ಬಜಾಜ್ ಫಿನ್ಸರ್ವ್ ಇನ್ಸ್ಟಾ ಪರ್ಸನಲ್ ಲೋನ್ ಬಗ್ಗೆ ನೀವು ತಿಳಿಯಬೇಕಿರುವ ಎಲ್ಲಾ ಸಂಗತಿಗಳು

ಅನಿರೀಕ್ಷಿತ ವೆಚ್ಚಗಳಿಗೆ ಒತ್ತಡ ರಹಿತ ರೀತಿಯಲ್ಲಿ ಹಣ ಹೊಂದಿಸಲು ನಿಮ್ಮ ಬಜಾಜ್ ಫಿನ್ಸರ್ವ್ ಇನ್ಸ್ಟಾ ಪರ್ಸನಲ್ ಲೋನ್ ಆಫರ್ ಅನ್ನು ಇಂದೇ ನೋಡಿ.

ಅನಿರೀಕ್ಷಿತ ವೆಚ್ಚಗಳಿಗೆ ಒತ್ತಡ ರಹಿತ ರೀತಿಯಲ್ಲಿ ಹಣ ಹೊಂದಿಸಲು ನಿಮ್ಮ ಬಜಾಜ್ ಫಿನ್ಸರ್ವ್ ಇನ್ಸ್ಟಾ ಪರ್ಸನಲ್ ಲೋನ್ ಆಫರ್ ಅನ್ನು ಇಂದೇ ನೋಡಿ.

ಅನಿರೀಕ್ಷಿತ ವೆಚ್ಚಗಳಿಗೆ ಒತ್ತಡ ರಹಿತ ರೀತಿಯಲ್ಲಿ ಹಣ ಹೊಂದಿಸಲು ನಿಮ್ಮ ಬಜಾಜ್ ಫಿನ್ಸರ್ವ್ ಇನ್ಸ್ಟಾ ಪರ್ಸನಲ್ ಲೋನ್ ಆಫರ್ ಅನ್ನು ಇಂದೇ ನೋಡಿ.

 • News18 Kannada
 • 4-MIN READ
 • Last Updated :
 • New Delhi, India
 • Share this:

  ತ್ವರಿತ ಬಟವಾಡೆ ಮತ್ತು ಕನಿಷ್ಠದಿಂದ ಶೂನ್ಯ ದಾಖಲಾತಿಯಂತಹ ವೈಶಿಷ್ಟ್ಯಗಳನ್ನು ಹೊಂದಿರುವ ಇನ್ಸ್ಟಾ ಪರ್ಸನಲ್ ಲೋನ್ಗಳು ನಿಮ್ಮ ಕ್ರೆಡಿಟ್ ಅಗತ್ಯಗಳಿಗೆ ಸೂಕ್ತ ಆಯ್ಕೆಯಾಗಿರಬಹುದು.


  ನಿಮ್ಮ ತಕ್ಷಣದ ವೆಚ್ಚಗಳಿಗೆ ಹಣ ನೀಡುವ ಸಾಲವನ್ನು ನೀವು ಎದುರು ನೋಡುತ್ತಿದ್ದರೆ, ಬಜಾಜ್ ಫಿನ್‌ಸರ್ವ್ ಇನ್‌ಸ್ಟಾ ಪರ್ಸನಲ್ ಲೋನ್ ಒಂದು ಸೂಕ್ತ ಆಯ್ಕೆಯಾಗಿದೆ. ಈ ಲೈನ್-ಅಪ್‌ನಲ್ಲಿ ಅತ್ಯಂತ ಹೊಸ ಉತ್ಪನ್ನವನ್ನು ತುರ್ತು ಹಣಕ್ಕೆ ಅಗತ್ಯವನ್ನು ಪೂರೈಸುವುದಕ್ಕಾಗಿ ರಚಿಸಲಾಗಿದೆ.


  ಗ್ರಾಹಕರಿಗೆ ಸೂಕ್ತವಾದ ಇನ್ಸ್ಟಾ ರ್ಸನಲ್ ಲೋನ್ಗಳ ಕೆಲವು ವೈಶಿಷ್ಟ್ಯಗಳು ಇಲ್ಲಿವೆ:


  1. ಮೊದಲೇ ನಿಯೋಜಿಸಿದ ಮಿತಿಗಳು:


  ಉದ್ದನೆಯ ಅರ್ಜಿ ನಮೂನೆಯನ್ನು ಭರ್ತಿ ಮಾಡದೇ ನೀವು ಎಷ್ಟು ಸಾಲ ಪಡೆಯಬಹುದು ಎಂಬುದನ್ನು ನೋಡಬಹುದು. ಈಗಾಗಲೇ ಅನುಮೋದಿಸಿದ ಸಾಲ ಮಿತಿಯನ್ನು ಗ್ರಾಹಕರು ಪಡೆಯಬಹುದು ಮತ್ತು ಹೊಸ ಗ್ರಾಹಕರು ತಮಗಾಗಿ ಮೊದಲೇ ನಿಯೋಜಿಸಿದ ಮಿತಿಯನ್ನು ತಕ್ಷಣ ಜನರೇಟ್ ಮಾಡಿಕೊಳ್ಳಬಹುದು. ನಿಮ್ಮ ಮೊಬೈಲ್ ನಂಬರ ಮತ್ತು ಒಟಿಪಿ ಅನ್ನು ನಮೂದಿಸಿ ನಿಮ್ಮ ಇನ್‌ಸ್ಟಾ ಪರ್ಸನಲ್ ಲೋನ್ ಆಫರ್ ಅನ್ನು ಪರಿಶೀಲಿಸಬಹುದು.

  1. ತಕ್ಷಣ ಪ್ರೋಸೆಸಿಂಗ್:


  ಬಜಾಜ್ ಫಿನ್‌ಸರ್ವ್ ಇನ್‌ಸ್ಟಾ ಪರ್ಸನಲ್ ಲೋನ್‌ಗಳನ್ನು ವಿಮಾನ ನಿಲ್ದಾಣಗಳಲ್ಲಿನ ಗ್ರೀನ್ ಚಾನೆಲ್‌ಗಳಿಂದ ಪ್ರೇರಿತವಾಗಿ ರೂಪಿಸಲಾಗಿದೆ ಮತ್ತು ಅವು ಅದೇ ರೀತಿಯಲ್ಲಿ ಕೆಲಸ ಮಾಡುತ್ತವೆ. ಇದರಲ್ಲಿ ಕನಿಷ್ಠ ದಾಖಲೆಗಳು ಸಾಕು ಮತ್ತು ಕೆಲವು ಗ್ರಾಹಕರಿಗೆ ದಾಖಲೆ ಸಲ್ಲಿಸುವ ಅಗತ್ಯವೇ ಇಲ್ಲ. ಹಣ 30 ನಿಮಿಷಗಳಿಂದ 4 ಗಂಟೆಗಳ ವರೆಗಿನ ಅವಧಿಯಲ್ಲಿ ಬಟವಾಡೆಯಾಗುತ್ತದೆ.

  1. ಅನುಕೂಲಕರ ಅವಧಿ:


  ಯಾವುದೇ ಇಬ್ಬರು ವ್ಯಕ್ತಿಗಳು ಒಂದೇ ಅಗತ್ಯವನ್ನು ಹೊಂದಿರುವುದಿಲ್ಲ. ಇನ್‌ಸ್ಟಾ ಪರ್ಸನಲ್ ಲೋನ್‌ಗಳು 12 ತಿಂಗಳುಗಳಿಂದ 60 ತಿಂಗಳುಗಳ ವರೆಗಿನ ಅನುಕೂಲಕರ ಅವಧಿಯನ್ನು ಹೊಂದಿರುತ್ತವೆ. ನಿಮಗೆ ಸೂಕ್ತವಾದ ಮರುಪಾವತಿ ಅವಧಿಯನ್ನು ನೀವು ಆಯ್ಕೆ ಮಾಡಬಹುದು.

  1. ಗುಪ್ತ ಶುಲ್ಕಗಳಿಲ್ಲ:


  ಎಲ್ಲ ಸೂಕ್ತ ಫೀ ಮತ್ತು ಶುಲ್ಕಗಳನ್ನು ಅವರ ವೆಬ್‌ಸೈಟ್‌ನಲ್ಲಿ ಮತ್ತು ಅವರ ಸಾಲ ದಾಖಲೆಗಳಲ್ಲಿ ಪಟ್ಟಿ ಮಾಡಲಾಗಿದೆ. ಇದರಲ್ಲಿ ಗೌಪ್ಯ ಶುಲ್ಕಗಳಿಲ್ಲ.


  ನಿಮ್ಮ ಬಜಾಜ್ ಫಿನ್ಸರ್ವ್ ಇನ್ಸ್ಟಾ ಪರ್ಸನಲ್ ಲೋನ್ ಆಫರ್ ಅನ್ನು ಹೇಗೆ ಪರಿಶೀಲಿಸಬಹುದು ವಿವರ ಇಲ್ಲಿದೆ:


  ಯಾರು ಬೇಕಾದರೂ ಬಜಾಜ್‌ ಫಿನ್‌ಸರ್ವ್ ಇನ್‌ಸ್ಟಾ ಪರ್ಸನಲ್‌ ಲೋನ್‌ಗೆ ಅರ್ಜಿ ಸಲ್ಲಿಸಬಹುದು. ನೀವು ಹೊಸ ಗ್ರಾಹಕರಾಗಿರಬಹುದು ಅಥವಾ ಈಗಾಗಲೇ ಸಂಬಂಧವನ್ನು ಹೊಂದಿದ್ದೀರಾ ಎಂಬುದು ನಿಮ್ಮ ಅರ್ಹತೆ ಮತ್ತು ದಾಖಲೆ ಅಗತ್ಯಗಳನ್ನು ನಿರ್ಧರಿಸುತ್ತದೆ.


  ಪ್ರಸ್ತುತ ಗ್ರಾಹಕರಿಗೆ:


  ನೀವು ಬಜಾಜ್ ಫಿನ್‌ಸರ್ವ್ EMI ನೆಟ್‌ವರ್ಕ್‌ ಕಾರ್ಡ್ ಬಳಸಿ ಶಾಪಿಂಗ್ ಮಾಡಿದ್ದರೆ, ಈ ಹಿಂದೆ ಸಾಲಕ್ಕೆ ಅರ್ಜಿ ಸಲ್ಲಿಸಿದ್ದರೆ, ನಿಮಗೆ ಈಗಾಗಲೇ ಅನುಮತಿ ಹೊಂದಿರುವ ಸಾಲ ಆಫರ್ ಇರುತ್ತದೆ. ನಿಮ್ಮ ಬಳಿ ಫೋನ್ ನಂಬರ್ ಇದ್ದರೆ ಸಾಕು.


  ಬಜಾಜ್ ಫಿನ್‌ಸರ್ವ್ ವೆಬ್‌ಸೈಟ್‌ನ ಇನ್‌ಸ್ಟಾ ಪರ್ಸನಲ್ ಲೋನ್ ಪುಟಕ್ಕೆ ಹೋಗಿ ಮತ್ತು ನಿಮ್ಮ ಪ್ರಿ-ಅಪ್ರೂವ್ಡ್ ಆಫರ್ ಅನ್ನು ನೋಡಲು "ಆಫರ್ ಚೆಕ್ ಮಾಡಿ" ಎಂಬುದನ್ನು ಕ್ಲಿಕ್ ಮಾಡಿ. ನಿಮ್ಮ ಫೋನ್ ನಂಬರ್ ನಮೂದಿಸುವಂತೆ ಮತ್ತು ಒಂದು ಬಾರಿಯ ಪಾಸ್‌ವರ್ಡ್ ಬಳಸಿ ನಿಮ್ಮ ಪ್ರೊಫೈಲ್ ಪರಿಶೀಲನೆ ಮಾಡಲು (ಒಟಿಪಿ) ನಿಮ್ಮ ಬಳಿ ಕೇಳಲಾಗುತ್ತದೆ. ನಿಮ್ಮ ಸಾಲವನ್ನು ಈಗಾಗಲೇ ಅನುಮೋದಿಸಲಾಗಿರುವುದರಿಂದ, ಯಾವುದೇ ಕಾಗದಪತ್ರವನ್ನು ನೀವು ಕಳುಹಿಸಬೇಕಿಲ್ಲ.


  ಹೊಸ ಗ್ರಾಹಕರಿಗೆ:


  ಬಜಾಜ್ ಫಿನ್‌ಸರ್ವ್ ಇನ್‌ಸ್ಟಾ ಪರ್ಸನಲ್ ಲೋನ್‌ನ ಪ್ರಯೋಜನಗಳನ್ನು ಪಡೆಯಲು ನೀವು ಪ್ರಸ್ತುತ ಗ್ರಾಹಕರಾಗಬೇಕಿಲ್ಲ. ಮಾನ್ಯವಾದ ಮೊಬೈಲ್ ಸಂಖ್ಯೆಯನ್ನು ಹೊಂದಿರುವ ಯಾರು ಬೇಕಾದರೂ ತಮ್ಮ ಇನ್‌ಸ್ಟಾ ಪರ್ಸನಲ್ ಲೋನ್ ಆಫರ್ ಅನ್ನು ಪರಿಶೀಲಿಸಬಹುದು. ಕೆಲವು ಹೊಸ ಗ್ರಾಹಕರಿಗೆ, ಅವರ ಮಾಹಿತಿಯನ್ನು ಪರಿಶೀಲಿಸುವುದಕ್ಕಾಗಿ ಕೆಲವು ದಾಖಲೆಗಳನ್ನು ಪ್ರಸ್ತುತ ಪಡಿಸುವಂತೆ ಕೇಳಲಾಗುತ್ತದೆ.


  ಬಜಾಜ್ ಇನ್‌ಸ್ಟಾ ಪರ್ಸನಲ್‌ ಲೋನ್ ಆಫರ್‌ ನಿಮಗೆ ಕಾಣಿಸದಿದ್ದರೆ, ರೆಗ್ಯುಲರ್ ಪರ್ಸನಲ್ ಲೋನ್‌ಗೆ ನೀವು ಅರ್ಜಿ ಸಲ್ಲಿಸಬಹುದು.


  ಅನಿರೀಕ್ಷಿತ ವೆಚ್ಚಗಳಿಗೆ ಒತ್ತಡ ರಹಿತ ರೀತಿಯಲ್ಲಿ ಹಣ ಹೊಂದಿಸಲು ನಿಮ್ಮ ಬಜಾಜ್ ಫಿನ್‌ಸರ್ವ್ ಇನ್‌ಸ್ಟಾ ಪರ್ಸನಲ್ ಲೋನ್ ಆಫರ್ ಅನ್ನು ಇಂದೇ ನೋಡಿ.

  First published: