New Rules: ಜನಸಾಮಾನ್ಯರೇ ಗಮನಿಸಿ, ಜುಲೈ 1ರಿಂದ ಈ ಎಲ್ಲಾ ರೂಲ್ಸ್ ಚೇಂಜ್ ಆಗುತ್ತೆ!

6  ದಿನಗಳ ನಂತರ, ಜುಲೈ ತಿಂಗಳು ಪ್ರಾರಂಭವಾಗುತ್ತದೆ. ಇದೇ ಸಂದರ್ಭದಲ್ಲಿ ದೇಶೀಯ ಅನಿಲ (LPG Gas) ದ ಬೆಲೆ ಬದಲಾಗುತ್ತದೆ . ಆಧಾರ್ (Aadhaar) ಮತ್ತು ಪ್ಯಾನ್ ಕಾರ್ಡ್ ಲಿಂಕ್ (PAN Card Link) ಮಾಡದವರಿಗೆ ದಂಡ ವಿಧಿಸಲಾಗುತ್ತದೆ . 6 ದಿನಗಳ ನಂತರ ಯಾವ ನಿಯಮಗಳು (Rules) ಬದಲಾಗುತ್ತವೆ ಎಂಬುದನ್ನು ನೋಡೋಣ ಬನ್ನಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಜಗತ್ತಿನಲ್ಲಿ ಬದಲಾವಣೆ (Change) ಅನ್ನುವ ಪದ ಬಿಟ್ಟು ಉಳಿದಿದ್ದೆಲ್ಲವೂ ಬದಲಾಗುತ್ತೆ. ಪ್ರತಿ ವರ್ಷವೂ ಏನಾದರೂ ಒಂದು ಬದಲಾಗುತ್ತೆ.ಬೆಲೆ ಏರಿಕೆ (Price Hike) ಗಳ ಬಗ್ಗೆ ಕೇಳಲೇ ಬೇಡಿ. 6 ತಿಂಗಳಿಗೊಮ್ಮೆ ವಸ್ತುಗಳ ಬೆಲೆ ಏರಿಕೆಯಾಗುವುದು ಕಾಮನ್ (Common)​ ಆಗೋಗಿದೆ.  ವರ್ಷದ ಜನವರಿ (January) ಅಥವಾ ಮಾರ್ಚ್ (March)​ ತಿಂಗಳಿನಲ್ಲಿ ಹಲವು ಬದಲಾವಣೆಗಳಾಗುತ್ತವೆ.ಇದೇ ರೀತಿಯ ಬದಲಾವಣೆಗಳು ಮುಂಬರುವ ತಿಂಗಳುಗಳಲ್ಲಿ ನಡೆಯಲಿವೆ. ಅಂದರೆ ಜುಲೈ (July) ನಲ್ಲಿ ಸಾಕಷ್ಟು ನಿಯಮಗಳಲ್ಲಿ ಬದಲಾವಣೆಯಾಗಲಿದೆ. ಈ ಎಲ್ಲಾ ಬದಲಾವಣೆಗಳು ಸಾಮಾನ್ಯ ಮನುಷ್ಯನಿಗೆ ಬಹಳ ಮುಖ್ಯ. ಇದನ್ನು ನಿರ್ಲಕ್ಷಿಸುವುದರಿಂದ ಆರ್ಥಿಕವಾಗಿ ಹೊಡೆತ ತಿನ್ನಬೇಕಾಗುತ್ತೆ. 6  ದಿನಗಳ ನಂತರ, ಜುಲೈ ತಿಂಗಳು ಪ್ರಾರಂಭವಾಗುತ್ತದೆ. ಇದೇ ಸಂದರ್ಭದಲ್ಲಿ ದೇಶೀಯ ಅನಿಲ (LPG Gas) ದ ಬೆಲೆ ಬದಲಾಗುತ್ತದೆ . ಆಧಾರ್ (Aadhaar) ಮತ್ತು ಪ್ಯಾನ್ ಕಾರ್ಡ್ ಲಿಂಕ್ (PAN Card Link) ಮಾಡದವರಿಗೆ ದಂಡ ವಿಧಿಸಲಾಗುತ್ತದೆ . 6 ದಿನಗಳ ನಂತರ ಯಾವ ನಿಯಮಗಳು (Rules) ಬದಲಾಗುತ್ತವೆ ಎಂಬುದನ್ನು ನೋಡೋಣ ಬನ್ನಿ.

ಪ್ಯಾನ್​-ಆಧಾರ್​ ಲಿಂಕ್​ಗೆ ಡೆಡ್​ಲೈನ್​!

ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಅನ್ನು ನೀವು ಇನ್ನೂ ಲಿಂಕ್ ಮಾಡದಿದ್ದರೆ, ಜಾಗರೂಕರಾಗಿರಿ. ನಿಮಗೆ ಇನ್ನೂ 6 ದಿನಗಳಿವೆ. ಆಧಾರ್ ಪ್ಯಾನ್ ಲಿಂಕ್ ಮಾಡಲು ಜೂನ್ 30 ಕೊನೆಯ ದಿನಾಂಕವಾಗಿದೆ. ಇದಾದ ನಂತರ ಆಧಾರ್ ಪ್ಯಾನ್ ಲಿಂಕ್ ಇಲ್ಲದವರಿಗೆ ದಂಡ ವಿಧಿಸಲಾಗುತ್ತದೆ. ಜೂನ್ 30ರೊಳಗೆ ಲಿಂಕ್​ ಮಾಡಿದರೆ 500 ರೂ.ದಂಡ ಕಟ್ಟಬೇಕಾಗುತ್ತದೆ. ಜುಲೈನಿಂದ ದಂಡದ ಮೊತ್ತವನ್ನು 1000 ರೂ.ಗೆ ಏರಿಸಲಾಗಿದೆ.

ಡಿಮ್ಯಾಟ್ ಖಾತೆಯ KYC ಮಾಡಿ

ನೀವು ಸಹ ಷೇರುಗಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದರೆ ಮತ್ತು ಡಿಮ್ಯಾಟ್ ಖಾತೆಯನ್ನು ಹೊಂದಿದ್ದರೆ, ಇಲ್ಲಿ ನೋಡಿ. ಜೂನ್ 30 ರೊಳಗೆ ನಿಮ್ಮ ವ್ಯಾಪಾರ ಖಾತೆ KYC ಅನ್ನು ಪೂರ್ಣಗೊಳಿಸಿ, ಇಲ್ಲದಿದ್ದರೆ ನಿಮ್ಮ ಖಾತೆಯನ್ನು ತಾತ್ಕಾಲಿಕವಾಗಿ ಮುಚ್ಚಬಹುದು. ನಂತರ ನೀವು ಷೇರುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ.

ಕ್ರಿಪ್ಟೋಕರೆನ್ಸಿಯಲ್ಲಿ ಟಿಡಿಎಸ್ ಪಾವತಿಸಬೇಕು!

ಕ್ರಿಪ್ಟೋಕರೆನ್ಸಿಗಳಲ್ಲಿನ ಹೂಡಿಕೆದಾರರು 30 ಪ್ರತಿಶತ ತೆರಿಗೆಯ ನಂತರ ಮತ್ತೊಂದು ಹೊಡೆತವನ್ನು ಎದುರಿಸಬೇಕಾಗುತ್ತದೆ. ಈಗ ಕ್ರಿಪ್ಟೋದಲ್ಲಿ ಹೂಡಿಕೆ ಮಾಡುವವರು ಶೇಕಡಾ 1 ರಷ್ಟು ಟಿಡಿಎಸ್ ಪಾವತಿಸಬೇಕಾಗುತ್ತದೆ. ಅದು ನಿಮ್ಮ ಲಾಭವಾಗಲಿ ಅಥವಾ ನಷ್ಟವಾಗಲಿ, ನೀವು ಟಿಡಿಎಸ್ ಪಾವತಿಸಬೇಕು ಎಂದರ್ಥ.

ಇದನ್ನೂ ಓದಿ: ಮುಂದಿನ ತಿಂಗಳಿನಿಂದ ನಿಮ್ಮ ಸಂಬಳ ಕಡಿಮೆಯಾಗುತ್ತೆ! ಪಿಎಫ್​ ನಿಯಮದಲ್ಲೂ ಬದಲಾವಣೆ

ಅಡುಗೆ ಅನಿಲದ ವೆಚ್ಚ ಹೆಚ್ಚಾಗಬಹುದು!

ಹೊಸ ತಿಂಗಳ ಆರಂಭವಾದ ಜುಲೈ 1 ರಂದು LPG ಬೆಲೆಗಳು ಕೂಡ ಹೆಚ್ಚಾಗಬಹುದು. ದೇಶೀಯ ಮತ್ತು ವಾಣಿಜ್ಯ LPG ಬೆಲೆಗಳನ್ನು ಪ್ರತಿ ತಿಂಗಳ ಮೊದಲ ದಿನದಂದು ನಿಗದಿಪಡಿಸಲಾಗುತ್ತದೆ. ಹೀಗಾಗಿ ಮತ್ತೆ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ.

ದೆಹಲಿಯಲ್ಲಿ ಆಸ್ತಿ ತೆರಿಗೆ ವಿನಾಯಿತಿ

ಈ ಮಾಹಿತಿ ದೆಹಲಿಯವರಿಗೆ. ದೆಹಲಿಯಲ್ಲಿ ಜೂನ್ 30ರೊಳಗೆ ಆಸ್ತಿ ತೆರಿಗೆ ಪಾವತಿಸಿದರೆ ಶೇ.15ರಷ್ಟು ರಿಯಾಯಿತಿ ಸಿಗಲಿದೆ. ಜೂನ್ 30 ರ ನಂತರ ಈ ರಿಯಾಯಿತಿ ಲಭ್ಯವಿರುವುದಿಲ್ಲ.

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಇಎಂಐ ಬಲೆಗೆ ಬೀಳಬೇಡಿ, ಪ್ರಯೋಜನಗಳಲ್ಲಿ ದೊಡ್ಡ ನಷ್ಟ ಅಡಗಿದೆ!

ಕ್ರೆಡಿಟ್ ಕಾರ್ಡ್ ನಿಯಮದಲ್ಲಿ ಬದಲಾವಣೆ


Published by:Vasudeva M
First published: