Best Business Idea: ಭಾರತದ ಟಾಪ್ 10 ಬ್ಯುಸಿನೆಸ್​ ಐಡಿಯಾಗಳು! ಕಡಿಮೆ ಹೂಡಿಕೆ, ಹೆಚ್ಚಿನ ಲಾಭ

ಏನಾದರೂ ಬ್ಯುಸಿನೆಸ್ (Business)​​ ಮಾಡೋಣ ಎಂದು ಕೊಂಡರೇ ಎಲ್ಲಿ ಲಾಸ್ (Loss)​ ಆಗುತ್ತೋ ಅನ್ನುವ ಭಯದಲ್ಲಿದ್ದಾರೆ. ಇನ್ನು ಕೆಲವರಿಗೆ ದುಡ್ಡು ಇದ್ದರೂ ತಲೆಯಲ್ಲಿ ಐಡಿಯಾ(Idea) ಇರೋದಿಲ್ಲ. ಇನ್ನೂ ಕೆಲವರಿಗೆ ಕಡಿಮೆ ಹೂಡಿಕೆ ಮಾಡಿ ಹೆಚ್ಚು ಲಾಭಗಳಿಸುವ ಆಸೆಯನ್ನು ಹೊಂದಿರುತ್ತಾರೆ. ಇಂಥವರಿಗಾಗಿ ಇಲ್ಲಿ 15 ಬೆಸ್ಟ್ ಬ್ಯುಸಿನೆಸ್​ ಐಡಿಯಾಗಳನ್ನು ನಿಮ್ಮ ಮುಂದೆ ತಂದಿದ್ದೇವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದುಡ್ಡು (Money) ಮಾಡುವುದಕ್ಕೆ ಸಾವಿರಾರು ದಾರಿಗಳಿವೆ. ಆದರೆ ಯಾವತ್ತೂ ಒಳ್ಳೆಯ ದಾರಿಯಲ್ಲಿ ಮಾಡಿದ ಹಣವೇ ಕೊನೆವರೆಗೂ ಇರುತ್ತೆ. ಹೀಗೆ ಕೊರೋನಾ (Corona) ಬಂದು ಹೋದಮೇಲೆ ಅದೆಷ್ಟೋ ಮಂದಿ ಹಣ ಇಲ್ಲದೆ ಪರದಾಡುತ್ತಿದ್ದಾರೆ. ದೊಡ್ಡ ದೊಡ್ಡವರ ಉದ್ಯೋಗಗಳೇ ನೆಲಕಚ್ಚಿವೆ.  ಏನಾದರೂ ಬ್ಯುಸಿನೆಸ್ (Business)​​ ಮಾಡೋಣ ಎಂದು ಕೊಂಡರೇ ಎಲ್ಲಿ ಲಾಸ್ (Loss)​ ಆಗುತ್ತೋ ಅನ್ನುವ ಭಯದಲ್ಲಿದ್ದಾರೆ. ಇನ್ನು ಕೆಲವರಿಗೆ ದುಡ್ಡು ಇದ್ದರೂ ತಲೆಯಲ್ಲಿ ಐಡಿಯಾ(Idea) ಇರೋದಿಲ್ಲ. ಇನ್ನೂ ಕೆಲವರಿಗೆ ಕಡಿಮೆ ಹೂಡಿಕೆ ಮಾಡಿ ಹೆಚ್ಚು ಲಾಭಗಳಿಸುವ ಆಸೆಯನ್ನು ಹೊಂದಿರುತ್ತಾರೆ. ಇಂಥವರಿಗಾಗಿ ಇಲ್ಲಿ 15 ಬೆಸ್ಟ್ ಬ್ಯುಸಿನೆಸ್​ ಐಡಿಯಾಗಳನ್ನು ನಿಮ್ಮ ಮುಂದೆ ತಂದಿದ್ದೇವೆ.

01) ಗ್ಯಾರೇಜ್​ ಆರಂಭಿಸಿ
ಕಾರು ಹಾಗೂ ಬೈಕ್​ಗಳನ್ನು ಓಡಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ನೀವು ಗ್ಯಾರೇಜ್​ ಬ್ಯುಸಿನೆಸ್ ಆರಂಭಿಸಿ ಹೆಚ್ಚಿನ ಆದಾಯವನ್ನು ನಿರೀಕ್ಷೆ ಮಾಡಬಹುದು. ಈ ಗ್ಯಾರೇಜ್​ ಓಪನ್​ ಮಾಡಲು ಹೆಚ್ಚಿನ ಹಣದ ಅವಶ್ಯಕತೆ ಇರುವುದಿಲ್ಲ.

02) ಹೋಟೆಲ್​
ಜನ ಎಲ್ಲವನ್ನೂ ನಿಲ್ಲಿಸಬಹುದು, ಆದರೆ ತಿನ್ನುವುದನ್ನು ಮಾತ್ರ ನಿಲ್ಲಿಸುವುದಿಲ್ಲ. ಹೀಗಾಗಿ ಭಾರತದಲ್ಲಿ ಸಣ್ಣ ಪುಟ್ಟ ಹೋಟೆಲ್​ಗಳು ಅಸಂಖ್ಯಾತವಾಗಿ ಓಪನ್​ ಆಗಿವೆ. ಕೆಲವರು ದೊಡ್ಡದಾಗಿ ಹೋಟೆಲ್​ ಓಪನ್​ ಮಾಡಿ ವ್ಯಾಪಾರ ಮಾಡುತ್ತಿದ್ದರೆ, ಇನ್ನೂ ಕೆಲವರು ಸಣ್ಣದಾಗಿ ಮನೆಯಿಂದಲೇ ಸಣ್ಣದಾಗಿ ಬ್ಯುಸಿನೆಸನ್​ ಶುರು ಮಾಡಿದ್ದಾರೆಎ.

03) ಎಲೆಕ್ಟ್ರಾನಿಕ್ ಶಾಪ್​
ಇನ್ನೂ ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭ ನಿರೀಕ್ಷೆ ಮಾಡುವವರು ಈ ಎಲೆಕ್ಟ್ರಾನಿಕ್​ ಶಾಪ್​ ತೆರೆಯಬಹುದು. ಅದೂ ನೀವೇನಾದರೂ ಡೋರ್​ ಸ್ಟೆಪ್​ ಬ್ಯುಸಿನೆಸ್ ಮಾಡಿದರೆ, ಹೆಚ್ಚಿನ ಲಾಭ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ,

04) ಬ್ಲಾಗಿಂಗ್​ ಮಾಡಿ ಹಣ ಮಾಡಿ
ಈಗೆಲ್ಲಾ ಸೋಷಿಯಲ್​ ಮೀಡಿಯಾ ಜಮಾನ ಅಂದರೆ ತಪ್ಪಾಗಲ್ಲ. ಎಲ್ಲರೂ ಸಾಮಾಜಿಕ ಜಾಲತಾಣದಲ್ಲಿ ಬರುವುದನ್ನೇ ನಂಬುತ್ತಾರೆ. ಹೀಗಾಗಿ ನಿಮಗೆ ತುಂಬಾ ಚೆನ್ನಾಗಿ ತಿಳಿದಿರುವ ವಿಚಾರವನ್ನು ನೀವು ಬ್ಲಾಗಿಂಗ್ ಮಾಡಬಹುದು. ಇದರಿಂದ ಸಾಕಷ್ಟು ಹಣವನ್ನು ನೀವು ಗಳಿಸಬಹುದು. ಮಾರ್ಕೆಟಿಂಗ್​ ಬ್ಲಾಗಿಂಗ್​, ಸ್ಪಾನ್ಸರ್​ ಬ್ಲಾಗಿಂಗ್​ ಮಾಡಿ ಹಣ ಗಳಿಸಬಹುದು.

ಇದನ್ನೂ ಓದಿ: ಮಹಿಳೆಯರಿಗೆ ಹೇಳಿ ಮಾಡಿಸಿದ ಕೆಲಸಗಳಿವು, ಕೈ ತುಂಬಾ ದುಡ್ಡು ಮಾಡುವ ದಾರಿ ಇಲ್ಲಿದೆ ನೋಡಿ!

05) ಮಕ್ಕಳಿಗೆ ಟ್ಯೂಶನ್​ ಮಾಡಿ ಹಣ ಮಾಡಿ
ಎಲ್ಲ ತಂದೆ-ತಾಯಿಯರಿಗೂ ತಮ್ಮ ಮಕ್ಕಳು ಚೆನ್ನಾಗಿ ಓದಬೇಕೆಂಬ ಆಸೆ ಇರುತ್ತದೆ. ಒಳ್ಳೆ ಒಳ್ಳೆಯ ಶಾಲೆ ಜೊತೆ ಟ್ಯೂಶನ್​ಗೂ ಸಹ ಕಳುಹಿಸುತ್ತಾರೆ. ಹೀಗಾಗಿ ನೀವು ಚೆನ್ನಾಗಿ ಓದಿದ್ದರೆ, ಮಕ್ಕಳಿಗೆ ಟ್ಯೂಶನ್​ ಮಾಡುವ ಮೂಲಕ ಹಣ ಗಳಿಸಬಹುದು. ಇದಕ್ಕೆ ಹೂಡಿಕೆಯ ಅಗತ್ಯವಿಲ್ಲ. ಮೊದಲು ಮನೆಯಲ್ಲೇ ಶುರು ಮಾಡಿ ನಂತರ ದೊಡ್ಡದಾಗಿ ಮಾಡಬಹುದು.

06) ಸಾಕು ಪ್ರಾಣಿಗಳ ಕೇರ್​ ಸೆಂಟರ್
ಮನುಷ್ಯ ಈಗ ತನಗಿಂತ ಹೆಚ್ಚಾಗಿ ತನ್ನ ಸಾಕು ಪ್ರಾಣಿಯನ್ನು ಕೇರ್ ಮಾಡುತ್ತಾರೆ. ತಾವು ಮನೆಯಲ್ಲಿ ಇಲ್ಲದಾಗ ಅದನ್ನು ನೋಡಿಕೊಳ್ಳಲು ಪಯಾರ್ಯ ವ್ಯವಸ್ಥೆ ಮಾಡುತ್ತಾನೆ. ಹೀಗೆ ನೀವೇನಾದರೂ ಪೆಟ್​ ಕೇರ್​ ಸೆಂಟರ್​ ಓಪನ್ ಮಾಡಿದರೆ ಉತ್ತಮ ಲಾಭವನ್ನು ಗಳಿಸಬಹುದು.

7) ಎಜುಕೇಷನ್​ ಮೊಬೈಲ್ ಆ್ಯಪ್
ನೀವಾನದರೂ ಟೆಕ್​ ಬಗ್ಗೆ ತುಂಬಾ ಚೆನ್ನಾಗಿ ತಿಳಿದುಕೊಂಡಿದ್ದರೆ, ಈ ಬ್ಯುಸಿನೆಸ್​ ಶುರುಮಾಡಬಹುದು. ಸಾಮಾನ್ಯ ವಿಚಾರಗಳು, ಎಜುಕೇಷನ್​ಗೆ ಸಂಬಂಧ ಪಟ್ಟ ಆ್ಯಪ್​ಗಳನ್ನು ಸಿದ್ದಪಡಿಸಬಹುದು. ಅಥವಾ ಉತ್ತಮ ಬ್ಯುಸಿನೆಸ್ ಐಡಿಯಾಗಳನ್ನು ನೀಡುವ ಆ್ಯಪ್​ಗಳನ್ನು ಸಿದ್ಧಪಡಿಸಿ ಹಣ ಗಳಿಸಬಹುದು.

ಇದನ್ನೂ ಓದಿ: ಸಿಂಪಲ್ಲಾಗಿ ಈ ಬ್ಯುಸಿನೆಸ್​ ಸ್ಟಾರ್ಟ್ ಮಾಡಿ! ಹೋಗ್ತಾ ಹೋಗ್ತಾ ಮೈ ತುಂಬಾ ಜೋಶು, ಕೈ ತುಂಬಾ ಕಾಸು

8) ಕೇಕ್​ ಶಾಪ್​
ಬೇಕರಿ ಪ್ರಾಡೆಕ್ಟ್​ಗಳಿಗೆ ಸಖತ್​ ಡಿಮ್ಯಾಂಡ್​ ಇದೆ. ಹೀಗಾಗಿ ನೀವೇನಾದರೂ ಬೇಕರಿ ತೆರೆದರೆ ಕೈ ತುಂಬಾ ಕಾಸು ಮಾಡಬಹುದು. ಕೇಕ್​, ಬಿಸ್ಕೆಟ್​, ಸೇರಿ ಸಾಕಷ್ಟು ಪದಾರ್ಥಗಳನ್ನು ಮಾಡಿ.

9) ಬಟ್ಟೆ ಅಂಗಡಿ
ಜನ ಯಾವಾಗಲೂ ಚೆಂದವಾಗಿ ಕಾಣಲು ಬಯಸುತ್ತಾರೆ. ಹೀಗಾಗಿ ನೀವು ಬಟ್ಟೆ ಅಂಗಡಿಯನ್ನು ತೆರೆದರೆ ಸಾಕಷ್ಟು ಹಣ ಗಳಿಸಬಹುದು. ಆದರೆ, ಮಾರ್ಕೆಟಿಂಗ್​ ಹಾಗೂ ಕ್ವಾಲಿಟಿ ಚೆನ್ನಾಗಿದ್ದರೆ ಹೆಚ್ಚಿನ ಹಣವನ್ನು ನೀವು ಗಳಿಸಬಹುದು.

10) ಸಿಸಿಟಿವಿ ಶಾಪ್​
ಜನರು ಏನನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಹೀಗಾಗಿ ಎಲ್ಲವನ್ನು ಮೂರನೇ ಕಣ್ಣಿನಲ್ಲಿ ಸೆರೆಮಾಡಲು ಇಷ್ಟಪಡುತ್ತಾರೆ. ಹೀಗಾಗಿ ನೀವು ಸಿಸಿಟಿವಿ ಶಾಪ್​ ತೆರೆದರೆ ಹೆಚ್ಚಿನ ಆದಾಯ ಸಿಗುತ್ತೆ.
Published by:Vasudeva M
First published: