Amazon: ವಜಾಗೊಂಡಿದ್ದ ಉದ್ಯೋಗಿ ಮತ್ತೆ ಕಂಪನಿಗೆ ವಾಪಸ್, ಜಾಸ್ತಿ ಸಂಬಳ ಕೊಟ್ಟ ಅಮೆಜಾನ್​

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಅಮೆಜಾನ್‌ ಕಂಪನಿಯಿಂದ ಜನವರಿಯಲ್ಲಿ ವಜಾಗೊಂಡ ಮಹಿಳಾ ಉದ್ಯೋಗಿಯೊಬ್ಬರು ಪ್ರಸ್ತುತ ಮತ್ತೆ ದೊಡ್ಡ ಹುದ್ದೆಯ ಜೊತೆಗೆ ಕಂಪನಿಗೆ ಮರಳಿದ್ದಾರೆ.

  • Share this:

ವರ್ಷಗಳಿಂದ ಉದ್ಯೋಗಿ (Employee) ವಜಾ ಪ್ರಕ್ರಿಯೆ ದೊಡ್ಡ ದೊಡ್ಡ ಕಂಪನಿ ಸೇರಿ ಸ್ಟಾರ್ಟ್‌ಅಪ್‌ಗಳಲ್ಲೂ ನೆಡೆಯುತ್ತಿದೆ. ಅಮೆಜಾನ್‌ (Amazon) ಕೂಡ ಇದರ ಹೊರತಾಗಿಲ್ಲ. ಇ-ಕಾಮರ್ಸ್‌ ದೈತ್ಯ ಅಮೆಜಾನ್‌ನಲ್ಲೂ ಸಾವಿರಾರು ಉದ್ಯೋಗಿಗಳು ವಜಾಗೊಂಡಿದ್ದಾರೆ. ಸುಮಾರು ಸುತ್ತಿನ ವಜಾಪ್ರಕ್ರಿಯೆಯಲ್ಲಿ ಸಾವಿರಾರು ಉದ್ಯೋಗಿಗಳು ಕೆಲಸ ಕಳೆದುಕೊಂಡು ಮನೆಗೆ ಹೋಗಿದ್ದಾರೆ. ಹೀಗೆ ಮನೆಗೆ ಹೋದ ಉದ್ಯೋಗಿಗಳಲ್ಲಿ ಮಹಿಳಾ ಉದ್ಯೋಗಿಗೆ ಮತ್ತೆ ತನ್ನ ಹಿಂದಿನ ಕಂಪನಿ ಅಮೆಜಾನ್‌ನಲ್ಲಿ ಕೆಲಸ ಮಾಡುವ ಆಫರ್‌ (Job Offer) ಹುಡುಕಿಕೊಂಡು ಬಂದಿದೆ.


ವಜಾಗೊಂಡ ಕಂಪನಿಯಲ್ಲಿಯೇ ಮತ್ತೆ ಕೆಲಸಕ್ಕೆ ವಾಪಸ್


ಹೌದು, ಅಚ್ಚರಿ ಬೆಳವಣಿಗೆಯಲ್ಲಿ ಅಮೆಜಾನ್‌ ಕಂಪನಿಯಿಂದ ಜನವರಿಯಲ್ಲಿ ವಜಾಗೊಂಡ ಮಹಿಳಾ ಉದ್ಯೋಗಿಯೊಬ್ಬರು ಪ್ರಸ್ತುತ ಮತ್ತೆ ದೊಡ್ಡ ಹುದ್ದೆಯ ಜೊತೆಗೆ ಕಂಪನಿಗೆ ಮರಳಿದ್ದಾರೆ. ವಜಾಗೊಳಿಸುವಿಕೆ ಪ್ರಕ್ರಿಯೆಯಲ್ಲಿ ಮನೆಗೆ ಹೋಗಿದ್ದ ಪೈಗೆ ಸಿಪ್ರಿಯಾನಿ ನಾಲ್ಕು ತಿಂಗಳ ನಂತರ ಪ್ರಾಡಕ್ಟ್ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕಂಪನಿಗೆ ಮರಳಿದ್ದಾರೆ.‌


"ಕಂಪನಿಗೆ ಮತ್ತೆ ಮರಳಿರುವುದು ಖುಷಿ ತಂದಿದೆ"


ಈ ಬಗ್ಗೆ ಲಿಂಕ್ಡ್‌ಇನ್‌ನಲ್ಲಿ ಸಿಪ್ರಿಯಾನಿ ಹಂಚಿಕೊಂಡಿದ್ದಾರೆ. "ಅಮೆಜಾನ್‌ನಲ್ಲಿ ಮತ್ತೆ ಸೋಶಿಯಲ್ ಮಾರ್ಕೆಟಿಂಗ್ ತಂಡದಲ್ಲಿ ಉದ್ಯೋಗಿಯಾಗಿ ಸೇರಿಕೊಂಡಿದ್ದೇನೆ. ಈ ಬಗ್ಗೆ ಹೇಳಲು ನನಗೆ ಖುಷಿಯಾಗುತ್ತಿದೆ. ವಜಾಗೊಳಿಸುವ ಮುನ್ನ ನಾನು ಇದೇ ತಂಡದಲ್ಲಿದ್ದೆ. ಪ್ರಸ್ತುತ ಹೊಸದಾಗಿ ತೆರೆಯಲಾದ ಸ್ಥಾನದಲ್ಲಿ ಪ್ರಾಡಕ್ಟ್ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಮರು ನೇಮಕಗೊಂಡಿದ್ದೇನೆ. ಅಂತಹ ಉತ್ತಮ ತಂಡಕ್ಕೆ ಹಿಂತಿರುಗಿದ್ದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ.


ಇದನ್ನೂ ಓದಿ: 90 ಸಾವಿರದ ಲ್ಯಾಪ್​ಟಾಪ್​ ಅನ್ನು ​ಜಸ್ಟ್​ 762 ರೂಪಾಯಿಗೆ ನಿಮ್ಮದಾಗಿಸಿಕೊಳ್ಳಿ! 


ನನ್ನ ಜವಾಬ್ದಾರಿ ಮತ್ತು ಕೆಲಸದ ಮೇಲೆ ನಾನು ಗಮನ ಹರಿಸಬೇಕಾದ ರೀತಿಯು ಈಗ ಬದಲಾಗಿದೆ. ನಾನು ಮೊದಲಿಗಿಂತ ಹೆಚ್ಚು ಫೋಕಸ್‌ ಆಗಿರಬೇಕು. ಒಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದ ಕಂಪನಿಗೆ ಮತ್ತೆ ಮರಳಿರುವುದು ಖುಷಿಯಾಗಿದೆ" ಎಂದು ಬರೆದುಕೊಂಡಿದ್ದಾರೆ. ಜನವರಿಯಲ್ಲಿ ವಜಾಗೊಂಡಾಗಲೂ ಸಹ ಸಿಪ್ರಿಯಾನಿ ತಮಗಾದ ನೋವಿನ ಮತ್ತು ಆರ್ಥಿಕ ಸ್ಥಿತಿಯನ್ನು ಬಿಚ್ಚಿಟ್ಟಿದ್ದರು. ಸದ್ಯದ ಪೋಸ್ಟ್‌ನಲ್ಲಿ ಮತ್ತೆ ಕಂಪನಿಗೆ ಮರಳುತ್ತಿರುವ ಬಗೆಗಿನ ಸಂತಸವನ್ನು ಹಂಚಿಕೊಂಡಿದ್ದಾರೆ.


ಸಾಂಕೇತಿಕ ಚಿತ್ರ


ಹೆರಿಗೆ ರಜೆ ನಂತರ ಕೆಲಸಕ್ಕೆ ಬಂದ ಉದ್ಯೋಗಿ ವಜಾ


ಇತ್ತೀಚಿನ ಬೆಳವಣಿಗೆಯಲ್ಲಿ, ಹೆರಿಗೆ ರಜೆಯ ನಂತರ ಕೆಲಸಕ್ಕೆ ಮರಳಿದ್ದ ಮಹಿಳೆಯೊಬ್ಬರು ತನ್ನ ಸ್ಥಾನದಿಂದ ವಜಾಗೊಳಿಸಿರುವುದನ್ನು ಬಹಿರಂಗಪಡಿಸಿದ್ದಾರೆ. ಅಮೆಜಾನ್‌ನಲ್ಲಿ ಈ ಹಿಂದೆ ಆಂತರಿಕ ನೇಮಕಾತಿದಾರರಾಗಿದ್ದ ಲೇಲಾ ಬಡಲೋವಾ ಅವರು ಲಿಂಕ್ಡ್‌ಇನ್‌ನಲ್ಲಿ ಈ ಬಗ್ಗೆ ಹೇಳಿದ್ದಾರೆ.


ನನ್ನ ಹೆರಿಗೆ ರಜೆಯಿಂದ ಹಿಂತಿರುಗಿದ ನಂತರ, ನನ್ನನ್ನು ಇತ್ತೀಚೆಗೆ ವಜಾಗೊಳಿಸಲಾಗಿದೆ. ಈ ಹಿನ್ನಡೆಯ ಹೊರತಾಗಿಯೂ, ನಾನು ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದಿದ್ದೇನೆ ಮತ್ತು ಹೊಸ ವೃತ್ತಿ ಅವಕಾಶಗಳನ್ನು ಅನ್ವೇಷಿಸಲು ಪ್ರಯತ್ನಿಸುತ್ತಿದ್ದೇನೆ ಎಂದಿದ್ದಾರೆ.




ಅಮೆಜಾನ್‌ನಲ್ಲಿ ಉದ್ಯೋಗಿ ವಜಾ ಪರ್ವ


ಇ-ಕಾಮರ್ಸ್ ದೈತ್ಯ ಅಮೆಜಾನ್‌ ಜನವರಿಯಲ್ಲಿ ಸುಮಾರು 18 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿತ್ತು. ಸಿಬ್ಬಂದಿಗಳಿಗೆ ಅಮೆಜಾನ್ ಸಂಸ್ಥೆಯ ಸಿಇಒ ಆಂಡಿ ಜಾಸ್ಸಿ ನೋಟಿಸ್ ನೀಡಿ ಈ ಬಗ್ಗೆ ತಿಳಿಸಿದ್ದರು. ಮೊದಲ ಸುತ್ತಿನ ವಜಾಗೊಳಿಸುವಿಕೆಯ ನಂತರ 2ನೇ ಸುತ್ತಿನ ಉದ್ಯೋಗಿಗಳ ಕಡಿತವನ್ನು ಕಂಪನಿ ಘೋಷಿಸಿತ್ತು. ಕಳೆದ ಬಾರಿ 18,000 ಉದ್ಯೋಗಿಗಳನ್ನು ಕಡಿತಗೊಳಿಸಿದ ನಂತರ ಎರಡನೇ ಸುತ್ತಿನಲ್ಲಿ 9,000 ಉದ್ಯೋಗಿಗಳನ್ನು ಕಂಪನಿ ವಜಾಗೊಳಿಸಿತು.

top videos


    ಅನಿಶ್ಚಿತ ಆರ್ಥಿಕತೆ ಹಾಗೂ ಭವಿಷ್ಯದ ಕಾರಣದಿಂದ ಕಂಪನಿ ತನ್ನ ವೆಚ್ಚಗಳನ್ನು ಹೆಚ್ಚು ಸುವ್ಯವಸ್ಥಿತವಾಗಿಡಲು ವಜಾಗೊಳಿಸುವಿಕೆಯನ್ನು ಘೋಷಿಸಿತ್ತು. ಇದರ ಪರಿಣಾಮವಾಗಿ ಕಂಪನಿಯ ಕೆಲ ಸ್ಥಾನಗಳನ್ನು ತೆಗೆದುಹಾಕಲಾಗಿತ್ತು. ವಜಾಗೊಳ್ಳುತ್ತಿರುವ ಉದ್ಯೋಗಿಗಳಿಗಾಗಿ ಕಂಪನಿ ಪಾವತಿ, ಆರೋಗ್ಯ ವಿಮೆಯ ಪ್ರಯೋಜನ ಹಾಗೂ ಬಾಹ್ಯ ಉದ್ಯೋಗ ನಿಯೋಜನೆಗೆ ಬೆಂಬಲ ಸೇರಿದಂತೆ ಹಲವು ಭರವಸೆಗಳನ್ನೂ ನೀಡಲಾಗಿದೆ ಎಂದು ಕಂಪನಿ ತಿಳಿಸಿದೆ.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು