Health Insurance: ಆರೋಗ್ಯ ವಿಮೆ ಮಾಡಿಸ್ತಿದ್ದೀರಾ? ಮೊದಲು ಇದನೆಲ್ಲ ತಿಳಿದುಕೊಳ್ಳಿ, ಇಲ್ಲ ಅಂದ್ರೆ ಯಾಮಾರಿಸ್ತಾರೆ!

ಆರೋಗ್ಯ ವಿಮೆ (Health Insurance) ಯ ಬಗ್ಗೆ ಈಗ ಜನರು ಜಾಗೃತರಾಗುತ್ತಿದ್ದಾರೆ. ಆದರೆ ಆರೋಗ್ಯ ವಿಮೆಯನ್ನು ಆಯ್ಕೆಮಾಡುವಾಗ, ಅದು ನಿಮ್ಮ ವೈದ್ಯಕೀಯ ವೆಚ್ಚಗಳ (Medical Expenses) ಅಗತ್ಯಗಳನ್ನು ಪೂರೈಸುತ್ತದೆಯೇ ಎಂದು ಮೊದಲು ಪರಿಶೀಲಿಸಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆರೋಗ್ಯ ವಿಮೆ (Health Insurance) ಯ ಬಗ್ಗೆ ಈಗ ಜನರು ಜಾಗೃತರಾಗುತ್ತಿದ್ದಾರೆ. ಆದರೆ ಆರೋಗ್ಯ ವಿಮೆಯನ್ನು ಆಯ್ಕೆಮಾಡುವಾಗ, ಅದು ನಿಮ್ಮ ವೈದ್ಯಕೀಯ ವೆಚ್ಚಗಳ (Medical Expenses) ಅಗತ್ಯಗಳನ್ನು ಪೂರೈಸುತ್ತದೆಯೇ ಎಂದು ಮೊದಲು ಪರಿಶೀಲಿಸಿ. ಪ್ರತಿಯೊಬ್ಬರು ಆರೋಗ್ಯ ವಿಮೆ ಮಾಡಿಸುವುದು ಉತ್ತಮ. ಯಾಕೆಂದರೆ ಯಾವಾಗ ? ಎಲ್ಲಿ? ಯಾರಿಗೆ? ಹೇಗೆ? ಏನುನಬೇಕಾದರೂ ಆಗಬಹುದು. ಆಗ ಈ ಹೆಲ್ತ್​ ಇನ್ಶೂರೆನ್ಸ್​ ಇದ್ದರೆ ಬಹಳ ಉಪಯೋಗವಾಗುತ್ತೆ. ಆದರೆ ಆರೋಗ್ಯ ವಿಮಾ ಪಾಲಿಸಿ ದಾಖಲೆಗಳನ್ನು (Health Insurance Documents) ಅರ್ಥಮಾಡಿಕೊಳ್ಳುವುದು ಕಷ್ಟ. ಏಕೆಂದರೆ ನಿಯಮಗಳು ತುಂಬಾ ಕನ್ಫೂಸ್​ ರೀತಿಯಲ್ಲಿ ಇರುತ್ತವೆ.ಹಾಗಾಗಿ ಕೆಲವು ರೋಗಗಳು ಆರೋಗ್ಯ ವಿಮೆಯಿಂದ ರಕ್ಷಣೆ ಪಡೆಯದಿದ್ದರೆ, ನೀವು ಅಂತಹ ವೈದ್ಯಕೀಯ ಬಿಲ್‌ (Medical Bill) ಗಳನ್ನು ಪಾವತಿಸಬೇಕಾಗಬಹುದು. ಆರೋಗ್ಯ ವಿಮಾ ಪಾಲಿಸಿಯಿಂದ ಹೊರಗಿಡಲಾದ ರೋಗಗಳ ನಿರ್ದಿಷ್ಟ ಪಟ್ಟಿಗಾಗಿ ವಿಮಾ ಕಂಪನಿಯು ನಿಮ್ಮ ಕ್ಲೈಮ್ ಅನ್ನು ತಿರಸ್ಕರಿಸಬಹುದು.

ಹೆಲ್ತ್​​ ಇನ್ಶೂರೆನ್ಸ್​ ಪಡೆಯುವ ಮುನ್ನ ಚೆಕ್​ ಮಾಡಿ!

ಮೊದಲೇ ಅಸ್ತಿತ್ವದಲ್ಲಿರುವ ಅನಾರೋಗ್ಯದ ಕಾರಣ ನಿಮ್ಮ ಕ್ಲೈಮ್ ಅನ್ನು ತಿರಸ್ಕರಿಸಬಹುದು. ಆರೋಗ್ಯ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳುವ ಮೊದಲು ಕಾಯಿಲೆಯಿಂದ ಬಳಲುತ್ತಿರುವ ಜನರು ಆ ಕಾಯಿಲೆಗೆ ರಕ್ಷಣೆ ಪಡೆಯಲು ಸಾಧ್ಯವಿಲ್ಲ ಎಂದು ವಿಮಾ ವಲಯದ ತಜ್ಞರು ಹೇಳುತ್ತಾರೆ. ಆದಾಗ್ಯೂ, ಈ ಸ್ಥಿತಿ ಮತ್ತು ಸಂಬಂಧಿತ ಕಾಯುವ ಅವಧಿಯು ವಿಮಾ ಕಂಪನಿಯಿಂದ ವಿಮಾ ಕಂಪನಿಗೆ ಬದಲಾಗುತ್ತದೆ.

ಕಾಸ್ಮೆಟಿಕ್​ ಸರ್ಜರಿಗಳಿಗೆ ಅನ್ವಯಿಸಲ್ಲ ಹೆಲ್ತ್​ ಇನ್ಶೂರೆನ್ಸ್​!

ವಿಮಾ ಕಂಪನಿಗಳ ಆರೋಗ್ಯ ವಿಮಾ ಪಾಲಿಸಿಗಳಲ್ಲಿ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಯನ್ನು ಒಳಗೊಂಡಿರುವುದಿಲ್ಲ. ಉದಾಹರಣೆಗೆ, ಬೊಟೊಕ್ಸ್, ನಿಮ್ಮ ಮುಖ, ಹಣೆ, ಕಣ್ಣುಗಳ ಕೆಳಗೆ ಇರುವ ಕಪ್ಪು ಗೆರೆಗಳು ಮತ್ತು ಸುಕ್ಕುಗಳನ್ನು ತೆಗಿಸಲು ಮಾಡಿಸವ ಸರ್ಜರಿಗಳಿಗೆ ಇನ್ಶೂರೆನ್ಸ್​ ಕ್ಲೈಮ್ ಆಗುವುದಿಲ್ಲ.ಇದು ಆರೋಗ್ಯ ವಿಮಾ ಪಾಲಿಸಿಗಳಿಗೆ ಒಳಪಡುವುದಿಲ್ಲ. ಅಂತೆಯೇ, ದೇಹದ ವಿವಿಧ ಭಾಗಗಳಿಂದ ಹೆಚ್ಚುವರಿ ಕೊಬ್ಬನ್ನು ತೆಗೆದುಹಾಕುವ ಶಸ್ತ್ರಚಿಕಿತ್ಸೆಯಾದ ಲಿಪೊಸಕ್ಷನ್ ಅನ್ನು ಪಟ್ಟಿಯಲ್ಲಿ ಸೇರಿಸಲಾಗಿಲ್ಲ. ಇಂಪ್ಲಾಂಟ್‌ಗಳು ಮತ್ತು ಅಂತಹುದೇ ಶಸ್ತ್ರಚಿಕಿತ್ಸೆಗಳಂತಹ ಕಾರ್ಯವಿಧಾನಗಳನ್ನು ಸಹ ಕ್ಲೈಮ್ ಮಾಡಲಾಗುವುದಿಲ್ಲ.

ಇದನ್ನೂ ಓದಿ: ಈ ರಾಶಿಯವರು ಇವತ್ತು ಈ ಕೆಲ್ಸ ಮಾಡೋಕೆ ಹೋಗ್ಬೇಡಿ, ಜಸ್ಟ್​ ಮಿಸ್ ಆದ್ರೂ ಲಕ್ಷ ಲಕ್ಷ ಗೋತಾ!

ಬಂಜೆತನ ಅಥವಾ ಗರ್ಭಧಾರಣೆ

ಬಂಜೆತನ ಅಥವಾ ಗರ್ಭಪಾತದಂತಹ ಇತರ ಗರ್ಭಧಾರಣೆಯ ಸಂಬಂಧಿತ ತೊಡಕುಗಳ ಸಂದರ್ಭದಲ್ಲಿ ಆಸ್ಪತ್ರೆಗೆ ಸೇರಿಸುವ ವೆಚ್ಚಗಳನ್ನು ಆರೋಗ್ಯ ವಿಮಾ ಪಾಲಿಸಿಯ ವ್ಯಾಪ್ತಿಯಿಂದ ಹೊರಗಿಡಲಾಗುತ್ತದೆ. ಆದಾಗ್ಯೂ, ಕೆಲವು ಹೆರಿಗೆ ಆರೋಗ್ಯ ಯೋಜನೆಗಳು ಅಂತಹ ವೆಚ್ಚಗಳನ್ನು ಒಳಗೊಳ್ಳಬಹುದು, ಆದರೆ ಕಾಯುವ ಅವಧಿಯನ್ನು ಹೊಂದಿರಬಹುದು.

ಕಣ್ಣು-ಕಿವಿ ಸಂಬಂಧಿತ ಸಮಸ್ಯೆಗಳು

ಹೌದು, ಕಣ್ಣು-ಕಿವಿ ಸರ್ಜರಿಗಳಿಗೂ ಹೆಲ್ತ್​ ಇನ್ಶೂರೆನ್ಸ್​ ಕ್ಲೈಮ್​ ಆಗುವುದಿಲ್ಲ. ಕೆಲವೊಂದು ಬಾರಿ ಅಪಘಾತಗಳಿಂದ ಕಣ್ಣು-ಕಿವಿಗೆ ಹಾನಿಯಾಗಿದ್ದರೆ, ಮಾತ್ರ ಕ್ಲೈಮ್​ ಆಗುತ್ತದೆ. ಅದನ್ನೂ ಹೊರತುಪಡಿಸಿ ಕಣ್ಣಿನ ಪೊರೆ, ಅಥವಾ ಬೇರೆ ಸರ್ಜರಿಗಳಿಗೆ ಆರೋಗ್ಯ ವಿಮೆ ಹಣ ಕ್ಲೈಮ್ ಆಗುವುದಿಲ್ಲ.

ಇದನ್ನೂ ಓದಿ: 75ನೇ ಸ್ವಾತಂತ್ರ್ಯ ದಿನಾಚರಣೆಗೆ ಕಂಡು-ಕೇಳರಿಯದಂತಹ ಆಫರ್​! ಜಸ್ಟ್​ 75 ರೂಪಾಯಿ ಈ ಎಲೆಕ್ಟ್ರಿಕ್​ ಬೈಕ್​ ಬುಕ್​ ಮಾಡಿ

ದಂತ ಚಿಕಿತ್ಸೆ

ಹಲ್ಲಿನ ಚಿಕಿತ್ಸೆಯು ಸಾಮಾನ್ಯವಾಗಿ ಆಸ್ಪತ್ರೆಗೆ ಅಗತ್ಯವಿರುವುದಿಲ್ಲ, ಆದ್ದರಿಂದ ಇದು ಆರೋಗ್ಯ ವಿಮೆ ಒಳಗೊಳ್ಳುವುದಿಲ್ಲ. ಆದರೆ ಆಕಸ್ಮಿಕವಾಗಿ ಗಾಯಗೊಂಡರೆ, ಹಲ್ಲಿನ ವೆಚ್ಚವನ್ನು ವಿಮಾ ಪಾಲಿಸಿಯಲ್ಲಿ ಒಳಗೊಂಡಿರುತ್ತದೆ. ಹೀಗೆ ಕೆಲವೊಂದು ನಿಯಮಗಳನ್ನು ಸರಿಯಾಗಿ ಪರಿಶೀಲಿಸಿ ಆರೋಗ್ಯ ವಿಮೆ ಮಾಡಿಸಿ. ಇಲ್ಲದೇ ಹೋದಲ್ಲಿ ಸಂಕಷ್ಟಕ್ಕೆ ಎದುರಾಗಬಹುದು.
Published by:Vasudeva M
First published: