Businessmen: ಉದ್ಯಮದಲ್ಲಿ ದಿವಾಳಿಯಾದ ಭಾರತದ ಟಾಪ್ ಬ್ಯುಸಿನೆಸ್​​ಮೆನ್​ ಇವರೇ ನೋಡಿ!

ವಿಜಯ್​ ಮಲ್ಯ

ವಿಜಯ್​ ಮಲ್ಯ

ಒಂದು ದೊಡ್ಡ ಸಾಮ್ರಾಜ್ಯವನ್ನು ಕಟ್ಟುವುದು ಎಷ್ಟು ಕಷ್ಟವೋ ಅದನ್ನು ಸರಿಯಾಗಿ ನಿಭಾಯಿಸುವುದು, ಉಳಿಸಿಕೊಳ್ಳುವುದು ಮತ್ತೊಂದು ಸವಾಲು. ಇಂತಹ ಹಂತದಲ್ಲಿ ಮುಗ್ಗರಿಸಿರುವ ಹಲವು ಉದ್ಯಮಿಗಳು ನಮ್ಮಲ್ಲಿದ್ದಾರೆ.

  • Share this:

ಹಿಂದಿನ ಕಾಲದಿದಂದಲೂ ದೊಡ್ಡ ದೊಡ್ಡ ಸಾಮ್ರಾಜ್ಯ ಕಟ್ಟಿದವರೇ ಮಣ್ಣು ಮುಕ್ಕಿರುವ ಅನೇಕ ನಿದರ್ಶನಗಳಿವೆ. ಆಧುನಿಕ ಲೋಕದಲ್ಲೂ ಸಹ ವಿಶ್ವದ (World) ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದವರು, ದೊಡ್ಡ ಉದ್ಯಮ ಕಟ್ಟಿ ಮೆರೆದವರೂ ಇಂದು ಹೇಳ ಹೆಸರಿಸಲ್ಲದೇ ಸಾಲದ (Debt) ಸುಳಿಯಿಂದ ತಪ್ಪಿಸಿಕೊಳ್ಳಲು ಬೇರೆ ದೇಶದಲ್ಲಿ ನೆಲೆಸಿರುವ ಹತ್ತಾರು ಪ್ರಕರಣಗಳಿವೆ.


ಒಂದು ದೊಡ್ಡ ಸಾಮ್ರಾಜ್ಯವನ್ನು ಕಟ್ಟುವುದು ಎಷ್ಟು ಕಷ್ಟವೋ ಅದನ್ನು ಸರಿಯಾಗಿ ನಿಭಾಯಿಸುವುದು, ಉಳಿಸಿಕೊಳ್ಳುವುದು ಮತ್ತೊಂದು ಸವಾಲು. ಇಂತಹ ಹಂತದಲ್ಲಿ ಮುಗ್ಗರಿಸಿರುವ ಹಲವು ಉದ್ಯಮಿಗಳು ನಮ್ಮಲ್ಲಿದ್ದಾರೆ.


ಭಾರತದ ಕಾರ್ಪೊರೇಟ್ ವಲಯವೂ ಸಹ ಇಂತಹ ದುರಂತದ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಭಾರತೀಯ ಕಾರ್ಪೊರೇಟ್‌ಗಳ, ವಿಶೇಷವಾಗಿ ಉನ್ನತ ಉದ್ಯಮಿಗಳು ಸಾಲ ಮಾಡಿಕೊಂಡು ಸಾಮ್ರಾಜ್ಯವನ್ನೇ ಹರಾಜಿಗಿಡುವ ಮಟ್ಟಕ್ಕೆ ಬಂದಿದ್ದರು, ಇದು ಕೇವಲ ಅವರಿಗೆ ಮಾತ್ರವಲ್ಲದೇ ಸಂಪೂರ್ಣ ದೇಶದ ಆರ್ಥಿಕತೆಗೆ ಹೊಡೆತ ನೀಡಿದಲ್ಲದೇ ಘಾತೀಯವಾಗಿ ದೇಶದ ಹಣಕಾಸು ವಲಯವು ಪ್ರಕ್ಷುಬ್ಧವಾಯಿತು.


ಹೀರೋ ಇಂದ ಜೀರೋ ಆದ ಉನ್ನತ ಉದ್ಯಮಿಗಳು


ಸುಬ್ರತಾ ರಾಯ್, ನೀರವ್ ಮೋದಿ, ನರೇಶ್ ಗೋಯಲ್, ವಿಜಯ್ ಮಲ್ಯ, ವಿಜಿಎಸ್,  ಚಂದಾ ಕೊಚ್ಚರ್, ರಾಣಾ ಕಪೂರ್ ಮತ್ತು ರವಿ ಪಾರ್ಥಸಾರಥಿ ಅವರಂತಹ ಭಾರತದ ಒಂದು ಕಾಲದ ಐಕಾನಿಕ್ ಸಿಇಒಗಳು ತಮ್ಮ ಅದೃಷ್ಟ, ಖ್ಯಾತಿಯನ್ನು ಕಳೆದುಕೊಂಡು ನಿಂತ ಉದ್ಯಮಿಗಳಲ್ಲಿ ಪ್ರಮುಖರು.


ಸಾಧನೆಯ ಶಿಖರದಿಂದ ಜಾರಿ ಸೋಲಿನ ಪಾತಾಳದಲ್ಲಿರುವ ಇವರು, ಸಾಲು ಸಾಲು ಯಶಸ್ಸಿನ ಸರಮಾಲೆಯನ್ನು ಕಂಡು ಸೋತಿದ್ದೇಕೆ ಎಂಬುದರ ಬಗ್ಗೆ ಮಾಹಿತಿ ಹೀಗಿದೆ.


ಇದನ್ನೂ ಓದಿ: Farming Tips: ಈ ರೈತನ ವಾರ್ಷಿಕ ಆದಾಯ 50 ಲಕ್ಷ, ಅಂಥದ್ದೇನು ಬೆಳೆತಿದ್ದಾರೆ ಅಂತ ನೀವೇ ನೋಡಿ!


ಸುಬ್ರತಾ ರಾಯ್


ಸುಬ್ರತಾ ರಾಯ್ 1978 ರಲ್ಲಿ ಸಹಾರಾ ಇಂಡಿಯಾ ಪರಿವಾರ್ ಅನ್ನು ಸ್ಥಾಪಿಸಿದ ಭಾರತೀಯ ಉದ್ಯಮಿ. ಸಹಾರಾ ಇಂಡಿಯಾ ಪರಿವಾರ್ ಆಂಬಿ ವ್ಯಾಲಿ ಸಿಟಿ, ಸಹಾರಾ ಮೂವೀ ಸ್ಟುಡಿಯೋಸ್, ಏರ್ ಸಹಾರಾ, ಹಾಕಿ ಸ್ಪೋರ್ಟ್ಸ್, ಫಿಲ್ಮಿ ಮುಂತಾದ ಹೆಚ್ಚಿನ ಸಂಖ್ಯೆಯ ವ್ಯವಹಾರಗಳನ್ನು ನಿರ್ವಹಿಸಿದೆ.


2012ರ ಸಾಲಿನಲ್ಲಿ ಇವರನ್ನು ಉನ್ನದ ಉದ್ಯಮಿ ಎಂದು ಸಹ ಕರೆಯಲಾಗಿತ್ತು. ಆದರೆ ಇಷ್ಟು ದೊಡ್ಡ ಸಾಮ್ರಾಜ್ಯ ಒಂದು ವಂಚನೆ ಪ್ರಕರಣದಲ್ಲಿ ಗಾಳಿಗೆ ತೂರಿ ಹೋಯಿತಲ್ಲದೇ ಇನ್ನೂ ಸಹ ಕಾನೂನು ಸಂಕಷ್ಟದಲ್ಲಿದೆ.


2014 ರಲ್ಲಿ, ಭಾರತದ ಅತಿದೊಡ್ಡ ರೆಸಿಡ್ಯೂರಿ ನಾನ್-ಬ್ಯಾಂಕಿಂಗ್ ಫೈನಾನ್ಸ್ ಕಂಪನಿಯಾದ ಸಹಾರಾ ಇಂಡಿಯಾ ಫೈನಾನ್ಶಿಯಲ್ ಕಾರ್ಪೊರೇಷನ್ (SIFC) ನ ಪ್ರವರ್ತಕ-CEO ಸುಬ್ರತಾ ರಾಯ್ ಅವರನ್ನು ಬಂಧಿಸಲಾಯಿತು.


ವಸತಿ ಯೋಜನೆ ಹೆಸರಿನಲ್ಲಿ ಸಾರ್ವಜನಿಕ ಹೂಡಿಕೆದಾರರನ್ನು ವಂಚಿಸಿ, ಹೂಡಿಕೆ ಹಣ ಹಿಂದಿರುಗಿಸದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಜಾಮೀನುರಹಿತ ವಾರಂಟ್ ಹೊರಡಿಸಿ, ಬಂಧನಕ್ಕೆ ಆದೇಶಿಸಿತ್ತು.


ಸಹಾರಾ ಸಮೂಹ ಕಂಪನಿಯ ಅಂಗಸಂಸ್ಥೆಗಳಾದ ಸಹಾರಾ ಇಂಡಿಯಾ ರಿಯಲ್ ಎಸ್ಟೇಟ್ ಕಾರ್ಪೊರೇಷನ್ ಮತ್ತು ಸಹಾರಾ ಇಂಡಿಯಾ ಹೌಸಿಂಗ್ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್‌ಗಳು ವಸತಿ ಯೋಜನೆಯ ಹೆಸರಿನಲ್ಲಿ ಸುಮಾರು 3 ಕೋಟಿ ಸಾರ್ವಜನಿಕ ಹೂಡಿಕೆದಾರರಿಂದ ಸುಮಾರು 24 ಸಾವಿರ ಕೋಟಿ ರೂ. ಹಣ ಸಂಗ್ರಹಿಸಿದ್ದವು.


ಆದರೆ, ಹೂಡಿಕೆದಾರರಿಗೆ ನೀಡಿದ್ದ ಭರವಸೆಯಂತೆ ವಸತಿ ಕಲ್ಪಿಸಿರಲಿಲ್ಲ. ಪ್ರಕರಣದ ಸಮಗ್ರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಸಾರ್ವಜನಿಕರ 24 ಸಾವಿರ ಕೋಟಿ ರೂ. ಹೂಡಿಕೆ ಹಣಕ್ಕೆ ಬಡ್ಡಿ ಸೇರಿಸಿ, ಹಣ ಹಿಂದಿರುಗಿಸುವಂತೆ ಸಹಾರಾ ಸಮೂಹಕ್ಕೆ ನಿರ್ದೇಶನ ನೀಡಿತ್ತು.


ನ್ಯಾಯಾಲಯದ ಈ ನಿರ್ದೇಶನದ ಅನ್ವಯ, ಸಹಾರಾ ಕಂಪನಿ ಮೊದಲ ಕಂತಿನಲ್ಲಿ ಸೆಬಿಗೆ ಹೂಡಿಕೆ ಹಣಕ್ಕೆ ಬಡ್ಡಿ ಸೇರಿಸಿ, ಸುಮಾರು 5,120 ಕೋಟಿ ರೂ. ಪಾವತಿಸಿತ್ತು. ಇನ್ನುಳಿದ 20 ಸಾವಿರ ಕೋಟಿ ರೂ. ಪಾವತಿಸುವಲ್ಲಿ ವಿಫಲವಾಗಿತ್ತು. ಈ ಹಿನ್ನೆಲೆ ಕಂಪನಿಯ ಸಿಇಒ ಸುಬ್ರತಾ ರಾಯ್ ಅವರನ್ನು ಬಂಧಿಸಲಾಯಿತು.


ತಾಯಿಯ ನಿಧನದ ನಂತರ, ಮೇ 2016 ರಲ್ಲಿ ಅವರಿಗೆ ಜೈಲಿನಿಂದ ಪೆರೋಲ್ ನೀಡಲಾಯಿತು. ಇದಾದ ಬಳಿಕ 2016 ರಿಂದ ಜೈಲಿಗೆ ಹಿಂತಿರುಗಿಲ್ಲ. ಇನ್ನೂ ಸಹ ಸಹಾರ ಸಮೂಹ ಅಧ್ಯಕ್ಷ ಸುಬ್ರಾತ ರಾಯ್‌ ವಿರುದ್ಧ ಬಂಧನ ವಾರೆಂಟ್‌ ಜಾರಿಯಲ್ಲಿದೆ.


ನೀರವ್‌ ಮೋದಿ


ಸಾಲದ ಹೊರೆ ತಾಳದೇ ದೇಶ ಬಿಟ್ಟು ಹೋಗಿ ಓಡಿಹೋದವರಲ್ಲಿ ನೀರವ್‌ ಮೋದಿ ಇತ್ತೀಚಿನವರು. ವಜ್ರ ವ್ಯಾಪಾರಿ ನೀರವ್ ಮೋದಿ ಮತ್ತು ಅವರ ಚಿಕ್ಕಪ್ಪ, ಆಭರಣ ವ್ಯಾಪಾರಿ ಮೆಹುಲ್ ಚೋಕ್ಸಿ, ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಉದ್ಯೋಗಿಗಳ ಜೊತೆಗೂಡಿ ಒಂದು ದಶಕದಿಂದ ₹13,600 ಕೋಟಿ (2017 ರಲ್ಲಿ ಸುಮಾರು $2.0 ಶತಕೋಟಿ) ಮೌಲ್ಯದ ಸಾಲದ ಪತ್ರಗಳನ್ನು (LCs) ಸೃಷ್ಟಿಸಿದ್ದಾರೆ. ಮೋದಿ ಮತ್ತು ಚೋಕ್ಸಿ ಹಗರಣಕ್ಕೆ ಹೆದರಿ 2018 ರ ಜನವರಿಯಲ್ಲಿ ಭಾರತದಿಂದ ಪಲಾಯನ ಮಾಡಿದ್ದಾರೆ.


ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಸಾಲ ಹಗರಣಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಹಸ್ತಾಂತರಿಸುವುದರ ವಿರುದ್ಧ ಬ್ರಿಟನ್‌ನ ಅತ್ಯುನ್ನತ ನ್ಯಾಯಾಲಯದಲ್ಲಿ ಕಳೆದ ವರ್ಷ ಒಂದು ವರ್ಷದಿಂದ ಉದ್ಯಮಿ ನೀರವ್ ಮೋದಿ ಕಾನೂನು ಹೋರಾಟದಲ್ಲಿ ಸೋತಿದ್ದಾರೆ.


ಇದನ್ನೂ ಓದಿ: SSY: ಈ ಯೋಜನೆಯಲ್ಲಿ ಹೂಡಿಕೆ ಮಾಡಿದವರಿಗೆ ಕೇಂದ್ರದಿಂದ ಶಾಕ್, ಈ ಬಾರಿಯೂ ನಿರಾಸೆ!


ಸುಮಾರು 15 ಸಾವಿರ ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪ ಇವರ ಮೇಲಿದೆ. ಮೆಹುಲ್ ಚೋಕ್ಸಿ ಅವರು ದ್ವೀಪ ರಾಷ್ಟ್ರದ ಪೌರತ್ವವನ್ನು ಪಡೆದ ನಂತರ ಆಂಟಿಗುವಾದಲ್ಲಿ ಮೇ 2021 ರವರೆಗೆ ವಾಸಿಸುತ್ತಿದ್ದರು, ನಂತರ ಅವರು ಕಾಣೆಯಾಗಿದ್ದಾರೆ ಎಂದು ವರದಿಯಾಗಿತ್ತು.


ನಂತರ, ಅವರನ್ನು ಡೊಮಿನಿಕಾದಲ್ಲಿ ಬಂಧಿಸಲಾಯಿತು ಮತ್ತು ಭಾರತಕ್ಕೆ ಹಸ್ತಾಂತರಿಸಲು ನ್ಯಾಯಾಲಯದ ವಿಚಾರಣೆ ನಡೆಯುತ್ತಿದೆ. ಇನ್ನೂ ನೀರವ್ ಮೋದಿ ಪ್ರಸ್ತುತ ನೈಋತ್ಯ ಲಂಡನ್‌ನ ವಾಂಡ್ಸ್‌ವರ್ತ್‌ನಲ್ಲಿರುವ ಜೈಲಿನಲ್ಲಿದ್ದಾರೆ.


ಸಿದ್ಧಾರ್ಥ ಹೆಗ್ಡೆ


ಖ್ಯಾತ ಉದ್ಯಮಿ, ಮಲೆನಾಡಿನ ಹೆಮ್ಮೆಯ ಪುತ್ರ, ಕಾಫಿ ಕಿಂಗ್ ಹೀಗೆ ನಾನಾ ಹೆಸರುಗಳಿಂದ ಬಣ್ಣಿಸಲ್ಪಡುವ ಕಾಫಿ ದೊರೆ ವೀರಪ್ಪ ಗಂಗಯ್ಯ‌ ಅಲಿಯಾಸ್ ಸಿದ್ಧಾರ್ಥ ಹೆಗ್ಡೆ ಕೂಡ ವ್ಯವಹಾರದ ಗಾಳಿಯಲ್ಲಿ ತೂರಿ ಪ್ರಾಣವನ್ನೇ ಕಳೆದುಕೊಂಡ ಉದ್ಯಮಿ.


ಭಾರತಕ್ಕೆ ಕೆಫೆ ಸಂಸ್ಕೃತಿ ಕಟ್ಟಿ ಕಾಫಿ ಡೇ ಎಂಬ ದೊಡ್ಡ ಸಾಮ್ರಾಜ್ಯವ ಕಟ್ಟಿದವರಿವರು. ಅವರ ಕೆಫೆ ಕಾಫಿ ಡೇ ಔಟ್‌ಲೆಟ್‌ಗಳು, ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್‌ನ (CDEL) ಪ್ರಮುಖ ವ್ಯಾಪಾರ, ಭಾರತದ ಅತಿದೊಡ್ಡ ಕೆಫೆ ಸರಪಳಿಯಾಗಿದೆ.


ಇನ್ಫೋಸಿಸ್ ಮತ್ತು ಮೈಂಡ್‌ಟ್ರೀ ಸೇರಿದಂತೆ ಐಟಿ ಕಂಪನಿಗಳ ಐಪಿಒಗಳಲ್ಲಿ ಹೂಡಿಕೆ ಮಾಡುವ ಮೂಲಕ ವಿಜಿಎಸ್ ಪ್ರಸಿದ್ಧ ಟೆಕ್ ಹೂಡಿಕೆದಾರರಾಗಿದ್ದರು.


ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳ ಅಳಿಯ ಎಸ್.ಎಂ. ಕೃಷ್ಣ, ಅರವತ್ತು ವರ್ಷ ವಯಸ್ಸಿನ ವಿಜಿಎಸ್ ಜುಲೈ 2019 ರಲ್ಲಿ ಆತ್ಮಹತ್ಯೆ ಮಾಡಿಕೊಂಡರು.


ಖಾಸಗಿ ಷೇರು ಹೂಡಿಕೆದಾರರ ಒತ್ತಡ ಮತ್ತು ಆದಾಯ ತೆರಿಗೆಯ ಮಾಜಿ ಮಹಾನಿರ್ದೇಶಕರ (ಡಿಜಿ) ಕಿರುಕುಳವು ತಮ್ಮನ್ನು ಈ ನಿರ್ಧಾರಕ್ಕೆ ಪ್ರೇರೇಪಿಸಿತು ಎಂದು ಅವರು ತಮ್ಮ ಡೆತ್‌ ನೋಟ್‌ನಲ್ಲಿ ತಿಳಿಸಿದ್ದರು.


ರೇಶ್ ಗೋಯಲ್


ಮಧ್ಯಮ ಕುಟುಂಬದಲ್ಲಿ ಜನಿಸಿದ ಗೋಯಲ್‌ ತಮ್ಮ ಚಿಕ್ಕಪ್ಪನ ಟ್ರಾವೆಲ್ ಏಜೆನ್ಸಿಯಲ್ಲಿ ಉದ್ಯೋಗಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.


ಹೀಗೆ ಸಾಮಾನ್ಯ ವ್ಯಕ್ತಿಯಾಗಿದ್ದ ಗೋಯಲ್‌ ಜೆಟ್ ಏರ್‌ವೇಸ್‌ ಎಂಬ ದೊಡ್ಡ ವಿಮಾನಯಾನ ಸಂಸ್ಥೆ ಸ್ಥಾಪಿಸಿದರು. ಕಾಲ ಕ್ರಮೇಣ ಜೆಟ್ ಏರ್‌ವೇಸ್ ತಾನು ಸಂಗ್ರಹಿಸಿದ ಅಪಾರ ಸಾಲವನ್ನು ಮರುಪಾವತಿಸಲು ವಿಫಲವಾದ ಕಾರಣ ಗೋಯಲ್ ಅವರನ್ನು ಕಂಪನಿಯಿಂದ ಹೊರ ಹಾಕಲಾಯಿತು.


ಏರ್‌ಲೈನ್ಸ್‌ನ ಈಕ್ವಿಟಿ ಹೂಡಿಕೆದಾರರು ತಮ್ಮ ಹೂಡಿಕೆಯ ಮೌಲ್ಯದಲ್ಲಿ ಗಣನೀಯ ಇಳಿಕೆಯನ್ನು ಕಂಡರು. ಗೋಯಲ್‌ ಮನೆ ಮೇಲೂ ಇಡಿ ದಾಳಿ ಪ್ರಕರಣಗಳು ನಡೆದು ಅವರನ್ನು ಮತ್ತಷ್ಟು ಜರ್ಜರಿತಗೊಳಿಸಿದವು.


ವಿಜಯ್‌ ಮಲ್ಯ


ಮದ್ಯ ದೊರೆ ಎಂದೇ ಜನಪ್ರಿಯ ಹೊಂದಿದ ವಿಜಯ್‌ ಮಲ್ಯ ಎಂಬ ದೊಡ್ಡ ದೈತ್ಯನ ಅವನತಿ ಇನ್ನೂ ಸಹ ಅರಗಿಸಿಕೊಳ್ಳಲಾಗದ ಸಂಗತಿ. 9 ಸಾವಿರ ಕೋಟಿ ರೂಪಾಯಿಗೂ ಹೆಚ್ಚಿನ ಸಾಲವನ್ನ ಬ್ಯಾಂಕ್ಗಳಿಗೆ ಮರು ಪಾವತಿ ಮಾಡದೆ ಭಾರತವನ್ನ ಬಿಟ್ಟು ಹೋದ ವಿಲ್ ಫುಲ್ ಡಿಫಾಲ್ಟರ್ ಇವರು.


ವಿಜಯ್ ಮಲ್ಯ ಅವರ ತಂದೆ ವಿಠ್ಠಲ್ ಮಲ್ಯ ಅವರು ಲಿಕ್ಕರ್ ಸಾಮ್ರಾಜ್ಯವನ್ನ ಕಟ್ಟಿದವರು. ಭಾರತದಲ್ಲಿ ಈ ವ್ಯಾಪಾರ ಕೆಟ್ಟದ್ದು ಎನ್ನುವ ಕಾಲಘಟ್ಟದಲ್ಲಿ ಅವರು ಈ ವ್ಯಾಪಾರವನ್ನ ಬಹಳವಾಗಿ ವೃದ್ಧಿಸಿದ್ದರು.


ವಿಜಯ್ ಮಲ್ಯ ಅವರು ಭಾರತದ ಅತ್ಯಂತ ಲಾಭದಾಯಕ ಸಂಘಟಿತ ಸಂಸ್ಥೆಗಳಲ್ಲಿ ಒಂದಾದ ಯುನೈಟೆಡ್ ಬ್ರೆವರೀಸ್ (ಯುಬಿ) ಗ್ರೂಪ್‌ನ ವಂಶಸ್ಥರಾಗಿದ್ದರು ಮತ್ತು ತಮ್ಮದೇ ಆದ ರೀತಿಯಲ್ಲಿ ಯಶಸ್ವಿ ಮದ್ಯದ ಉದ್ಯಮಿಯಾಗಿದ್ದರು.


ಜೊತೆಗೆ ಕಿಂಗ್‌ಫಿಷರ್ ಏರ್‌‍ಲೈನ್ಸ್ ಕಂಪೆನಿಯನ್ನು 2003ರಲ್ಲಿ ಸ್ಥಾಪಿಸಿದರು. ಮಲ್ಯ ಕಿಂಗ್‌ಫಿಶರ್ ಏರ್‌ಲೈನ್ಸ್ ಅನ್ನು ಉನ್ನತ-ಮಟ್ಟದ, ಪೂರ್ಣ-ಸೇವೆಯ ವಿಮಾನಯಾನ ಸಂಸ್ಥೆಯಾಗಿ ಬಜೆಟ್ ವಾಹಕಗಳಿಗೆ ಸಮಾನವಾಗಿ ನಿರ್ವಹಿಸಲು ಪ್ರಯತ್ನಿಸಿದರು.


ನಂತರ ಕಂಪನಿ ಹಂತಹಂತವಾಗಿ ಕುಸಿಯುತ್ತ ಬಂದು, ತನ್ನ ಉದ್ಯೋಗಿಗಳು ಮತ್ತು ಮಾರಾಟಗಾರರಿಗೆ ಪಾವತಿಸಲು ಮತ್ತು ಅದರ ಸಾಲವನ್ನು ಪೂರೈಸಲು ಸಾಕಷ್ಟು ನಗದು ಹರಿವನ್ನು ಉತ್ಪಾದಿಸಲು ಸಾಧ್ಯವಾಗಲಿಲ್ಲ.


ಸಂಸತ್ ಸದಸ್ಯರೂ (MP) ಆಗಿದ್ದ ಮಲ್ಯ ಅವರು ಬಂಧನದ ಭೀತಿಯಲ್ಲಿ ಸಿಲುಕಿದರು. ತಮ್ಮ ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಸಿ ಗುಟ್ಟಾಗಿ ಭಾರತದಿಂದ ಯುಕೆಗೆ ಪಲಾಯಾನ ಮಾಡಿದ್ದಾರೆ. ಜುಲೈ 2021 ರಲ್ಲಿ, UK ನ್ಯಾಯಾಲಯವು ಮಲ್ಯ ಅವರನ್ನು ದಿವಾಳಿ ಎಂದು ಘೋಷಿಸಿತು.




ಭಾರತದಲ್ಲಿ ವಿಜಯ್ ಮಲ್ಯರಿಗೆ ಮುಂಚೆ ನೂರಾರು ಜನ ಕೋಟ್ಯಧಿಪತಿಗಳು ಜನಿಸಿದ್ದಾರೆ, ಆದರೆ ಮಾಡ್ರನ್ ಸಮಯದಲ್ಲಿ ಹಣವನ್ನ ಖರ್ಚು ಮಾಡುವುದರಲ್ಲಿ ಮೂಲವಾಗಿ ಭಾರತೀಯರಲ್ಲಿ ಇದ್ದ ಮಡಿವಂತಿಕೆಯನ್ನ ಮೀರಿ 'ನನ್ನ ದುಡ್ಡು, ನನ್ನಿಚ್ಛೆ ಎನ್ನುವಂತೆ' ಬದುಕಿದವರಲ್ಲಿ ಮಲ್ಯ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಇಷ್ಟೆಲ್ಲಾ ದೊಡ್ಡ ಕೋಟೆ ಕಟ್ಟಿ ಮಣ್ಣು ಮುಕ್ಕಿದ್ದು ಮಾತ್ರ ದುರಂತ.

Published by:Latha CG
First published: