• Home
  • »
  • News
  • »
  • business
  • »
  • Richest Indians: ಉದ್ಯಮಿಗಳಿಗೆ ತಟ್ಟುತ್ತಿಲ್ವಾ ರೂಪಾಯಿ ಮೌಲ್ಯ ಕುಸಿತದ ಬಿಸಿ? ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ ಅಂತಿದೆ ರಿಪೋರ್ಟ್!

Richest Indians: ಉದ್ಯಮಿಗಳಿಗೆ ತಟ್ಟುತ್ತಿಲ್ವಾ ರೂಪಾಯಿ ಮೌಲ್ಯ ಕುಸಿತದ ಬಿಸಿ? ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ ಅಂತಿದೆ ರಿಪೋರ್ಟ್!

ಉದ್ಯಮಿ ಗೌತಮ್ ಅದಾನಿ

ಉದ್ಯಮಿ ಗೌತಮ್ ಅದಾನಿ

ರೂಪಾಯಿ ದುರ್ಬಲವಾಗಿರಬಹುದು, ಆದರೆ ಶ್ರೀಮಂತರು ಶ್ರೀಮಂತರಾಗಿದ್ದಾರೆ ಅಂತ ಮತ್ತೊಂದು ವರದಿ ಹೇಳುತ್ತಿದೆ. ದುರ್ಬಲವಾದ ರೂಪಾಯಿಯು ಬಹುಪಾಲು ಶ್ರೀಮಂತರ ಮೇಲೆ ಪರಿಣಾಮ ಬೀರಿತು. ಆದರೆ ಶ್ರೀಮಂತರು ಶ್ರೀಮಂತರಾದರು!

  • Share this:

ಭಾರತೀಯ ರೂಪಾಯಿ ಮೌಲ್ಯ ಕುಸಿಯುತ್ತಿದೆ (Indian rupee is depreciating) ಅಂತ ಷೇರುಪೇಟೆ ವರದಿ (stock market report) ಹೇಳುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (international market) ಕಚ್ಚಾತೈಲದ ಬೆಲೆ ಕಡಿಮೆಯಾಗಿರುವುದು ಮತ್ತು ತಾಜಾ ವಿದೇಶಿ ನಿಧಿಯ ಒಳಹರಿವು ರೂಪಾಯಿ ಮೌಲ್ಯ ಕುಸಿತದ ಮೇಲೆ ಪರಿಣಾಮ ಬೀರಿದೆ ಎಂದು ಫಾರೆಕ್ಸ್ ಡೀಲರ್ಗಳು (forex dealers) ತಿಳಿಸಿದ್ದಾರೆ. ಆದರೆ ರೂಪಾಯಿ ದುರ್ಬಲವಾಗಿರಬಹುದು, ಆದರೆ ಶ್ರೀಮಂತರು ಶ್ರೀಮಂತರಾಗಿದ್ದಾರೆ ಅಂತ ಮತ್ತೊಂದು ವರದಿ ಹೇಳುತ್ತಿದೆ. ದುರ್ಬಲವಾದ ರೂಪಾಯಿಯು ಬಹುಪಾಲು ಶ್ರೀಮಂತರ ಮೇಲೆ ಪರಿಣಾಮ ಬೀರಿತು. ಆದರೆ ಅದಾನಿ ಗ್ರೂಪ್ (Adani Group) ಮಾಲೀಕ, ಖ್ಯಾತ ಉದ್ಯಮಿ ಗೌತಮ್ ಅದಾನಿಯವರ (Gautam Adani) ದಾಖಲೆಯ ಲಾಭದಿಂದ ಅದನ್ನು ಸರಿದೂಗಿಸಿತು, ಇದು ಅವರನ್ನು ಹೊಸ ನಂಬರ್ 1 ಸ್ಥಾನಕ್ಕೇರಿಸಿತು ಅಂತಿದೆ ಈ ವರದಿ!


ರೂಪಾಯಿ ಮೌಲ್ಯ ಕುಸಿತ, ಶ್ರೀಮಂತರ ಆದಾಯ ಏರಿಕೆ


ಭಾರತವು ಕೊರೋನಾ ಸಾಂಕ್ರಾಮಿಕ ನಂತರ ಆರ್ಥಿಕವಾಗಿ ಕೊಂಚ ಚೇತರಿಸಿಕೊಳ್ಳುತ್ತಿದೆ. ಇದು ವಿಶ್ವದಲ್ಲೇ ಐದನೇ ಅತಿದೊಡ್ಡ ಆರ್ಥಿಕತೆಯಾಗಿದ್ದು, ಬ್ರಿಟನ್‌ ಅನ್ನು ಮೀರಿಸಿದೆ. ಆದರೆ ಸ್ಟಾಕ್ ಮಾರುಕಟ್ಟೆಯು ಒಂದು ವರ್ಷದ ಹಿಂದೆ ಸ್ವಲ್ಪಮಟ್ಟಿಗೆ ಕುಸಿದಿದೆ ಮತ್ತು ರೂಪಾಯಿ ಮೌಲ್ಯವೂ ಕುಸಿತ ಕಂಡಿದೆ. ಇದರ ಹೊರತಾಗಿಯೂ, ಭಾರತದ 100 ಶ್ರೀಮಂತರ ಒಟ್ಟು ಸಂಪತ್ತು 25 ಶತಕೋಟಿಯಿಂದ ಡಾಲರ್‌ನಿಂದ 800 ಶತಕೋಟಿ ಡಾಲರ್‌ ತಲುಪಿದೆ!
ಶ್ರೀಮಂತರ ಪಟ್ಟಿಯಲ್ಲಿ ಏರಿಕೆ ಕಂಡ ಗೌತಮ್ ಅದಾನಿ


ಉದ್ಯಮಿ, ಅದಾನಿ ಗ್ರೂಪ್‌ನ ಗೌತಮ್ ಅದಾನಿ ಆದಾಯ ಏರಿಕೆ ಕಂಡಿದೆ. 2021 ರಲ್ಲಿ ತನ್ನ ಸಂಪತ್ತನ್ನು ಸುಮಾರು ಮೂರು ಪಟ್ಟು ಹೆಚ್ಚಿಸಿಕೊಂಡಿದ್ದ ಅದಾನಿ, ಈ ವರ್ಷ ತಮ್ಮ ಸಂಪತ್ತನ್ನು 150 ಶತಕೋಟಿ ಡಾಲರ್‌ಗೆ ದ್ವಿಗುಣಗೊಳಿಸಿಕೊಂಡರು. ಭಾರತೀಯ ನಂಬರ್ 1 ಶ್ರೀಮಂತ ಅಂತ ಖ್ಯಾತಿ ಪಡೆದರು. ಶೇಕಡಾವಾರು ಮತ್ತು ಡಾಲರ್ ಎರಡರಲ್ಲೂ ಈ ವರ್ಷ ಅತಿ ಹೆಚ್ಚು ಲಾಭ ಗಳಿಸಿದ ಅದಾನಿ ಅವರು, ಮುಂದಿನ ದಶಕದಲ್ಲಿ 100 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿದರು.


ಇದನ್ನೂ ಓದಿ: Forbes 100 Richest Indians: ಫೋರ್ಬ್ಸ್ 100 ಶ್ರೀಮಂತ ಭಾರತೀಯರ ಪಟ್ಟಿ ರಿಲೀಸ್, ಮುಕೇಶ್ ಅಂಬಾನಿ ಸೇರಿ ಹಲವರಿಗೆ ಸ್ಥಾನ


ಮುಕೇಶ್ ಅಂಬಾನಿಯವರ ಸ್ಥಾನವೇನು?


ತೈಲ ಮತ್ತು ಅನಿಲದಿಂದ ದೂರಸಂಪರ್ಕ ದೈತ್ಯ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ, ಕಳೆದ ವರ್ಷಕ್ಕಿಂತ 5 ಶೇಕಡಾ ಕಡಿಮೆ ಆದಾಯ ಹೊಂದಿದ್ದಾರೆ. ಅವರು 88 ಶತಕೋಟಿ ಡಾಲರ್‌ನೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಅವರ ನಡುವೆ, ಅದಾನಿ ಮತ್ತು ಅಂಬಾನಿ ಈಗ ಭಾರತದ 100 ಶ್ರೀಮಂತರ ಒಟ್ಟು ಸಂಪತ್ತಿನ 30 ಪ್ರತಿಶತವನ್ನು ಹೊಂದಿದ್ದಾರೆ.


ಮೊದಲ ಬಾರಿಗೆ ಸ್ಥಾನ ಪಡೆದ ದಮಾನಿ


ದೇಶದ ಚಿಲ್ಲರೆ ವ್ಯಾಪಾರದ ರಾಜ ರಾಧಾಕಿಶನ್ ದಮಾನಿ ಅವರು DMart ಸರಣಿಯ ಸೂಪರ್‌ಮಾರ್ಕೆಟ್‌ಗಳನ್ನು ಹೊಂದಿದ್ದಾರೆ. ಅವರ ನಿವ್ವಳ ಮೌಲ್ಯವು 6 ಪ್ರತಿಶತದಷ್ಟು ಕುಸಿದು 27.6 ಶತಕೋಟಿ ಡಾಲರ್‌ಗೆ ಇಳಿದಿದ್ದರೂ ಮೊದಲ ಬಾರಿಗೆ ಮೊರನೇ ಸ್ಥಾನ ಪಡೆದಿದ್ದಾರೆ. ಕೋವಿಡ್-19 ಲಸಿಕೆಗಳಿಂದ ಮತ್ತೊಂದು ವರ್ಷದ ಬಂಪರ್ ಲಾಭವು ಲಸಿಕೆ ತಯಾರಕ ದೈತ್ಯ ಸೈರಸ್ ಪೂನಾವಾಲಾ ಅವರನ್ನು 21.5 ಶತಕೋಟಿ ಡಾಲರ್ ಸಂಪತ್ತಿನೊಂದಿಗೆ ನಾಲ್ಕನೇ ಸ್ಥಾನಕ್ಕೆ ತಳ್ಳಿದೆ.


ಇದನ್ನೂ ಓದಿ: Akash Ambani: Time100 Next ನಲ್ಲಿ ಜೂನಿಯರ್ ಅಂಬಾನಿ, ಈ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ!


ಪಟ್ಟಿಯಲ್ಲಿ 9 ಹೊಸ ಮುಖಗಳಿಗೆ ಸ್ಥಾನ


ಮಾಜಿ ಬ್ಯಾಂಕರ್, ಸೌಂದರ್ಯ ಮತ್ತು ಫ್ಯಾಷನ್ ಮಾರುಕಟ್ಟೆಯ ಉದ್ಯಮಿ, ನೈಕಾ ಕಂಪನಿ ಒಡತಿ ಫಲ್ಗುಣಿ ನಾಯರ್, ಉಡುಪು ತಯಾರಕ ರವಿ ಮೋದಿ, ಶೂ ತಯಾರಕ ರಫೀಕ್ ಮಲಿಕ್ ಸೇರಿದಂತೆ 9 ಹೊಸ ಮುಖಗಳು ಪಟ್ಟಿಯಲ್ಲಿವೆ.

Published by:Annappa Achari
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು