ನಮಸ್ಕಾರ ದೇವ್ರು.. ಇದನ್ನು ಕೇಳಿದ ಕೂಡಲೇ ನಿಮ್ಮ ತಲೆಯಲ್ಲಿ ಒಬ್ಬನ ಮುಖ ನೆನೆಪಿಗೆ ಬರುತ್ತೆ. ಆತನ ಮಾತುಗಳ, ಆತನ ವಿಡಿಯೋ (Videos) ಗಳು, ಬೇರೆ ಬೇರೆ ದೇಶಗಳಲ್ಲೂ ಕನ್ನಡ(Kannada)ದ ಕಂಪು ಹರಿಸುತ್ತಿರೋ ವ್ಯಕ್ತಿ ನಿಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತಾರೆ. ಆತ ಇನ್ಯಾರು ಬೇರೆ ಅಲ್ಲ ಡಾ.ಬ್ರೋ (Dr Bro). ಹೌದು, ಯುಟ್ಯೂಬ್(YouTube)ನಲ್ಲಿ ಡಾ .ಬ್ರೋ ಅಂತಾನೆ ಫೇಮಸ್ (Famous) ಆಗಿರುವ ಈ ಯುವಕ ಕನ್ನಡಿಗರಿಗೇ ಅಂಗೈನಲ್ಲೆ ಇಡೀ ಜಗತ್ತನೇ (World) ತೋರಿಸುತ್ತಾನೆ. ಸಾಧಿಸುವ ಛಲ ಇದ್ದರೆ ಸಾಕು ಜೀವನವನ್ನು ಹೇಗೆ ಬೇಕಾದರೂ ಸಾಗಿಸಬಹುದು. ಹೆಚ್ಚಿನ ಮಂದಿ ಜೀವನದಲ್ಲಿ ಯಶಸ್ಸಿ (Success) ನ ಹಾಗೂ ಹಣ(Money)ದ ಆಸೆಯಿಂದ ಅಡ್ಡದಾರಿ ಹಿಡಿಯುತ್ತಾರೆ. ಆದರೆ ಅದರಿಂದ ಗಳಿಸಿರುವ ನೇಮ್ – ಫೇಮ್ (Fame) ಏನೇ ಇದ್ದರೂ ಸ್ವಲ್ಪ ಸಮಯ ಅಷ್ಟೇ. ಯಾವ ವ್ಯಕ್ತಿ ಕಷ್ಟ ಪಟ್ಟು ಮೇಲೆ ಬರುತ್ತಾನೆ ಅವನು ಸ್ಟ್ರಾಂಗ್ (Strong) ಆಗಿ ಕಡೆಯವರೆಗೂ ನಿಲ್ಲುತ್ತಾನೆ. ಈ ಡಾ. ಬ್ರೋ ಕೂಡ ಹಾಗೇ.
ಡಾ ಬ್ರೋ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್!
ಯೂ ಟ್ಯೂಬ್ ನೋಡುವವರಿಗೆ, ಸೋಶಿಯಲ್ ಮೀಡಿಯಾ ಹೆಚ್ಚಾಗಿ ಬಳಸುವವರಿಗೆ ಈ ಡಾ ಬ್ರೋ ಚಿರಪರಿಚಿತ. ಚಿಕ್ಕ ವಯಸ್ದಸಿಗೆ ದೇಶ ವಿದೇಶ ಸುತ್ತುವ ಈತನನ್ನು ಕಂಡರೆ ಎಲ್ಲರಿಗೂ ಅಚ್ಚುಮೆಚ್ಚು. ಅಸಲಿಗೆ ಈ ಡಾಕ್ಟರ್ ಬ್ರೋ ಯಾರು? ಎಲ್ಲಿಯವನು? ದೇಶ ವಿದೇಶ ಸುತ್ತಲು ಇವನಿಗೆ ಹಣ ಎಲ್ಲಿಂದ ಬರುತ್ತೆ? ಈತನ ತಿಂಗಳ ಆದಾಯವಾದರೂ ಎಷ್ಟು? ಅಂತ ನಿಮಗೆ ಪ್ರಶ್ನೆ ಮೂಡಿರಬಹುದು. ಈ ರೀತಿ ಊರೂರು, ದೇಶ ವಿದೇಶ ಸುತ್ತುವುದು ಅಂದರೆ ಅದು ಸಾಮಾನ್ಯದ ವಿಷಯ ಅಲ್ಲ. ಈತನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಡಾ ಬ್ರೋ ನಿಜವಾದ ಹೆಸರು ಗಗನ್!
ಡಾಕ್ಟರ್ ಬ್ರೋ ಹೆಸರು ಗಗನ್. ಮೂಲತಃ ಬೆಂಗಳೂರಿನ ಹೊರವಲಯದಲ್ಲಿ ಹುಟ್ಟಿ ಬೆಳೆದವನು. ಈತ ಹುಟ್ಟಿದ್ದು ಮದ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ. ಈತನ ತಂದೆಯ ಹೆಸರು ಶ್ರೀನಿವಾಸ್. ಇವರು ದೇವಸ್ಥಾನದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಾರೆ. ತಾಯಿಯ ಹೆಸರು ಪದ್ಮಾ ಅವರು ಮನೆಯಲ್ಲಿಯೆ ಇರುತ್ತಾರೆ. ಈ ಗಗನ್ ಎರಡನೆ ತರಗತಿಯಲ್ಲಿ ಓದುತ್ತಿರುವಾಗಲೇ ಪೌರೋಹಿತ್ಯ ಕಲಿತಿದ್ದ. ತಂದೆ ಇಲ್ಲದ ಸಮಯದಲ್ಲಿ ತಾನೇ ದೇವಸ್ಥಾನದ ಪೂಜೆ ಮಾಡುತ್ತಿದ್ದ. ಆದರೆ, ಡಾ ಬ್ರೋಗೆ ಓದಿನಲ್ಲಿ ಆಸಕ್ತಿ ಇರಲಿಲ್ಲ. ಹಾಡು, ಡ್ಯಾನ್ಸ್ ನಿರೂಪಣೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ.
ಇದನ್ನೂ ಓದಿ: ರೈತರಿಗೆ ಹಣ ಕೊಟ್ಟು ಜೊತೆಗೆ ಶಾಕ್ ಕೊಟ್ಟ ಸರ್ಕಾರ! ಸಾವಿರಾರು ಅನ್ನದಾತರಿಗೆ ನೋಟಿಸ್
2016ರಲ್ಲಿ ಯುಟ್ಯೂಬ್ ಚಾನೆಲ್ ಆರಂಭಿಸಿದ್ದ ಡಾ ಬ್ರೋ!
ಲೈಸೆನ್ಸ್ ಇಲ್ಲದೇ ಹೋದರೂ ತನ್ನ ಹದಿನಾರನೆ ವಯಸ್ಸಿಗೆ ಕಾರು ಓಡಿಸಲು ಶುರು ಮಾಡಿದ್ದ. ಭರತನಾಟ್ಯ ಕಲಿತು ಅದರ ಕ್ಲಾಸ್ ನಡೆಸಿದ್ದ, ಫೋಟೋಗ್ರಫಿ, ವಿಡಿಯೂ ಗ್ರಫಿ ಕಲಿತ. 2016 ರಲ್ಲಿ ತನ್ನದೇ ಆದ ಯೂ ಟ್ಯೂಬ್ ಚಾನೆಲ್ ಶುರು ಮಾಡಿದ್ದ. ಅದುವೇ ಡಿ ಆರ್ ಬ್ರೋ ಅಂದರೆ ಡಾ ಬ್ರೋ. ಪ್ರಾರಂಭದಲ್ಲಿ ಕಾಮಿಡಿ ವಿಡಿಯೋವನ್ನು ಮಾಡಿ ಅಪ್ಲೋಡ್ ಮಾಡಿ, ಬರು ಬರುತ್ತಾ ಸಿನಿಮಾ ನಟ ನಟಿಯರ ಇಂಟರ್ವ್ಯೂ ಮಾಡಿ ಹಾಕುತ್ತಿದ್ದ. ರಾಜ್ಯದ ಬೇರೆ ಬೇರೆ ಕಡೆ ಸುತ್ತಾಡಿ ಅಲ್ಲಿನ ವಿವರ ಕೊಡಲು ಶುರುಮಾಡಿದ್ದ, ರಾಜ್ಯ ಹೋಗಿ ಅಂತರಾಜ್ಯ, ನಂತರ ದೇಶ, ವಿದೇಶ ಸುತ್ತಿದ್ದ.
ಇದನ್ನೂ ಓದಿ: ನಿಮಗಷ್ಟೇ ಅಲ್ಲ, ನಿಮ್ಮ ಸಾಕು ಪ್ರಾಣಿಗೂ ಬೇಕು ಜೀವವಿಮೆ! ಇಷ್ಟೆಲ್ಲಾ ಲಾಭ ಇದೆ ರೀ
ತಿಂಗಳಿಗೆ ಒಂದೂವರೆ ಲಕ್ಷ ದುಡಿತಾರಾ ಡಾ ಬ್ರೋ!
ತನ್ನ 22 ನೇ ವಯಸ್ಸಿಗೇ ಪೂರ್ತಿ ದೇಶ ಸುತ್ತಿರುವ ಖ್ಯಾತಿ ಗಗನ್ ಅವರದ್ದು. ಆದರೆ ಇಷ್ಟೆಲ್ಲಾ ಮಾಡಲು ಗಗನ್ ಒಂದೇ ಒಂದು ರೂಪಾಯಿ ತನ್ನ ಹೆತ್ತವರಿಂದಾಗಲಿ ಇನ್ಯಾರ ಬಳಿಯಿಂದಲೂ ಪಡೆದಿಲ್ಲ. ತಾನೇ ದುಡಿದ ಹಣದಿಂದ ಈ ಸಾಧನೆ ಮಾಡಿರುವ ಗಗನ್ ಅಲಿಯಾಸ್ ಡಾ ಬ್ರೋ ತನ್ನ ವಿಡಿಯೋಗಳಿಂದಲೇ ತಿಂಗಳಿಗೆ 800 ಡಾಲರ್ ಅಂದರೆ ಒಂದೂವರೆ ಲಕ್ಷಕ್ಕೂ ಹೆಚ್ಚಿನ ಹಣ ಸಂಪಾದಿಸುತ್ತಾನೆ ಅಂತ ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ