ಪಿಜ್ಜಾ (Pizza) ಎಂದರೆ ಯಾರಿಗೆ ತಾನೇ ಇಷ್ಟವಿರಲಿಕ್ಕಿಲ್ಲ ಹೇಳಿ? ಪ್ರತಿಯೊಬ್ಬರೂ ಇಷ್ಟಪಡುವ ಪಿಜ್ಜಾ ವೀಕೆಂಡ್ (Weekend) ಅನ್ನು ಉತ್ತಮವಾಗಿ ಕಳೆಯಲು, ಪಾರ್ಟಿ (Party) ಗಳಲ್ಲಿ ಎಂಜಾಯ್ ಮಾಡಲು, ಕುಟುಂಬದವರೊಂದಿಗೆ ನಡೆಸುವ ಗೆಟ್ ಟುಗೆದರ್ (Get together) ನಲ್ಲಿ ಹೀಗೆ ಪ್ರತಿಯೊಂದು ಸಮಾರಂಭಗಳಲ್ಲಿಯೂ ಹಾಜರಿ ಹಾಕುವ ಖಾದ್ಯವಾಗಿದೆ. ಪಿಜ್ಜಾ ಎಂದರೆ ನೆನಪಾಗುವುದೇ ಪಿಜ್ಜಾ ಒದಗಿಸುವ ಪಿಜ್ಜಾ ಹಟ್ (Pizza Hut) (1958 ರಲ್ಲಿ ಸ್ಥಾಪನೆ) ಡಾಮಿನೊಸ್ (1960 ರಲ್ಲಿ ಸ್ಥಾಪನೆ). ಈ ಎರಡೂ ಸಂಸ್ಥೆಗಳು ಯುಎಸ್ನಲ್ಲಿ ಮಾತ್ರವೇ ತಮ್ಮ ಪಿಜ್ಜಾ ಬಿಸ್ನೆಸ್ನಿಂದ $46 ಬಿಲಿಯನ್ ಆದಾಯವನ್ನು ಹೊಂದಿವೆ. ಹಾಗಿದ್ದರೆ ಸಂಪೂರ್ಣ ವಿಶ್ವದಲ್ಲಿ ತನ್ನ ಶಾಖೆಗಳನ್ನು ಹೊಂದಿರುವ ಈ ಎರಡೂ ಸಂಸ್ಥೆಗಳ ನಿವ್ವಳ ಆದಾಯ ಎಷ್ಟಿರಬಹುದು ನೀವೇ ಊಹಿಸಿ ನೋಡಿ
ಪಿಜ್ಜಾ ಡೆಲಿವರಿ ಮಾಡುವ ಖ್ಯಾತ ಬ್ರ್ಯಾಂಡ್ಗಳು
ಆರೋಗ್ಯದ ದೃಷ್ಟಿಯಿಂದ ಪಿಜ್ಜಾ ಒಳ್ಳೆಯದಲ್ಲ ಎಂಬ ಅಂಶಕ್ಕೆ ವಿರುದ್ಧವಾಗಿ ಇದೀಗ ಪಿಜ್ಜಾ ಬ್ರ್ಯಾಂಡ್ಗಳು ಗೋದಿ ಹಾಗೂ ಅಕ್ಕಿಹಿಟ್ಟಿನ ಬೇಸ್ಗಳಿಂದ ಕೂಡ ಪಿಜ್ಜಾಗಳನ್ನು ತಯಾರಿಸುತ್ತಿವೆ. ಅದೇ ರೀತಿ ಪಿಜ್ಜಾದ ಮೇಲೆ ಹಾಕುವ ಟಾಪಿಂಗ್ಸ್ಗಳ ಆಯ್ಕೆಯನ್ನು ಗ್ರಾಹಕರು ತಮಗೆ ಇಷ್ಟಬಂದಂತೆ ಮಾಡಬಹುದಾಗಿದೆ.
ಒಟ್ಟಿನಲ್ಲಿ ಪಿಜ್ಜಾ ಮಾರುಕಟ್ಟೆಯಲ್ಲಿ ಎರಡೂ ಬ್ರ್ಯಾಂಡ್ಗಳು ಭರ್ಜರಿ ಪೈಪೋಟಿಗೆ ಇಳಿದಿದ್ದು ರುಚಿಯ ವಿಷಯದಲ್ಲಿ ಡಾಮಿನೋಸ್ ತನ್ನ ಎಂದಿನ ನಿರಂತರತೆಯನ್ನು ಕಾಯ್ದಿರಿಸಿಕೊಳ್ಳುತ್ತದೆ ಎಂಬುದು ಪಿಜ್ಜಾ ಪ್ರಿಯರ ಮಾತಾಗಿದೆ.
ಪ್ರಬಲ ಪೈಪೋಟಿಯನ್ನೊಡ್ಡುವ ಬ್ರ್ಯಾಂಡ್ಗಳು
ಹೀಗೆ ಲಾಭಕರವಾಗಿ ಬೆಳೆಯುತ್ತಿರುವ ಪಿಜ್ಜಾ ಉದ್ಯಮ ಹಿಂದಡಿ ಇಡುವ ಪ್ರಶ್ನೆಯೇ ಇಲ್ಲ ಎಂಬಂತೆ ನಾಗಾಲೋಟದಲ್ಲಿ ಮುಂದಡಿ ಇಡುತ್ತಿದೆ. ಡಾಮಿನೋಸ್ ಹಾಗೂ ಪಿಜ್ಜಾ ಹಟ್ ಪ್ರಸ್ತುತ ಪಿಜ್ಜಾ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿಯ ಬ್ರ್ಯಾಂಡ್ಗಳು ಎಂಬ ಹೆಸರಿನಿಂದ ಹೆಸರುವಾಸಿಯಾಗಿದ್ದು, ವಿಶ್ವದಾದ್ಯಂತ ಅಸಂಖ್ಯ ಮಳಿಗೆಗಳನ್ನು ಹೊಂದಿವೆ. ಹಾಗೂ ಒಂದಕ್ಕಿಂತ ಒಂದು ದುಬಾರಿ ಪಿಜ್ಜಾಗಳನ್ನೇ ಮಾರಾಟ ಮಾಡುತ್ತಿವೆ.
ಬೇರೆ ಬೇರೆ ದೇಶಗಳಲ್ಲಿ ವಿಭಿನ್ನ ಬೆಲೆ
ಇನ್ನು ಪಿಜ್ಜಾದ ಬೆಲೆ ನಮ್ಮ ದೇಶದಲ್ಲಿ ಇದ್ದ ಹಾಗೆ ಬೇರೆ ದೇಶಗಳಲ್ಲಿ ಇರುವುದಿಲ್ಲ ಹಾಗೂ ಪಿಜ್ಜಾ ಹಟ್ ಮತ್ತು ಡಾಮಿನೊಸ್ ಕೂಡ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಬೆಲೆಗಳಲ್ಲಿ ಪಿಜ್ಜಾಗಳನ್ನು ವಿತರಿಸುತ್ತದೆ. ಹಾಗಿದ್ದರೆ ಪಿಜ್ಜಾದ ಬೆಲೆ ಇತರ ದೇಶಗಳಲ್ಲಿ ಎಷ್ಟಿದೆ? ನಮ್ಮ ದೇಶಕ್ಕಿಂತ ಹೆಚ್ಚಿದೆಯೇ? ಎರಡೂ ಸಂಸ್ಥೆಗಳ ಬೆಲೆಗಳು ಹೇಗಿವೆ? ಮೊದಲಾದ ವಿವರಗಳನ್ನು ತಿಳಿದುಕೊಳ್ಳೋಣ
ಸಮೀಕ್ಷೆ ಏನು ಹೇಳುತ್ತಿದೆ?
ನೆಟ್ಕ್ರೆಡಿಟ್ ವೆಬ್ಸೈಟ್ ಈ ಹಿನ್ನಲೆಯಲ್ಲಿ ಸಮೀಕ್ಷೆಯನ್ನು ನಡೆಸಿದ್ದು, ಪ್ರತಿ ದೇಶಗಳಲ್ಲಿ ಪಿಜ್ಜಾ ಬೆಲೆ ಹೇಗಿದೆ ಎಂಬ ಮಾಹಿತಿಯನ್ನು ಸಂಗ್ರಹಿಸಿದೆ. ದೊಡ್ಡ ಚೀಸ್ ಪಿಜ್ಜಾ (ಮಾರ್ಗರೀಟಾ) ದ ಬೆಲೆ ಎಷ್ಟಿದೆ ಎಂಬುದನ್ನು ಅಮೆರಿಕಾ ಹಾಗೂ ಇತರ ದೇಶಗಳ ರಾಜಧಾನಿಯಲ್ಲಿರುವ ಡಾಮಿನೊಸ್ ಹಾಗೂ ಪಿಜ್ಜಾ ಹಟ್ ಬ್ರ್ಯಾಂಚ್ಗಳಿಂದ ಮಾಹಿತಿ ಸಂಗ್ರಹಿಸಿತು.
ಯಾವ ದೇಶದಲ್ಲಿ ಪಿಜ್ಜಾದ ಬೆಲೆ ಹೇಗಿದೆ? ಪ್ರಮುಖ ಮಾಹಿತಿಗಳು ಹೀಗಿವೆ
ಫಿನ್ಲ್ಯಾಂಡ್ ವಿಶ್ವದ ಹೆಚ್ಚು ದುಬಾರಿ ಪಿಜ್ಜಾ ಹಟ್ ಶಾಖೆಯನ್ನು ಹೊಂದಿದ್ದು ಇಲ್ಲಿ ಚೀಸ್ ಪಿಜ್ಜಾದ ಬೆಲೆ $31.65 ಆಗಿದೆ. ಸಿಂಗಾಪುರದಲ್ಲಿ ಡಾಮಿನೊಸ್ ಹೆಚ್ಚು ದುಬಾರಿಯಾಗಿದೆ ($23.57). ಈ ಬ್ರ್ಯಾಂಡ್ಗಳ ಯಾವುದೇ ರೀತಿಯ ಅತ್ಯಂತ ದುಬಾರಿ ಪಿಜ್ಜಾ ಫಿನ್ಲ್ಯಾಂಡ್ನ ಪಿಜ್ಜಾ ಹಟ್ನಲ್ಲಿರುವ ಸೂಪರ್ ಸುಪ್ರೀಂ ($36.60). ಹವಾಯಿಯು U.S. ನಲ್ಲಿ ಅತ್ಯಂತ ದುಬಾರಿ ಪಿಜ್ಜಾವನ್ನು ಹೊಂದಿದ್ದು, ಪಿಜ್ಜಾ ಹಟ್ ಅಥವಾ ಡಾಮಿನೊಸ್ನಲ್ಲಿ ಮಾರ್ಗರಿಟಾ ಪಿಜ್ಜಾದ ಬೆಲೆ $18.99 ಆಗಿದೆ.
ಫಿನ್ಲ್ಯಾಂಡ್, ಸಿಂಗಾಪುರ್ ಪಿಜಾ ಹಟ್ ಬ್ರ್ಯಾಂಚ್ ಅತ್ಯುತ್ತಮವಾಗಿಲ್ಲ ಏಕೆ?
2018 ರಲ್ಲಿ ಪಿಜ್ಜಾ ಹಟ್ ಅನ್ನು ಹಿಂದಿಕ್ಕಿ ಡಾಮಿನಾಸ್ ವಿಶ್ವದ ಲಾಭದಾಯಕ ಬ್ರ್ಯಾಂಡ್ ಆಗಿ ಹೆಸರುವಾಸಿಯಾಗಿದೆ. ಡೊಮಿನೊಸ್ನ ಪೆಪ್ಪೆರೋನಿ ಪ್ಲೇವರ್ ಸಂಸ್ಥೆಗೆ $17.8 ಶತಕೋಟಿ ಆದಾಯವನ್ನು ಒದಗಿಸಿದೆ. ಒಟ್ಟಿನಲ್ಲಿ ಪಿಜ್ಜಾ ಹಟ್ ಜಾಗತಿಕವಾಗಿ ವರ್ಷಕ್ಕೆ $13 ಶತಕೋಟಿಯಷ್ಟು ಹಿಂದಿದೆ.
ಯುಕೆಯಲ್ಲಿ ಡಾಮಿನೊಸ್ ಹೆಚ್ಚು ದುಬಾರಿಯಾಗಿದ್ದು ($22.34) ಸಾಮಾನ್ಯ ಚೀಸ್ ಪಿಜ್ಜಾವನ್ನು ($19.99) ಬೆಲೆಯಲ್ಲಿ ಖರೀದಿಸಬಹುದು. ವಿಶ್ವದ ಎರಡನೇ ಅತಿದೊಡ್ಡ ದುಬಾರಿ ಡಾಮಿನೋಸ್ ಬ್ರ್ಯಾಂಚ್ ಆಗಿದ್ದು ಪಿಜ್ಜಾ ಸಾಮಾಗ್ರಿಗಳ ಮೇಲೆ 900% ಗುರುತನ್ನು ಒಳಗೊಂಡಿರುತ್ತದೆ. ಫಿನ್ಲ್ಯಾಂಡ್ನ ಪಿಜ್ಜಾ ಹಟ್ ವಿಶ್ವದ ಅತ್ಯಂತ ದುಬಾರಿ ಚೀಸ್ ಪಿಜ್ಜಾವನ್ನು ಹೊಂದಿದೆ.
ಹೆಚ್ಚು ದುಬಾರಿ ಪಿಜ್ಜಾ ಒದಗಿಸುವ ರಾಜ್ಯಗಳು
ಹವಾಯಿ, ಅಲಾಸ್ಕಾ, ಇಲ್ಲಿನಾಯ್ಸ್, ವರ್ಮೊಂಟ್, ಮಿನ್ನೊಸೊಟ
ಅಗ್ಗದ ಪಿಜ್ಜಾ ವಿತರಿಸುವ ರಾಜ್ಯಗಳು
ನೆಬ್ರಾಸ್ಕಾ, ಓಕ್ಲಾಮಾ, ಮೊಂಟಾನಾ, ವೆಸ್ಟ್ ವರ್ಜೀನಿಯಾ, ಟೆನ್ನೀಸ್
ಅಮೆರಿಕಾದ ಅತ್ಯುತ್ತಮ ಪಿಜ್ಜಾಗೆ ಹವಾಯಿ ತಾಣವಾಗಿದೆ
6,000 ಕ್ಕೂ ಹೆಚ್ಚು ಪಿಜ್ಜಾ ಹಟ್ಗಳು ಮತ್ತು 6,500 ಡೊಮಿನೊಗಳನ್ನು ಒಳಗೊಂಡಂತೆ U.S. ನಲ್ಲಿ 75,000 ಕ್ಕೂ ಹೆಚ್ಚು ಪಿಜ್ಜಾ ರೆಸ್ಟೋರೆಂಟ್ಗಳಿವೆ. ಆದರೆ ಕೆಲವು ಸ್ಥಳಗಳಲ್ಲಿ ಬೆಲೆ ಇತರೆಡೆಗಳಿಗಿಂತ 50% ಹೆಚ್ಚಾಗಿದೆ. ಹವಾಯಿಯನ್ ಪಿಜ್ಜಾ ಫ್ಲೇವರ್ ಅನನಾಸು ಹಾಗೂ ಹ್ಯಾಮ್ ಕಾಂಬೊ (ಹಂದಿಯ ಕಾಲ ಮೇಲಿರುವ ಮಾಂಸ) ಅತ್ಯಂತ ಅಸಹ್ಯಕರ ಕಾಂಬೊ ಎಂದು ಹೆಸರುವಾಸಿಯಾಗಿದೆ.
ಈ ಕಾಂಬೊ ಹಣ್ಣು ಹಾಗೂ ಮಾಂಸದ ಫ್ಲೇವರ್ ಅನ್ನು ಒಳಗೊಂಡಿರುವುದರಿಂದ ರುಚಿಯಲ್ಲಿ ಕೂಡ ವಿಲಕ್ಷಣತೆಯನ್ನು ಪ್ರದರ್ಶಿಸಿದೆ.
ದುಬಾರಿ ಚೀಸ್ ಪಿಜ್ಜಾ ಮಾರ್ಗರೀಟಾ
ಪಿಜ್ಜಾ ಹಟ್ ಹಾಗೂ ಡಾಮಿನೊಸ್ನಲ್ಲಿ ಮಾರ್ಗರೀಟಾದ ಬೆಲೆ $ 18.99 ಆಗಿದ್ದು ಸಂಪೂರ್ಣ ಯುಎಸ್ನಲ್ಲಿಯೇ ದುಬಾರಿ ಚೀಸ್ ಪಿಜ್ಜಾ ಆಗಿದೆ. ಪಿಜ್ಜಾದ ಸಾಮಾಗ್ರಿಗಳು ದ್ವೀಪಗಳಲ್ಲಿ ತುಂಬಾ ದುಬಾರಿಯಾಗಿದೆ ಹಾಗಾಗಿ ಪಿಜ್ಜಾ ಕೂಡ ದುಬಾರಿಯಾಗಿದೆ.
ದುಬಾರಿ ಪಿಜ್ಜಾಗೆ ಹೆಸರುವಾಸಿಯಾಗಿರುವ ಅಲಾಸ್ಕಾ
ಅಲಾಸ್ಕಾ ಎರಡೂ ಬ್ರ್ಯಾಂಡ್ಗಳ ದುಬಾರಿ ಪಿಜ್ಜಾಗೆ ಹೆಸರುವಾಸಿಯಾಗಿದೆ. ಪಿಜ್ಜಾ ಹಟ್ನಲ್ಲಿ ಚೀಸ್ ಪಿಜ್ಜಾ ($17.69) ಆಗಿದ್ದು ಡಾಮಿನೊಸ್ನಲ್ಲಿ ($15.99) ಆಗಿದೆ. ಅಮೆರಿಕಾದಲ್ಲಿ ನಾಲ್ಕು ಚೀಸ್ ಪಿಜ್ಜಾಗಳ ಬೆಲೆ $17 ಕ್ಕಿಂತ ಹೆಚ್ಚು ವೆಚ್ಚವಾಗುತ್ತದೆ. ಅವುಗಳಲ್ಲೊಂದು ಇಲಿನಾಯ್ಸ್ನ ಪಿಜ್ಜಾ ಹಟ್ನಲ್ಲಿದೆ. ಪಿಜ್ಜಾ ಹಟ್ ಕಡಿಮೆ ಬೆಲೆಯಲ್ಲಿ ಮಾರ್ಗರೀಟಾ ಪಿಜ್ಜಾವನ್ನು 10 ರಾಜ್ಯಗಳಲ್ಲಿ ವಿತರಿಸುತ್ತಿದೆ. ಕೆಂಟುಕಿ, ಇಡಾಹೊ ಮತ್ತು ನೆಬ್ರಸ್ಕಾ ಅತ್ಯಂತ ಕಡಿಮೆ ಬೆಲೆಯಲ್ಲಿ ಪಿಜ್ಜಾವನ್ನು ವಿತರಿಸುತ್ತದೆ.
ಫಿನ್ಲ್ಯಾಂಡ್ನ ಪಿಜ್ಜಾ ಹಟ್ ವಿಶ್ವದ ದುಬಾರಿ ಪಿಜ್ಜಾವನ್ನು ವಿತರಿಸುತ್ತದೆ
ಪಿಜ್ಜಾ ಹಟ್ ಹೆಚ್ಚಿನ ಪ್ರತಿಸ್ಪರ್ಧಿಗಳನ್ನು ಹೊಂದಿದ್ದರೂ ಡಾಮಿನೊಸ್ ತನ್ನ ಪಿಜ್ಜಾದಲ್ಲಿ ರುಚಿಯನ್ನು ಒಂದೇ ಹಾಗೆ ನಿರ್ವಹಿಸುವಲ್ಲಿ ಸಮರ್ಥ ಎಂದೆನಿಸಿದೆ. ಜಪಾನ್ನ ಹೆಚ್ಚು ದುಬಾರಿ ಪಿಜ್ಜಾವಾದ ಗೋಮಾಂಸ ಹಾಗೂ ಹಂದಿ ಫ್ಲೇವರ್ನ ಪಿಜ್ಜಾ ಸಾಂಪ್ರದಾಯಿಕ ಪಿಜ್ಜಾ ಎಂದೆನಿಸಿದೆ.
ಜಪಾನ್ನ ಸಾಂಪ್ರದಾಯಿಕ ಗೋಮಾಂಸ, ಬೀಫ್ ಪಿಜ್ಜಾ
ಜಪಾನ್ನ ಕಾಜು ಗೋಮಾಂಸ ಹಾಗೂ ಹಂದಿಮಾಂಸದ ಉತ್ಕ್ರಷ್ಟ ರುಚಿಯನ್ನು ಉಣಬಡಿಸುತ್ತದೆ. ಇದು ಸಾಂಪ್ರದಾಯಿಕ ಎರಡು ಫ್ಲೇವರ್ ಅನ್ನು ಒಳಗೊಂಡಿದ್ದು, ಬೀಫ್ ಹಾಗೂ ಪೋರ್ಕ್ ಅನ್ನು ಬಾರ್ಬೆಕ್ಯು ಮಾಡುವ ಮೂಲಕ ಪಿಜ್ಜಾದಲ್ಲಿ ಇರಿಸಲಾಗುತ್ತದೆ. ಜಪಾನ್ನ ಪಿಜ್ಜಾ ಹಟ್ನ ಪ್ರಸ್ತುತ ಪ್ರಾಯೋಜಕರಾಗಿರುವ ಹಾಸ್ಯಗಾರ ಕಾಜ್ಲೇಸರ್ ಹೆಸರನ್ನೇ ಈ ಪಿಜ್ಜಾಗೆ ಇರಿಸಲಾಗಿದೆ.
ಬೇರೆ ಬೇರೆ ಫ್ಲೇವರ್ಗಳಲ್ಲಿ ಪಿಜ್ಜಾ ಲಭ್ಯ
ಜಪಾನ್ನ ಪಿಜ್ಜಾ ಹಟ್ ಬೇರೆ ಬೇರೆ ಫ್ಲೇವರ್ಗಳಲ್ಲಿ ಪಿಜ್ಜಾ ವಿತರಿಸುತ್ತದೆ. ಸೀಗಡಿ, ಸ್ಕ್ವಿಡ್, ಕಾರ್ನ್, ಪಾರ್ಸ್ಲಿ ಮತ್ತು ಮಸಾಲೆಯುಕ್ತ ಕಾಡ್ ರೋ ಸಾಸ್ ಮೇಯೊ ಬೇಸ್ನಲ್ಲಿ ಪಿಜ್ಜಾದ ಸವಿಯನ್ನು ಸವಿಯಬಹುದು.
ವಿಶ್ವದ ವಿಲಕ್ಷಣವಾದ ಪಿಜ್ಜಾ ಹಟ್ ಮತ್ತು ಡೊಮಿನೋಸ್ ಟಾಪಿಂಗ್ಸ್
ವೆನಿಲ್ಲಾ ಪಿಜ್ಜಾ ಹೇಗಿರಬಹುದು ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಸೀಫುಡ್ ಅನ್ನು ಪಿಜ್ಜಾದ ಮೇಲೆ ಟಾಪಿಂಗ್ ಆಗಿ ಆಯ್ಜೆಮಾಡುವುದು ಇನ್ನೊಂದು ವಿಲಕ್ಷಣ ಆಯ್ಕೆಯಾಗಿದೆ. ಗೋಮಾಂಸದ ಪಟ್ಟಿಗಳೊಂದಿಗೆ ಹಾಟ್-ಪಾಟ್ ಶೈಲಿಯಲ್ಲಿ ತೈವಾನೀಸ್ ಡಾಮಿನೊಸ್ ಪಿಜ್ಜಾವನ್ನು ತಯಾರಿಸುತ್ತದೆ.
ಮೆಕ್ಸಿಕನ್ ಇಟಾಲಿಯನ್ ಖಾದ್ಯಕ್ಕೆ ಸಮನಾಗಿ ದನದ ಮಾಂಸ, ಜಲಪೆನೋಸ್, ಸುಟ್ಟ ಮೆಣಸು, ನ್ಯಾಚೋಸ್ ಮತ್ತು ಟ್ಯಾಕೋ ಮಸಾಲೆಗಳೊಂದಿಗೆ ನಾರ್ವೆ ಪಿಜ್ಜಾ ತಯಾರಿಸಿ ಡೆಲಿವರಿ ಮಾಡುತ್ತದೆ.
ಅಗ್ಗದ ಪಿಜ್ಜಾದ ವಿಶೇಷತೆ ಏನು?
ಹೆಚ್ಚುತ್ತಿರುವ ವೆಚ್ಚದೊಂದಿಗೆ ಪಿಜ್ಜಾ ಇನ್ನು ಕಡಿಮೆ ಬೆಲೆಯಲ್ಲಿ ದೊರೆಯುವುದು ಕನಸಿನ ಮಾತಾಗಿದೆ. ಇದೀಗ ಪಿಜ್ಜಾಗಳಲ್ಲಿ ವೈವಿಧ್ಯತೆಗಳನ್ನು ಕಾಣಬಹುದಾಗಿದೆ. ಪಿಜ್ಜಾದ ಟಾಪಿಂಗ್ಗಳಲ್ಲಿಯೂ ಈಗ ಬೇರೆ ಬೇರೆ ಫ್ಲೇವರ್ಗಳನ್ನು ಬಳಸುತ್ತಿದ್ದು ಪಿಜ್ಜಾವನ್ನು ಇನ್ನಷ್ಟು ರುಚಿಕರವನ್ನಾಗಿಸುವ ಪ್ರಯತ್ನದಲ್ಲಿ ಎರಡೂ ಬ್ರ್ಯಾಂಡ್ಗಳು ಪೈಪೋಟಿಯಲ್ಲಿವೆ.
ಅರುಬಾ, ಆಸ್ಟ್ರೇಲಿಯಾ, ಆಸ್ಟ್ರಿಯಾ, ಅಜರ್ಬಜೀನ್, ಬಹಾಮಾಸ್, ಬೆಲಾರಸ್, ಬೆಲ್ಜಿಯಮ್, ಬ್ರೆಜಿಲ್, ಬಲ್ಗೇರಿಯಾ, ಕಾಂಬೊಡಿಯಾ ಹೀಗೆ ಅಗ್ಗದ ಪಿಜ್ಜಾವನ್ನು ವಿತರಿಸುವ ದೇಶಗಳಾಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ