Business Loss: ಈ ಟಿಪ್ಸ್ ಫಾಲೋ ಮಾಡಿದ್ರೆ ಬ್ಯುಸಿನೆಸ್​ನಲ್ಲಿ ನಷ್ಟ ಅನ್ನೋದು ಇರಲ್ಲ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಡಿಮೆ ಅಥವಾ ಸ್ಥಿರವಾದ ಬಾಡಿಗೆಯನ್ನು ಸ್ಟಾರ್ಟಪ್‌ಗಳು ಹಾಗೂ ಕಂಪನಿಗಳಿಗೆ ನೀಡಬಹುದು. ಶಾಪಿಂಗ್ ಕೇಂದ್ರಗಳು ಮತ್ತು ಕೈಗಾರಿಕಾ ಉದ್ಯಾನವನಗಳನ್ನು ಸ್ಟಾರ್ಟಪ್‌ಗಳು ಬಳಸಿಕೊಳ್ಳಬಹುದು.

  • Share this:

ಯಾವುದೇ ಬ್ಯುಸಿನೆಸ್‌ನಲ್ಲಿ (Business) ಸೋಲು ಗೆಲುವು (Profit And Loss) ಇದ್ದೇ ಇರುತ್ತದೆ. ಸೋಲನ್ನು ನಿವಾರಿಸಿ ಗೆಲುವು (achievement) ಸಾಧಿಸಬೇಕು ಎಂದರೆ ಕೆಲವೊಂದು ಯೋಜನೆಗಳನ್ನು (Plan) ವ್ಯವಹಾರಸ್ಥರು ಅನುಸರಿಸಬೇಕಾಗುತ್ತದೆ. ದೊಡ್ಡ ದೊಡ್ಡ ಉದ್ಯಮೆದಾರರ ಎದುರು ಸಣ್ಣ ಸಣ್ಣ ವ್ಯಾಪಾರಸ್ಥರು (Small Traders) ಇಂದು ನಿರಂತರ ಸೋಲು ಅನುಭವಿಸುತ್ತಿದ್ದಾರೆ ಇದಕ್ಕೆ ಕಾರಣ ಸರಿಯಾದ ಪ್ಲಾನಿಂಗ್ ಇಲ್ಲದೇ ಇರುವುದಾಗಿದೆ ಎಂಬುದು ಮಾರುಕಟ್ಟೆ ಪರಿಣಿತರ (Market Experts) ಹೇಳಿಕೆಯಾಗಿದೆ.


ಉದ್ಯಮದಲ್ಲಿ ಸೋಲು ನಿಭಾಯಿಸಬೇಕು ಎಂದರೆ ಉದ್ಯಮೆದಾರರಿಗೆ ಬೆಂಬಲದ ಅಗತ್ಯವಿರುತ್ತದೆ. ಅನೇಕ ಕಾರ್ಯಕ್ರಗಳು ಹಾಗೂ ಸರಕಾರದ ಕೆಲವೊಂದು ಯೋಜನೆಗಳು ಈ ದಿಸೆಯಲ್ಲಿ ಕಾರ್ಯನಿರ್ವಹಿಸಬಲ್ಲುದು.


ಬಾಡಿಗೆಗಳಲ್ಲಿ ಹೆಚ್ಚಳ ಉದ್ಯಮಿಗಳ ಪ್ರಮುಖ ಸಮಸ್ಯೆ


ಹೆಚ್ಚಿನ ಉದ್ಯೋಗಗಳು ನೆಲಕ್ಕಚ್ಚಲು ಕಾರಣ ಬಾಡಿಗೆ ಸಮಸ್ಯೆಯಾಗಿದೆ ಎಂಬುದು ಕೆಲವೊಂದು ಸಮೀಕ್ಷೆಗಳಿಂದ ತಿಳಿದು ಬಂದಿದೆ. ಬಾಡಿಗೆ, ಇಲೆಕ್ಟ್ರಿಸಿಟಿ, ನೀರು, ಕಸ ವಿಲೇವಾರಿ, ಇನ್ಶುರೆನ್ಸ್ ಹೀಗೆ ಗಳಿಸಿದ ಆದಾಯವೆಲ್ಲವೂ ಈ ಖರ್ಚುವೆಚ್ಚಗಳನ್ನು ಸರಿದೂಗಿಸಲೇ ಸರಿಯಾಗುತ್ತದೆ.


ಬಾಡಿಗೆ ವೆಚ್ಚದಲ್ಲಿ ಪ್ರತೀ ವರ್ಷ 3% ಹೆಚ್ಚಳ ನಡೆಯುತ್ತಿರುತ್ತದೆ ಎಂಬುದು ಸಣ್ಣ ಉದ್ಯೋಗಸ್ಥರ ಗೋಳಾಗಿದೆ. ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಬಾಡಿಗೆ ಹಾಗೂ ಇನ್ನಿತರ ಖರ್ಚು ವೆಚ್ಚಗಳಿಂದ ಉದ್ಯಮದಲ್ಲಿ ದೊರೆತ ಲಾಭ ಇದಕ್ಕೆ ಸರಿಹೊಂದುತ್ತದೆ ಎಂಬುದು ವ್ಯವಹಾರಸ್ಥರ ಗೋಳಾಗಿದೆ.


ಸಾಂದರ್ಭಿಕ ಚಿತ್ರ


ಆದರೆ ಕೆಲವೊಂದು ಸಲಹೆಗಳು ಹಾಗೂ ಸೂತ್ರದ ಮೂಲಕ ಬ್ಯುಸಿನೆಸ್‌ಗಳಲ್ಲಿ ಬಂದೆರಗುವ ನಷ್ಟಗಳನ್ನು ಸರಿದೂಗಿಸಬಹುದಾಗಿದೆ ಅದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ


ಗೆಲ್ಲುವ ಸೂತ್ರ ಸಿದ್ಧಪಡಿಸುವುದು


ಕೆಲವೊಂದು ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳು ಉದ್ಯಮಿಗಳಿಗಾಗಿ ಅನೇಕ ಯೋಜನೆಗಳನ್ನು ಸಮಾಲೋಚನೆಗಳನ್ನು ಹಮ್ಮಿಕೊಳ್ಳುತ್ತವೆ. ಇಲ್ಲಿ ಉದ್ಯಮಿಗಳಿಗೆ ಬೇಕಾಗಿರುವ ಧನಸಹಾಯ ಮಾರ್ಗದರ್ಶನ ಹಾಗೂ ಸಂಪನ್ಮೂಲಗಳ ಅನುಕೂಲ ಉದ್ಯಮಿಗಳಿಗೆ ದೊರೆಯುತ್ತದೆ.


ಸ್ಥಳೀಯ ಆರ್ಥಿಕತೆಗಳಿಗೆ ಅನುಕೂಲವಾಗುವಂತೆ ಇದೇ ರೀತಿಯ ಕಾರ್ಯಕ್ರಮವನ್ನು ಜಾರಿಗೆ ತರಬಹುದು. ಇದರಿಂದ ಉದ್ಯಮದಲ್ಲಿ ಸಂಭವಿಸುವ ಸೋಲಿಗೆ ಕಡಿವಾಣ ಹಾಕಬಹುದು.


ಸ್ಟಾರ್ಟಪ್‌ಗಳು ಸೋತರೂ ಒಮ್ಮೆಮ್ಮೊ ಆ ಸೋಲನ್ನು ನಿಭಾಯಿಸುವ ಅವಕಾಶವನ್ನು ಪಡೆದುಕೊಂಡಿರುತ್ತವೆ. ಏಕೆಂದರೆ ಮಾಲೀಕರು ವಿವಿಧ ಪ್ರೋತ್ಸಾಹಗಳನ್ನು ಪಡೆದುಕೊಳ್ಳುತ್ತಾರೆ ಅಂತೆಯೇ ಹೊಸ ಮತ್ತು ಬೆಳೆಯುತ್ತಿರುವ ಕಂಪನಿಗಳ ಹೆಚ್ಚಳದಿಂದಾಗಿ ಸಾರ್ವಜನಿಕ ವಲಯವು ಹೆಚ್ಚಿನ ಆದಾಯವನ್ನು ಗಳಿಸುತ್ತದೆ.


ಇಂತಹ ಕಾರ್ಯಾಗಾರಗಳು ಉದ್ಯಮಿಗಳಿಗೆ ಹೆಚ್ಚಿನ ಸಂಪರ್ಕ ಸಾಧಿಸಲು ಅನುವು ಮಾಡಿಕೊಡುತ್ತದೆ ಹಾಗೂ ತಮ್ಮ ಉದ್ಯಮದಲ್ಲಿ ಇನ್ನಷ್ಟು ಸಾಧನೆ ಸಾಧಿಸಲು ನೆರವನ್ನು ನೀಡುತ್ತದೆ.


ವ್ಯಾಪಾರ ವೈಫಲ್ಯವನ್ನು ನಿಗ್ರಹಿಸಲು ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವುದು


ಭೂಮಾಲೀಕರು ಮತ್ತು ನಗರ ಸಭೆಗಳು ಉದ್ಯಮಶೀಲತೆಯನ್ನು ಉತ್ತೇಜಿಸಲು ಕೆಲವೊಂದು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಕಡಿಮೆ ಅಥವಾ ಸ್ಥಿರವಾದ ಬಾಡಿಗೆಯನ್ನು ಸ್ಟಾರ್ಟಪ್‌ಗಳು ಹಾಗೂ ಕಂಪನಿಗಳಿಗೆ ನೀಡಬಹುದು. ಶಾಪಿಂಗ್ ಕೇಂದ್ರಗಳು ಮತ್ತು ಕೈಗಾರಿಕಾ ಉದ್ಯಾನವನಗಳನ್ನು ಸ್ಟಾರ್ಟಪ್‌ಗಳು ಬಳಸಿಕೊಳ್ಳಬಹುದು.




ಕಡಿಮೆ ದರದಲ್ಲಿ ವ್ಯಾಪಾರ ಮಾಡಲು ಸ್ಥಳಾವಕಾಶ ದೊರೆತರೆ ಸಣ್ಣ ಉದ್ಯಮಗಳಿಗೂ ಕೊಂಚ ಲಾಭ ಗಳಿಸಲು ಅನುಕೂಲ ದೊರೆಯುತ್ತದೆ. ಸ್ಟಾರ್ಟಪ್‌ಗಳು ಹಾಗೂ ಸಣ್ಣ ಉದ್ಯಮಗಳಿಗೆ ನೆರವು ನೀಡುವ ಭೂಮಾಲೀಕರು ಕಡಿಮೆ ವೆಚ್ಚದಲ್ಲಿ ಬಾಡಿಗೆಯನ್ನು ನಿಗದಿಪಡಿಸಬಹುದು.


ನಷ್ಟ ಸರಿದೂಗಿಸಲು ಮೆಂಟರ್‌ಶಿಪ್ ಕಾರ್ಯಕ್ರಮಗಳು


ಸಿಟಿ ಕೌನ್ಸಿಲ್‌ಗಳು ಗುತ್ತಿಗೆಗಳು ಮತ್ತು ತೆರಿಗೆ ಪ್ರಯೋಜನಗಳಂತಹ ವಿವಿಧ ಉಪಕ್ರಮಗಳ ಮೂಲಕ ಭೂಮಾಲೀಕರಿಗೆ ಆದ್ಯತೆಯನ್ನು ನೀಡಬಹುದು. ಕಡಿಮೆ ಶುಲ್ಕಗಳು, ಸ್ಥಿರ ಬಾಡಿಗೆ ವೆಚ್ಚಗಳು ಮತ್ತು ಇತರ ಅಭಿವೃದ್ಧಿಗಳೊಂದಿಗೆ ಉದ್ಯಮಶೀಲತೆಯನ್ನು ಉತ್ತೇಜಿಸುವ ವಾಣಿಜ್ಯ ಸ್ಥಳಗಳನ್ನು ಹುಡುಕಲು ಸ್ಟಾರ್ಟ್-ಅಪ್‌ಗಳು ಹೆಚ್ಚು ಒಲವು ತೋರುತ್ತವೆ. ಮೆಂಟರ್‌ಶಿಪ್ ಪ್ರೋಗ್ರಾಂಗಳು ವ್ಯವಹಾರಗಳಲ್ಲಿ ಕಂಡುಬರುವ ನಷ್ಟವನ್ನು ನಿವಾರಿಸಲು ಸಹಕಾರಿಯಾಗಿದೆ.


ಇದನ್ನೂ ಓದಿ: Business Idea: ತಿಂಗಳ ಸಂಬಳಕ್ಕೆ ಎಷ್ಟು ದಿನ ಕೈ ಒಡ್ಡುತ್ತೀರಿ? ಈ ಬ್ಯುಸಿನೆಸ್ ಆರಂಭಿಸಿ ನೀವೇ ಬಾಸ್ ಆಗಿ


ರಾಷ್ಟ್ರೀಯ ಅಥವಾ ಜಾಗತಿಕ ಪ್ರಭಾವವನ್ನು ಅಂತಿಮವಾಗಿ ಅಭಿವೃದ್ಧಿಪಡಿಸುವ ಕಂಪನಿಗಳಿಗೆ ಸಹಾಯ ಮಾಡುವುದು ಇಲ್ಲಿ ಪ್ರಾಥಮಿಕ ಉದ್ದೇಶವಾಗಿರಬೇಕು. ಸ್ಥಳೀಯ ಸರಕಾರಗಳಿಗೆ ಆದಾಯದ ಗಮನಾರ್ಹ ಭಾಗವು ಮಾರಾಟದ ತೆರಿಗೆಯಿಂದ ಬರುತ್ತವೆ.

top videos


    ಅಂತೆಯೇ, ವ್ಯವಹಾರಗಳು ಯಶಸ್ವಿಯಾಗಲು ಸಹಾಯ ಮಾಡುವ ಪ್ರೋಗ್ರಾಂ ನಗರಗಳು ಮತ್ತು ರಾಜ್ಯಗಳಿಗೆ ಹೆಚ್ಚಿನ ತೆರಿಗೆ ಆದಾಯಕ್ಕೆ ಸಹಕಾರಿಯಾಗಿದೆ. ಸರಕಾರಗಳು ಸ್ಟಾರ್ಟಪ್‌ಗಳು ಅಂತೆಯೇ ಸಣ್ಣ ಉದ್ಯಮಗಳಿಗೆ ನೆರವನ್ನು ನೀಡಬೇಕು.

    First published: