಿ ವಾಟ್ ಯು ವಾಂಟ್” ಎಂಬ ಉತ್ಪನ್ನದ ಗುರಿಗೆ ತಕ್ಕ ಅನುರೂಪವಾದ ಅಡಿ ಬರಹವನ್ನು ಈ ಬ್ರ್ಯಾಂಡ್‌ ಹೊಂದಿದೆ. ಆಕೆ ಥಾಪತ್ ಎಂಟ್ರಿಪ್ರೀನರ್‌ ಅಕಾಡೆಮಿಯ ಭಾಗವಾದರು ಮತ್ತು ಅಲ್ಲಿ ಸೇಲ್ಸ್ ಹಾಗೂ ಮಾರ್ಕೆಟಿಂಗ್, ಹಣಕಾಸು ನಿರ್ವಹಣೆ, ಪೂರೈಕೆ ಸರಣಿಯ ಪರಿಗಣನೆಗಳು ಮತ್ತಿತರ ವ್ಯಾಪಾರದ ಪ್ರಾಥಮಿಕ ವಿಷಯಗಳನ್ನು ಅರ್ಥ ಮಾಡಿಕೊಂಡರು. ಅದರಿಂದ ಅವರಿಗೆ, ತನ್ನ ಉದ್ಯಮ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಲು ಮತ್ತು ನಿರಂತರ ಚರ್ಚೆ ಮತ್ತು ಆ ಕ್ಷೇತ್ರದ ತಜ್ಞೆ ಸಲಹೆಗಳ ಸಹಾಯದಿಂದ ಅದನ್ನು ವಾಸ್ತವಕ್ಕೆ ತರಲು ಸಾಧ್ಯವಾಯಿತು.


ಉದ್ಯಮಿಯಾಗುವುದು ಸುಲಭವಲ್ಲ


ಉದ್ಯಮದ ಯೋಜನೆಯನ್ನು ತಯಾರಿಸಿದ ಅನೌಷ್ಕಾಗೆ, ಅಗತ್ಯವಿದ್ದು ಮೂಲ ಬಂಡವಾಳವನ್ನು ಒದಗಿಸಿದ್ದು ಆಕೆಯ ತಂದೆ ಅಭಿಷೇಕ್ ಪೊಡ್ಡರ್. ಬಳಿಕ, ಬಹಳಷ್ಟು ಪರೀಕ್ಷೆಗಳು ಮತ್ತು ಮೂಲಮಾದರಿಗಳ ಬಳಿಕ, ಸ್ನ್ಯಾಝ್ ಅಂತಿಮ ಸೂತ್ರೀಕರಣ ಮಾಡಲಾಯಿತು. ವಿಜ್ಞಾನಿಗಳು, ವಾರಗಟ್ಟಲೆ ಸಂಶೋಧನೆ ಮತ್ತು ಪ್ರಯೋಗಗಳನ್ನು ನಡೆಸಿದ ಬಳಿಕ, ಸ್ನ್ಯಾಝ್ ಶಾಂಪೂ ಮತ್ತು ಕಂಡೀಶನರ್‌ನ ಸೂತ್ರಗಳನ್ನು ವಿನ್ಯಾಸಗೊಳಿಸಿದರು. ಮುಂಬೈ ಮೂಲದ ತಯಾರಕರೊಬ್ಬರ ಸಹಭಾಗಿತ್ವದಲ್ಲಿ, ಅನೌಷ್ಕಾ ಸ್ನ್ಯಾಝ್ ಉತ್ಪನ್ನವನ್ನು ಅಭಿವೃದ್ಧಿಪಡಿಸಿದ್ದಾರೆ. ಅದರ ತಯಾರಿಕಾ ಘಟಕ ಮುಂಬೈನ ಧುಲೆಯಲ್ಲಿದೆ.


ಇದನ್ನೂ ಓದಿ: PM Kisan: 2 ಸಾವಿರ ನಿಮ್ಮ ಖಾತೆಗೆ ಬರಲಿದೆಯೇ ತಿಳಿಯಲು ಒಂದೇ ಒಂದು ಫೋನ್ ಕಾಲ್ ಮಾಡಿ! ನಂಬರ್ ಇಲ್ಲಿದೆ

“ಆ್ಯಪಲ್ ಅಡಿಕ್ಷನ್ “ ಶಾಂಪೂಗಳು ಮತ್ತು “ಆರ್ಗನ್ ಅಂಬೆರ್” ಕಂಡೀಶನರ್‌ಗಳು ಸ್ನ್ಯಾಝ್‍ನ ಆರಂಭದ ಉತ್ಪನ್ನಗಳು. ಈ ಬ್ರಾಂಟ್ ಪೇಟಾದ ಮಾರ್ಗಸೂಚಿಗಳನ್ನು ಅನುಸರಿಸುತ್ತದೆ ಮತ್ತು ಅದರಲ್ಲಿ ಸಲ್ಫೇಟ್, ಪ್ಯಾರಬೀನ್ ಮತ್ತು ಫಾಸ್ಪೆಟ್‍ಗಳಂತಹ ಯಾವುದೇ ಹಾನಿಕಾರಕ ರಾಸಾಯನಿಕಗಳು ಇಲ್ಲ.


250 ಮಿಲಿಯ ಒಂದು ಸ್ನ್ಯಾಝ್ ಶಾಂಪೂ ಬಾಟಲಿಯ ಬೆಲೆ 600 ರೂ

250 ಮಿಲಿಯ ಒಂದು ಸ್ನ್ಯಾಝ್ ಶಾಂಪೂ ಬಾಟಲಿಯ ಬೆಲೆ 600 ರೂ. ಈ ಬ್ರ್ಯಾಂಡ್‌ ಬಿಡುಗಡೆಯಾದ ಮೊದಲ ತಿಂಗಳಲ್ಲೇ 1.2 ಲಕ್ಷ ರೂ ಆದಾಯವನ್ನು ಗಳಿಸಿಕೊಟ್ಟಿತು ಎನ್ನುತ್ತಾರೆ ಅನೌಷ್ಕಾ. ಸದ್ಯಕ್ಕೆ ಈ ಉತ್ಪನ್ನ ತನ್ನ ವೆಬ್‍ಸೈಟ್ ಮತ್ತು ಇನ್‍ಸ್ಟಾಗ್ರಾಂನಲ್ಲಿ ಲಭ್ಯವಿದ್ದು, ಮುಂಬೈಯೊಳಗೆ ಮಾತ್ರ ವಿತರಣೆ ಮಾಡುವ ಸೌಲಭ್ಯ ಹೊಂದಿದೆ. ಆದರೆ, ಅಮೆಜಾನ್, ಫ್ಲಿಪ್‍ಕಾರ್ಟ್ ಮತ್ತು ನೈಕಾದಲ್ಲೂ ಭಾರತದ ಮಟ್ಟದಲ್ಲಿ ಇದು ಲಭ್ಯವಾಗುವಂತೆ ಮಾಡುವ ಉದ್ದೇಶ ಅನೌಷ್ಕಾಗೆ ಇದೆ.


ಉದ್ಯಮಿಯಾವುದು ಸುಲಭವಲ್ಲ

ಉದ್ಯಮಿಯಾವುದು ಸುಲಭವಲ್ಲ, ಜನರ ನಂಬಿಕೆ ಮತ್ತು ಸಮಯವನ್ನು ಪಡೆಯುವುದು ಎಲ್ಲದಕ್ಕಿಂತ ದೊಡ್ಡ ಸವಾಲಿನ ಕೆಲಸ ಎನ್ನುತ್ತಾರೆ ಅನೌಷ್ಕಾ. ಈ ಉತ್ಪನ್ನದ ತಯಾರಿಕೆಯ ಆರಂಭದಲ್ಲಿ, ಅನೇಕ ತಯಾರಕರು ಮತ್ತು ಪ್ಯಾಕೇಜರ್‌ಗಳು, ಈ ಸಣ್ಣ ಪ್ರಮಾಣದ ಬ್ರಾಂಡ್‍ನ ಸಾಮರ್ಥ್ಯದ ಬಗ್ಗೆ ನಂಬಿಕೆ ಹೊಂದಿರಲಿಲ್ಲ. ಹಲವು ಗಂಟೆಗಳ ಮನವೊಲಿಕೆ ಮತ್ತು ಪೋಷಕರ ಬೆಂಬಲದಿಂದ ಅಂತಿಮವಾಗಿ ಈ ಸಾಧನೆ ತನ್ನಿಂದ ಸಾಧ್ಯವಾಯಿತು ಎನ್ನುತ್ತಾರೆ ಅವರು.


ಶಾಲೆಯ ದಿನಚರಿ ಮತ್ತು ಪಠ್ಯೇತರ ಚಟುವಟಿಕೆಗಳನ್ನು ನಿರ್ವಹಿಸಿಕೊಂಡೇ ಈ ಉದ್ದಿಮೆಯನ್ನು ಆರಂಭಿಸಿದ್ದಾರೆ ಅನೌಷ್ಕಾ. ತನ್ನ ಬ್ರ್ಯಾಂಡ್‌ ಅನ್ನು ಇನ್ನಷ್ಟು ಬೆಳೆಸುವುದು ಮತ್ತು ಭಾರತದ ಮಾನ್ಯತೆಯುಳ್ಳ ಬ್ರ್ಯಾಂಡ್‌ ಮಾಡುವುದು ಅನೌಷ್ಕಾ ಅವರ ಗುರಿಯಾಗಿದೆ.

Published by:Divya D
First published: