H/L - ಹಸಿರು NFT ಗಳ ಬಗ್ಗೆ ನೀವು ತಿಳಿದಿರಬೇಕಾದ ಪ್ರತಿಯೊಂದು ಮಾಹಿತಿ ಇಲ್ಲಿದೆ

ಹಸಿರು NFT ಗಳು ಹಾಗೂ ತಮ್ಮ ಪ್ರಾಜೆಕ್ಟ್‌ಗಳು ಕಾರ್ಬನ್ ನ್ಯೂಟ್ರಲ್ ಅಥವಾ ಪಾಸಿಟಿವ್ ಆಗಿರಲಿವೆ ಎಂದು ಘೋಷಿಸಿರುವ ಕಲಾವಿದರ ಬಗ್ಗೆ ಹಾಗೆ ಒಮ್ಮೆ ಹುಡುಕಾಡಿ. ವಹಿವಾಟು ನಡೆಸಲು ZebPay ಅಂತಹ ವಿಶ್ವಾಸಾರ್ಹ ಕ್ರಿಪ್ಟೊ ಎಕ್ಸ್‌ಚೇಂಜ್‌ನಲ್ಲಿ ನೀವು ಖಾತೆ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಿ. 

Things To Know About Green NFTs

Things To Know About Green NFTs

 • Share this:
  NFT ಗಳನ್ನು ಈಗಲೂ ಶಕ್ತಿ ಮತ್ತು ಅಪಾರ ಸಂಪನ್ಮೂಲಗಳನ್ನು ಬಳಸಿಕೊಂಡು ರಚಿಸಲಾಗುತ್ತದೆ ಎಂದು ಸಾಕಷ್ಟು ಕ್ರಿಪ್ಟೊ ಹೂಡಿಕೆದಾರರು ಭಾವಿಸಿದ್ದಾರೆ ಹಾಗು ನಂಬಿದ್ದಾರೆ. ಹಾಗಿದ್ದರೂ, ಬಹುತೇಕ ಕ್ರಿಪ್ಟೊ ಹಾಗೂ NFT ಎಕ್ಸ್‌ಚೇಂಜ್‌ಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, NFT ಗಳನ್ನು ಸುಸ್ಥಿರ ಮತ್ತು ಹಸಿರು ತಂತ್ರಜ್ಞಾನಗಳನ್ನು ಬಳಸಿಕೊಂಡು ರಚಿಸುವ ಪ್ರಕ್ರಿಯೆ ವೃದ್ಧಿಸಿರುವುದು ತಿಳಿದು ಬರುತ್ತದೆ. ಒಂದು ವೇಳೆ ನೀವು ಅವುಗಳ ಬಗ್ಗೆ ಕೇಳಿಲ್ಲ ಎಂದರೆ, ಹಸಿರು NFT ಗಳ ಬಗೆಗಿನ ಎಲ್ಲಾ ಮಾಹಿತಿ ಇಲ್ಲಿದೆ. 

  ಬಹುತೇಕ NFT ಗಳನ್ನು ಪ್ರೂಫ್-ಆಫ್-ವರ್ಕ್ (PoW) ಬ್ಲಾಕ್‌ಚೈನ್‌ಗಳಲ್ಲಿ ಮುದ್ರಿಸಲಾಗುತ್ತಿದ್ದು, ತನ್ನ ಮೈನಿಂಗ್ ಪ್ರಕ್ರಿಯೆಗಾಗಿ ಅದಕ್ಕೆ ಅಗಾಧ ಪ್ರಮಾಣದ ಕಂಪ್ಯೂಟಿಂಗ್ ಪವರ್ ಬೇಕಾಗುತ್ತದೆ. ಬಹುತೇಕ NFT ಗಳನ್ನು ಇಥೇರಿಯಮ್ ಬ್ಲಾಕ್‌ಚೈನ್‌ನಲ್ಲಿ ನಿರ್ಮಿಸಲಾಗುತ್ತದೆ ಹಾಗೂ ಇಥೇರಿಯಮ್ ಬ್ಲಾಕ್‌ಚೈನ್‌ನಲ್ಲಿ ರಚಿಸಲಾಗುವ ಪ್ರತಿಯೊಂದು NFT ಯು ವಿದ್ಯುಚ್ಛಕ್ತಿಯ 223.85 ಕಿಲೊವಾಟ್-ಗಂಟೆಗಳನ್ನು ಬಳಸುತ್ತದೆ ಎಂದು ಇಥೇರಿಯಮ್ ಎನರ್ಜಿ ಕನ್ಸಂಪ್ಶನ್ ಇಂಡೆಕ್ಸ್ ಅಂದಾಜಿಸಿದೆ. ವಾಸ್ತವದಲ್ಲಿ, PoW ಇಥೇರಿಯಮ್ ಬ್ಲಾಕ್‌ಚೈನ್‌ನಲ್ಲಿನ ಒಂದು NFT ವಹಿವಾಟು 124.86 ಕಿ.ಗ್ರಾಂ ಇಂಗಾಲದ ಡೈಆಕ್ಸೈಡ್ ಅನ್ನು ಬಿಡುಗಡೆ ಮಾಡುತ್ತದೆ.   

  ಇದರಿಂದಾಗಿ, NFT ಗಳ ಹೊಸ ಜನರೇಶನ್ ಪರಿಸರ ಸ್ನೇಹಿಯಾಗಿ ಬದಲಾಗಲು ಮತ್ತು ಇತರ ಸಾಂಪ್ರದಾಯಿಕ NFTಗಳಿಗೆ ಪ್ರತಿಯಾಗಿ ಕಾರ್ಬನ್ ಪಾಸಿಟಿವ್ ಆಗುವುದನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ವಿಷಯಗಳು ಬದಲಾಗಬೇಕು.  

  ಹಸಿರು NFT ಗಳ ಪರಿಚಯ
  ಹಸಿರು NFT ಗಳನ್ನು ಇಂಪ್ಯಾಕ್ಟ್ NFT ಗಳು ಎಂದು ಸಹ ಕರೆಯಲಾಗುತ್ತದೆ. ಹಸಿರು NFT ಗಳನ್ನು ಪ್ರೂಫ್ ಆಫ್ ಸ್ಟೇಕ್‌ನಲ್ಲಿ (PoS) ಅಥವಾ ಗಣನೆಗೆ ಬಾರದ ಕಾರ್ಬನ್ ಮಿಂಟಿಂಗ್ ಪ್ರಕ್ರಿಯೆ ಬಳಸಿಕೊಂಡು ಮುದ್ರಿಸಲಾಗುತ್ತದೆ. ಟೋಕನ್‌ವೊಂದು ಪರಿಸರ ಸ್ನೇಹಿಯಾಗಿದೆ ಎಂಬುದನ್ನು ಇದು ಖಾತ್ರಿಪಡಿಸುತ್ತದೆ ಹಾಗೂ ಕೆಲವು ಸಂದರ್ಭಗಳಲ್ಲಿ ಇವು ಪರಿಸರಕ್ಕೆ ಪೂರಕವಾಗಿಯೂ ಸಹಕರಿಸಬಹುದು. ವಾಸ್ತವವಾಗಿ, ಭವಿಷ್ಯದ NFT ಗಳು ಅತ್ಯಂತ ಕಡಿಮೆ ಇಂಗಾಲವನ್ನು ಬಿಡುಗಡೆ ಮಾಡುವುದನ್ನು ಖಚಿತಪಡಿಸಲು ಇಡೀ ಇಥೇರಿಯಮ್ ಬ್ಲಾಕ್‌ಚೈನ್ PoS ಕಾರ್ಯವಿಧಾನಕ್ಕೆ ಪರಿವರ್ತನೆಯಾಗಲು ಸಿದ್ಧವಾಗಿದೆ.

  “ಅದು ನಿರ್ಮಾಣವಿರಲಿ ಅಥವಾ ತಂತ್ರಜ್ಞಾನವಿರಲಿ, ಸುಸ್ಥಿರತೆಯು ಇಂದಿನ ಅಗತ್ಯವಾಗಿದೆ. ಭಾರತವು ಮಿಲಿಯನ್‌ಗಟ್ಟಲೆ ಸ್ಥಳೀಯ ಕಲಾವಿದರು ಹಾಗೂ ಕುಶಲಕರ್ಮಿಗಳನ್ನು ಹೊಂದಿದೆ ಮತ್ತು ಹಸಿರು NFT ಮಾರುಕಟ್ಟೆಪ್ರದೇಶವು ಅವರಿಗೆ ಹೊಸ ಅವಕಾಶಗಳನ್ನು ನೀಡುವುದರ ಜತೆಗೆ ತಮ್ಮ ಕೆಲಸವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ” ಎಂದಿದ್ದಾರೆ ZebPay ಕ್ರಿಪ್ಟೊ ಎಕ್ಸ್‌ಚೇಂಜ್ ಪ್ಲಾಟ್‌ಫಾರ್ಮ್‌ನ CEO ಅವಿನಾಶ್ ಶೇಖರ್.

  ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸಲು ಕ್ರಿಪ್ಟೊ ವಲಯದ ಹಲವಾರು ಕಂಪೆನಿಗಳು ಶಕ್ತಿಯ ನವೀಕರಿಸಬಹುದಾದ ಮೂಲಗಳೆಡೆಗೆ ಸರಿಯುತ್ತಿವೆ. ಹಾಗಿದ್ದರೂ, ಇದು ಇನ್ನೂ ಹೊಸ ಕ್ಷೇತ್ರವಾಗಿರುವುದರಿಂದ ಸೂಕ್ತವಾದ ಪರಿಹಾರವನ್ನು ಹುಡುಕಲು ಹಲವಾರು ಕ್ರಿಪ್ಟೊ ಕಂಪೆನಿಗಳು ಈಗಲೂ ಪ್ರಯತ್ನಿಸುತ್ತಿವೆ. 

  ಇತರ ತಂತ್ರಜ್ಞಾನಗಳಾದ Solana ಹಾಗೂ Cardano ಮತ್ತು ಅವುಗಳ ಟೋಕನ್‌ಗಳು ಇಂಪ್ಯಾಕ್ಟ್ NFT ಗಳು ಎಂಬ ಪರಿಕಲ್ಪನೆಯನ್ನು ಇನ್ನೂ ಮುಂದಕ್ಕೆ ಕೊಂಡೊಯ್ದಿದ್ದು, ಅತ್ಯಂತ ಅಲ್ಪಾವಧಿಯಲ್ಲಿ ಅವುಗಳು ಜನಪ್ರಿಯವಾಗುವಂತೆ ಮಾಡಿರುವ ಪ್ರಮುಖ ಕಾರಣಗಳಲ್ಲಿ ಇದು ಒಂದೆನಿಸಿದೆ. ಈ ಟೋಕನ್‌ಗಳನ್ನು ಎಲ್ಲಿ ಪಡೆಯಬಹುದು ಎಂದು ನೀವು ಯೋಚಿಸುತ್ತಿದ್ದರೆ, ಇವುಗಳೊಂದಿಗೆ ಇತರ 100 ಜನಪ್ರಿಯ ಟೋಕನ್‌ಗಳಿಂದ ಆಯ್ಕೆ ಮಾಡಲು ಭಾರತದ ಅತ್ಯಂತ ಹಳೆಯ ಕ್ರಿಪ್ಟೊ ಎಕ್ಸ್‌ಚೇಂಜ್‌ಗಳಲ್ಲಿ ಒಂದಾಗಿರುವ ZebPay ಗೆ ಭೇಟಿ ಕೊಡಿ.

  ಕಲಾವಿದರು ಶುದ್ಧ NFTಗಳೆಡೆಗೆ ಹೋಗುತ್ತಿದ್ದಾರೆ -
  ಬೀಪಲ್ ಹೆಸರಿನಿಂದ ಬಹು ಜನಪ್ರಿಯವಾಗಿರುವ ಡಿಜಿಟಲ್ ಕಲಾವಿದ ಮೈಕ್ ವಿಂಕಲ್‌ಮನ್, NFT ಗಳ ವಿಷಯ ಬಂದಾಗ ಅತ್ಯಂತ ಸುಸ್ಥಿರ ಭವಿಷ್ಯದ ಭರವಸೆ ಹೊಂದಿರುವವರಲ್ಲಿ ಒಬ್ಬರಾಗಿದ್ದಾರೆ. ಇವರ ‘ಎವೆರಿಡೇಸ್: ದಿ ಫಸ್ಟ್ 5000 ಡೇಸ್’ ಕೃತಿಯು ಕ್ರಿಸ್ಟೀಯಲ್ಲಿ $69 ಮಿಲಿಯನ್‌ಗೆ ಮಾರಾಟವಾದಾಗ ಮೂಲಭೂತವಾಗಿ NFT ಕ್ರೇಜ್ ಹುಟ್ಟುಹಾಕಿತು. ತನ್ನ ಕಲಾಕೃತಿಯು ಕಾರ್ಬನ್ ನ್ಯೂಟ್ರಲ್ ಅಥವಾ ನೆಗೆಟಿವ್ ಆಗಿರಲಿದೆ ಎಂದು ಬೀಪಲ್ ಅವರು ತಮ್ಮ ಸಂದರ್ಶನವೊಂದರಲ್ಲಿ ಇತ್ತೀಚಿಗೆ ಹೇಳಿದ್ದರು, ಇದರ ಅರ್ಥ, ಮುಂಬರುವ ಯೋಜನೆಗಳು ನವೀಕರಿಸಬಹುದಾದ ಶಕ್ತಿ, ಸಂರಕ್ಷಣಾ ಯೋಜನೆಗಳು ಅಥವಾ ಪರಿಸರದಿಂದ CO2 ಅನ್ನು ಹೀರಿಕೊಳ್ಳುವ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡುವ ಮೂಲಕ ತನ್ನ NFT ಗಳ ಹೊರಸೂಸುವಿಕೆಯನ್ನು ಸಂಪೂರ್ಣವಾಗಿ ಸಮತೋಲನಗೊಳಿಸಲು ಸಮರ್ಥವಾಗಿರುತ್ತವೆ ಎಂಬುದಾಗಿದೆ.

  ಸಂಗೀತಗಾರರಾದ ಡೋಜಾ ಕ್ಯಾಟ್ ಮತ್ತು ಜಾನ್ ಲೆಜೆಂಡ್ ಅವರು ಸಹ ಹಸಿರು NFT ಗಳನ್ನು ಮಾರಾಟ ಮಾಡುವ Quincey Jones’ NFT ಮಾರುಕಟ್ಟೆಪ್ರದೇಶಕ್ಕೆ ನೋಂದಾಯಿಸಿದ್ದಾರೆ. ಇತರ ಡಿಜಿಟಲ್ ಕಲಾವಿದರಾದ ನ್ಯಾನ್ಸಿ ಬೇಕರ್ ಕೇಹಿಲ್ ಮತ್ತು ಜೂಲಿಯನ್ ಆಲಿವರ್ ಅವರು ಹಸಿರು NFT ಗಳ ಬಗೆಗಿನ ತಮ್ಮ ಕಾರ್ಯ ಮತ್ತು ಆಸಕ್ತಿಯಿಂದಾಗಿ ಪರಿಚಿತರಾಗಿದ್ದಾರೆ.  

  ಒಂದು ವೇಳೆ ನೀವು NFT ಗಳಿಂದ ಆಕರ್ಷಿತರಾಗಿದ್ದು, ಜನಪ್ರಿಯ ಬ್ಲಾಕ್‌ಚೈನ್‌ಗಳಲ್ಲಿ ಖರೀದಿ ಮತ್ತು ಮಾರಾಟ ಮಾಡುವುದರಿಂದ ಪರಿಸರದ ಮೇಲೆ ಆಗುವ ಪರಿಣಾಮದ ಬಗ್ಗೆ ನೀವು ಚಿಂತಿತರಾಗಿದ್ದರೆ, ನಿಮಗಾಗಿ ಹಲವಾರು ಆಯ್ಕೆಗಳಿವೆ ಎಂಬುದು ನಿಜ. ಹಸಿರು NFT ಗಳು ಹಾಗೂ ತಮ್ಮ ಪ್ರಾಜೆಕ್ಟ್‌ಗಳು ಕಾರ್ಬನ್ ನ್ಯೂಟ್ರಲ್ ಅಥವಾ ಪಾಸಿಟಿವ್ ಆಗಿರಲಿವೆ ಎಂದು ಘೋಷಿಸಿರುವ ಕಲಾವಿದರ ಬಗ್ಗೆ ಹಾಗೆ ಒಮ್ಮೆ ಹುಡುಕಾಡಿ. ವಹಿವಾಟು ನಡೆಸಲು ZebPay ಅಂತಹ ವಿಶ್ವಾಸಾರ್ಹ ಕ್ರಿಪ್ಟೊ ಎಕ್ಸ್‌ಚೇಂಜ್‌ನಲ್ಲಿ ನೀವು ಖಾತೆ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಿ.   

  ಈಗ, ಬಹುಮುಖ್ಯ ಪ್ರಶ್ನೆ – ನೀವು ಪರಿಸರ ಪ್ರೇಮಿ ಹಾಗೂ NFT ಸಂಗ್ರಾಹಕರಾಗಬಹುದೇ? ಎಲ್ಲಾ ತಂತ್ರಜ್ಞಾನ ಮತ್ತು ಅದು ವ್ಯಾಪಿಸುತ್ತಿರುವ ರೀತಿಯಿಂದ ಸ್ಪಷ್ಟವಾಗಿ, ಖಚಿತವಾಗಿ ಹೇಳಬಹುದಾದ ಉತ್ತರವೆಂದರೆ, ಹೌದು.
  First published: