• Home
  • »
  • News
  • »
  • business
  • »
  • Mark Zuckerberg: ಮೆಟಾವರ್ಸ್ ವಿಫಲತೆಯಿಂದ ಕುಸಿದ ಬಳಕೆದಾರರ ಸಂಖ್ಯೆ! ಜುಕರ್‌ಬರ್ಗ್ ಮುಂದಿನ ನಡೆ ಏನು?

Mark Zuckerberg: ಮೆಟಾವರ್ಸ್ ವಿಫಲತೆಯಿಂದ ಕುಸಿದ ಬಳಕೆದಾರರ ಸಂಖ್ಯೆ! ಜುಕರ್‌ಬರ್ಗ್ ಮುಂದಿನ ನಡೆ ಏನು?

ಮಾರ್ಕ್ ಜುಕರ್‌ಬರ್ಗ್

ಮಾರ್ಕ್ ಜುಕರ್‌ಬರ್ಗ್

ಮಾರ್ಕ್ ಜುಕರ್‌ಬರ್ಗ್ ಒಡೆತನದ ಮೆಟಾ 500,000 ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದುವ ಮಹತ್ವಾಕಾಂಕ್ಷೆಯ ಗುರಿಯನ್ನು ಇಟ್ಟುಕೊಂಡಿತ್ತು. ಆದರೆ ಪ್ರಸ್ತುತ ಬಳಕೆದಾರರ ಸಂಖ್ಯೆ 200,000 ದಲ್ಲಿ ನಿಂತಿದ್ದು ಇದರಿಂದ ಸಂಸ್ಥೆಯು ಆಂತರಿಕ ಕಾರ್ಯಕ್ಷಮತೆಯ ನಿರೀಕ್ಷೆಗಳನ್ನು ಪೂರೈಸಲು ವಿಫಲವಾಗಿದೆ. 

ಮುಂದೆ ಓದಿ ...
  • Share this:

ವಾಲ್‌ಸ್ಟ್ರೀಟ್ ಜರ್ನಲ್ ನೀಡಿರುವ ವರದಿಯ ಅನ್ವಯ ಮೆಟಾ (Meta) ಎಂದು ಮರುನಾಮಕರಣಗೊಂಡಿರುವ ಫೇಸ್‌ಬುಕ್ (Facebook) ಮರುಬ್ರ್ಯಾಂಡಿಂಗ್‌ಗೊಳಗಾದ ಒಂದು ವರ್ಷದ ನಂತರ ಬಳಕೆದಾರರ ಸಂಖ್ಯೆಯಲ್ಲಿ ತೀವ್ರ ಇಳಿಮುಖ ಕಂಡುಕೊಂಡಿದೆ. ವರದಿಯ ಪ್ರಕಾರ, ಕಳೆದ ವರ್ಷ ಬಿಡುಗಡೆಯಾದ ನಂತರ, ಮಾರ್ಕ್ ಜುಕರ್‌ಬರ್ಗ್ ಒಡೆತನದ ಮೆಟಾ 500,000 ಮಾಸಿಕ ಸಕ್ರಿಯ ಬಳಕೆದಾರರನ್ನು (Users) ಹೊಂದುವ ಮಹತ್ವಾಕಾಂಕ್ಷೆಯ ಗುರಿಯನ್ನು ಇಟ್ಟುಕೊಂಡಿತ್ತು. ಆದರೆ ಪ್ರಸ್ತುತ ಬಳಕೆದಾರರ ಸಂಖ್ಯೆ 200,000 ದಲ್ಲಿ ನಿಂತಿದ್ದು ಇದರಿಂದ ಸಂಸ್ಥೆಯು ಆಂತರಿಕ ಕಾರ್ಯಕ್ಷಮತೆಯ ನಿರೀಕ್ಷೆಗಳನ್ನು ಪೂರೈಸಲು ವಿಫಲವಾಗಿದೆ. ಬಳಕೆದಾರರಿಗೆ ಸಮಗ್ರವಾದ ಮೆಟಾವರ್ಸ್ ಅನುಭವವನ್ನು ಒದಗಿಸಲು ಪ್ರಯತ್ನಿಸಿದ ಮೆಟಾದ ಪ್ರಮುಖ ಉತ್ಪನ್ನ ಹರೈಸನ್ ವರ್ಲ್ಡ್ಸ್‌, ಸಫಲತೆ ಕಂಡುಕೊಳ್ಳುವಲ್ಲಿ ವಿಫಲಗೊಂಡಿದೆ.


ಇಳಿಮುಖಗೊಂಡ ಸಕ್ರಿಯ ಬಳಕೆದಾರರು
ಇದರ ಪರಿಣಾಮವಾಗಿ, ಮೆಟಾದಲ್ಲಿನ ವಿಶ್ಲೇಷಕರು ಈಗಾಗಲೇ ವರ್ಷದ ಅಂತ್ಯದ ವೇಳೆಗೆ ಯೋಜನೆಯನ್ನು 280,000 ಕ್ಕೆ ಇಳಿಕೆ ಮಾಡಿದ್ದಾರೆ. ಬಳಕೆದಾರರ ಸಂಖ್ಯೆಗಳು ಕಡಿಮೆಯಾಗಿರುವುದು ಆತಂಕಕಾರಿ ಸನ್ನಿವೇಶವಾಗಿದ್ದರೂ, ಹರೈಸನ್ ವರ್ಲ್ಡ್ಸ್‌ಗೆ ಲಾಗ್ ಇನ್ ಆಗಿರುವವರು ಮೊದಲ ತಿಂಗಳ ನಂತರ ಪ್ಲಾಟ್‌ಫಾರ್ಮ್‌ಗೆ ಹಿಂತಿರುಗಲಿಲ್ಲ ಎಂಬುದು ಹೆಚ್ಚು ದುಃಖಕರವಾಗಿದೆ.


ಆನ್‌ಲೈನ್ ವಿಡಿಯೋ ಗೇಮ್
ಉಚಿತ ವರ್ಚುವಲ್ ರಿಯಾಲಿಟಿ ಆನ್‌ಲೈನ್ ವೀಡಿಯೋ ಗೇಮ್‌ನ ಕೇವಲ ಒಂಬತ್ತು ಶೇಕಡದಷ್ಟನ್ನು ಮಾತ್ರ ಕನಿಷ್ಠ 50 ಜನರು ಬಳಸಿಕೊಂಡಿದ್ದು ಇನ್ನುಳಿದ ಬಹುಪಾಲು ಅನ್ವೇಷಿಸದೆಯೇ ಹಾಗೆಯೇ ಉಳಿದಿದೆ ಎಂದು ವರದಿ ತಿಳಿಸಿದೆ.


ಇದನ್ನೂ ಓದಿ: Retirement: ಮೈಕ್ರೋಸಾಫ್ಟ್‌ ಉದ್ಯೋಗ ಬಿಟ್ಟು ಸ್ವಂತ ಉದ್ಯಮ: 3 ಮಿಲಿಯನ್‌ ಸಂಪಾದಿಸಿ ನಿವೃತ್ತಿ ಪಡೆದ ಯುವಕ!


ಗಮನಾರ್ಹವಾಗಿ, ಹರೈಸನ್ ವರ್ಲ್ಡ್ಸ್ ಪ್ಲಾಟ್‌ಫಾರ್ಮ್‌ಗಾಗಿ ಜುಕರ್‌ಬರ್ಗ್‌ನ USP (ಉತ್ಪನ್ನ, ಸೇವೆ ಇತ್ಯಾದಿಗಳ ವೈಶಿಷ್ಟ್ಯ ಅಥವಾ ಗುಣಲಕ್ಷಣ) ಆಗಿತ್ತು. ಆಟದಲ್ಲಿ, ವ್ಯಕ್ತಿಗಳು ಅವತಾರ್ ಅನ್ನು ಆರಿಸಿಕೊಳ್ಳಬಹುದು ಮತ್ತು ಪರಸ್ಪರ ಸಂವಹನ ನಡೆಸಲು ವರ್ಚುವಲ್ ಜಾಗಕ್ಕೆ ಉಪಸ್ಥಿತರಾಗಬಹುದು.


ಸುಧಾರಿತ ಮೊಬೈಲ್ ಸ್ನಾಪ್‌ಡ್ರಾಗನ್ ಕಂಪ್ಯೂಟರ್ ಚಿಪ್
ಜುಕರ್‌ಬರ್ಗ್ ತಮ್ಮ ಪ್ರಯತ್ನವನ್ನು ದುಪ್ಪಟ್ಟುಗೊಳಿಸುವ ನಿಟ್ಟಿನಲ್ಲಿ ಈ ವಾರದ ಆರಂಭದಲ್ಲಿ ಸುಧಾರಿತ ಮೊಬೈಲ್ ಸ್ನಾಪ್‌ಡ್ರಾಗನ್ ಕಂಪ್ಯೂಟರ್ ಚಿಪ್ ಅನ್ನು ಒಳಗೊಂಡಿರುವ $1,500 ಕ್ವೆಸ್ಟ್ ಪ್ರೊ VR ಅನ್ನು ಪ್ರಾರಂಭಿಸಿದರು. ಮೆಟಾ ಅಭಿವೃದ್ಧಿಪಡಿಸಿದ ಉತ್ಪನ್ನದ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುವ ಪ್ರಯತ್ನ ಇದಾಗಿದೆ.


ಕಳೆದ ವರ್ಷದಿಂದ, ಮೆಟಾದ ಷೇರುಗಳು 60 % ಕ್ಕಿಂತ ಹೆಚ್ಚು ಇಳಿಕೆಯಾಗಿದೆ. ಈ ಪ್ರಕ್ರಿಯೆಯಲ್ಲಿ $700 ಬಿಲಿಯನ್ ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿದೆ. ಇತರ ಟೆಕ್ ಸಂಸ್ಥೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸಮಸ್ಯೆಗಳು ಉಲ್ಬಣಗೊಂಡಿವೆ. WION ವರದಿ ಮಾಡಿದಂತೆ, ಕಳೆದ ವಾರ ಮೆಟಾ ಸುಮಾರು ಒಂದು ಮಿಲಿಯನ್ ಬಳಕೆದಾರರ ಲಾಗಿನ್ ಮಾಹಿತಿಯು ದೋಷಪೂರಿತವಾಗಿದೆ ಎಂದು ಎಚ್ಚರಿಕೆ ನೀಡಿದೆ.


ದುರುದ್ದೇಶ ಆ್ಯಪ್‌ಗಳಿಂದ ಸೋರಿಕೆ
ಅಧಿಕೃತ ಹೇಳಿಕೆಯ ಪ್ರಕಾರ ದುರುದ್ದೇಶಪೂರಿತ ಆ್ಯಪ್‌ಗಳಿಂದ ಸೋರಿಕೆ ಸಂಭವಿಸಿದೆ ಎಂದು ವರದಿಯಾಗಿದೆ. ಆ್ಯಪ್‌ಗಳನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಸ್ಟೋರ್‌ನಲ್ಲಿ ಗೇಮ್‌ ಆ್ಯಪ್‌ಗಳು ಮತ್ತು ಇತರ ರೀತಿಯ ಆ್ಯಪ್‌ಗಳು ಎಂದು ಪಟ್ಟಿಮಾಡಲಾಗಿದೆ ಮತ್ತು ಅವುಗಳನ್ನು ಡೌನ್‌ಲೋಡ್ ಮಾಡುವಂತೆ ಜನರನ್ನು ಮೋಸಗೊಳಿಸುವ ಉದ್ದೇಶದಿಂದ ಫೇಸ್‌ಬುಕ್ ಸ್ವಾಗತ ಪುಟದ ಮೂಲಕ ಫೋನ್ ಅನ್ನು ಪ್ರವೇಶಿಸಲಾಗಿದೆ ಎಂಬುದು ವರದಿಯಾಗಿದೆ.


ಮೆಟಾವರ್ಸ್ ಆರ್ಥಿಕತೆ, ಪ್ರವಾಸೋದ್ಯಮ ಮತ್ತು ಇನ್ನೂ ಹೆಚ್ಚಿನದನ್ನು ಸಂಪೂರ್ಣವಾಗಿ ಮರುರೂಪಿಸುವ ಸಾಮರ್ಥ್ಯವನ್ನು ಹೊಂದಿದ್ದು, ಕಂಪನಿಗಳು ಮತ್ತು ರಚನೆಕಾರರು ಹೆಚ್ಚು ಮಹತ್ವಾಕಾಂಕ್ಷಿಗಳಾಗಿರಬೇಕು ಅದಕ್ಕಾಗಿ ಗೇಮಿಂಗ್, ಕೇಂದ್ರೀಕರಣ ಮತ್ತು ಅನಗತ್ಯ ತೊಡಕುಗಳನ್ನು ಮೀರಿ ಮೆಟಾವರ್ಸ್‌ನ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಜುಕರ್‌ಬರ್ಗ್ ಕರೆನೀಡಿದ್ದಾರೆ.


ಇದನ್ನೂ ಓದಿ:  GST On Paratha: ರೆಡಿ-ಟು-ಈಟ್ ಪರೋಟಗಳ ಮೇಲೂ ಜಿಎಸ್‌ಟಿ!


ಮೆಟಾವರ್ಸ್ ಅನ್ನು ಹಳೆಯ ಪ್ಲೇಸ್ಟೇಶನ್ ಆಟ ಎಂಬುದಾಗಿ ಕಾಣದೇ ಹೊಸ ಪ್ರಪಂಚ ಎಂಬುದಾಗಿ ಮನಗಾಣಬೇಕು ಎಂದು ತಿಳಿಸಿದ್ದಾರೆ. ಹೂಡಿಕೆದಾರರಿಂದ ಹಿಡಿದು ರಾಜಕಾರಣಿಗಳಂತಹ ಪ್ರಮುಖ ವ್ಯಕ್ತಿಗಳು ಮೆಟಾವರ್ಸ್ ಅನ್ನು ಬೆಂಬಲಿಸುತ್ತಿದ್ದಾರೆ ಎಂದು ಜುಕರ್‌ಬರ್ಗ್ ತಿಳಿಸಿದ್ದಾರೆ.

Published by:Ashwini Prabhu
First published: