ಇಡೀ ಜಗತ್ತಿನಲ್ಲಿ ತಂತ್ರಜ್ಞಾನ (Technology), ವ್ಯಾಪಾರ, ವ್ಯವಹಾರ (Business) ಎಷ್ಟೇ ಮುಂದುವರಿದರೂ ತಿನ್ನಲು ಆಹಾರ ಒದಗಿಸುವುದು ಕೃಷಿ. ಅಲ್ಲದೇ ಕೃಷಿ ಅನ್ನೋದು ಪ್ರತಿಯೊಂದು ಆರ್ಥಿಕತೆಯ ಬೆನ್ನೆಲುಬು. ಇದು ಜನರಿಗೆ ಆಹಾರ ಮಾತ್ರವಲ್ಲದೇ ಮತ್ತು ಆದಾಯವನ್ನು ಒದಗಿಸುತ್ತದೆ. ನೀವು ಲಾಭದಾಯಕ ಕೃಷಿ (Agriculture) ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ ಮೊದಲನೇಯದಾಗಿ ನೀವು ವಿವಿಧ ರೀತಿಯ ಕೃಷಿ ಚಟುವಟಿಕೆ ಹಾಗೂ ಕೃಷಿಯ ವಿಧಾನಗಳ ಬಗ್ಗೆ ಸಂಶೋಧನೆ ಮಾಡಬೇಕಾಗುತ್ತದೆ. ಇದರಿಂದ ನಿಮಗೆ ಅತ್ಯುತ್ತಮವಾದ್ದು ಯಾವುದು, ಯಾವ ಕೃಷಿಯನ್ನು ಯಾವ ವಿಧಾನ ಆಯ್ಕೆ ಮಾಡಿಕೊಂಡರೆ ಒಳ್ಳೆಯದು? ನಿಮ್ಮ ಗುರಿ ಏನು? ಯಾವುದಕ್ಕೆ ಹೆಚ್ಚು ಬೇಡಿಕೆ ಇದೆ ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತದೆ.
ಹಾಗಿದ್ರೆ ಸಾಮಾನ್ಯವಾಗಿ ಲಾಭದಾಯಕವಾಗಬಹುದಾದ ಕೃಷಿ ಯಾವುವು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.
1.ಸಾವಯವ ಕೃಷಿ: ನಮ್ಮ ದೇಶದಲ್ಲಿ ಸಾವಯವ ಅನೇಕ ರೀತಿಯ ಹಣ್ಣು- ತರಕಾರಿಗಳನ್ನು ಬೆಳೆಯುವಂಥ ವಾತಾವರಣ ಇದೆ. ಅಲ್ಲದೇ ನಮ್ಮಲ್ಲಿ ಸಾವಯವ ಹಣ್ಣು ಮತ್ತು ತರಕಾರಿಗಳಿಗೆ ಇತ್ತೀಚಿಗೆ ಬೇಡಿಕೆ ಕೂಡ ಹೆಚ್ಚಾಗುತ್ತಿದೆ.
ಇದು ಸಾವಯವ ರೀತಿಯಲ್ಲಿ ಕೃಷಿ ಮಾಡಿ ಸಾವಯಮ ಉತ್ಪನ್ನಗಳನ್ನು ಮಾರಾಟ ಮಾಡುವುದರಿಂದ ಹೆಚ್ಚು ಲಾಭವನ್ನು ಗಳಿಸಬಹುದು.
2. ಗಿಡಮೂಲಿಕೆ ಮತ್ತು ಔಷಧೀಯ ಸಸ್ಯಗಳು: ಭಾರತವು ವಿವಿಧ ರೀತಿಯ ವಿಶಿಷ್ಟವಾದ ಔಷಧೀಯ ಸಸ್ಯಗಳಿಗೆ ನೆಲೆಯಾಗಿದೆ. ಇದನ್ನು ವಿವಿಧ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.
ರೋಗಗಳಿಗೆ ಚಿಕಿತ್ಸೆ ನೀಡುವುದು, ಔಷಧ ತಯಾರಿಕೆ, ಸುಗಂಧ ದ್ರವ್ಯಗಳ ತಯಾರಿಕೆ ಮುಂತಾದವುಗಳಿಗೆ ಇದನ್ನು ಬಳಸಲಾಗುತ್ತದೆ. ಗಿಡಮೂಲಿಕೆ ಔಷಧಿಯ ಬಗ್ಗೆ ಸಂಪೂರ್ಣ ಸಂಶೋಧನೆ ಮತ್ತು ಆಳವಾಗಿ ಅಧ್ಯಯನ ಮಾಡುವುದು ಹೆಚ್ಚು ಸಹಕಾರಿಯಾಗಿದೆ.
3. ಕೋಳಿ ಸಾಕಣೆ: ಎಲ್ಲೆಡೆ ಸಾವಯವ ಮಾಂಸಕ್ಕೆ ಹೆಚ್ಚುತ್ತಿರುವ ಬೇಡಿಕೆಯೊಂದಿಗೆ ಅಧಿಕ ಆದಾಯವನ್ನು ಗಳಿಸಲು ಕೋಳಿ ಸಾಕಣೆ ಉತ್ತಮ ಮಾರ್ಗವಾಗಿದೆ.
ನೀವು ಇದನ್ನು ಹತ್ತಿರದ ಮಾರುಕಟ್ಟೆಗಳಿಗೆ ಅಥವಾ ನೇರವಾಗಿ ಮನೆಗಳಿಗೆ ಮಾರಾಟ ಮಾಡಬಹುದು. ಫಾರ್ಮ್-ಬ್ರೀಡ್ ಮಾಂಸವು ಪ್ರಪಂಚದಾದ್ಯಂತ ಒಂದು ಸವಿಯಾದ ಪದಾರ್ಥವಾಗಿದೆ. ಅಲ್ಲದೇ ಇದು ಅತ್ಯುತ್ತಮ ಆದಾಯವನ್ನು ತಂದುಕೊಡುತ್ತದೆ.
4. ಹೂವಿನ ವ್ಯಾಪಾರ: ಪ್ರಪಂಚದಾದ್ಯಂತದ ಅತಿದೊಡ್ಡ ವ್ಯವಹಾರಗಳಲ್ಲಿ ಹೂವಿನ ವ್ಯಾಪಾರ ಕೂಡ ಒಂದಾಗಿದೆ. ಮದುವೆ, ಜನ್ಮದಿನ, ಹಬ್ಬ-ಹರಿದಿನ ಮುಂತಾದ ವಿಶೇಷ ಸಂದರ್ಭಗಳೆಂದರೆ ಅಲ್ಲಿ ಹೂವು ಬೇಕೆ ಬೇಕು.
ಹಾಗಾಗಿ ಹೂವುಗಳು ಹಣವನ್ನು ಗಳಿಸುವ ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ. ಅವುಗಳನ್ನು ಬೆಳೆಸಬಹುದು, ಸಂಸ್ಕರಿಸಬಹುದು ಮತ್ತು ಮಾರಾಟ ಮಾಡಬಹುದು.
5. ಕೃಷಿ ಬೀಜಗಳು: ಕೃಷಿ ಬೀಜಗಳ ವ್ಯವಹಾರವು ಲಾಭದಾಯಕವಾಗಿದೆ. ಏಕೆಂದರೆ ಅದು ಹೆಚ್ಚು ಬೇಡಿಕೆಯನ್ನು ಹೊಂದಿದೆ. ಒಬ್ಬ ರೈತ ಯಾವಾಗಲೂ ಹೆಚ್ಚಿನ ಇಳುವರಿಯನ್ನು ನೀಡುವಂಥ ಬೀಜಗಳನ್ನು ಹುಡುಕುತ್ತಾನೆ.
ಇದರಲ್ಲಿ ನೀವು ಉತ್ತಮ ಫಸಲನ್ನು ನೀಡುವಂಥ ಬೀಜಗಳಾದ ಮಿಶ್ರತಳಿಗಳು ಮತ್ತು ಭತ್ತವನ್ನು ಒದಗಿಸಬಹುದು. ಕೃಷಿ ಚಟುವಟಿಕೆಗಳನ್ನು ಸಕ್ರಿಯಗೊಳಿಸಲು ನೀವು ಅಂತಹ ಬೀಜಗಳ ಪೂರೈಕೆದಾರರಾಗಬಹುದು.
6. ಜೇನುಸಾಕಣೆ: ಜಾಗತಿಕವಾಗಿ ಆರೋಗ್ಯ ಸಮಸ್ಯೆಗಳ ಬಗ್ಗೆ ಹೆಚ್ಚುತ್ತಿರುವ ಜಾಗೃತಿಯಿಂದಾಗಿ ಜೇನುತುಪ್ಪದ ಬೇಡಿಕೆ ಹೆಚ್ಚುತ್ತಿದೆ. ಜೇನುತುಪ್ಪ ತಯಾರಿಕೆ ಅಥವಾ ಜೇನು ಸಾಕಣೆಯನ್ನು ನೀವು ಕಡಿಮೆ ಆರಂಭಿಕ ಬಂಡವಾಳದೊಂದಿಗೆ ಪ್ರಾರಂಭಿಸಬಹುದು. ಅಲ್ಲದೇ ಇದು ಲಾಭದಾಯಕ ಉದ್ಯಮ ಕೂಡ. ಆದ್ರೆ ಜೇನುಸಾಕಣೆಗೆ ನಿರಂತರ ಮೇಲ್ವಿಚಾರಣೆಯ ಅಗತ್ಯವಿರುತ್ತದೆ.
7. ಗೋಧಿ ಕೃಷಿ: ಗೋಧಿ ಬೇಸಾಯವು ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಬಹುದಾದ ಮತ್ತೊಂದು ಲಾಭದಾಯಕ ಕೃಷಿಯಾಗಿದೆ. ಅದರ ಉತ್ಪನ್ನಗಳಾದ ಗೋಧಿ ಹಿಟ್ಟು, ಬ್ರೆಡ್ ಮತ್ತು ಬಿಸ್ಕತ್ತುಗಳನ್ನು ಹತ್ತಿರದ ಮಾರುಕಟ್ಟೆಗಳಿಗೆ ಅಥವಾ ಚಿಲ್ಲರೆ ಅಂಗಡಿಗಳಿಗೆ ಮಾರಾಟ ಮಾಡಿ ಉತ್ತಮ ಆದಾಯ ಗಳಿಸಬಹುದು.
8. ಮೀನು ಸಾಕಣೆ: ಮೀನು ಸಾಕಣೆ ಒಂದು ಲಾಭದಾಯಕ ಹೂಡಿಕೆಯಾಗಿದ್ದು, ಇದರಿಂದ ವರ್ಷವಿಡೀ ಆದಾಯವನ್ನು ಗಳಿಸಬಹುದು. ಆಧುನಿಕ ತಂತ್ರಗಳನ್ನು ಅಳವಡಿಸಿಕೊಳ್ಳುವುದರಿಂದ ನೀವು ಮಧ್ಯಮ ವೆಚ್ಚದಲ್ಲಿ ಈ ವ್ಯವಹಾರವನ್ನು ಪ್ರಾರಂಭಿಸಬಹುದು.
9. ಹೈನುಗಾರಿಕೆ : ಹೈನುಗಾರಿಕೆಯು ಅತ್ಯಂತ ಲಾಭದಾಯಕ ಕೃಷಿ ವ್ಯವಹಾರಗಳಲ್ಲಿ ಒಂದಾಗಿದೆ. ಹಾಲಿನ ಹೊರತಾಗಿ, ಇದರಿಂದ ಗೊಬ್ಬರವನ್ನು ಸಹ ಉತ್ಪಾದಿಸಬಹುದು. ಸಾವಯವ ಡೈರಿ ಉತ್ಪನ್ನಗಳಾದ ಹಾಲು, ಚೀಸ್, ಮೊಸರು, ಕೆನೆ ಮತ್ತು ಇನ್ನೂ ಹೆಚ್ಚಿನ ಉತ್ಪಗಳಿಗೆ ಯಾವಾಗಲೂ ಬೇಡಿಕೆಯಿರುತ್ತದೆ.
10. ಮಸಾಲೆ ಸಂಸ್ಕರಣೆ: ಹೆಚ್ಚುತ್ತಿರುವ ಜಾಗತಿಕ ಬೇಡಿಕೆಯಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಮಸಾಲೆ ಸಂಸ್ಕರಣೆಯು ಉತ್ತೇಜನವನ್ನು ಕಂಡಿದೆ. ಉತ್ತಮ ಗುಣಮಟ್ಟದ ಸಂಸ್ಕರಿತ ಮಸಾಲೆಗಳಿಗೆ ಸಾಕಷ್ಟು ಬೇಡಿಕೆಯಿದೆ.
ಸಂಸ್ಕರಣೆ ಮತ್ತು ಪ್ಯಾಕೇಜಿಂಗ್ ವಿಧಾನಗಳು ತುಂಬಾ ಸಂಕೀರ್ಣವಾಗಿಲ್ಲ. ಆದ್ದರಿಂದ ನೀವು ಈ ಮಾರ್ಗವನ್ನು ಆಯ್ಕೆ ಮಾಡಿಕೊಂಡರೆ ಹೆಚ್ಚಿನ ಲಾಭ ಗಳಿಸಬಹುದು.
11. ಸೋಯಾಬೀನ್ ಕೃಷಿ: ಸೋಯಾಹಾಲು, ಸೋಯಾ ಹಿಟ್ಟು, ಸೋಯಾ ಸಾಸ್, ಸೋಯಾ ಎಣ್ಣೆ ಮುಂತಾದವುಗಳ ಉತ್ಪಾದನೆಗೆ ಸೋಯಾಬೀನ್ಸ್‌ನ ವಾಣಿಜ್ಯ ಸಂಸ್ಕರಣೆಯು ಅತ್ಯಂತ ಲಾಭದಾಯಕ ಕೃಷಿ ವ್ಯವಹಾರವಾಗಿದೆ.
ಇದನ್ನೂ ಓದಿ: ಛೀ ಛೀ, ಇದೇನಿದು ಅಸಹ್ಯ! ಫ್ಲೈಟ್‌ನಲ್ಲಿ ಅರೆಬೆತ್ತಲಾಗಿ ಮಹಿಳೆಯ ಹುಚ್ಚಾಟ!
ಮಧ್ಯಮ ಹೂಡಿಕೆಯೊಂದಿಗೆ ನೀವು ನಿಮ್ಮ ಸ್ವಂತ ಕೃಷಿ ಭೂಮಿಯಲ್ಲಿ ಸೋಯಾಬೀನ್ ಕೃಷಿ ಮಾಡಬಹುದು. ಅದನ್ನು ಸ್ಥಳೀಯ ಮಾರುಕಟ್ಟೆಗಳಿಗೆ ಅಥವಾ ಇ-ಪೋರ್ಟಲ್‌ಗಳಿಗೆ ಸರಬರಾಜು ಮಾಡಬಹುದು.
12. ಭತ್ತದ ಕೃಷಿ: ಪ್ರಪಂಚದಲ್ಲಿ ಹೆಚ್ಚಿನ ಪ್ರದೇಶಗಳಲ್ಲಿ ಜನರು ಅಕ್ಕಿಯನ್ನು ಸೇವಿಸುತ್ತಾರೆ. ಇದು ಅತಿದೊಡ್ಡ ಉತ್ಪಾದನೆಯ ಸರಕುಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಅಕ್ಕಿಗೆ ಯಾವಾಗಲೂ ಬೇಡಿಕೆ ಇರುತ್ತದೆ. ಇದು ಮೂಲಭೂತ ಅಗತ್ಯವಾಗಿರುವುದರಿಂದ ಭತ್ತದ ಕೃಷಿಯಿಂದ ಅತ್ಯುತ್ತಮ ಲಾಭವನ್ನು ಗಳಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ