Vintage Hotels: ಇಂದಿಗೂ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರಿನ ಟಾಪ್ 10 ಐಕಾನಿಕ್ ವಿಂಟೇಜ್ ಹೋಟೆಲುಗಳಿವು

ಹೆಚ್ಚಿನ ಸ್ಥಳೀಯರ ಹೃದಯಗಳಲ್ಲಿ ನೆಲೆಸಿರುವ ಕ್ಷೀಣಿಸಿದ ಐಸ್‌ಕ್ರೀಮ್ ಸಂಡೇಗಳು, ನೊರೆಯುಳ್ಳ ಬಿಯರ್, ಬೆಣ್ಣೆ ದೋಸೆಗಳು ಮತ್ತು ರಸಭರಿತವಾದ ಸ್ಟೀಕ್ಸ್‌ಗಳನ್ನು ಪೂರೈಸುವ ಬೆಂಗಳೂರಿನ ವಿಂಟೇಜ್ ರೆಸ್ಟೋರೆಂಟ್‌ಗಳು ಇಂದಿಗೂ ಕಾರ್ಯನಿರ್ವಹಿಸುತ್ತಿದ್ದು ಹಳೆ ಜನರ ಅಂದರೆ ಇಂದಿನ ಹಿರಿಯ ನಾಗರಿಕರ ಪಾಲಿಗೆ ಸ್ವರ್ಗದಂತಿವೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಗಾರ್ಡನ್ ಸಿಟಿ ಬೆಂಗಳೂರು (Bengaluru) ಕೇವಲ ತನ್ನಲ್ಲಿರುವ ಐಟಿ ಪಾರ್ಕುಗಳಿಗೆ (Park) ಮಾತ್ರವಲ್ಲದೆ ವಿಶಿಷ್ಟ ಬಗೆಯ ಪಾಕಶಾಲೆಯ ಸಂಸ್ಕೃತಿಯನ್ನೊಳಗೊಂಡ ನಗರ ಎಂತಲೂ ಹೇಳಬಹುದು. ಹಾಗಾಗಿಯೇ ಇಲ್ಲಿ ಎರಡು ಬಗೆಯ ಅಂದರೆ ಯುವ ಮತ್ತು ಹಳೆಯ ಪಾಕ ಸಂಸ್ಕೃತಿಯನ್ನು ಆಸ್ವಾದಿಸಬಹುದಾಗಿದೆ. ಯುವ ಸಂಸ್ಕೃತಿಗೆ (Culture) ಹೊಂದಿಕೊಂಡಂತೆ ನಗರದಲ್ಲಿ ಹೊಸ ಕಾಕ್‌ಟೈಲ್ ಬಾರ್‌ಗಳು, ಫೈನ್-ಡೈನಿಂಗ್ ರೆಸ್ಟೋರೆಂಟ್‌ಗಳು (Restaurant) ಮತ್ತು ಪ್ರಾಯೋಗಿಕ ಕಾಫಿ ಹೌಸ್‌ಗಳು ಇರುವುದನ್ನು ಕಾಣಬಹುದು. ಇನ್ನೊಂದೆಡೆ ಹೆಚ್ಚಿನ ಸ್ಥಳೀಯರ ಹೃದಯಗಳಲ್ಲಿ ನೆಲೆಸಿರುವ ಕ್ಷೀಣಿಸಿದ ಐಸ್‌ಕ್ರೀಮ್ ಸಂಡೇಗಳು, ನೊರೆಯುಳ್ಳ ಬಿಯರ್, ಬೆಣ್ಣೆ ದೋಸೆಗಳು ಮತ್ತು ರಸಭರಿತವಾದ ಸ್ಟೀಕ್ಸ್‌ಗಳನ್ನು ಪೂರೈಸುವ ಬೆಂಗಳೂರಿನ ವಿಂಟೇಜ್ ರೆಸ್ಟೋರೆಂಟ್‌ಗಳು (Vintage Restaurant) ಇಂದಿಗೂ ಕಾರ್ಯನಿರ್ವಹಿಸುತ್ತಿದ್ದು ಹಳೆ ಜನರ ಅಂದರೆ ಇಂದಿನ ಹಿರಿಯ ನಾಗರಿಕರ ಪಾಲಿಗೆ ಸ್ವರ್ಗದಂತಿವೆ.

ವಾಸ್ತವವಾಗಿ, ಬೆಂಗಳೂರು ಮೂಲದ ಇತಿಹಾಸಕಾರರಾದ ರಾಮಚಂದ್ರ ಗುಹಾ ಒಮ್ಮೆ ಪ್ರಸಿದ್ಧವಾಗಿ ಹೇಳಿದ್ದರು, “ನನ್ನ ನೆಚ್ಚಿನ ಕೆಫೆ ಸಾಯುವ ಮೊದಲು ನಾನು ಸಾಯಬಹುದು. ನಾನು ಬಹುಶಃ (ಸುಮಾರು) ಸಂಗೀತ, ಕ್ರಿಕೆಟ್ ಮತ್ತು ಪುಸ್ತಕಗಳಿಲ್ಲದೆ ಬದುಕಬಲ್ಲೆ, ಆದರೆ ಪೆರೇಡ್ (ಕೋಶಿ) ಇಲ್ಲದ ಜೀವನವನ್ನು ಆಲೋಚಿಸುವುದು ಅಸಾಧ್ಯ" ಎಂದು. ಅಂದರೆ ಅಷ್ಟರ ಮಟ್ಟಿಗೆ ಕೆಲವು ಆಯ್ದ ಬೆಂಗಳೂರಿನ ಹಳೆಯ ಹೋಟೆಲ್ ಗಳು ಗತ ವೈಭವದ ಅದ್ಭುತ ಸಂಕೇತಗಳಾಗಿ ಇಂದಿಗೂ ತನ್ನ ಕುಟುಂಬ ಸದಸ್ಯರನ್ನು ಬರಮಾಡಿಕೊಳ್ಳುತ್ತವೆ.

ಆಹಾರದ ಮೂಲಕ ಇತಿಹಾಸದ ಪುಟಗಳನ್ನು ತಿರುಗಿಸುವುದು ನಿಮಗೂ ಆನಂದ ಕೊಡುತ್ತಿದ್ದರೆ ಈ ಕೆಳಗಿನ ರೆಸ್ಟೋರೆಂಟ್‌ಗಳು ನಿಮ್ಮನ್ನು ಖಂಡಿತ ನಿರಾಶೆಗೊಳಿಸುವುದಿಲ್ಲ.

1. ಕೋಶಿ'ಸ್ (Koshy's, 1952)

50 ರ ದಶಕದಲ್ಲಿ ಪ್ರಾರಂಭವಾದ ಈ ಹೋಟೆಲ್ ಇಂದು ತನ್ನ ಗತವೈಭವದ ಕಥೆಯನ್ನು ಇಂದಿನ ತಲೆಮಾರಿನವರಿಗೆ ಹೆಮ್ಮೆಯಿಂದ ಹೇಳುತ್ತಿರುವಂತೆ ತೋರುತ್ತದೆ. 1940 ರಲ್ಲಿ ಬೇಕರಿಯಾಗಿ ಆರಂಭಗೊಂಡ ಇದು ತದ ನಂತರ ಸೇಂಟ್ ಮಾರ್ಕ್ಸ್ ರಸ್ತೆಗೆ ಸ್ಥಳಾಂತರಗೊಂಡು 1952 ರಲ್ಲಿ ಹೋಟೆಲ್ ರೂಪ ಪಡೆಯಿತು. ಅಂದಿನಿಂದ ಈ ಹೇಟೆಲ್ ಬೆಂಗಳೂರಿಗರ ಮನ ತಣಿಸುತ್ತಲೇ ಬಂದಿದೆ.

ಇಂದಿಗೂ ಇಲ್ಲಿಗೆ ಬರುವ ಹಿರಿಯರು ತಮ್ಮ ಗತ ವೈಭವದ ನೆನಪುಗಳನ್ನು ತಾಜಾ ಮಾಡಿಕೊಂಡರೆ ಯುವ ಸಮುದಾಯ ತಮ್ಮದೆ ಆದ ಕಲ್ಪನೆಯಲ್ಲಿ ಮುಳುಗುತ್ತದೆ. ನೇವೇನಾದರೂ ಈ ರಸ್ತೆಗೆ ಬಂದರೆ ಕೋಶಿ'ಸ್ ಭೇಟಿ ಮರಯಲೇ ಬೇಡಿ. ಇಲ್ಲಿ ವೆಜ್ ಕಟ್ಲೆಟ್, ಮಶ್ರೂಮ್ ಟೋಸ್ಟ್, ಹ್ಯಾಂಬರ್ಗರ್, ಹಾಟ್ ಡಗ್, ಫ್ರೈಡ್ ಚಿಕನ್ ಮುಂತಾದ ಅದ್ಭುತ ಖಾದ್ಯಗಳು ದೊರೆಯುತ್ತವೆ. ನೆನಪಿಡಿ ಏನೆ ತಿಂದರೂ ಕೊನೆಯಲ್ಲಿ ಒಂದು ಕಪ್ ಚಹಾದೊಂದಿಗೆ ನಿಮ್ಮ ಊಟ ಅಂತ್ಯಗೊಳಿಸದೇ ಹೋದಲ್ಲಿ ಇದನ್ನು ಇಲ್ಲಿನ ಪರಿಪೂರ್ಣ ಊಟ ಎನ್ನಲಾಗದು.

2. ದಿ ಓನ್ಲಿ ಪ್ಲೇಸ್ (The Only Place, 1965)
ಈ ಸಾಂಪ್ರದಾಯಿಕ ಹೋಟೆಲ್ ನಗರದ ಮ್ಯೂಸಿಯಂ ರಸ್ತೆಯಲ್ಲಿ ತೆರೆಯಲ್ಪಟ್ಟ ಕೆಲವೇ ಕೆಲವು ಮೊದಲ ಹೋಟೆಲ್ ಗಳ ಪೈಕಿ ಒಂದು. ಕಳೆದ 57 ವರ್ಷಗಳಿಂದ ಸ್ಥಳೀಯರಿಗೆ ನೆಚ್ಚಿನ ತಾಣವಾಗಿದೆ. ಇದು ಮೊದಲು ಬ್ರಿಗೇಡ್ ರಸ್ತೆಯಲ್ಲಿ ರೀಜೆಂಟ್ ಅತಿಥಿ ಗೃಹವಾಗಿ ಪ್ರಾರಂಭವಾಯಿತು, ವಲಸಿಗರು, ಯುಎಸ್ ಪೀಸ್ ಕಾರ್ಪ್ ಸ್ವಯಂಸೇವಕರು, ಇರಾನಿಯನ್ನರು, ಪ್ಯಾಲೆಸ್ಟೀನಿಯನ್ನರು ಮತ್ತು ಇತರ ವಿದೇಶಿಗರು ಆಗಾಗ್ಗೆ ಇಲ್ಲಿಗೆ ಭೇಟಿ ನೀಡುತ್ತಿದ್ದರು.

ಇದನ್ನೂ ಓದಿ:  Chicken Lababdar: ಚಿಕನ್ ಲಬಬ್ದರ್ ತಿಂದಿದ್ದೀರಾ? ಮನೆಯಲ್ಲಿ ಟ್ರೈ ಮಾಡಿ ನೋಡಿ

ನಗರದಲ್ಲಿ ಕಾಂಟಿನೆಂಟಲ್ ಆಹಾರದ ಕೊರತೆಯಿಂದಾಗಿ ಅಂತರಾಷ್ಟ್ರೀಯ ಅತಿಥಿಗಳು ಹೋಟೆಲ್‌ನಲ್ಲಿ ಉಪಾಹಾರ ಸೇವಿಸುತ್ತಿದ್ದರು ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಸಂಸ್ಥಾಪಕರಾದ ಹರೂನ್ ಸುಲೈಮಾನ್ ಸೇಟ್ ಹೇಳಿದ್ದಾರೆ. ಅಂತಿಮವಾಗಿ, ಇಲ್ಲಿ ಪಿಜ್ಜಾಗಳು ಮತ್ತು ಪಾಸ್ಟಾಗಳು ಸಾಮಾನ್ಯ ವೈಶಿಷ್ಟ್ಯವಾಯಿತು. ಇಂದು, ಈ ಸ್ಥಳದಲ್ಲಿ ಗಮನಾರ್ಹ ಬದಲಾವಣೆಯೆಂದರೆ, ಒಮ್ಮೆ 2 ರೂ.ಗೆ ಮಾರಾಟವಾಗುತ್ತಿದ್ದ ಬರ್ಗರ್ ಬೆಲೆ 200 ರೂ.ಗಿಂತ ಸ್ವಲ್ಪ ಹೆಚ್ಚು.

3. ಇಂಡಿಯಾ ಕಾಫಿ ಹೌಸ್ (1957)
ದಿ ಓನ್ಲಿ ಪ್ಲೇಸ್‌ನಿಂದ ಕೆಲವು ಹೆಜ್ಜೆಗಳ ದೂರದಲ್ಲಿರುವ ಈ ವಿಂಟೇಜ್ ಉಪಾಹಾರ ಗೃಹವು ಹೆಸರೇ ಸೂಚಿಸುವಂತೆ ಅದರ ಕಾಫಿಗೆ ಹೆಸರುವಾಸಿಯಾಗಿದೆ. ನಿರ್ದಿಷ್ಟವಾಗಿ, ಚಿಕೋರಿ ಇಲ್ಲದ ಫಿಲ್ಟರ್ ಕಾಫಿ. ನೀತಿ ಬದಲಾವಣೆಯಿಂದಾಗಿ ಸರ್ಕಾರವು ಇದನ್ನು ಮುಚ್ಚುವ ಮೊದಲು 1957 ರಲ್ಲಿ ಇದನ್ನು ಪ್ರಾರಂಭಿಸಲಾಯಿತು. ತದನಂತರ ಕೆಲಸ ಕಳೆದುಕೊಂಡ ಕಾರ್ಮಿಕರು 1958 ರಲ್ಲಿ ಸಂಘಟಿತರಾಗಿ, MG ರಸ್ತೆಯಲ್ಲಿ ಮತ್ತೆ ಹೋಟೆಲ್ ಸ್ಥಾಪಿಸಿದರು ಮತ್ತು ಅದನ್ನು ಇಂಡಿಯಾ ಕಾಫಿ ಹೌಸ್ ಎಂದು ಹೆಸರಿಸಿದರು.

ಅಂತಿಮವಾಗಿ, ಶಾಖೆಗಳು ದೇಶಾದ್ಯಂತ ಬೆಳೆದವು. ಬೆಂಗಳೂರಿನಲ್ಲಿ, ನಗರದಲ್ಲಿ ಹಲವಾರು ಕರಕುಶಲ ಕಾಫಿ ಅಂಗಡಿಗಳು ತೆರೆದಿದ್ದರೂ ಸಹ, ಈ ಜಾಗವು ಸಾಂಪ್ರದಾಯಿಕವಾಗಿ ಜನರನ್ನು ಸೆಳೆಯುತ್ತಲೇ ಇದೆ. ಇಲ್ಲಿಯವರೆಗೆ, ಹಿಂದಿನ ವರ್ಷಗಳ ಕಥೆಗಳನ್ನು ಹೇಳುವ ಭಾವಚಿತ್ರಗಳು ಇಲ್ಲಿನ ಗೋಡೆಗಳ ಮೇಲೆ ನೇತಾಡುವುದನ್ನು ಕಾಣಬಹುದು. ಇಲ್ಲಿನ ಕಾಫಿ ನಗರದಲ್ಲಿ ಅತ್ಯಂತ ಕೈಗೆಟಕುವ ದರದಲ್ಲಿ ಒಂದಾಗಿದ್ದು, ಒಂದು ಕಪ್ 30 ರೂ.

4. ಎಂಟಿಆರ್, ಲಾಲ್ ಬಾಗ್ ರಸ್ತೆ (1924)
ದಕ್ಷಿಣ ಭಾರತದ ಜನಪ್ರೀಯ ಖಾದ್ಯಗಳ ಬ್ರಾಂಡ್ ಗಳಲ್ಲಿ ಒಂದಾಗಿರುವ ಎಂಟಿಆರ್ ತನ್ನದೆ ಆದ ವೈಶಿಷ್ಟ್ಯವನ್ನು ಹೊಂದಿದೆ. ಶತಮಾನಕ್ಕಿಂತಲೂ ಹಳೆಯದಾದ ಈ ಆಂಟಿಕ್ ಬ್ರಾಂಡ್ ಬೆಂಗಳೂರಿಗರಲ್ಲಿ ಸಖತ್ ಫೇಮಸ್.

ಮೊದಲು ಈ ರೆಸ್ಟೋರೆಂಟ್ ಆರಂಭವಾದಾಗ ಇದು ಕೇವಲ ಕಾಫಿ ಮತ್ತು ಇಡ್ಲಿಗಳನ್ನು ಸರ್ವ್ ಮಾಡುತ್ತಿತ್ತು. 1951 ರಲ್ಲಿ ಈ ಹೋಟೆಲ್ ಮಾಲಿಕರಾದ ಯಜ್ಞನಾರಾಯಣ ಮೈಯ್ಯ ಅವರು ಯುರೋಪ್ ಪ್ರವಾಸದ ನಂತರ ಅಲ್ಲಿನ ನೈರ್ಮಲ್ಯದ ಕುರಿತು ಹೆಚ್ಚು ಪ್ರಭಾವಿತರಾಗಿದ್ದರು ಹಾಗೂ ಅದರಿಂದಾಗಿ ಅವರು ತಮ್ಮ ಹೋಟೆಲ್ ನಲ್ಲಿ ನೈರ್ಮಲ್ಯತೆಗೆ ಹೆಚ್ಚಿನ ಒತ್ತು ನೀಡಿ ಹಲವು ಕ್ರಮಗಳನ್ನು ತೆಗೆದುಕೊಂಡು ಅದು ಇಂದಿಗೂ ಮುಂದುವರೆದಿದೆ. ಶುಚಿ ರುಚಿಯೊಂದಿಗೆ ತನ್ನ ಸಾಂಪ್ರದಾಯಿಕತೆಯನ್ನು ಇಂದಿಗೂ ಉಳಿಸಿಕೊಂಡಿರುವ ಎಂಟಿಆರ್ ಬೆಂಗಳೂರಿಗರ ನೆಚ್ಚಿನ ಹೋಟೆಲ್ ಆಗಿಯೂ ಹೆಸರು ಉಳಿಸಿಕೊಂಡಿದೆ.

5. ಏರ್ಲೈನ್ಸ್ ಹೋಟೆಲ್ (1968)
ಒಂದೊಮ್ಮೆ ಬೆಂಗಳೂರಿನ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿ ಸುತ್ತು ಹೊಡೆದರೆ ಸಾಕು ಗುಂಪುಗಳಲ್ಲಿ ಜನರು ಈ ಒಂದು ಹೋಟೆಲ್ ಗೆ ಬರುವುದನ್ನು ಕಾಣಬಹುದು. ಮಧುರ ಪರಿಮಳದ ದೋಸೆ ಹಾಗೂ ಸುಮಧುರವಾದ ಕಾಫಿ ಸುಗಂಧ ನಿಮ್ಮ ಸ್ವಾದದ ರಸಗ್ರಂಥಿಗಳು ಚಿಮ್ಮುವಂತೆ ಮಾಡುತ್ತವೆ.

1968 ರಲ್ಲಿ ಆರಂಭವಾದ ಈ ಹೋಟೆಲ್ ಲಘು ಉಪಹಾರ ಹಾಗೂ ದೀರ್ಘಾವಧಿಯವರೆಗೆ ಹರಟೆ ಹೊಡೆಯುತ್ತ ಕೂರಲು ಆದರ್ಶಮಯ ತಾಣವಾಗಿದೆ. ತೆರೆದ ಉದ್ಯಾನದಲ್ಲಿ ಗಿಡಗಳ ನೆರಳಿನಲ್ಲಿ ಕಟ್ಟಿಗೆಯ ಬೆಂಚುಗಳು ಇದರ ವಾತಾವರಣ ಸಖತ್ ಆಕರ್ಷಿಸುವಂತೆ ಮಾಡುತ್ತದೆ. ಬೆಂಗಳೂರಿನ ಯುವ ಪೀಳಿಗೆ ಅದರಲ್ಲೂ ಐಟಿ ನೌಕರರು ಇಲ್ಲಿಗೆ ಸಾಕಷ್ಟು ಆಗಮಿಸುತ್ತಿರುತ್ತಾರೆ.

6. ಲೇಕ್ ವ್ಯೂವ್ ಬಾರ್ (1930)
ನಗರದ ಪ್ರತಿಷ್ಠಿತ ಎಂಜಿ ರಸ್ತೆಯಲ್ಲಿರುವ ಈ ಮಿಲ್ಕ್ ಬಾರ್ ಸಾಕಷ್ಟು ಹೆಸರುವಾಸಿ. ಇಲ್ಲಿ ವೈವಿಧ್ಯಮಯ ಕೇಕ್, ಐಸ್ ಕ್ರೀಮ್ ಹಾಗೂ ಇತರೆ ಬಗೆಯ ಸಿಹಿ ಖಾದ್ಯಗಳನ್ನು ಸವಿಯಬಹುದಾಗಿದೆ. ಆಂಗ್ಲ ವ್ಯಕ್ತಿ ಜೇಮ್ಸ್ ಮಿಡೋವ್ ಚಾರ್ಲ್ಸ್ ಎಂಬುವವರಿಂದ ಇದನ್ನು ಮೊದಲು ಆರಂಭಿಸಲಾಯಿತು. ಅವರು ಮೊದಲಿಗೆ ಇಲ್ಲಿ ವೆನಿಲಾ, ಚೊಕೊಲೇಟ್ ಹಾಗೂ ರಸ್ವೆರಿ ಫ್ಲೇವರಿನ ಐಸ್ ಕ್ರೀಂ ಮಾರಾಟ ಪ್ರಾರಂಭಿಸಿದ್ದರು.

ಇದನ್ನೂ ಓದಿ:  Non-Veg Recipe: ರುಚಿಕರವಾದ ಮಂಗಳೂರು ಶೈಲಿಯ ಮೀನಿನ ಕರಿ

ಇದು ಅಲಸೂರು ಕೆರೆಗೆ ಹತ್ತಿರವಾಗಿರುವುದರಿಂದ ಕೆರೆಯ ನೋಟ ಸವಿಯಬಯಸಿ ಬರುತ್ತಿದ್ದ ಜನರು ಇಲ್ಲಿಗೆ ವಿಸಿಟ್ ಹಾಕುತ್ತಿದ್ದರು. ತದನಂತರ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಚಾರ್ಲ್ಸ್ ಅವರು ಇದನ್ನು ಭಾರತೀಯ ವ್ರಜ್ ಲಾಲ್ ಜಮ್ನಾದಾಸ್ ಅವರಿಗೆ ಮಾರಾಟ ಮಾಡಿದರು. ಅಂದಿನಿಂದ ಇಂದಿನವರೆಗೂ ಇದು ಸ್ಥಳೀಯರ ನಡುವೆ ಸಾಕಷ್ಟು ಜನಪ್ರೀಯತೆ ಉಳಿಸಿಕೊಂಡು ಬಂದಿದ್ದು ಇಂದಿಗೂ ನಡೆಯುತ್ತಿದೆ.

7. ಶ್ರೀ ಗೋವಿಂದರಾವ್ ಮಿಲಿಟರಿ ಹೋಟೆಲ್ (1908)
ಮಾಂಸಾಹಾರ ಪ್ರೀಯರಿಗೆ ಅತಿ ಇಷ್ಟವಾಗುವ ಸ್ವಾತಂತ್ರ್ಯಕ್ಕಿಂತಲೂ ಮುಂಚೆಯಿಂದಲೇ ಕಾರ್ಯ ನಿರ್ವಹಿಸುತ್ತಿರುವ ಈ ಹೋಟೆಲ್ ಸಾಂಪ್ರದಾಯಿಕ ಶೈಲಿಯ ಮಾಂಸಾಹಾರ ಖಾದ್ಯಗಳಿಗೆ ಅತ್ಯಂತ ಹೆಸರುವಾಸಿ. ಇಲ್ಲಿ ಚಿಕನ್ ಹಾಗೂ ಮಟನ್ ಗಳಿಂದ ತಯಾರಿಸಲಾಗುವ ಕೀಮಾ ಬಾಲ್ಸ್, ಮಟನ್ ಚಾಪ್ಸ್, ಚಿಲ್ಲಿ ಚಿಕನ್ ಸೇರಿದಂತೆ ಅದ್ಭುತ ರುಚಿಕರವಾದ ಖಾದ್ಯಗಳು ದೊರೆಯುತ್ತವೆ.

ಮಟನ್ ಬಿರಿಯಾನಿ ಇಲ್ಲಿ ಒಮ್ಮೆ ಪ್ರಯತ್ನಿಸಲೇಬೇಕಾದ ಖಾದ್ಯವಾಗಿದೆ ಎಂದು ಇಲ್ಲಿಗೆ ಭೇಟಿ ನೀಡುವ ಜನರು ಹೇಳುತ್ತಾರೆ. ದಶಕಗಳಿಂದ ಹಾಗೇ ನಿರಂತರವಾಗಿ ಗ್ರಾಹಕರನ್ನು ಸರ್ವ್ ಮಾಡಿಕೊಡುತ್ತ ಬಂದಿರುವ ಈ ಹೋಟೆಲ್ಲಿನ ಜನಪ್ರೀಯತೆ ಹೀಗೆ ಜನರ ಬಾಯಿಂದ ಬಾಯಿಗೆ ತಲುಪಿ ಆಗಿದೆ ಎಂದರೂ ತಪ್ಪಿಲ್ಲ.

8. ಪೆಕೋಸ್ (1989)
ಒಂದಾನೊಂದು ಕಾಲದಲ್ಲಿ ಬೆಂಗಳೂರು ತನ್ನಲ್ಲಿರುವ ಕ್ಲಾಸಿಕ್ ರಾಕ್ ಲೈವ್ ಸಂಗೀತದೊಂದಿಗೆ ನಡೆಯುತ್ತಿದ್ದ ರೆಸ್ಟೋರೆಂಟುಗಳಿಗೆ ಹೆಸರುವಾಸಿಯಾಗಿತ್ತು. ಅಂತಹ ಒಂದು ವೈಶಿಷ್ಟ್ಯತೆಯನ್ನು ಹೊತ್ತುಕೊಂಡು ಪ್ರಾರಂಭವಾದ ಪೆಕೋಸ್ 1989 ರಲ್ಲಿ ನಗರದಲ್ಲಿ ಪಾದಾರ್ಪಣೆ ಮಾಡಿತು.

ಮೆಕ್ಸಿಕನ್ ಫುಡ್ ಜಾಯಿಂಟ್ ಆಗಿ ಪ್ರಾರಂಭವಾಗಿದ್ದ ಪೆಕೋಸ್ ಇದೀಗ ಮಿತದರಗಳ ಬಿಯರ್ ಹಾಗೂ ರಾಕ್ ಮ್ಯುಸಿಕ್ ನಿಂದಾಗಿ ಪ್ರಸಿದ್ಧಿ ಪಡೆದಿದೆ. ಇಂದಿಗೂ ಇದರ ಒಳಾಂಗಣದಲ್ಲಿ ಪಿಂಕ್ ಫ್ಲಾಯ್ಡ್ ಸಮಯದಂತಹ ಕ್ಲಾಸಿ ರಾಕ್ ಮ್ಯುಸಿಕ್ ಎಂಬಿಯನ್ಸ್ ಅನ್ನು ಕಾಣಬಹುದು.

9. ಕಾರ್ನರ್ ಹೌಸ್ (1982)
ಏರ್ಲೈನ್ಸ್ ಹೋಟೆಲ್ ಪಕ್ಕದಲ್ಲೇ ಕಾಣಸಿಗುವ ಈ ಜಾಯಿಂಟ್ ತನ್ನ ಅದ್ಭುತ ವೆರೈಟಿಯ ಐಸ್ ಕ್ರೀಂಗಳಿಗಾಗಿ ಯುವ ಹಾಗೂ ವಯಸ್ಕ ಬೆಂಗಳೂರಿಗರ ಅಚ್ಚುಮೆಚ್ಚಿನ ತಾಣವಾಗಿದೆ. ಪೀಚ್ ಮೆಲ್ಬಾ, ಕೇಕ್ ಫಡ್ಜ್ , ಸಾಲ್ಟೇಡ್ ಕಾರಾಮೆಲ್ ಐಸ್ ಕ್ರೀಮ್ ಇಲ್ಲಿನ ಬಲು ಜನಪ್ರೀಯ ಪ್ರಕಾರಗಳಾಗಿವೆ.

10. ಸಿಟಿಆರ್ ಶ್ರೀಸಾಗರ್ (1920)
ಮಲ್ಲೇಶ್ವರಂ ಆಟದ ಮೈದಾನಕ್ಕೆ ಹತ್ತಿರವಿರುವ ಈ ಹಳೆಯ ಹೋಟೆಲ್ ತನ್ನಲ್ಲಿ ದೊರೆಯುವ ಅತ್ಯದ್ಭುತ ರುಚಿಕರವಾದ ಗರಿ ಗರಿಯಾದ ಬೆಣ್ಣೆ ಮಸಲಾ ದೋಸೆಗಳಿಗೆ ಹೆಸರುವಾಸಿಯಾಗಿದೆ. ಶತಮಾನಕ್ಕಿಂತಲೂ ಹಳೆಯದಾದ ಈ ಹೋಟೆಲ್ ಅನ್ನು ಸಹೋದರರು ಸೇರಿಕೊಂಡು 1920 ರಲ್ಲಿ ಪ್ರಾರಂಭಿಸಿದ್ದರು. 1940 ರಲ್ಲಿ ಇದು ಬರಹಗಾರರ ನೆಚ್ಚಿನ ತಾಣವಾಗಿತ್ತು.

ಇದನ್ನೂ ಓದಿ: Chicken Recipe: ಸೌತ್ ಇಂಡಿಯನ್ ಸ್ಟೈಲ್ ನಲ್ಲಿ ‘ಘೀ ಚಿಕನ್ ಕರಿ’ ಹೇಗೆ ಮಾಡುವುದು ಗೊತ್ತಾ? ಈ ಟೇಸ್ಟಿ ರೆಸಿಪಿ ನಿಮಗಾಗಿ

1950 ಇದರ ನಿಜವಾದ ಮಾಲಿಕರು ಇದನ್ನು ಬೇರೆಯವರಿಗೆ ಮಾರಿದರಾದರೂ ಇದರೊಂದಿಗೆ ಹೋಟೆಲ್ ನಲ್ಲಿ ತಯಾರಿಸಲಾಗುತ್ತಿದ್ದ ರೆಸ್ಪಿಯ ಜ್ಞಾನವನ್ನೂ ಸಹ ಹಂಚಿಕೊಂಡರು. ಹಾಗಾಗಿ ಅಂದಿನಿಂದ ಇಲ್ಲಿ ತಯಾರಿಸಲಾಗುವ ದೋಸೆಗಳ ರುಚಿಯಲ್ಲಿ ಇಂದಿನವರೆಗೂ ಯಾವುದೇ ವ್ಯತ್ಯಾಸವಾಗಿಲ್ಲ ಎಂದು ಹೇಳಲಾಗುತ್ತದೆ.
Published by:Ashwini Prabhu
First published: