Industrialist: ಅಂಬಾನಿ ಹಾಗೂ ಟಾಟಾ ಇಬ್ಬರೊಂದಿಗೆ ಪೈಪೋಟಿ ನಡೆಸಿದ ಆ ಕೈಗಾರಿಕೋದ್ಯಮಿ!

ಧೀರೂಬಾಯಿ ಅಂಬಾನಿ ಹಾಗೂ ರತನ್ ಟಾಟಾರಂತಹ ದೊಡ್ಡ ದೊಡ್ಡ ಖ್ಯಾತನಾಮರೂ ಕೂಡ ಭಾರತೀಯ ವ್ಯಾಪಾರ ಉದ್ಯಮದಲ್ಲಿ ಪೈಪೋಟಿ ನಡೆಸಿದವರು ಹಾಗೂ ಆ ಪೈಪೋಟಿಯನ್ನು ನೆನಪಿಸಿಕೊಳ್ಳುವುದೂ ಕೂಡ ಅಸಕ್ತಿದಾಯಕ ಅಂಶ ಎಂದೆನಿಸಿದೆ. ಇನ್ನು ಈ ಇಬ್ಬರ ಮಧ್ಯೆ ಕೂಡ ಹೋರಾಡಿದ ವ್ಯಕ್ತಿಯೊಬ್ಬರಿದ್ದಾರೆ ಅವರೇ ಬಾಂಬೆ ಡೈಯಿಂಗ್‌ನ ಅಧ್ಯಕ್ಷರಾದ ನುಸ್ಲಿ ವಾಡಿಯಾ. ಇವರಿಬ್ಬರ ಪೈಪೋಟಿ ಹೇಗಿತ್ತು ಮತ್ತು ಇಬ್ಬರ ನಡುವೆಯೂ ತಮ್ಮ ಸ್ಥಾನ ಭದ್ರಪಡಿಸಿಕೊಂಡವರು ವಾಡಿಯಾ. ಈ ಇಬ್ಬರೂ ಖ್ಯಾತನಾಮರೊಂದಿಗೆ ಹೋರಾಡಿದ ವಾಡಿಯಾ ಅವರ ಸಾಹಸಗಾಥೆ ಹೀಗಿದೆ.

ಧೀರೂಬಾಯಿ ಅಂಬಾನಿ ಹಾಗೂ ರತನ್ ಟಾಟಾ

ಧೀರೂಬಾಯಿ ಅಂಬಾನಿ ಹಾಗೂ ರತನ್ ಟಾಟಾ

  • Share this:
ರಾಜಕೀಯ ಕ್ಷೇತ್ರ, ಶೈಕ್ಷಣಿಕ ಇಲ್ಲವೇ ವ್ಯಾಪಾರ ಕ್ಷೇತ್ರವೇ ಆಗಿರಲಿ ಪ್ರತಿಯೊಂದು ಕ್ಷೇತ್ರದಲ್ಲೂ ಸ್ಪರ್ಧೆ, ಪೈಪೋಟಿ, ಟೀಕೆ ಟಿಪ್ಪಣಿಗಳು ಸರ್ವೇ (Survey) ಸಾಮಾನ್ಯವಾದುದು. ಎರಡು ಕೈ ತಟ್ಟಿದರೆ ಚಪ್ಪಾಳೆ ಎಂಬ ಮಾತಿನಂತೆ ಎರಡು ವ್ಯಕ್ತಿಗಳು ಸೇರಿದಾಗ ಮಾತ್ರವೇ ವಾದ ವಿವಾದಗಳು (Controversies) ಉಂಟಾಗಿ ಕಲಹ ಏರ್ಪಡುತ್ತದೆ. ಸಮಾಜದಲ್ಲಿ ಉನ್ನತ ಸ್ಥಾನಮಾನವನ್ನು ಅಲಂಕರಿಸಿರುವ ಟಾಟಾ, ಅಂಬಾನಿ, ವಾಡಿಯಾ ಮೊದಲಾದವರೂ ಕೂಡ ಒಂದು ಕಾಲದಲ್ಲಿ ಕಲಹಕ್ಕೆ ಹೆಸರುವಾಸಿಯಾದವರು. ಹೇಗೆ ಅಂತೀರಾ ಈ ಲೇಖನದಿಂದ ತಿಳಿದುಕೊಳ್ಳೋಣ. ಧೀರೂಬಾಯಿ ಅಂಬಾನಿ (Dhirubhai Ambani) ಹಾಗೂ ರತನ್ ಟಾಟಾರಂತಹ (Ratan Tata) ದೊಡ್ಡ ದೊಡ್ಡ ಖ್ಯಾತನಾಮರೂ ಕೂಡ ಭಾರತೀಯ ವ್ಯಾಪಾರ ಉದ್ಯಮದಲ್ಲಿ ಪೈಪೋಟಿ ನಡೆಸಿದವರು ಹಾಗೂ ಆ ಪೈಪೋಟಿಯನ್ನು ನೆನಪಿಸಿಕೊಳ್ಳುವುದೂ ಕೂಡ ಅಸಕ್ತಿದಾಯಕ ಅಂಶ ಎಂದೆನಿಸಿದೆ.

ಇನ್ನು ಈ ಇಬ್ಬರ ಮಧ್ಯೆ ಕೂಡ ಹೋರಾಡಿದ ವ್ಯಕ್ತಿಯೊಬ್ಬರಿದ್ದಾರೆ ಅವರೇ ಬಾಂಬೆ ಡೈಯಿಂಗ್‌ನ ಅಧ್ಯಕ್ಷರಾದ ನುಸ್ಲಿ ವಾಡಿಯಾ. ಇವರಿಬ್ಬರ ಪೈಪೋಟಿ ಹೇಗಿತ್ತು ಮತ್ತು ಇಬ್ಬರ ನಡುವೆಯೂ ತಮ್ಮ ಸ್ಥಾನ ಭದ್ರಪಡಿಸಿಕೊಂಡವರು ವಾಡಿಯಾ. ಈ ಇಬ್ಬರೂ ಖ್ಯಾತನಾಮರೊಂದಿಗೆ ಹೋರಾಡಿದ ವಾಡಿಯಾ ಅವರ ಸಾಹಸಗಾಥೆ ಹೀಗಿದೆ.

ವಾಡಿಯಾ ವರ್ಸಸ್ ಅಂಬಾನಿ
ಶೀಟ್‌ಗಳು, ಟವೆಲ್‌ಗಳು ವಿಷಯಕ್ಕೆ ಬಂದಾಗ ಬಾಂಬೆ ಡೈಯಿಂಗ್ ಚಿರಪರಿಚಿತ. ಅಂಬಾನಿಯ ಪೂರ್ವಕಾಲದಿಂದಲೂ ಜವಳಿ ಕ್ಷೇತ್ರದಲ್ಲಿ ಬಾಂಬೆ ಡೈಯಿಂಗ್ ಹೆಸರುವಾಸಿ. ವಾಡಿಯಾ ಹಾಗೂ ಅಂಬಾನಿ ಇಬ್ಬರ ದೃಷ್ಟಿಯೂ ಪಾಲಿಸ್ಟರ್ ಉದ್ಯಮದತ್ತ ನೆಟ್ಟಾಗ ಪೈಪೋಟಿ ಆರಂಭವಾಯಿತು. ಸಣ್ಣಗೆ ಹೊತ್ತಿಕೊಂಡ ಕಿಡಿ ನಂತರ ಕದನದ ರೂಪವನ್ನೇ ಪಡೆದುಕೊಂಡಿತು. ಮಾಧ್ಯಮಗಳೂ ಕೂಡ ಈ ಕಲಹವನ್ನು ತಮ್ಮದೇ ಶೈಲಿಗಳಲ್ಲಿ ಬಣ್ಣಿಸತೊಡಗಿದವು.

ಇದನ್ನೂ ಓದಿ:  https://kannada.news18.com/photogallery/business/adani-group-deeply-overleveraged-says-creditsights-vdd-826070.html

ವಾಡಿಯಾ ಪಾಲಿಸ್ಟರ್ (ರಾಸಾಯನಿಕ ಕ್ರಿಯೆಯ ಮಧ್ಯ ಹಂತ) ಇಂಟರ್‌ಮೀಡಿಯೇಟ್‌ಗಳಲ್ಲಿ ಕೆಟ್ಟ ಆಯ್ಕೆಮಾಡಿಕೊಂಡಿದ್ದರ ಸಲುವಾಗಿ ಅಂಬಾನಿ ಯುದ್ಧವನ್ನು ಗೆದ್ದರು. ಪಾಲಿಯೆಸ್ಟರ್ ತಯಾರಿಕೆಯಲ್ಲಿ ಹೆಚ್ಚು ಪರಿಣಾಮಕಾರಿ ಮಧ್ಯಂತರವಾಗಿ ಹೊರಹೊಮ್ಮಿದ ಶುದ್ಧೀಕರಿಸಿದ ಟೆರೆಫ್ತಾಲಿಕ್ ಆಮ್ಲವನ್ನು (PTA) ಅಂಬಾನಿಯವರು ಆಯ್ಕೆ ಮಾಡಿಕೊಂಡರೆ ವಾಡಿಯಾ ಡೈಮಿಥೈಲ್ ಟೆರೆಫ್ತಾಲೇಟ್ (DMT) ಅನ್ನು ಆಯ್ಕೆ ಮಾಡಿದರು. ಹೀಗೆ ಅಂಬಾನಿ ಉದ್ಯಮದಲ್ಲಿ ಜಯ ಸಾಧಿಸಿದರೆ ವಾಡಿಯಾ ಸೋಲುಣ್ಣಬೇಕಾಯಿತು.

ವಾಡಿಯಾ ವರ್ಸಸ್ ಟಾಟಾ
ವಾಡಿಯಾ ಅವರು ಟಾಟಾ ಗ್ರೂಪ್‌ನ ಅಧ್ಯಕ್ಷ ರತನ್ ಟಾಟಾ ಅವರೊಂದಿಗೂ ವಿವಾದದಲ್ಲಿ ತೊಡಗಿದ್ದರು. ಇಬ್ಬರೂ ಬಾಲ್ಯಕಾಲದ ಸ್ನೇಹಿತರಾಗಿದ್ದರೂ ವ್ಯಾಪಾರ ವಿಷಯದಲ್ಲಿ ಒಬ್ಬರನ್ನೊಬ್ಬರು ಮೀರಿಸಬೇಕೆನ್ನುವ ತುಡಿತವನ್ನು ಹೊಂದಿದ್ದರು. ವಾಡಿಯಾ ಜೆಆರ್‌ಡಿ ಟಾಟಾ ಅವರನ್ನು ತಮ್ಮ ಗಾಡ್‌ಫಾದರ್ ಮತ್ತು ಮಾರ್ಗದರ್ಶಕ ಎಂದು ಪರಿಗಣಿಸಿದ್ದಾರೆ ಎಂಬುದು ಕೆಲವರಿಗೆ ಮಾತ್ರ ತಿಳಿದಿದೆ. ಇದಲ್ಲದೆ, ಬಾಂಬೆ ಡೈಯಿಂಗ್‌ನ ನಿಯಂತ್ರಣವನ್ನು ತೆಗೆದುಕೊಳ್ಳಲು ವಾಡಿಯಾ ಬಯಸಿದಾಗ ಜೆಆರ್‌ಡಿ ಸಹಾಯ ಮಾಡಿದರು. ಜೆಆರ್‌ಡಿ ರತನ್ ಟಾಟಾಗೆ ಕಂಪೆನಿಯ ಅಧಿಕಾರವನ್ನು ನೀಡಿದಾಗ ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿ ರತನ್ ಟಾಟಾಗೆ ಮಾರ್ಗದರ್ಶನ ನೀಡಿದವರು ವಾಡಿಯಾ. ರತನ್ ಟಾಟಾ ನನ್ನ ಆತ್ಮೀಯ ಸ್ನೇಹಿತ, ನನಗೆ ಆತ ಸ್ನೇಹಿತ ಮಾತ್ರವಲ್ಲ ಕುಟುಂಬ ಎಂಬುದಾಗಿ ಸಂದರ್ಶನವೊಂದರಲ್ಲಿ ಬಣ್ಣಿಸಿದ್ದರು.

ಅದಾಗ್ಯೂ ವಾಡಿಯಾ ಅವರು ರತನ್ ಟಾಟಾ ವಿರುದ್ಧ ಮೊಕದ್ದಮೆ ಹೂಡಲು ನಿರ್ಧರಿಸಿದಾಗ ಸ್ನೇಹವು ಹದಗೆಟ್ಟಿತು. ಮಿಸ್ಟ್ರಿ-ಟಾಟಾ ಸಂಘರ್ಷವು ಏರುಗತಿಯಲ್ಲಿದ್ದಾಗ ವಾಡಿಯಾ ಮಿಸ್ಟ್ರಿಗೆ ಸಹಾಯ ಹಸ್ತ ಚಾಚಿದರು ಪರಿಣಾಮವಾಗಿ ಟಾಟಾ ಮೋಟಾರ್ಸ್‌ನ ಸ್ವತಂತ್ರ ನಿರ್ದೇಶಕ ಸ್ಥಾನದಿಂದ ವಾಡಿಯಾ ಅವರನ್ನು ತೆಗೆದು ಹಾಕಲಾಯಿತು. ಬಾಂಬೆ ಡೈಯಿಂಗ್ ಅಧ್ಯಕ್ಷರು 2016 ರಲ್ಲಿ ರತನ್ ಟಾಟಾ ಮತ್ತು ಟಾಟಾ ಗ್ರೂಪ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದರು. ವಾಡಿಯಾ ಅವರನ್ನು ಅನ್ಯಾಯವಾಗಿ ಟಾಟಾ ಮೋಟಾರ್ಸ್‌ನಿಂದ ಹೊರಹಾಕಲಾಗಿದೆ ಎಂದು ಆರೋಪಿಸಿದರು. ತನ್ನದು ತಪ್ಪೆಂದು ದೂಷಿಸಲಾಗಿದೆ ಎಂಬುದಾಗಿ ವಾಡಿಯಾ ಹೇಳಿಕೊಂಡಿದ್ದರು.

ಇದನ್ನೂ ಓದಿ: Adani Group vs NDTV: ಎನ್‌ಡಿಟಿವಿಯ ಶೇ 29.18% ಶೇರು ಅದಾನಿ ಗ್ರೂಪ್ ಪಾಲು: ಸದ್ದಿಲ್ಲದೇ ಸ್ವಾಧೀನ!

ನಾಲ್ಕು ವರ್ಷಗಳ ನಂತರ 2020 ರಲ್ಲಿ, ವಾಡಿಯಾ ಅವರು ರತನ್ ಟಾಟಾ ಸೇರಿದಂತೆ ಟಾಟಾ ಸನ್ಸ್ ಮತ್ತು ಅದರ ಮಂಡಳಿಯ ಸದಸ್ಯರು ಮತ್ತು ಕಾರ್ಯನಿರ್ವಾಹಕರ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಹಿಂತೆಗೆದುಕೊಂಡರು.
Published by:Ashwini Prabhu
First published: