ನಮ್ಮ ದೇಶದಲ್ಲಿ ಮೊದಲೆಲ್ಲಾ ಉದ್ಯೋಗಿಗಳು (Employees) ಬೆಳಗ್ಗೆ ಕಂಪನಿಗೆ ಹೋಗಿ ದಿನವಿಡೀ ಕೆಲಸ (Work) ಮಾಡಿ ಸಂಜೆ ಮನೆಗೆ ಬರುವ ಅಭ್ಯಾಸವನ್ನು ಇಟ್ಟುಕೊಂಡಿದ್ದರು. ಆದರೆ ಕಳೆದ ಎರಡೂವರೆ ವರ್ಷಗಳಿಂದ ಎಂದರೆ ಈ ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿ ಶುರುವಾದಾಗಿನಿಂದಲೂ ಬಹುತೇಕ ಕಂಪನಿಗಳ (Company) ಉದ್ಯೋಗಿಗಳು ತಮ್ಮ ಕಂಪನಿಯ ಕೆಲಸವನ್ನು ಮನೆಯಲ್ಲಿಯೇ ಕುಳಿತುಕೊಂಡು ಮಾಡುತ್ತಿದ್ದಾರೆ. ಈ ‘ವರ್ಕ್ ಫ್ರಮ್ ಹೋಮ್’ (Work From Home) ಪದ್ದತಿ ಮೊದಲೆಲ್ಲಾ ಅಮೆರಿಕದಂತಹ ದೇಶಗಳಲ್ಲಿ ಪ್ರಚಲಿತದಲ್ಲಿತ್ತು. ಈ ರೀತಿಯ ಕೆಲಸದ ಪದ್ದತಿ ಅಥವಾ ಕ್ರಮ ನಾವು ಭಾರತಿಯರಿಗೆ (Indians) ಹೊಸತು. ಆದರೆ ಈಗ ಎರಡೂವರೆ ವರ್ಷಗಳಿಂದ ಈ ಪದ್ದತಿಯನ್ನೇ ಅನುಸರಿಸಿಕೊಂಡು ಬರುತ್ತಿರುವ ನಮಗೆ ಇದು ಅಭ್ಯಾಸವಾಗಿ ಹೋಗಿದೆ.
ಆದರೆ ಈಗ ಕೋವಿಡ್ ಪ್ರಕರಣಗಳು ಕಡಿಮೆ ಆಗಿರುವುದರಿಂದ ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಕಂಪನಿಗೆ ಹಿಂದಿರುಗುವಂತೆ ಕೇಳುತ್ತಿವೆ. ಆದರೆ ಎಷ್ಟೋ ಜನರು ಈಗಾಗಲೇ ‘ವರ್ಕ್ ಫ್ರಮ್ ಹೋಮ್’ ಪದ್ದತಿಗೆ ಹೊಂದಿಕೊಂಡಿದ್ದು, ಕಂಪನಿಗಳಿಗೆ ಮರಳಲು ಹಿಂದೇಟು ಹಾಕುತ್ತಿದ್ದಾರೆ.
‘ವರ್ಕ್ ಫ್ರಮ್ ಹೋಮ್’ ನ ಹೊಸ ನಿಯಮ ಜಾರಿಗೆ ತಂದ ಕೇಂದ್ರ ವಾಣಿಜ್ಯ ಸಚಿವಾಲಯ
ಈ ಹೊಸ ಕೆಲಸದ ಪದ್ದತಿ ಬರೀ ಖಾಸಗಿ ಕಂಪನಿಗಳಿಗೆ ಸೀಮಿತವಾಗಿದೆ ಅಂತ ತಿಳಿದುಕೊಳ್ಳಬೇಡಿ. ಕೊರೊನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ಈ ಪದ್ದತಿ ಸರ್ಕಾರಿ ಉದ್ಯೋಗಿಗಳಿಗೂ ಅನ್ವಯಿಸಿತ್ತು. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಎಷ್ಟು ದಿನಗಳವರೆಗೆ ಇನ್ನೂ ಈ ‘ವರ್ಕ್ ಫ್ರಮ್ ಹೋಮ್’ ಪದ್ದತಿಯನ್ನೇ ಅನುಸರಿಸಬೇಕು ಅಂತ ಆಯಾ ಖಾಸಗಿ ಕಂಪನಿಗಳು ನಿರ್ಧಾರ ಮಾಡುತ್ತವೆ. ಆದರೆ ಇನ್ನೂ ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳ ವಿಷಯಕ್ಕೆ ಬಂದರೆ, ಅವರ ಕೆಲಸದ ಪದ್ದತಿಯಲ್ಲಿ ಮುಂದೆ ಸ್ವಲ್ಪ ಬದಲಾವಣೆಯನ್ನು ಅವರು ಗಮನಿಸಬಹುದು. ಏಕೆಂದರೆ ಕೇಂದ್ರ ವಾಣಿಜ್ಯ ಸಚಿವಾಲಯವು ‘ವರ್ಕ್ ಫ್ರಮ್ ಹೋಮ್’ ನ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.
ಇಲಾಖೆಯಿಂದ ಒದಗಿಸಲಾದ ಮಾಹಿತಿ ಮನೆಯಿಂದಲೇ ಕೆಲಸ ಮಾಡುವ ನಿಯಮಗಳನ್ನು ಪ್ರಕಟಿಸಿದ ವಾಣಿಜ್ಯ ಸಚಿವಾಲಯವು, ಈಗ ಉದ್ಯೋಗಿಗಳು ಗರಿಷ್ಠ ಒಂದು ವರ್ಷದವರೆಗೆ ಮನೆಯಿಂದಲೇ ಕೆಲಸ ಪಡೆಯಲು ಸಾಧ್ಯವಾಗುತ್ತದೆ ಎಂದು ಮಾಹಿತಿ ನೀಡಿದೆ.
ಹೊಸ ನಿಯಮದ ಅಡಿಯಲ್ಲಿ, ಕೇವಲ 50 ಪ್ರತಿಶತದಷ್ಟು ಉದ್ಯೋಗಿಗಳು ಮನೆಯಿಂದ ಕೆಲಸದ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ. ವಿಶೇಷ ಆರ್ಥಿಕ ವಲಯ ಘಟಕದ ಶೇಕಡಾ 50ರಷ್ಟು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಲಾಗುವುದು. ‘ವರ್ಕ್ ಫ್ರಮ್ ಹೋಮ್’ ವಿಶೇಷ ಆರ್ಥಿಕ ವಲಯ ನಿಯಮ 43ಎ 2006 ಕ್ಕೆ ಈ ನಿಯಮವನ್ನು ಅಧಿಸೂಚಿಸಲಾಗಿದೆ ಎಂದು ತಿಳಿಸಲಾಗಿದೆ.
ಯಾವ ಉದ್ಯೋಗಿಗಳು ಪ್ರಯೋಜನಗಳನ್ನು ಪಡೆಯುತ್ತಾರೆ?
ನೌಕರರಿಂದ ಹಲವಾರು ವಿನಂತಿಗಳ ನಂತರ, ಇಲಾಖೆ ವಿಶೇಷ ಆರ್ಥಿಕ ವಲಯಗಳಿಗೆ ಹೊಸ ಮಾರ್ಗಸೂಚಿಗಳನ್ನು ಪರಿಚಯಿಸಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ತಿಳಿಸಿದೆ.
ಸಚಿವಾಲಯವು ಸೂಚಿಸಿದ ನಿಯಮಗಳು ಎಲ್ಲಾ ಎಸ್ಇಝಡ್ ಗಳಲ್ಲಿ ಏಕರೂಪದ ರಾಷ್ಟ್ರವ್ಯಾಪಿ ‘ವರ್ಕ್ ಫ್ರಮ್ ಹೋಮ್’ ನೀತಿಯನ್ನು ಅನುಸರಿಸಲು ಉದ್ಯಮದ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಈ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗಿದೆ ಎಂದು ಹೇಳುತ್ತದೆ.
ಹೊಸ ಮಾರ್ಗಸೂಚಿಗಳು ಯಾವುವು?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ