ಈಗಿನ ಕಾಲದ ಮಕ್ಕಳ ಮೊಬೈಲ್ (Mobile) ಸಿಕ್ಕಿಬಿಟ್ರೆ ಕಥೆ ಮುಗಿತು. ಊಟ ತಿಂಡಿ ಏನು ಬೇಡ ಮೊಬೈಲ್ ಇದ್ದರೆ ಸಾಕು ಇನ್ನೂ ಏನೂ ಬೇಡ. ಈ ಮೊಬೈಲ್ನಲ್ಲಿ ಗೇಮ್ (Mobile Game) ಆಡಿಕೊಂಡೇ ಕಾಳ ಕಳೆದು ಬಿಡುತ್ತಾರೆ. ಒಂದು ಕಾಲದಲ್ಲಿ ಮನೆಯಿಂದ ಆಚೆ ಬಂದು ಬುಗುರಿ, ಗೋಲಿ, ಕ್ರಿಕೆಟ್ (Cricket) , ಕಣ್ಣಾ ಮುಚ್ಚಾಲೆ, ಖೋ ಖೋ, ಕಬ್ಬಡಿ ಸೇರಿದಂತೆ ಹಲವು ಆಟಗಳನ್ನು 90ರ ದಶದ ಮಕ್ಕಳು ಆಡುತ್ತಿದ್ದರು. ಇದೀಗ ಎಲ್ಲವೂ ಬದಲಾಗಿದೆ. ಈಗ ಏನಿದ್ದರೂ ಪಬ್ಜಿ (PUBG) , ಕಾಲ್ ಆಫ್ ಡ್ಯೂಟಿ (Call of Duty), ಫ್ರೀಫೈರ್ (Free Fire) ಈ ರೀತಿಯ ಗೇಮ್ಗಳನ್ನು ಆಡಲು ಇಷ್ಟ ಪಡುತ್ತಾರೆ. ಅಷ್ಟರ ಮಟ್ಟಿಗೆ ಮಕ್ಕಳ ಮನಸ್ಸಿನಲ್ಲಿ ಮೊಬೈಲ್ ಸ್ಥಾನ ಪಡೆದುಕೊಂಡಿದೆ. ಅದೆಷ್ಟೋ ಭಾರಿ ಮಕ್ಕಳು ತಂದೆ, ತಾಯಂದಿರು ಮೊಬೈಲ್ಗಳಲ್ಲಿ ಗೇಮ್ ಆಡುವಾಗ ಹಣ (Money) ಕಳೆದುಕೊಂಡಿರುವ ಪ್ರಸಂಗಗಳು ನಡೆದಿವೆ. ಇಲ್ಲೂ ಕೂಡ ಮೊಮ್ಮಗನೊಬ್ಬ ತಾತನ ಮೊಬೈಲ್ನಲ್ಲಿ ಗೇಮ್ ಆಡಿ ಲಕ್ಷ ಲಕ್ಷ ಕಳೆದಿದ್ದಾನೆ.
44 ಲಕ್ಷ ಸ್ವಾಹ ಮಾಡಿದ ಮೊಮ್ಮಗ!
ಮೊಬೈಲ್ನಲ್ಲಿ ಗೇಮ್ ಆಡುವೆ ಎಂದು ತಾತನ ಮೊಬೈಲ್ ಪಡೆಯುತ್ತಿದ್ದ ಬಾಲಕನೊಬ್ಬ ಬ್ಯಾಂಕ್ ಖಾತೆಯಲ್ಲಿರುವ 44 ಲಕ್ಷ ರೂ. ಹಣವನ್ನು ಸ್ವಾಹಾ ಮಾಡಿದ್ದಾನೆ. ಇದನ್ನು ಕೇಳಿದರೆ ಶಾಕ್ ಆಹಬಹುದು. ನಿಜಕ್ಕೂ ಇದು ಸಾಧ್ಯನಾ? ಎಂಬ ಪ್ರಶ್ನೆ ಕೂಡ ಮೂಡಿರಬಹುದು. ಆದರೂ, ಇದು ನಿಜ ನೀವು ನಂಬಲೇ ಬೇಕು. ಹೈದರಾಬಾದ್ನ ಅಂಬರ್ಪೇಟ್ನಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಇಷ್ಟೊಂದು ಹಣವನ್ನು ಕಳೆದುಕೊಂಡಿದ್ದು ಓರ್ವ ನಿವೃತ್ತ ಪೊಲೀಸ್ ಅನ್ನೋದು ಮತ್ತೊಂದು ಶಾಕಿಂಗ್.
ಫ್ರೀಫೈರ್ ಗೇಮ್ ಆಡಿ ಹಣ ಕಳೆದ ಮೊಮ್ಮಗ!
ತಾತನ ಮೊಬೈಲ್ನಲ್ಲಿ ಫ್ರೀಫೈರ್ ಗೇಮ್ ಆ್ಯಪ್ ಡೌನ್ಲೋಡ್ ಮಾಡಿದ ಮೊಮ್ಮಗ 10 ಸಾವಿರದಿಂದ ಲಕ್ಷಗಳವವರೆಗೂ ಗೇಮ್ ಆಡಿ, ಅಜ್ಜನ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನೆಲ್ಲ ಖಾಲಿ ಮಾಡಿದ್ದಾನೆ. ನಿವೃತ್ತ ಪೊಲೀಸ್ ಆಗಿರುವ ತಾತ ಮೊಮ್ಮಗ ಏನೋ ಪ್ರೀತಿಯಿಂದ ಮೊಬೈಲ್ ಕೇಳುತ್ತಿದ್ದಾನೆ ಎಂದು ತಿಳಿದುಕೊಂಡು ಕೊಟ್ಟಿದ್ದಾರೆ. ಮೊಮ್ಮಗನಿಗೆ ಗೇಮ್ ಆಡುವುದು ಅಂದ್ರೆ ಸಖತ್ ಇಷ್ಟವಂತೆ. ಯಾವುದೇ ಗೇಮ್ ಆಡಿದರೂ ಮೊಮ್ಮಗನಿಗೆ ತಾತ ಏನೂ ಹೇಳುತ್ತಿರಲಿಲ್ಲವಂತೆ. ಒಂದು ದಿನ ಫ್ರೀಫೈರ್ ಗೇಮ್ ಆ್ಯಪ್ನ್ನು ಮೊಮ್ಮಗ ಡೌನ್ಲೋಡ್ ಮಾಡಿಕೊಂಡಿದ್ದ.
ಇದನ್ನೂ ಓದಿ: ನಿಮ್ಮ ಪಾಲಿಸಿ ಲ್ಯಾಪ್ಸ್ ಆಗಿದ್ಯಾ? ಏನ್ ಮಾಡ್ಬೇಕು ಅಂತ ಗೊತ್ತಾಗ್ತಿಲ್ವಾ? ಹೀಗ್ ಮಾಡಿ
ತಾತ ಇದೇ ಮೊಬೈಲ್ನಲ್ಲಿ ಡಿಜಿಟಲ್ ಪೇಮೆಂಟ್, ನೆಟ್ ಬ್ಯಾಂಕಿಂಗ್ ಸಹ ಬಳಕೆ ಮಾಡುತ್ತಿದ್ದರು. ಮೊಮ್ಮಗ ಗೇಮ್ ಆಡುತ್ತಿರುವಾಗ ಪೇಮೆಂಟ್ ಎಂದು ಬಂದಾಗ ನೇರವಾಗಿ ಬ್ಯಾಂಕ್ ಅಕೌಂಡ್ಗೆ ಲಿಂಕ್ ಆಗಿದೆ. ಫಸ್ಟ್ ಟೈಮ್ 10 ಸಾವಿರ ರೂಪಾಯಿ ಕಟ್ ಆಗಿದೆ. ಇದರಿಂದ ಮೊಮ್ಮಗ 60 ಬಾರಿ ಆಟ ಆಟವಾಡಿದ್ದಾನೆ. ಮುಂದೆ ಬೇರೆ ಬೇರೆ ಹಂತಕ್ಕೆ ತಲುಪಿದಾಗ ಅಕೌಂಟ್ ಲಿಂಕ್ ಆಗಿದ್ದರಿಂದ ತನ್ನಷ್ಟಕ್ಕೆ ತಾನೇ ಬ್ಯಾಂಕ್ ಅಕೌಂಟ್ನಿಂದ ಹಣ ಕಟ್ ಆಗಿದೆ. 50 ಸಾವಿರ ರೂ., 1,25 ಲಕ್ಷ ರೂ., 1.45 ಲಕ್ಷ ರೂ., 1.60 ಲಕ್ಷ ರೂ., 1.95 ಲಕ್ಷ ರೂ. ಹಾಗೂ 2 ಲಕ್ಷ ರೂ.ವರೆಗೂ ಹಣ ಕಡಿತವಾಗಿ ಒಟ್ಟಾರೆ 44 ಲಕ್ಷ ರೂ. ಸ್ವಾಹ ಆಗಿದೆ.
ಇದನ್ನೂ ಓದಿ: ಶಟ್ ಡೌನ್ ಆದ 'ಉದಯ್'! ಸಾವಿರಾರು ಕನಸು ಹೊತ್ತಿದ್ದ ಸ್ಟಾರ್ಟ್ಅಪ್ ಕಂಪನಿ ಎಡವಿದ್ದು ಇಲ್ಲಿ
ಹಣ ವಿತ್ ಡ್ರಾ ಮಾಡಲು ಹೋದ ತಾತನಿಗೆ ಶಾಕ್!
ಹೀಗೆ ಒಂದು ದಿನ ಹಣ ವಿತ್ ಡ್ರಾ ಮಾಡಲು ತಾತ ಬ್ಯಾಂಕ್ ಹೋಗಿದ್ದಾರೆ. ಆಗ ತಾತನಿಗೆ ಶಾಕ್ ಆಗಿತ್ತು. ನಿಮ್ಮ ಖಾತೆಯಲ್ಲಿ ಹಣವೇ ಇಲ್ಲ ಎಂದು ಬ್ಯಾಂಕ್ನವರು ಹೇಳಿದ್ದಾರೆ. ಇದರಿಂದ ಗಾಬರಿಯಾದ ತಾತ ಬ್ಯಾಂಕ್ ಅಕೌಂಟ್ ವಿವರಗಳನ್ನು ತೆಗೆಸಿದ್ದಾರೆ. ಆಗ ಫ್ರೀಫೈರ್ ಗೇಮ್ನಿಂದ ಹಣ ಕಡಿತವಾಗಿರುವುದು ಗೊತ್ತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ