• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Director Rajamouli: ರಾಜಮೌಳಿ ಸಿನಿಮಾಂತ್ರಿಕ ಅಷ್ಟೇ ಅಲ್ಲ, ಗ್ರೇಟ್ ಬ್ಯುಸಿನೆಸ್​ಮೆನ್​! ಇವ್ರನ್ನು ನೋಡಿ ದುಡ್ಡು ಮಾಡೋದು ಹೇಗೆ ಅಂತ ಕಲೀಬೇಕು!

Director Rajamouli: ರಾಜಮೌಳಿ ಸಿನಿಮಾಂತ್ರಿಕ ಅಷ್ಟೇ ಅಲ್ಲ, ಗ್ರೇಟ್ ಬ್ಯುಸಿನೆಸ್​ಮೆನ್​! ಇವ್ರನ್ನು ನೋಡಿ ದುಡ್ಡು ಮಾಡೋದು ಹೇಗೆ ಅಂತ ಕಲೀಬೇಕು!

ನಿರ್ದೇಶಕ ರಾಜಮೌಳಿ

ನಿರ್ದೇಶಕ ರಾಜಮೌಳಿ

RRR Oscar: ಬೇರೆ ನಿರ್ದೇಶಕರು ಸಿನಿಮಾ ಮಾಡಿ ಪೇಮೆಂಟ್ ತೆಗದುಕೊಂಡು ಸುಮ್ಮನಾಗಿ ಬಿಡುತ್ತಾರೆ. ಆದರೆ ಈ ರಾಜಮೌಳಿ ಹಾಗಲ್ಲ. ಯಾಕೆ ಅಂತೀರಾ? ಅದಕ್ಕೆ ಉತ್ತರ ಇಲ್ಲಿದೆ.

  • Share this:

ಸಿನಿಮಾ ಮಾಂತ್ರಿಕ ರಾಜಮೌಳಿ (Rajamouli) ನಿರ್ದೇಶನದ ಆರ್​ಆರ್​ಆರ್​ (RRR) ಸಿನಿಮಾದ ನಾಟು ನಾಟು (Naatu Naatu Song) ಹಾಡಿಗೆ ಆಸ್ಕರ್ (Oscar)​ ಸಿಕ್ಕಿರುವುದು ನಿಜಕ್ಕೂ ಭಾರತೀಯರಿಗೆ ಹೆಮ್ಮೆಯ ವಿಚಾರ. ಆದರೆ ರಾಜಮೌಳಿಗೆ ಈ ಸಿನಿಮಾ ಮಾಡುವುದಕ್ಕಿಂತ ಮುಂಚೆಯೇ ಇಲ್ಲಿಗೆ ಬಂದು ನಿಲ್ಲುತ್ತೇವೆ ಅಂತ ಗೊತ್ತಿರುತ್ತೆ. ಯಾಕೆಂದರೆ ರಾಜಮೌಳಿ ತಲೆ ಅಂಥದ್ದು. ರಾಜಮೌಳಿ ಸಿನಿಮಾ ಮಾಡಲು ಹೆಚ್ಚಿನ ದುಡ್ಡು (Money) ಬೇಕು, ನಿಜ. ಆದರೆ ಅವರು ಇತರೆ ನಿರ್ದೇಶಕರಂತೆ (Director) ಅಲ್ಲ. ಸಾಮನ್ಯವಾಗಿ ನಿರ್ದೇಶಕರು ಸಿನಿಮಾ ಅನೌನ್ಸ್​ನಿಂದ ಹಿಡಿದು ಸಿನಿಮಾ ರಿಲೀಸ್ ಆಗುವವರೆಗೂ ಜೊತೆಗಿದ್ದು ಗೆಲ್ಲುವಂತೆ ಮಾಡುತ್ತಾರೆ. ಆದರೆ ರಾಜಮೌಳಿ ಹಾಗಲ್ಲ. ಇವರು ಒಂದು ಸಿನಿಮಾ ಅನೌನ್ಸ್ ಮಾಡಿದಾಗನಿಂದಲೂ ಸೌಂಡ್​ ಮಾಡುತ್ತಲೇ ಇರುತ್ತೆ. ಜೊತೆಗೆ ಚಿತ್ರ ರಿಲೀಸ್​ ಆಗಿ ಸೂಪರ್ ಹಿಟ್​ ಆದ ಕೂಡಲೇ ಕೈ ಕಟ್ಟಿ ಕೂರವವರಲ್ಲ ಸಿನಿಮಾ ಮಾಂತ್ರಿಕ ರಾಜಮೌಳಿ.


ರಾಜಮೌಳಿ ಎಲ್ಲರೂ ಅಂದುಕೊಂಡಂಗಲ್ಲ!


ಬೇರೆ ನಿರ್ದೇಶಕರು ಸಿನಿಮಾ ಮಾಡಿ ಪೇಮೆಂಟ್ ತೆಗದುಕೊಂಡು ಸುಮ್ಮನಾಗಿ ಬಿಡುತ್ತಾರೆ. ಆದರೆ ಈ ರಾಜಮೌಳಿ ಹಾಗಲ್ಲ. ಯಾಕೆ ಅಂತೀರಾ? ಅದಕ್ಕೂ ಉತ್ತರ ಇದೆ. ರಾಜಮೌಳಿ ಎಲ್ಲರಿಗೂ ನಿರ್ದೇಶಕ ಅಂತ ಗೊತ್ತು. ಆದರೆ ಅವರಿಗಿಂತ ದೊಡ್ಡ ಬ್ಯುಸಿನೆಸ್​ಮೆನ್​ ಮತ್ತೊಬ್ಬರಿಲ್ಲ. ಇವರಂಥ ಮಾರ್ಕೆಟಿಂಗ್​ ಪರ್ಸನ್​ ಕೂಡ ಇನ್ನೊಬ್ಬರಿಲ್ಲ. ರಾಜಮೌಳಿ ಸಿನಿಮಾ ಅಂದ್ರೆ ನಿರ್ಮಾಪಕರೆಲ್ಲ ಕ್ಯೂ ನಿಂತುಕೊಳ್ಳುತ್ತಾರೆ. ಇನ್ನೂ ಕೆಲ ನಿರ್ಮಾಪಕರಂತೂ ಅಯ್ಯೋ ಬಜೆಟ್​ ಜಾಸ್ತಿ ಬೇಕು ಅವರ ಸಹವಾಸನೇ ಬೇಡ ಅಂತಾರೆ.


ರಾಜಮೌಳಿ ನಿರ್ದೇಶಕರಷ್ಟೇ ಅಲ್ಲ!


ಒಂದು ಸ್ಟಾರ್ಟ್​ಅಪ್​ ಮಾಡುವಾಗ ಒಬ್ಬ ಸಿಇಓ ಹೇಗೆಲ್ಲಾ ಯೋಚನೆ ಮಾಡುತ್ತಾರೋ ಹಾಗೇ ಯೋಚಿಸುತ್ತಾರೆ ರಾಜಮೌಳಿ. ತನ್ನ ಸಿನಿಮಾವನ್ನು ಇಡೀ ವಿಶ್ವಕ್ಕೆ ತೋರಿಸುವ ತವಕ ಅವರದ್ದು. ಹಾಗಂತ ಇದು ಬ್ಯುಸಿನೆಸ್​ ಟ್ರಿಕ್​ ಅಲ್ಲ ಹೇಳಲು ಸಾಧ್ಯವಿಲ್ಲ. ಒಂದು ಸಿನಿಮಾಗೆ ಇಷ್ಟು ಕೋಟಿ ಖರ್ಚು ಮಾಡಿದರೆ ಹೇಗೆ ಅಂದುಕೊಂಡರೇ, 10 ಸಿನಿಮಾಗೆ ಇದೇ ರೀತಿಯ ಬಜೆಟ್​ ಹಾಕಲು ನಾ ಮುಂದು ತಾ ಮುಂದು ಅಂತ ವಿಶ್ವದ ದೊಡ್ಡ ದೊಡ್ಡ ಕಂಪನಿಗಳು ಮುಂದೆ ಬರುತ್ತಿವೆ. ಇದಕ್ಕೆಲ್ಲಾ ಕಾರಣ ರಾಜಮೌಳಿ.


ಇದನ್ನೂ ಓದಿ: ಮಹೇಶ್‌ ಬಾಬು-ರಾಜಮೌಳಿ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ! ಬಿಗ್ ಅಪ್‌ಡೇಟ್ಸ್‌ ಇಲ್ಲಿದೆ


ಮಾರ್ಕೆಟಿಂಗ್​ನಲ್ಲಿ ಎತ್ತಿದ್ದ ಕೈ!


ಉದಾಹರಣೆಗೆ ರಾಜಮೌಳಿ ಆರ್​ಆರ್​ಆರ್​ ಸಿನಿಮಾ ಅನೌನ್ಸ್ ಆದಾಗಿನಿಂದಲೂ ಸೌಂಡ್​ ಮಾಡುತ್ತಲೇ ಇತ್ತು. ಸಿನಿಮಾ ಯಾವ ಮಟ್ಟಕ್ಕೆ ಸಕಸ್ಸ್​ ಆಯ್ತು ಎಲ್ಲರಿಗೂ ಗೊತ್ತಿದೆ. ಜೊತೆಗೆ ಭಾರತವಷ್ಟೇ ಅಲ್ಲದೇ ಇಡೀ ವಿಶ್ವದಲ್ಲಿ ಈ ಸಿನಿಮಾಗೆ ಡಿಮ್ಯಾಂಡ್​ ಕ್ರಿಯೆಟ್ ಆಗಿತ್ತು. ಚೀನಾ, ಆಸ್ಟ್ರೇಲಿಯಾ, ಯುಎಸ್​​ನಲ್ಲಿ ಆರ್​ಆರ್​ಆರ್ ಸ್ಪೆಷಲ್​ ಸ್ಕ್ರೀನಿಂಗ್ ಆಯ್ತು. ಇದೆಲ್ಲಾ ನಿಮಗೂ ಗೊತ್ತಿದೆ. ಆದರೆ ನಿಮಗೆ ಗೊತ್ತಿರದ ವಿಚಾರ ಅಂದ್ರೆ ಇದೆಲ್ಲಾ ಮಾಡಿದ್ದು ರಾಜಮೌಳಿಯವರೇ.


ಹಾಲಿವುಡ್ ಪ್ರೊಡಕ್ಷನ್​ ಹೌಸ್​ಗಳು ವೇಯ್ಟಿಂಗ್!


ಒಂದು ಪ್ರಾಡೆಕ್ಟ್​ನ ಹೇಗೆ ಮಾರ್ಕೆಟಿಂಗ್ ಮಾಡುತ್ತಾರೋ ಅದರಂತೆ ತನ್ನ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ಮಾರ್ಕೆಟಿಂಗ್​ ಮಾಡಿದ್ದು ರಾಜಮೌಳಿ. ರಾಜಮೌಳಿ ಮುಂದಿನ ಸಿನಿಮಾ ಯಾವುದು ಅಂತ ಇಡೀ ವಿಶ್ವವೇ ಕಾದು ಕುಳಿತಿದೆ. ಇದರ ಜೊತೆಗೆ ಹಾಲಿವುಡ್​​ನ ದೊಡ್ಡ ದೊಡ್ಡ ಪ್ರೊಡಕ್ಷನ್ ಹೌಸ್​ಗಳು ರಾಜಮೌಳಿ ಜೊತೆ ಕೈಜೋಡಿಸಲು ತುದಿಗಾಲಲ್ಲಿ ಕಾಯುತ್ತಿವೆ. ಇದಕ್ಕೆ ನೋಡಿ ಮಾರ್ಕೆಟಿಂಗ್ ಅನ್ನೋದು. ಇದನ್ನು ಮೊದಲೇ ಅರಿತಿದ್ದ ಸಿನಿಮಾ ಮಾಂತ್ರಿಕ ರಾಜಮೌಳಿ.


ಕೇವಲ ತನ್ನ ಮೇಲೆ ಮಾತ್ರ ವಿಶ್ವದ ಕಣ್ಣು ಇರಬೇಕು ಅಂದುಕೊಂಡವರಲ್ಲ ರಾಜಮೌಳಿ. ಇಡೀ ವಿಶ್ವವೇ ಸೌತ್​ ಸಿನಿಮಾ ಇಂಡಸ್ಟ್ರಿಯತ್ತ ತಿರುಗಿ ನೋಡುವಂತೆ ಮಾಡಿದವರು. ಮುಂದೊಂದು ದಿನ ಇವರ ಸಿನಿಮಾಗೆ ವಾರ್ನರ್​ ಬ್ರದರ್ಸ್​,ಯೂನಿವರ್ಸಲ್​ ಪಿಕ್ಷರ್ಸ್, 20th Century Studios, ಸೇರಿದಂತೆ ದೊಡ್ಡ ದೊಡ್ಡ ಪ್ರೊಡಕ್ಷನ್​ ಹೌಸ್​ಗಳು ಬಂಡವಾಳ ಹೂಡಿದರು ಆಶ್ಚರ್ಯವಿಲ್ಲ ಅನ್ನಬಹುದು.

Published by:ವಾಸುದೇವ್ ಎಂ
First published: