• Home
 • »
 • News
 • »
 • business
 • »
 • Rohan Murthy: ನಾರಾಯಣ ಮೂರ್ತಿ ಪುತ್ರ ರೋಹನ್ ಅವರ ಮಹತ್ವಾಕಾಂಕ್ಷಿ ಬ್ಯುಸಿನೆಸ್​ ಪ್ಲಾನ್​ ಇದು!

Rohan Murthy: ನಾರಾಯಣ ಮೂರ್ತಿ ಪುತ್ರ ರೋಹನ್ ಅವರ ಮಹತ್ವಾಕಾಂಕ್ಷಿ ಬ್ಯುಸಿನೆಸ್​ ಪ್ಲಾನ್​ ಇದು!

ನಾರಾಯಣ ಮೂರ್ತಿ ಪುತ್ರ ರೋಹನ್ ಹಾಗೂ ಸೊಸೆ

ನಾರಾಯಣ ಮೂರ್ತಿ ಪುತ್ರ ರೋಹನ್ ಹಾಗೂ ಸೊಸೆ

ದೈತ್ಯ ಕಂಪನಿ ಇನ್ಫೋಸಿಸ್ (Infosys) ಹಾಗೂ ಅದರ ಮೂಲ ಸ್ಥಾಪಕರಾದ ನಾರಾಯಣ ಮೂರ್ತಿ ಅವರ ಬಗ್ಗೆ ಯಾರಿಗೆ ತಾನೆ ತಿಳಿದಿರಲ್ಲ. ಹೀಗೆ ಭಾರತದ ಐಟಿ ಪಾಂಡಿತ್ಯವನ್ನು ತಿಳಿಸಿಕೊಟ್ಟಿರುವ ನಾರಾಯಣಮೂರ್ತಿ ಅವರ ಮಗನಿಗೆ ಸುಮ್ಮನಿರಲಾದಿತೇ? ಹೌದು, 39ರ ಪ್ರಾಯದ ರೋಹನ್ ಮೂರ್ತಿಯೂ ಸಹ ತಮ್ಮ ತಂದೆಯ ಮಾರ್ಗವನ್ನೇ ಅನುಸರಿಸುತ್ತಿರುವಂತೆ ತೋರುತ್ತಿದೆ.

ಮುಂದೆ ಓದಿ ...
 • Trending Desk
 • Last Updated :
 • Bangalore, India
 • Share this:

  ಭಾರತದ ತಾಂತ್ರಿಕ ನಿಪುಣತೆ ಹಾಗೂ ಹಿರಿಮೆಯನ್ನು ಜಗತ್ತಿಗೆ ತಿಳಿಸಿಕೊಡುವುದಲ್ಲದೆ ಭಾರತ ಹೆಮ್ಮೆ ಪಡುವಂತಹ ಐಟಿ ಸಂಸ್ಥೆಯಾಗಿ (IT Institution) ಬೆಳೆದಿರುವ ದೈತ್ಯ ಕಂಪನಿ ಇನ್ಫೋಸಿಸ್ (Infosys) ಹಾಗೂ ಅದರ ಮೂಲ ಸ್ಥಾಪಕರಾದ ನಾರಾಯಣ ಮೂರ್ತಿ (Narayana Murthy) ಅವರ ಬಗ್ಗೆ ಯಾರಿಗೆ ತಾನೆ ತಿಳಿದಿರಲ್ಲ. ಹೀಗೆ ಭಾರತದ ಐಟಿ ಪಾಂಡಿತ್ಯವನ್ನು ತಿಳಿಸಿಕೊಟ್ಟಿರುವ ನಾರಾಯಣಮೂರ್ತಿ ಅವರ ಮಗನಿಗೆ ಸುಮ್ಮನಿರಲಾದಿತೇ? ಹೌದು, 39ರ ಪ್ರಾಯದ ರೋಹನ್ ಮೂರ್ತಿಯೂ (Rohan Murty) ಸಹ ತಮ್ಮ ತಂದೆಯ ಮಾರ್ಗವನ್ನೇ ಅನುಸರಿಸುತ್ತಿರುವಂತೆ ತೋರುತ್ತಿದೆ.


  ಅವರ ಸಾರಥ್ಯದ ಸೊರೊಕೋ ಸಂಸ್ಥೆಯು ತನ್ನದೆ ಆದ ವಿಶಿಷ್ಟ ಬಗೆಯ ಕಾರ್ಯತಂತ್ರ ಹೊಂದುವ ಮೂಲಕ ಐಟಿ ಕ್ಷೇತ್ರದಲ್ಲಿ ವಿಶೇಷವಾಗಿ ಮನ್ನಣೆಗಳಿಸುವತ್ತ ಹೆಜ್ಜೆ ಹಾಕಿದೆ ಅಂತಾನೇ ಹೇಳಬಹುದು. ಈ ಹಾರ್ವರ್ಡ್ ಪದವೀಧರನ ಸ್ಟಾರ್ಟಪ್ ಸಂಸ್ಥೆಯು ಟೊಯೋಟಾ ಸಂಸ್ಥೆಯ ತ್ಯಾಜ್ಯ ನಿರ್ವಹಣೆಯ ಕಾರ್ಯಪ್ರಣಾಳೀಕೆಗೆ ಸಮಾನಾಂತರವಾಗಿ ತನ್ನದೆ ಆದ ಕೆಲವು ಕಾರ್ಯ ತಂತ್ರಗಳನ್ನು ಹೊಂದಿದೆ. ಅಂದರೆ, ಐಟಿ ವಲಯದಲ್ಲಿ ತಂತ್ರಾಂಶ ಬಳಸುವುದಕ್ಕೆ ಕುರಿತಂತೆ ಅದನ್ನು ಎಷ್ಟು ಪರಿಣಾಮಕಾರಿಯಾಗಿ ನಿಭಾಯಿಸಬಹುದು, ವ್ಯರ್ಥ ಎನ್ನಬಹುದಾದ ಎಷ್ಟು ಡೇಟಾಗಳನ್ನು ತಗೆದುಹಾಕಬಹುದು ಹಾಗೂ ಪುನರಾವರ್ತಿತವಾಗುವ ಹಲವು ಟಾಸ್ಕುಗಳಿಗೆ ಹೇಗೆ ಏಕ ರೀತಿಯಲ್ಲಿ ಪರಿಣಾಮಕಾರಿತ್ವವನ್ನು ನೀಡಬಹುದು ಎಂಬುದರ ವಿಸ್ತೃತ ಕಾರ್ಯವೈಖರಿಯನ್ನು ವಿಶ್ಲೇಷಿಸಿ ಅದಕ್ಕೆ ಪರಿಹಾರ ನೀಡುವಲ್ಲಿ ನಿರತವಾಗಿದೆ.


  ಇದನ್ನೂ ಓದಿ: India vs China: ಅಗ್ರ ವಿಜ್ಞಾನಿಗಳ ಸಂಖ್ಯೆಯಲ್ಲೂ ಭಾರತ-ಚೀನಾ ತೀವ್ರ ಪೈಪೋಟಿ


  ಉತ್ಪಾದನಾ ಕ್ಷಮತೆಯನ್ನು ಇನ್ನಷ್ಟು ಸುಧಾರಣೆ


  ಅವರ ಸ್ಟಾರ್ಟಪ್ ಹಲವು ಉನ್ನತ ಸಂಸ್ಥೆಗಳ ಡೇಟಾ ಪಡೆದು ಅದನ್ನು ವಿಶ್ಲೇಷಿಸಿ ಅದರಲ್ಲಿರುವ ನಿರುಪಯುಕ್ತತೆಯನ್ನು ತೊಡೆದು ಹಾಕಿ ಅದನ್ನು ಇನ್ನಷ್ಟು ಸುಧಾರಿತ ಹಾಗೂ ಕಾರ್ಯಕ್ಷಮತೆಯ ಅಂಶವನ್ನಾಗಿ ಪರಿವರ್ತಿಸುವ ಬಗ್ಗೆ ಪರಿಹಾರ ನೀಡುವಲ್ಲಿ ನಿರತವಾಗಿದೆ. ಈ ಮೂಲಕ ಉತ್ಪಾದನಾ ಕ್ಷಮತೆಯನ್ನು ಇನ್ನಷ್ಟು ಸುಧರಿಸಬಹುದಾಗಿದ್ದು ಹೆಚ್ಚಿನ ಪ್ರಗತಿಗೆ ಇದು ಮುನ್ನುಡಿ ಹಾಡಲು ಅನುವು ಮಾಡಿಕೊಡುತ್ತದೆ ಎಂದೇ ಹೇಳಬಹುದು.


  ಬಾಸ್ಟನ್ ಹಾಗೂ ಬೆಂಗಳೂರಿನಲ್ಲಿ ಗಟ್ಟಿನೆಲೆ ಹೊಂದಿರುವ ರೋಹನ್


  ಬಾಸ್ಟನ್ ಹಾಗೂ ಬೆಂಗಳೂರು ಈ ಎರಡೂ ಮಹಾನಗರಗಳಲ್ಲಿ ತನ್ನ ಮೂಲ ಹೊಂದಿರುವ ರೋಹನ್ ಅವರ ಸ್ಟಾರ್ಟಪ್, ವಾಸ್ತವಿಕ ನೆಲೆಗಟ್ಟಿನಲ್ಲಿ ಕಚೇರಿಯ ಸಿಬ್ಬಂದಿ ಬಲವು ಯಾವ ರೀತಿ ಯಂತ್ರ ಕಲಿಕೆಯನ್ನು ಬಳಸಿಕೊಂಡು ನೀಡಲಾದ ಕೆಲಸವನ್ನು ನಿಭಾಯಿಸುತ್ತಾರೆ ಎಂಬುದರ ಬಗ್ಗೆ ಮಾಹಿತಿ ಪಡೆಯುತ್ತದೆ. ಸದ್ಯ ಸೊರೊಕೋ, ಔಷಧಿ ತಯಾರಕ ಬೇಯರ್ ಎಜಿ, ಇಂಜಿನಿಯರಿಂಗ್ ವಲಯದ ರಾಬರ್ಟ್ ಬಾಶ್, ಪೆಟ್ ಫುಡ್ ಮತ್ತು ಕ್ಯಾಂಡಿ ತಯಾರಕ ಮಾರ್ಸ್ ಇಂಕ್ ಹಾಗೂ ಕೆಲವು ವಾಲ್ ಸ್ಟ್ರೀಟ್ ಬ್ಯಾಂಕುಗಳು ಮತ್ತು ಹಲವು ರಿಟೈಲರ್ ಗಳನ್ನು ತನ್ನ ಗ್ರಾಹಕರನ್ನಾಗಿ ಹೊಂದಿದೆ.


  ತಂತ್ರಗಾರಿಕಾ ಆಧಾರಿತ ಕೆಲಸಗಳು ವ್ಹೈಟ್ ಕಾಲರ್ ಕೆಲಸಗಳಿಗೂ ಮಹತ್ವ


  ಇತ್ತೀಚೆಗೆ ಬೆಂಗಳೂರಿನಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿರುವ ಸೊರೊಕೋ ಸ್ಥಾಪಕ ರೋಹನ್ ಮೂರ್ತಿ ಅವರು ಹೇಳುವಂತೆ, ಉತ್ಪಾದನಾ ಕ್ಷೇತ್ರವು ಈ ಹಿಂದೆ ಹಲವು ಪ್ರಕ್ರಿಯೆಗಳನ್ನು ಸಾಕಷ್ಟು ಸಂಸ್ಕರಿಸುವ (ರಿಫೈನಿಂಗ್) ಮೂಲಕ ಬ್ಲ್ಯೂ ಕಾಲರ್ ಕೆಲಸಗಳು ಸಾಕಷ್ಟು ಪರಿಣಾಮಕಾರಿತ್ವವನ್ನು ಹೊಂದಿರುತ್ತವೆ ಎಂಬುದನ್ನು ನಿರೂಪಿಸಿವೆ, ಆದರೆ, ಇಂದಿನ ಡಿಜಿಟಲ್ ಸಮಯದಲ್ಲಿ ಇದಕ್ಕೆ ಅನುರೂಪ ಎನ್ನಬಹುದಾದಂತಹ ಯಾವುದೂ ಇರಲಿಲ್ಲ. ಆದರೆ, ಈಗ ಈ ರೀತಿಯ ತಂತ್ರಗಾರಿಕಾ ಆಧಾರಿತ ಕೆಲಸಗಳು ವ್ಹೈಟ್ ಕಾಲರ್ ಕೆಲಸಗಳಿಗೂ ಅದೇ ರೀತಿಯ ಮಹತ್ವವನ್ನು ತಂದುಕೊಡಲಿದ್ದು ಸೊರೊಕೋ ಈಗಾಗಲೇ ಆ ಮಾರ್ಗದಲ್ಲಿ ತನ್ನ ಗುರಿಯತ್ತ ಸಾಗುತ್ತಿದೆ.


  ಟಾಸ್ಕ್ ಮೈನಿಂಗ್


  ಆಸಕ್ತಿಕರ ವಿಷಯವೆಂದರೆ ಈ ರೀತಿಯ ಕೆಲಸದ ಪರಿಕಲ್ಪನೆ ಮೂರ್ತಿ ಅವರೇ ಮೊದಲು ತಂದಿದ್ದಾರೆನ್ನಲಾಗದು. ಇದನ್ನು ಈ ಕ್ಷೇತ್ರದಲ್ಲಿ ಟಾಸ್ಕ್ ಮೈನಿಂಗ್ ಎಂದು ಸಂಭೋದಿಸಲಾಗುತ್ತದೆ. ಈಗಾಗಲೇ ದೈತ್ಯಗಳಾದ ಮೈಕ್ರೋಸಾಫ್ಟ್, ಐಬಿಎಂ, ಸ್ಯಾಪ್ ಗಳಂತಹ ಸಂಸ್ಥೆಗಳು ಈ ಪರಿಕಲ್ಪನೆಯಲ್ಲಿ ಕೆಲಸ ಮಾಡಿದ್ದು ಹೇಳಿಕೊಳ್ಳುವಷ್ಟರ ಮಟ್ಟಿಗೆ ಪ್ರಭಾವವನ್ನುಂಟು ಮಾಡಿಲ್ಲ. ಆದರೆ, ಮೂರ್ತಿ ಅವರು ತಿಳಿಸುವಂತೆ ಅವರ ವಿಧಾನವು ಸಾಂಪ್ರದಾಯಿಕಕ್ಕಿಂತ ಹೆಚ್ಚು ಸುಧಾರಿತ ಹಾಗೂ ವಿಭಿನ್ನವಾಗಿದೆ. ಸೊರೊಕೋದ ತಂತ್ರಾಂಶವು ಡೇಟಾಗಳನ್ನು ಸಂಗ್ರಹಿಸಿ ತಂಡಗಳಾದ್ಯಂತ ನಡೆಯುವ ಕೆಲಸದ ವಿವಿಧತೆಗಳನ್ವಯ ಅದನ್ನು ಮ್ಯಾಪ್ ಮಾಡುವ ಸಾಮರ್ಥ್ಯ ಹೊಂದಿದೆ. ಈ ಮೂಲಕ ಆಂತರಿಕವಾಗಿ ತಲೆದೋರಬಹುದಾದ ಹಲವು ನಿರುಪಯುಕ್ತ ಡೇಟಾಗಳನ್ನು ಅದು ಟ್ರ್ಯಾಕ್ ಮಾಡಿ ಒಟ್ಟಾರೆ ಪ್ರಕ್ರಿಯೆಯನ್ನು ಮತ್ತಷ್ಟು ಸುಧಾರಿಸುತ್ತದೆ.


  ಹೇಗೆ ಕಾರ್ಯ ನಿರ್ವಹಿಸುತ್ತೆ?


  ಒಂದು ಉದಾಹರಣೆಗೆ ಹೇಳಬೇಕೆಂದರೆ ಒಂದು ಫಾರ್ಮಾ ಕಂಪನಿಯು ಆರ್ಡರ್ ನಿರ್ವಹಿಸುವಿಕೆ ಹಾಗೂ ವಿಲೇವಾರಿಯಲ್ಲಿ ಸಾಕಷ್ಟು ವಿಳಂಬತೆಯನ್ನು ಅನುಭವಿಸುತ್ತಿತ್ತು. ಏಕೆಂದರೆ ಈ ಕೆಲಸ ಪ್ರಕ್ರಿಯೆಯಲ್ಲಿ ಹಲವು ಕಡೆಗಳಲ್ಲಿ ಮ್ಯಾನುವಲ್ ಆಗಿ ಕೆಲಸಗಳನ್ನು ಮಾಡಬೇಕಾದ ಅನಿವಾರ್ಯತೆ ಇತ್ತು. ಇದನ್ನು ಟ್ರ್ಯಾಕ್ ಮಾಡಿ ಹಾಗೂ ಆ ಕ್ಲಿಷ್ಟಕರ ಪರಿಸ್ಥಿತಿಗಳಲ್ಲಿ ಪ್ರಕ್ರಿಯೆಗಳನ್ನು ಸ್ವಯಂಚಾಲಿತವನ್ನಾಗಿ ಮಾಡುವ ಮೂಲಕ 75 ಪ್ರತಿಶತದಷ್ಟು ಸಮಯವನ್ನು ಪ್ರಕ್ರಿಯೆಯಲ್ಲಿ ಉಳಿಸಲಾಯಿತು.


  ಇದನ್ನೂ ಓದಿ: Sundar Pichai on T20 WC: ಪಾಕ್ ಕ್ರಿಕೆಟ್ ಪ್ರೇಮಿಗೆ ಸುಂದರ್ ಪಿಚ್ಚೈ ಕೌಂಟರ್, ವೈರಲ್ ಆಯ್ತು ಗೂಗಲ್ ಸಿಇಒ ರಿಪ್ಲೈ!


  ಅಸಲಿಗೆ ರೋಹನ್ ಮೂರ್ತಿ ಅವರು ಎಂಐಟಿಯ ಕಂಪ್ಯೂಟರ್ ಇಂಜಿನಿಯರ್ ಅರ್ಜುನ್ ನಾರಾಯಣ್ ಹಾಗೂ ಕಾರ್ನೀಜ್ ಮೆಲ್ಲಾನ್ ವಿವಿಯ ಪಿಹೆಚ್ಡಿ ಸಂಜಾತ ಜಾರ್ಜ್ ನೈಕಿಸ್ ಅವರೊಡನೆ ಸೇರಿಕೊಂಡು 2014 ರಲ್ಲಿ ಸೊರೊಕೋ ಅನ್ನು ಸ್ಥಾಪಿಸಿದ್ದಾರೆ.


  ಸೊರೊಕೋ ಆಂತರಿಕ ಸಿಬ್ಬಂದಿಗಳಿಗೂ ಆತಂಕ


  ಇನ್ನೊಂದೆಡೆ ಸೊರೊಕೋ ಆಂತರಿಕ ಸಿಬ್ಬಂದಿಗಳಿಗೂ ಒಂದು ರೀತಿಯ ಆತಂಕ ಉಂಟು ಮಾಡುವಂತೆ ಮಾಡಿದೆ, ಕಾರಣ, ಇದು ಅವರು ಟಾಸ್ಕ್ ಗಳನ್ನು ಹೇಗೆ ನಿಭಾಯಿಸುತ್ತಿದ್ದಾರೆ ಎಂಬುದರ ಮೇಲೆ ಹೆಚ್ಚಿನ ಬೆಳಕು ಚೆಲ್ಲುತ್ತದೆ ಎಂದು ಎವರೆಸ್ಟ್ ಗ್ರೂಪ್ಪಿನ ಉಪಾಧ್ಯಕ್ಷರಾದ ಅಮರ್ದೀಪ್ ಮೋದಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರೆ, ಸೊರೊಕೋ ಹೇಳುವ ಪ್ರಕಾರ, ಈ ಒಟ್ಟಾರೆ ಕಾರ್ಯಾಚರಣೆ ಗೌಪ್ಯ ರೀತಿಯಲ್ಲಿ ನಡೆಯುತ್ತದೆ ಹಾಗೂ ಯಾವ ಪ್ರತ್ಯೇಕ ವ್ಯಕ್ತಿಯ ಗುರುತನ್ನು ಬಹಿರಂಗಪಡಿಸಲಾಗುವುದಿಲ್ಲ.


  ಸದ್ಯ, 250 ಸಿಬ್ಬಂದಿ ಹಾಗೂ 40 ಪೇಟೆಂಟ್ ಗಳನ್ನು ಹೊಂದಿರುವ ಸೊರೊಕೋ ಸಂಸ್ಥೆಯು ಬಾಹ್ಯವಾಗಿ ಯಾವುದೇ ಹೂಡಿಕೆಯನ್ನು ಅಪೇಕ್ಷಿಸುತ್ತಿಲ್ಲ ಹಾಗೂ ಕಳೆದ ವರ್ಷ ಅದರ ಗ್ರಾಹಕರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿರುವುದಾಗಿ ರೋಹನ್ ಈ ಸಂದರ್ಭದಲ್ಲಿ ಹೇಳುತ್ತಾರೆ.

  Published by:Precilla Olivia Dias
  First published: