ಯಾವುದೇ ಹಬ್ಬ – ಹರಿದಿನ (Festival), ಸಮಾರಂಭಗಳಿದ್ದರೂ (Events) ಅಲ್ಲಿ ಹೂವುಗಳು (Flower) ಇರಲೇಬೇಕು. ಅಲ್ದೇ ಅದು ಶುಭ ಸಮಾರಂಭಗಳಾದರಂತೂ ದೇವರ ಅಲಂಕಾರಕ್ಕೆ, ಸಮಾರಂಭದ ಅಲಂಕಾರಕ್ಕೆ, ಹೆಂಗಸರಿಗೆ ಮುಡಿದುಕೊಳ್ಳೋದಕ್ಕೆ, ಅರಿಶಿಣ (Turmeric) ಕುಂಕುಮಕ್ಕೆ ಹೀಗೆ ಹೂವು ಬೇಕೇ ಬೇಕು. ಹೂವುಗಳಲ್ಲಿ ಅದರಲ್ಲೂ ಮಲ್ಲಿಗೆಗೆ ಒಂದು ತೂಕ ಹೆಚ್ಚು ಅಂತಲೇ ಹೇಳಬಹುದು. ಮಲ್ಲಿಗೆ ಅದರಲ್ಲೂ ಜಿಐ (Geographical indication) ಟ್ಯಾಗ್ ಹೊಂದಿರುವ ಉಡುಪಿ ಮಲ್ಲಿಗೆಗೆ ಸಾಮಾನ್ಯಾಗಿ ಬೇಡಿಕೆ ಕಡಿಮೆಯಾಗೋದೇ ಇಲ್ಲ.
ಅದರಲ್ಲೂ ಹೆಚ್ಚಾಗಿ ದಕ್ಷಿಣ ಭಾರತವು ಅನೇಕ ಮಲ್ಲಿಗೆ ರೈತರಿಂದ ತುಂಬಿದೆ. ಏಕೆಂದರೆ ಉಡುಪಿ ಮಲ್ಲಿಗೆ ರೈತರಿಗೆ ಸ್ಥಿರವಾಗಿ ಆದಾಯ ತಂದುಕೊಡುವಲ್ಲಿ ಯಶಸ್ವಿಯಾಗಿದೆ. ಅಂಥ ಯಶಸ್ವಿ ಮಲ್ಲಿಗೆ ಕೃಷಿಕರಲ್ಲಿ ಕಾಸರಗೋಡು ನಿವಾಸಿ ಅಶೋಕನ್ ಕೂಡ ಒಬ್ಬರು.
ತೋಟದ ಅಲಂಕಾರಕ್ಕೆಂದು ಉಡುಪಿ ಮಲ್ಲಿಗೆ ಸಸಿ ತಂದಿದ್ದರು!
ಕಾಸರಗೋಡು ನಿವಾಸಿ ಅಶೋಕನ್ ಅವರು 1999 ರಲ್ಲಿ ಉಡುಪಿಗೆ ಭೇಟಿ ನೀಡಿದಾಗ ಉಡುಪಿ ಮಲ್ಲಿಗೆ ಅವರಿಗೆ ಮೊದಲ ಬಾರಿಗೆ ಪರಿಚಯವಾಯಿತು. ಸುಮಾರು 10 ವರ್ಷಗಳಿಂದ ಕೃಷಿ ಮಾಡುತ್ತಿದ್ದ ಅವರು ತಮ್ಮ ಮನೆಯ ತೋಟವನ್ನು ಅಲಂಕರಿಸಲು ಮನೆಗೆ ಸಸಿ ತರಲು ನಿರ್ಧರಿಸಿದರು.
ಆದ್ರೆ ಅವರ ತೋಟದಲ್ಲಿ ನೆಟ್ಟ ಮಲ್ಲಿಗೆ ಗಿಡ ವೇಗವಾಗಿ ಬೆಳೆದು ಹೂ ಬಿಡಲು ಆರಂಭಿಸಿತು. ಆರು ತಿಂಗಳಲ್ಲೇ ಪತ್ನಿ ಶೈಲಜಾ ಒಂದು ಹಿಡಿ ಮಲ್ಲಿಗೆ ತಂದು ಮಾಲೆ ಮಾಡಿದ್ದರು.
“ನನ್ನ ಮನೆಯ ಸುತ್ತ ಸುಮಾರು 25 ಸೆಂಟ್ಸ್ ಜಮೀನಿದೆ. ಈ ಹೂವು ಇಲ್ಲಿನ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ ಎಂದು ನನಗೆ ಅರ್ಥವಾಯಿತು. ಒಂದು ಸಣ್ಣ ಮಾರುಕಟ್ಟೆ ಅಧ್ಯಯನವನ್ನು ನಡೆಸಿದ ನಂತರ, ಮಲ್ಲಿಗೆ ಮಾಲೆಗಳು ರೂ 1,000/ಮೀಟರ್ ಮಾರಾಟ ಮಾಡಬಹುದು ಎಂದು ನಾನು ಅರಿತುಕೊಂಡೆ.
ನಾನು ಮತ್ತು ನನ್ನ ಹೆಂಡತಿ ನಾವು ಈಗಾಗಲೇ ಬೆಳೆಯುತ್ತಿದ್ದ ತರಕಾರಿಗಳ ಜೊತೆಗೆ ಮಲ್ಲಿಗೆಯನ್ನು ಬೆಳೆಯಲು ನಿರ್ಧರಿಸಿದೆವು. ಅವುಗಳನ್ನು ಮಾಲೆ ಮಾಡಿ ಮಾರಲು ನಿರ್ಧರಿಸಿದೆವು ಎಂದು ಅಶೋಕನ್ ಹೇಳುತ್ತಾರೆ.
ಜನಪ್ರಿಯ ಮಲ್ಲಿಗೆಗಳಲ್ಲಿ ಉಡುಪಿ ಮಲ್ಲಿಗೆ ದುಬಾರಿ!
ಮಲ್ಲಿಗೆಯಲ್ಲಿ ಹಲವಾರು ವಿಧಗಳಿದ್ದರೂ, ಮಂಡ್ಯ ಜಿಲ್ಲೆಯ ಮೈಸೂರು ಮಲ್ಲಿಗೆ (ಜಾಸ್ಮಿನಮ್ ಟ್ರಿಫೋಲಿಯಾಟಮ್), ಬಳ್ಳಾರಿ ಜಿಲ್ಲೆಯ ಹಡಗಲಿ ಮಲ್ಲಿಗೆ (ಜಾಸ್ಮಿನಮ್ ಅಜೋರಿಕಂ) ಮತ್ತು ಶಂಕರಪುರದ ಉಡುಪಿ ಮಲ್ಲಿಗೆ (ಜಾಸ್ಮಿನಮ್ ಸಾಂಬಾಕ್) ಮೂರು ಅತ್ಯಂತ ಜನಪ್ರಿಯವಾಗಿವೆ.
ಆದ್ರೆ ಈ ಮೂರರಲ್ಲಿ ಉಡುಪಿ ಮಲ್ಲಿಗೆ ಅತ್ಯಂತ ದುಬಾರಿಯಾದದ್ದು. ಈ ಮಲ್ಲಿಗೆ 2013 ರಲ್ಲಿ ಭೌಗೋಳಿಕ ಸೂಚಕ (ಜಿಐ) ಟ್ಯಾಗ್ ಅನ್ನು ಗಳಿಸಿದೆ.
ಇಂದಿಗೂ ಶಂಕರಪುರದ ಬಹುತೇಕ ಎಲ್ಲಾ ಮನೆಗಳು ಮಲ್ಲಿಗೆ ಕೃಷಿ ಮತ್ತು ಮಾಲೆ ತಯಾರಿಕೆಯನ್ನೇ ಅವಲಂಬಿಸಿವೆ. ಉಡುಪಿ ಮಲ್ಲಿಗೆಯನ್ನು ಮದುವೆ ಸಮಾರಂಭ, ದೇವಸ್ಥಾನಗಳು ಮತ್ತು ಹಬ್ಬಗಳು, ತೈಲ, ಸಾಬೂನು, ಸುಗಂಧ ದ್ರವ್ಯಗಳು ಮತ್ತು ಇತರ ಐಷಾರಾಮಿ ವಸ್ತುಗಳನ್ನು ತಯಾರಿಸಲು ಬಳಲಾಗುತ್ತದೆ. ಅಲ್ಲದೇ ಇದನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ.
ಮೀಟರ್ಗೆ ಸಾವಿರ ರೂ. ನಂತೆ ಮಾರಾಟ
ಉಡುಪಿ ಮಲ್ಲಿಗೆ ಕೃಷಿ ಆರಂಭಿಸಿದಾಗಿನಿಂದ ಗ್ರಾಹಕರು ನೇರವಾಗಿ ತಮ್ಮ ಮನೆಗೆ ಬರುತ್ತಾರೆ ಎನ್ನುತ್ತಾರೆ ಅಶೋಕನ್. “ನಾನು ಎಂದಿಗೂ ಹೂಮಾಲೆಗಳನ್ನು ಮಾರುಕಟ್ಟೆಗೆ ಮಾರಾಟಕ್ಕೆ ತೆಗೆದುಕೊಂಡು ಹೋಗುವುದಿಲ್ಲ.
ಮದುವೆ ಸಮಾರಂಭ, ದೇವಸ್ಥಾನದವರು ಅದನ್ನು ತೆಗೆದುಕೊಳ್ಳಲು ಬರುತ್ತಾರೆ. ಪ್ರಸ್ತುತ ಮಾರುಕಟ್ಟೆ ದರ ಮತ್ತು ಕಟ್ಟುವ ಶುಲ್ಕವನ್ನು ಆಧರಿಸಿ ಬೆಲೆಯನ್ನು ನಿರ್ಧರಿಸಲಾಗುತ್ತದೆ. ಸಾಮಾನ್ಯವಾಗಿ ಮೀಟರ್ಗೆ 1,000 ರೂ ಗಳಿರುತ್ತವೆ” ಎಂಬುದಾಗಿ ಅವರು ಹೇಳುತ್ತಾರೆ.
ಸಾಮಾನ್ಯವಾಗಿ ಗಿಡದಿಂದ ಮೊಗ್ಗುಗಳನ್ನು ಕೀಳಲು 2-3 ಗಂಟೆಗಳು ಬೇಕಾಗುತ್ತವೆ ಎನ್ನುವ ಅಶೋಕನ್ ತಿಂಗಳಿಗೆ ಕನಿಷ್ಠ 15 ದಿನಗಳವರೆಗೆ ಪ್ರತಿದಿನ ಎರಡು ಮೀಟರ್ಗಳನ್ನು ಮಾರಾಟ ಮಾಡುತ್ತಾರೆ.
ಇದನ್ನೂ ಓದಿ:Lalbagh Flower Show 2023: ಲಾಲ್ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಡೇಟ್ ಫಿಕ್ಸ್, ಶುರುವಾಯ್ತು ದಿನಗಣನೆ
“ಸಾಮಾನ್ಯ ಮಲ್ಲಿಗೆಗಿಂತ ಭಿನ್ನವಾಗಿ, ಉಡುಪಿ ಮಲ್ಲಿಗೆ ಮೊಗ್ಗುಗಳು ಚಿಕ್ಕದಾಗಿರುತ್ತವೆ. ಆದರೆ ಉದ್ದವಾಗಿರುತ್ತವೆ. ಅವು 5-6 ಗಂಟೆಗಳಲ್ಲಿ ಅರಳುತ್ತವೆ ಮತ್ತು ಅದಕ್ಕೂ ಮೊದಲು ಕಟ್ಟಬೇಕು.
ನಾನು ಅವುಗಳನ್ನು ದಿನಕ್ಕೆ ಎರಡು ಬಾರಿ ಕೊಯ್ಲು ಮಾಡುತ್ತೇನೆ ಮತ್ತು ದಿನಕ್ಕೆ ಎರಡು ಮೀಟರ್ ಹಾರವನ್ನು ತಯಾರಿಸುತ್ತೇನೆ. ಬಾಳೆ ಎಲೆಯಲ್ಲಿ ಸರಿಯಾಗಿ ಸುತ್ತಿ ನಿಯಮಿತವಾಗಿ ನೀರಿನೊಂದಿಗೆ ಚಿಮುಕಿಸಿದರೆ, ಹೂವುಗಳನ್ನು ಕಿತ್ತ ನಂತರ 10 ದಿನಗಳವರೆಗೆ ಇರುತ್ತದೆ.
ಆದರೆ ಪರಿಮಳವು ಸ್ವಲ್ಪ ಕಡಿಮೆಯಾಗಬಹುದು. ದೊಡ್ಡ ಹಬ್ಬಗಳು ಅಥವಾ ಮದುವೆಯ ಆರ್ಡರ್ಗಳು ಬಂದಾಗ, ನಾವು ಮಾಲೆಗಳನ್ನು ಈ ರೀತಿ ಸಿದ್ಧಪಡಿಸುತ್ತೇವೆ” ಎಂಬುದಾಗಿ ಅಶೋಕನ್ ವಿವರಿಸುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ