Post Office Savings: ಪೋಸ್ಟ್ ಆಫೀಸಿನ ಈ ಯೋಜನೆಗಳಲ್ಲಿ ಹಣ ಹೂಡಿದ್ರೆ ಕೆಲವೇ ವರ್ಷಗಳಲ್ಲಿ ಡಬಲ್ ಹಣ ವಾಪಸ್ ಗ್ಯಾರಂಟಿ!

Post Office Savings Schemes: ಪೋಸ್ಟ್ ಆಫೀಸಿನ ಕೆಲವು ಯೋಜನೆಗಳ ಬಗ್ಗೆ ನಾವೆಲ್ಲರೂ ತಿಳಿದಿರುತ್ತೇವೆ. ಇಂತಿಷ್ಟು ವರ್ಷಗಳಲ್ಲಿ ಇಷ್ಟು ಹಣ ಬರುತ್ತದೆ ಎನ್ನುವ ಯೋಜನೆಗಳೇ ಹೆಚ್ಚಾಗಿರುತ್ತದೆ. ಆದರೆ ಪೋಸ್ಟ್ ಆಫೀಸಿನಲ್ಲಿ ಇನ್ನೂ ಸಾಕಷ್ಟು ಉಪಕಾರಿ ಯೋಜನೆಗಳಿವೆ. ಸಣ್ಣ ಪುಟ್ಟ ಹೂಡಿಕೆ ಇರಲಿ ಅಥವಾ ದೊಡ್ಡ ಮಟ್ಟಗಿನ ಸೇವಿಂಗ್ಸ್ ಇರಲಿ ಇಟ್ಟ ಹಣ ದುಪ್ಪಟ್ಟಾಗುವ ಭರವಸೆ ನೀಡುವ ಯೋಜನೆಗಳಿವು. ಈ ರೀತಿ ಕೆಲವೇ ವರ್ಷಗಳಲ್ಲಿ ಹಣ ಡಬಲ್ ಮಾಡುವ ಪೋಸ್ಟ್ ಆಫೀಸ್ ಯೋಜನೆಗಳ ಬಗ್ಗೆ ತಿಳಿಯೋಣ.

ಉಳಿತಾಯ ಯೋಜನೆgಳು

ಉಳಿತಾಯ ಯೋಜನೆgಳು

  • Share this:
Savings Scheme in Post Office: ಪೋಸ್ಟ್ ಆಫೀಸ್ ಉಳಿತಾಯ ಅನ್ನೋದು ಈ ಆಧುನಿಕ ಇಂಟರ್ನೆಟ್ ಯುಗದಲ್ಲೂ ಜನರಲ್ಲಿ ಅತ್ಯಂತ ಹೆಚ್ಚು ನಂಬಿಕೆ ಉಳಿಸಿಕೊಂಡ ಯೋಜನೆಗಳಲ್ಲೊಂದು. ಪೋಸ್ಟ್ ಆಫೀಸಿನಲ್ಲಿ ಸಣ್ಣ ಅವಧಿಯ ಹೂಡಿಕೆ ಇರಲಿ(Small term), ಅಥವಾ ದೀರ್ಘಕಾಲದ ಉಳಿತಾಯ ಯೋಜನೆಗಳಿರಲಿ (Long Term Plans) ಎಲ್ಲವೂ ಒಂದು ರೀತಿಯಲ್ಲಿ ಸೇಫ್ ಎಂದೇ ಜನರ ನಂಬಿಕೆ. ಅಲ್ಲಿ ನಾವು ಉಳಿಸುವ ಪ್ರತಿ ರೂಪಾಯಿ ಕೂಡಾ ಮಾರುಕಟ್ಟೆಯಲ್ಲಿರುವ ಅತೀ ಹೆಚ್ಚು ಬಡ್ಡಿ ದರದ (High Interest Rate) ಜೊತೆಗೆ ನಮಗೆ ವಾಪಸ್ (Good Returns) ಬರುತ್ತದೆ ಎನ್ನುವ ವಿಶ್ವಾಸ ಉಳಿಸಿಕೊಂಡಿದೆ ಪೋಸ್ಟ್ ಆಫೀಸ್. ಇನ್ನು ಭವಿಷ್ಯದ ದೃಷ್ಟಿಯಿಂದ ಬಹುಶಃ ಎಲ್​ಐಸಿ ಬಿಟ್ಟರೆ ಪೋಸ್ಟ್ ಆಫೀಸ್ ಯೋಜನೆಗಳೇ ಅತೀ ಹೆಚ್ಚು ಬಳಕೆಯಲ್ಲಿ ಇರುವಂಥವು ಎನಿಸುತ್ತದೆ.

ಆಗೀಗ ಪೋಸ್ಟ್ ಆಫೀಸಿನ ಕೆಲವು ಯೋಜನೆಗಳ ಬಗ್ಗೆ ನಾವೆಲ್ಲರೂ ತಿಳಿದಿರುತ್ತೇವೆ. ಇಂತಿಷ್ಟು ವರ್ಷಗಳಲ್ಲಿ ಇಷ್ಟು ಹಣ ಬರುತ್ತದೆ ಎನ್ನುವ ಯೋಜನೆಗಳೇ ಹೆಚ್ಚಾಗಿರುತ್ತದೆ. ಆದರೆ ಪೋಸ್ಟ್ ಆಫೀಸಿನಲ್ಲಿ ಇನ್ನೂ ಸಾಕಷ್ಟು ಉಪಕಾರಿ ಯೋಜನೆಗಳಿವೆ. ಸಣ್ಣ ಪುಟ್ಟ ಹೂಡಿಕೆ ಇರಲಿ ಅಥವಾ ದೊಡ್ಡ ಮಟ್ಟಗಿನ ಸೇವಿಂಗ್ಸ್ ಇರಲಿ ಇಟ್ಟ ಹಣ ದುಪ್ಪಟ್ಟಾಗುವ ಭರವಸೆ ನೀಡುವ ಯೋಜನೆಗಳಿವು. ಈ ರೀತಿ ಕೆಲವೇ ವರ್ಷಗಳಲ್ಲಿ ಹಣ ಡಬಲ್ ಮಾಡುವ ಪೋಸ್ಟ್ ಆಫೀಸ್ ಯೋಜನೆಗಳ ಬಗ್ಗೆ ತಿಳಿಯೋಣ.

1 ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ (Post Office Time Deposit)

ಇದು ಕನಿಷ್ಟ 1ರಿಂದ 3 ವರ್ಷಗಳ ಹೂಡಿಕೆ. ಈಗ ಸದ್ಯ ಪೋಸ್ಟ್ ಆಫೀಸಿನ ಈ ಯೋಜನೆಯಲ್ಲಿ 5.5% ನಷ್ಟು ಬಡ್ಡಿ ನೀಡಲಾಗುತ್ತಿದೆ. ಈ ಯೋಜನೆಯಲ್ಲಿ ನೀವು ಹಣ ಹೂಡಿದರೆ 13 ವರ್ಷಗಳಲ್ಲಿ ನಿಮ್ಮ ಹಣ ದುಪ್ಪಟ್ಟು ಅಂದ್ರೆ ಡಬಲ್ ಆಗುತ್ತದೆ. ಇದರಲ್ಲಿ ನೀವು 5 ವರ್ಷಕ್ಕೂ ಹೂಡಿಕೆ ಮಾಡಬಹುದು. ಆಗ ನಿಮಗೆ ಶೇಕಡಾ 6.7ರಷ್ಟು ಬಡ್ಡಿ ಸಿಗುತ್ತದೆ. ಅಂದರೆ 10 ವರ್ಷ 9 ತಿಂಗಳಲ್ಲಿ ನಿಮ್ಮ ಹಣ ಡಬಲ್ ಆಗುತ್ತದೆ.

2 ಪೋಸ್ಟ್ ಆಫೀಸ್ ಉಳಿತಾಯ ಖಾತೆ (Post Office Savings Bank Account)

ನೀವೇನಾದರೂ ಪೋಸ್ಟ್ ಆಫೀಸಿನ ಉಳಿತಾಯ ಖಾತೆಯಲ್ಲಿ ಹಣ ಉಳಿಸಿದ್ರೆ ಸರಿಯಾಗಿ 18 ವರ್ಷಗಳಲ್ಲಿ ಆ ಹಣ ದುಪ್ಪಟ್ಟಾಗುತ್ತದೆ. ಇದನ್ನು ಒಂದು ಹೂಡಿಕೆಯ ವಿಧಾನ ಎಂದು ಲೆಕ್ಕ ಹಾಕಲಾಗಿದೆ. ಹಾಗಾಗಿ ಕೇವಲ ಶೇಕಡಾ 4ರಷ್ಟು ಬಡ್ಡಿದರ ಇದೆ. ಆದರೆ ಹೆಚ್ಚಾಗಿ ಮಕ್ಕಳು ಹುಟ್ಟಿದ ಸಂದರ್ಭದಲ್ಲಿ ಪೋಷಕರು ಈ ಯೋಜನೆಯನ್ನು ಆಯ್ಕೆ ಮಾಡುತ್ತಾರೆ. ಆಗ ಮಗುವಿಗೆ 18 ವರ್ಷಗಳಾದಾಗ ಹಣ ದುಪ್ಪಟ್ಟಾಗಿರೋದ್ರಿಂದ ಮಗುವಿನ ವಿದ್ಯಾಭ್ಯಾಸ ಅಥವಾ ಭವಿಷ್ಯಕ್ಕೆ ಅನುಕೂಲವಾಗುತ್ತದೆ ಎನ್ನುವ ಲೆಕ್ಕಾಚಾರ ಪೋಷಕರದ್ದು.

ಇದನ್ನೂ ಓದಿ: Post Office Savings: ದಿನಕ್ಕೆ 100 ರೂ ಉಳಿಸಿ, 5 ವರ್ಷಗಳಲ್ಲಿ 20 ಲಕ್ಷ ಪಡೆಯಿರಿ; ಪೋಸ್ಟ್ ಆಫೀಸಿನ ಈ ಯೋಜನೆ ಬಗ್ಗೆ ಗೊತ್ತಾ?

3 ಪೋಸ್ಟ್ ಆಫೀಸ್ ಆರ್ ಡಿ (Post Office Recurring Deposits-RD)

ಪೋಸ್ಟ್ ಆಫೀಸಿನಲ್ಲಿ ಆರ್​ಡಿ ಓಪನ್ ಮಾಡಿದ್ರೆ ಈಗಿನ ಲೆಕ್ಕಾಚಾರದಂತೆ ಶೇಕಡಾ 5.8ರಷ್ಟು ಬಡ್ಡಿ ದೊರೆಯುತ್ತದೆ. ಸರಿಸುಮಾರು 12 ವರ್ಷ 5 ತಿಂಗಳಲ್ಲಿ ಆರ್​ಡಿಯಲ್ಲಿ ಇಟ್ಟ ನಿಮ್ಮ ಹಣ ದುಪ್ಪಟ್ಟಾಗುತ್ತದೆ.

4 ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (Post Office Monthly Income Scheme)

ಈಗ ಪೋಸ್ಟ್ ಆಫೀಸಿನ ಮಾಸಿಕ ಆದಾಯ ಯೋಜನೆಯಲ್ಲಿ ಶೇಕಡಾ 6.6ರಷ್ಟು ಬಡ್ಡಿ ದೊರೆಯುತ್ತದೆ. ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದ ಹಣ 10.91 ವರ್ಷಗಳಲ್ಲಿ ಡಬಲ್ ಆಗುತ್ತದೆ.

5 ಪೋಸ್ಟ್ ಆಫೀಸ್ ಹಿರಿಯ ನಾಗರಿಕರ ಉಳಿತಾಯ ಯೋಜನೆ  (Post Office Senior Citizen Saving Scheme)

ಹಿರಿಯ ನಾಗರಿಕರಿಗೆ ಅತ್ಯಂತ ಹೆಚ್ಚು ಉಪಯೋಗವಾಗುವ ಪೋಸ್ಟ್ ಆಫೀಸಿನ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್​ನ ಸದ್ಯದ ಬಡ್ಡಿದರ ಶೇಕಡಾ 7.4ರಷ್ಟಿದೆ. ಸರಿಯಾಗಿ 9 ವರ್ಷ 7 ತಿಂಗಳಿಗೆ ನಿಮ್ಮ ಹಣ ಡಬಲ್ ಆಗುವುದು ಗ್ಯಾರಂಟಿ.

6 ಪೋಸ್ಟ್ ಆಫೀಸ್ ಪಿಪಿಎಫ್ (Post Office PPF)

ಪಿಪಿಎಫ್ ನಲ್ಲಿ ಪೋಸ್ಟ್ ಆಫೀಸ್ ಶೇಕಡಾ 7.1ರಷ್ಟು ಬಡ್ಡಿ ನೀಡುತ್ತಿದೆ. ಇದು 15 ವರ್ಷಗಳ ಸುದೀರ್ಘ ಯೋಜನೆ. ಆದರೆ 10 ವರ್ಷಗಳಲ್ಲೇ ನಿಮ್ಮ ಹಣ ಇದರಲ್ಲಿ ದುಪ್ಪಟ್ಟಾಗಿರುತ್ತದೆ.

7 ಪೋಸ್ಟ್ ಆಫೀಸ್ ಸುಕನ್ಯಾ ಸಮೃದ್ಧಿ ಯೋಜನೆ (Post Office Sukanya Samriddhi Account)

ಪೋಸ್ಟ್ ಆಫೀಸಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆ ತೆರೆದರೆ ಅದರಲ್ಲಿ ಶೇಕಡಾ 7.6ನಷ್ಟು ಬಡ್ಡಿ ದೊರೆಯುತ್ತದೆ. ಹೆಣ್ಣುಮಕ್ಕಳ ಶ್ರೇಯೋಭಿವೃದ್ಧಿಗಾಗಿಯೇ ರೂಪಿಸಲಾದ ಈ ಯೋಜನೆ ಸರಿಸುಮಾರು 9 ವರ್ಷ 6 ತಿಂಗಳಲ್ಲಿ ಹಣವನ್ನು ದುಪ್ಪಟ್ಟಾಗಿ ಬದಲಾಯಿಸುತ್ತದೆ.

8 ಪೋಸ್ಟ್ ಆಫೀಸ್ ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್

ಅಂಚೆ ಕಚೇರಿಯ ಎನ್​ಎಸ್​ಸಿ ಯೋಜನೆಯಲ್ಲಿ ಶೇಕಡಾ 6.8ರಷ್ಟು ಬಡ್ಡಿ ಇದೆ. ಇದು ಕೇವಲ 5 ವರ್ಷಗಳ ಯೋಜನೆ ಮತ್ತು ತೆರಿಗೆ ವಿನಾಯ್ತಿ ಕೂಡಾ ದೊರೆಯುತ್ತದೆ. ಈ ಯೋಜನೆಯ ಹಣವನ್ನು ಹಾಗೇ ಉಳಿಸಿಟ್ಟರೆ 10 ವರ್ಷ 7 ತಿಂಗಳಲ್ಲಿ ನಿಮ್ಮ ಹಣ ಎರಡರಷ್ಟು ಹೆಚ್ಚಾಗಿರುತ್ತದೆ.
Published by:Soumya KN
First published: