ಎಲ್ಲರಿಗೂ ತಮಗಿಷ್ಟವಾದ ಕಾರು (Car) ಕೊಂಡುಕೊಳ್ಳಬೇಕೆಂಬ ಆಸೆ ಇರುತ್ತದೆ. ಆದರೆ ಯಾವ ಕಾರು ಖರೀದಿ (Car Purchase) ಮಾಡಬೇಕು ಅಂತ ಎಲ್ಲರಿಗೂ ಕನ್ಫೂಸ್ ಆಗಿರುತ್ತೆ. ಆಗ ಸ್ನೇಹಿತರು (Family), ಕುಟುಂಬಸ್ಥರ (Family) ಬಳಿ ಸಲಹೆ ಪಡೆದು ನಿಮ್ಮಗಿಷ್ಟವಾದ ಕಾರು ಕೊಂಡುಕೊಳ್ಳುತ್ತಾರೆ. ನೀವೂ ಕೂಡ ಹೊಸ ವರ್ಷ (New year) ದ ಆರಂಭದಲ್ಲೇ ಕಾರು ಖರೀದಿ ಮಾಡಬೇಕು ಅಂದುಕೊಂಡಿದ್ದೀರಾ? ಹಾಗಿದ್ದರ ಈ ಸುದ್ದಿ ಬಗ್ಗೆ ನೀವು ತಿಳಿದುಕೊಂಡಿರಲೇ ಬೇಕು. ಯಾವ ಕಾರುಗಳು ಹೆಚ್ಚು ಜನಪ್ರಿಯವಾಗಿವೆ ಎಂಬ ಐಡಿಯಾ ನಿಮ್ಮಲಿರಬೇಕು. ಯಾವ ಕಾರುಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ ಎಂಬುದನ್ನೂ ನಾವು ತಿಳಿದುಕೊಳ್ಳಬೇಕು. ಇದೆಲ್ಲಾ ಗೊತ್ತಿದ್ರೆ ಕಾರು ಖರೀದಿಸುವಾಗ ಯಾವುದೇ ಸಮಸ್ಯೆಯಾಗುವುದಿಲ್ಲ.
ಕ್ರೆಟಾ ಎಸ್ಯುವಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್!
ಡಿಸೆಂಬರ್ 2022 ರಲ್ಲಿ ಕ್ರೆಟಾ ಮಾರಾಟ ತುಂಬಾ ಚೆನ್ನಾಗಿತ್ತು. ಈ ಕಾರು SUV ಮಾರಾಟದಲ್ಲಿ ನಂಬರ್ 1 ಆಯಿತು. ಈ ಕಾರಿನ ವರ್ಷದಿಂದ ವರ್ಷಕ್ಕೆ ಮಾರಾಟವು 34 ಪ್ರತಿಶತದಷ್ಟು ಹೆಚ್ಚಾಗಿದೆ. ಕಳೆದ ತಿಂಗಳು ಈ ಕಾರಿನ ಮಾರಾಟ 10,205 ಯುನಿಟ್ಗಳಲ್ಲಿ ದಾಖಲಾಗಿದೆ. ಡಿಸೆಂಬರ್ 2021 ರಲ್ಲಿ ಈ ಕಾರಿನ ಮಾರಾಟವು 7609 ಘಟಕಗಳಾಗಿವೆ. ಹಾಗೆಯೇ ಗ್ರ್ಯಾಂಡ್ ವಿಟಾರಾ ಬ್ರೆಝಾ ಎರಡನೇ ಸ್ಥಾನದಲ್ಲಿದೆ. ಈ ಕಾರಿನ ಮಾರಾಟ 6171 ಯುನಿಟ್ ಆಗಿದೆ.
ವಿಟಾರಾ ಬ್ರೆಝಾ, ಸೆಲ್ಟೋಸ್ಗೂ ಬೇಡಿಕೆ!
ಸೆಲ್ಟೋಸ್ 3ನೇ ಸ್ಥಾನ ಪಡೆದುಕೊಂಡಿದೆ. ಈ ಕಾರಿನ ಮಾರಾಟವು 5,995 ಯುನಿಟ್ ಆಗಿದೆ. ಡಿಸೆಂಬರ್ 2021 ರಲ್ಲಿ ಈ ಕಾರಿನ ಮಾರಾಟವು 4012 ಯುನಿಟ್ ಆಗಿದೆ ಎಂಬುದು ಗಮನಾರ್ಹ. ಅಂದರೆ ವಾರ್ಷಿಕ ಶೇ.18ರಷ್ಟು ಹೆಚ್ಚಳವಾಗಿದೆ. ಈ ಮೂರು SUVಗಳು ಟಾಪ್ 3 ನಲ್ಲಿವೆ. ಡಿಸೆಂಬರ್ನಲ್ಲಿ ಹೆಚ್ಚು ಜನರು ಎಸ್ಯುವಿ ಕಾರುಗಳನ್ನೇ ಖರೀದಿಸಿದ್ದಾರೆ. ಈಗ ಯಾವ ಕಾರುಗಳಿಗೆ ಡಿಮ್ಯಾಂಡ್ ಕಡಿಮೆಯಾಗಿದೆ, ಯಾವ ಕಾರುಗಳು ಶೂನ್ಯ ಮಾರಾಟವಾಗಿದೆ ಎಂಬುದನ್ನು ನೋಡೋಣ.
ಈ ಕಾರುಗಳನ್ನು ಕೇಳುವವರೇ ಇಲ್ಲ!
ಎಸ್ ಕ್ರಾಸ್ ಮಾರಾಟ ಶೂನ್ಯವಾಗಿದೆ. ಡಿಸೆಂಬರ್ 2021 ರಲ್ಲಿ ಈ ಕಾರಿನ ಮಾರಾಟವು 1521 ಯುನಿಟ್ ಆಗಿದೆ. ಅಲ್ಲದೆ ಕಿಕ್ಸ್ ಕಾರಿನ ಮಾರಾಟವೂ ಶೂನ್ಯವಾಗಿದೆ. ಡಿಸೆಂಬರ್ 2021 ರಲ್ಲಿ ಈ ಕಾರಿನ ಮಾರಾಟವು 130 ಯುನಿಟ್ ಆಗಿದೆ. ಡಸ್ಟರ್ ಮಾರಾಟವೂ ಶೂನ್ಯವಾಗಿದೆ. ಈ ಕಾರಿನ ಮಾರಾಟವನ್ನು ಡಿಸೆಂಬರ್ 2021 ರಲ್ಲಿ 56 ಯುನಿಟ್ಗಳಾಗಿ ದಾಖಲಿಸಲಾಗಿದೆ. ಕಳೆದ ತಿಂಗಳು ಈ ಮೂರು ಕಾರುಗಳ ಮಾರಾಟ ಶೂನ್ಯವಾಗಿ ದಾಖಲಾಗಿತ್ತು.
ಇದನ್ನೂ ಓದಿ: ಇನ್ಮುಂದೆ ಈ 11 ಕಾರುಗಳನ್ನು ನೀವು ಖರೀದಿ ಮಾಡೋದು ಸಾಧ್ಯವಿಲ್ಲ! ಇದು ಕಾರಣ
ತಿಂಗಳ ಆಧಾರದ ಮೇಲೆ, ಕ್ರೆಟಾದ ಮಾರಾಟವು 23 ಪ್ರತಿಶತದಷ್ಟು ಕುಸಿದಿದೆ. ನವೆಂಬರ್ ತಿಂಗಳಿನಲ್ಲಿ ಕಾರಿನ ಮಾರಾಟ 13,321 ಯುನಿಟ್ ಆಗಿದೆ. ಅಲ್ಲದೆ, ಗ್ರಾಂಡ್ ವಿಟಾರಾ ಮಾರಾಟವು 39 ಪ್ರತಿಶತದಷ್ಟು ಹೆಚ್ಚಾಗಿದೆ. ನವೆಂಬರ್ನಲ್ಲಿ 4433 ಯುನಿಟ್ಗಳ ಮಾರಾಟವಾಗಿದೆ. ಸೆಲ್ಟೋಸ್ ಮಾರಾಟವೂ ಶೇ.35ರಷ್ಟು ಕುಸಿದಿದೆ. ಈ ಕಾರಿನ ಮಾರಾಟ ನವೆಂಬರ್ನಲ್ಲಿ 9284 ಯುನಿಟ್ಗಳಾಗಿತ್ತು.
ಇನ್ಮುಂದೆ ಕಾಣಸಿಗೋದಿಲ್ಲ ಈ 11 ಕಾರುಗಳು!
ಹ್ಯುಂಡೈ ಇಂಡಿಯಾ ಭಾರತದಲ್ಲಿ ತನ್ನ ಉತ್ಪಾದನಾ ಶ್ರೇಣಿಯಿಂದ ಒಟ್ಟು 11 ಕಾರುಗಳನ್ನು ಹೊರಹಾಕಲು ಯೋಜಿಸಿದೆ. ರಿಯಲ್ ಡ್ರೈವಿಂಗ್ ಎಮಿಷನ್ಸ್ (RDE) ಶೀಘ್ರದಲ್ಲೇ ಜಾರಿಗೆ ಬರಲಿದೆ ಮತ್ತು ಅನೇಕ ರೂಪಾಂತರಗಳನ್ನು ಮಾರುಕಟ್ಟೆಯಿಂದ ಹೊರಹಾಕುತ್ತದೆ. ಈ ನಿರ್ಧಾರದ ಹಿಂದೆ ಗ್ರಾಹಕರ ಆದ್ಯತೆಗಳೂ ಇವೆ.
RDE ಮಾನದಂಡಗಳು ಜಾರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ವಾಹನ ತಯಾರಕರು ಈಗಾಗಲೇ ಹೆಚ್ಚುತ್ತಿರುವ ಇನ್ಪುಟ್ ವೆಚ್ಚಗಳು ಮತ್ತು ಏರುತ್ತಿರುವ ಬೆಲೆಗಳ ನಡುವೆ ಸಮತೋಲನವನ್ನು ಸಾಧಿಸಲು ಹೆಣಗಾಡುತ್ತಿದ್ದಾರೆ. ಕೆಲವು ಮಾದರಿಯ ಕಾರುಗಳ ಬೆಲೆಯನ್ನು ಹೆಚ್ಚಿಸಲೂ ನಿರ್ಧರಿಸಿದ್ದಾರೆ. ಇದರೊಂದಿಗೆ, ಕಡಿಮೆ ಜನಪ್ರಿಯ ಮಾದರಿಗಳು ಮತ್ತು ರೂಪಾಂತರಗಳ ಉತ್ಪಾದನೆಯನ್ನು ನಿಲ್ಲಿಸುವುದು ಉತ್ತಮ ಎಂದು ಕಂಪನಿಗಳು ಭಾವಿಸುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ