• Home
 • »
 • News
 • »
 • business
 • »
 • Economy: ಮುಂದಿನ 'ದುಬೈ' ಆಗುತ್ತಾ ಭಾರತದ ಈ ನೂತನ ಆರ್ಥಿಕ ಕೇಂದ್ರ?

Economy: ಮುಂದಿನ 'ದುಬೈ' ಆಗುತ್ತಾ ಭಾರತದ ಈ ನೂತನ ಆರ್ಥಿಕ ಕೇಂದ್ರ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇದು ಹಣಕಾಸು ಸೇವೆಗಳು ಮತ್ತು ತಂತ್ರಜ್ಞಾನ-ಸಂಬಂಧಿತ ಚಟುವಟಿಕೆಗಳಿಗೆ ಸ್ಪರ್ಧಾತ್ಮಕ ಪೈಪೋಟಿ ನೀಡುವ ಹೊಸ ವ್ಯಾಪಾರ ತಾಣವಾಗಿದೆ. ಅಕ್ಟೋಬರ್ ಸಮಯದಲ್ಲಿ ನಗರದ ಬ್ಯಾಂಕ್‌ಗಳು 33 ಶತಕೋಟಿ ಮೊತ್ತದ ವ್ಯವಹಾರವನ್ನು ದಾಖಲಿಸಿದ್ದಾರೆ.

 • Trending Desk
 • Last Updated :
 • Gujarat, India
 • Share this:

  ಭಾರತದ ಹೊಸ ಆರ್ಥಿಕ ಕೇಂದ್ರವು (Economic Hub) ಇದೀಗ ಗುಜರಾತ್‌ನಲ್ಲಿ (Gujarat) ಆರಂಭವಾಗುತ್ತಿದೆ. ನಗರದಲ್ಲಿರುವ ಜೆಪಿ ಮೋರ್ಗನ್ ಚೇಸ್ ಆಂಡ್ ಕೊ. ಹಾಗೂ ಎಚ್‌ಎಸ್‌ಬಿಸಿ ಹೋಲ್ಡಿಂಗ್ಸ್ ಪಿಎಲ್‌ಸಿ ಯಂತಹ ಕಂಪನಿಗಳಲ್ಲಿ ಕೆಲಸ ಮಾಡುವ ಸುಮಾರು 20,000 ಉದ್ಯೋಗಿಗಳು ಆರ್ಥಕತೆಗೆ ಕೊಡುಗೆ ನೀಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಗುಜರಾತ್‌ನ ರಾಜಧಾನಿ ಗಾಂಧಿನಗರ (Gandhi Nagar) ಮತ್ತು ಅಹಮದಾಬಾದ್‌ನ ನಡುವೆ 886 ಎಕರೆಗಳನ್ನು ಆಕ್ರಮಿಸಿಕೊಂಡಿರುವ ಗುಜರಾತ್ ಅಂತರಾಷ್ಟ್ರೀಯ ಫಿನಾನ್ಸ್ ಟೆಕ್ ಸಿಟಿ (Gft City) ಇಲ್ಲಿನ ಹಿರಿಮೆ ಎಂದೆನಿಸಿದೆ. GIFT ಸಿಟಿ ಭಾರತದ ಗುಜರಾತ್ ರಾಜ್ಯದಲ್ಲಿ ಯೋಜಿತ ವ್ಯಾಪಾರ ಜಿಲ್ಲೆಯಾಗಿದೆ.


  ಇದು ಹಣಕಾಸು ಸೇವೆಗಳು ಮತ್ತು ತಂತ್ರಜ್ಞಾನ-ಸಂಬಂಧಿತ ಚಟುವಟಿಕೆಗಳಿಗೆ ಸ್ಪರ್ಧಾತ್ಮಕ ಪೈಪೋಟಿ ನೀಡುವ ಹೊಸ ವ್ಯಾಪಾರ ತಾಣವಾಗಿದೆ. ಅಕ್ಟೋಬರ್ ಸಮಯದಲ್ಲಿ ನಗರದ ಬ್ಯಾಂಕ್‌ಗಳು 33 ಶತಕೋಟಿ ಮೊತ್ತದ ವ್ಯವಹಾರವನ್ನು ದಾಖಲಿಸಿದ್ದಾರೆ.


  ಇದನ್ನೂ ಓದಿ: Cooker Bomb: ಕುಕ್ಕರ್ ಬಾಂಬ್ ಅಂದರೆ ಏನು ಗೊತ್ತಾ? ಇಲ್ಲಿದೆ ‘ಸ್ಫೋಟ’ಕ ಮಾಹಿತಿ!


  ಕಂಪನಿಗಳ ಯಶಸ್ಸಿಗೆ ಕಾರಣವಾಗಿರುವ ಅಂಶಗಳು


  ಹಾಗಿದ್ದರೆ ಈ ಕಂಪನಿಗಳ ಯಶಸ್ಸಿಗೆ ಕಾರಣವೇನು ಎಂಬ ಅಂಶವನ್ನು ಗಮನಿಸಿದಾಗ ಮುಖ್ಯವಾದ ಮಾಹಿತಿಯೊಂದು ದೊರೆಯುತ್ತದೆ. ಭಾರತದ ಉಳಿದ ಭಾಗಗಳಲ್ಲಿ ವ್ಯಾಪಾರಕ್ಕೆ ಅಡ್ಡಿಯನ್ನುಂಟು ಮಾಡುವ ನಿಯಮಗಳು ಹಾಗೂ ತೆರಿಗೆಗಳ ನಡುವೆಯೂ ಗಿಫ್ಟ್ ಸಿಟಿ ಉತ್ತಮ ಆದಾಯವನ್ನು ಗಳಿಸಿದೆ.


  ರಾಷ್ಟ್ರೀಯ ಕರೆನ್ಸಿ ರೂಪಾಯಿಯನ್ನು ಅಂತಾರಾಷ್ಟ್ರೀಯ ಹೂಡಿಕೆದಾರರಿಗೆ ಆಟದ ವಸ್ತುವಾಗಿಸುವ ಪ್ರಮೇಯವನ್ನು ಈ ಟೆಕ್ ಸಿಟಿ ನೀಡಲಿಲ್ಲ. ದುಬೈ, ಮಾರಿಷಸ್ ಅಥವಾ ಸಿಂಗಾಪುರಕ್ಕೆ ಸ್ಥಳಾಂತರಗೊಂಡಿರುವ ವ್ಯಾಪಾರಗಳು ಪುನಃ ಭಾರತದ ಕೈ ಸೇರಬೇಕೆಂಬ ಒಂದೇ ಗುರಿಯನ್ನಿಟ್ಟುಕೊಂಡು ಇಲ್ಲಿನ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.


  ಗಿಫ್ಟ್ ಸಿಟಿಯ ಯೋಜನೆ


  ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ ನರೇಂದ್ರ ಮೋದಿಯವರು 2008 ರಲ್ಲಿ ಗಿಫ್ಟ್ ಸಿಟಿ ಯೋಜನೆಯನ್ನು ಆರಂಭಿಸಿದರು ಹಾಗೂ 2014 ರಲ್ಲಿ ಅವರು ಪ್ರಧಾನ ಮಂತ್ರಿಯಾದ ನಂತರ ಈ ಯೋಜನೆಗೆ ಹೆಚ್ಚಿನ ಗಮನವನ್ನು ನೀಡಿದರು. ಭಾರತದ ಭವ್ಯ ಭವಿಷ್ಯಕ್ಕೆ ಗಿಫ್ಟ್ ಸಿಟಿ ಕೊಡುಗೆ ನೀಡಲಿದೆ ಎಂದೇ ಮೋದಿಯವರು ತಿಳಿಸಿದ್ದಾರೆ.


  ಅಂತಾರಾಷ್ಟ್ರೀಯ ಫಿನಾನ್ಶಿಯಲ್ ಸರ್ವೀಸಸ್ ಸೆಂಟರ್‌ನಲ್ಲಿನ ಉದ್ಯಮಗಳಿಗೆ ಹಲವಾರು ವ್ಯವಸ್ಥೆಗಳನ್ನು ಕಲ್ಪಿಸಲಾಗಿದ್ದು 100% ತೆರಿಗೆ ರಜೆ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಇದು ಒಳಗೊಂಡಿದೆ. ಗಿಫ್ಟ್ ಸಿಟಿಯ ಮೂಲಕ ಹಡಗು ಹಾಗೂ ವಿಮಾನಗಳನ್ನು ಗುತ್ತಿಗೆ ನೀಡಲು ಭಾರತೀಯ ಕಂಪನಿಗಳಿಗೆ ಉತ್ತೇಜನ ನೀಡಲು ನಿಯಮಗಳನ್ನು ಬದಲಾಯಿಸಲಾಗುತ್ತಿದೆ.


  ಇಂಟರ್ನ್ಯಾಷನಲ್ ಫೈನಾನ್ಶಿಯಲ್ ಸರ್ವೀಸಸ್ ಸೆಂಟರ್ ಅಥಾರಿಟಿಯ ಪಾತ್ರ


  ಭಾರತವು ಚಿನ್ನದ ಎರಡನೇ ಅತಿ ದೊಡ್ಡ ಗ್ರಾಹಕನಾಗಿದ್ದು, ದೇಶವು ಬೆಲೆಬಾಳುವ ಲೋಹದ ಅತಿ ದೊಡ್ಡ ಆಮದುದಾರ ಎಂದೆನಿಸಿದೆ ಮತ್ತು 2021 ರಲ್ಲಿ 1,069 ಟನ್ ಚಿನ್ನವನ್ನು ಆಮದು ಮಾಡಿಕೊಂಡಿದೆ. ಇದರಿಂದ ಒಂದು ವರ್ಷದ ಹಿಂದೆ 430 ಟನ್‌ಗಳ ಚಿನ್ನ ಹೆಚ್ಚಳವಾಗಿದೆ.


  ದೇಶದಲ್ಲಿ ಚಿನ್ನದ ಮೇಲೆ ಹೆಚ್ಚಿನ ನಿಯಂತ್ರಣವಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ (RBI)-ಅನುಮೋದಿತ ಏಜೆನ್ಸಿಗಳು ಮತ್ತು ನಾಮನಿರ್ದೇಶಿತ ಬ್ಯಾಂಕುಗಳು ಮಾತ್ರ ಪ್ರಸ್ತುತ ಚಿನ್ನವನ್ನು ಆಮದು ಮಾಡಿಕೊಳ್ಳಬಹುದು. ಇಂಟರ್ನ್ಯಾಷನಲ್ ಫೈನಾನ್ಶಿಯಲ್ ಸರ್ವೀಸಸ್ ಸೆಂಟರ್ ಅಥಾರಿಟಿ (IFSCA) ನಿಯಂತ್ರಕವಾಗಿದ್ದು, ಅಂತಾರಾಷ್ಟ್ರೀಯವಾಗಿ ಮಾಡಿದ ವಹಿವಾಟುಗಳನ್ನು ಮೇಲ್ವಿಚಾರಣೆ ಮಾಡುತ್ತದೆ.


  ದೈನಂದಿನ ವಹಿವಾಟು ಪ್ರಮಾಣ ಶತಕೋಟಿಯನ್ನು ದಾಟಿದೆ


  IFSCA ವಿಮಾನ ಮತ್ತು ಹಡಗು ಗುತ್ತಿಗೆ, ಬಂಡವಾಳ ಮಾರುಕಟ್ಟೆಗಳು, ಕಡಲಾಚೆಯ ಬ್ಯಾಂಕಿಂಗ್ ಮತ್ತು ಆಸ್ತಿ ನಿರ್ವಹಣೆ, ಕಡಲಾಚೆಯ ವಿಮೆ ಮತ್ತು ಇತರ ಸಂಬಂಧಿತ ಸೇವೆಗಳಿಗೆ ಸಂಬಂಧಿಸಿದ ಸೇವೆಗಳನ್ನು ಒದಗಿಸುತ್ತದೆ. ಇದು ಎರಡು ಜಾಗತಿಕ ಸ್ಟಾಕ್ ಎಕ್ಸ್‌ಚೇಂಜ್‌ಗಳನ್ನು ಹೊಂದಿದ್ದು, ಅವು ಒಟ್ಟಾಗಿ $11 ಶತಕೋಟಿಗಿಂತ ಹೆಚ್ಚಿನ ಸರಾಸರಿ ದೈನಂದಿನ ವಹಿವಾಟು ಪ್ರಮಾಣವನ್ನು ಉತ್ಪಾದಿಸುತ್ತವೆ.


  ಇದನ್ನೂ ಓದಿ: Explained: ಚುನಾವಣಾ ಹೊಸ್ತಿಲಲ್ಲಿ ಭುಗಿಲೆದ್ದ ಮತದಾರರ ವೈಯಕ್ತಿಕ ಮಾಹಿತಿ ಕಳ್ಳತನದ ವಿವಾದ: ಏನಿದು 'ಚಿಲುಮೆ' ಅಕ್ರಮ?


  ಇದು ಸಮಗ್ರ ನಿಯಂತ್ರಕ ಮೂಲಸೌಕರ್ಯದೊಂದಿಗೆ ಗಿಫ್ಟ್ ಸಿಟಿಯಲ್ಲಿರುವ ವ್ಯವಹಾರಗಳನ್ನು ಒದಗಿಸಲು ಸಹಾಯ ಮಾಡುತ್ತದೆ. ಗುಜರಾತ್ ವಿನಿಮಯವು ವಿಶ್ವದಲ್ಲಿ ಈ ರೀತಿಯ ಮೂರನೇ ವಿನಿಮಯವಾಗಿದೆ ಮತ್ತು ಭಾರತದ ಚಿನ್ನದ ವ್ಯಾಪಾರವನ್ನು ಹೆಚ್ಚು ಸಂಘಟಿತಗೊಳಿಸಲು ಸಹಾಯ ಮಾಡುತ್ತದೆ. ಹೊಸ ಅಂತಾರಾಷ್ಟ್ರೀಯ ವಿನಿಮಯವು ಗಿಫ್ಟ್ ಸಿಟಿಯ ಮೂಲಕ ಅರ್ಹ ಆಭರಣ ವ್ಯಾಪಾರಿಗಳಿಗೆ ನೇರವಾಗಿ ಚಿನ್ನವನ್ನು ಆಮದು ಮಾಡಿಕೊಳ್ಳಲು ಅವಕಾಶ ನೀಡುತ್ತದೆ.


  ಗಿಫ್ಟ್ ಸಿಟಿ ನೀತಿಯು ರೂಪಾಯಿಯ ಅಂತಾರಾಷ್ಟ್ರೀಕರಣಕ್ಕೆ ಮಾಪನಾಂಕ ನಿರ್ಣಯದ ವಿಧಾನವಾಗಿದೆ ಎಂದು ಭಾವಿಸಿರುವುದಾಗಿ ಮುಂಬೈನ ಡಾಯ್ಚ ಬ್ಯಾಂಕ್‌ನಲ್ಲಿ ಜಾಗತಿಕ ಉದಯೋನ್ಮುಖ ಮಾರುಕಟ್ಟೆಗಳ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸನ್ ವರದರಾಜನ್ ತಿಳಿಸಿದ್ದಾರೆ.

  Published by:Precilla Olivia Dias
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು