• Home
  • »
  • News
  • »
  • business
  • »
  • Inspiring Story: 12ನೇ ವಯಸ್ಸಿನಲ್ಲಿ ಅತ್ಯಾಚಾರ, ಮನೆಯಲ್ಲೂ ಛೀಮಾರಿ! ಇಂದು ಏಷ್ಯಾದ ನಂಬರ್​ 1 ಶ್ರೀಮಂತ ಟ್ರಾನ್ಸ್​​ಜೆಂಡರ್​!

Inspiring Story: 12ನೇ ವಯಸ್ಸಿನಲ್ಲಿ ಅತ್ಯಾಚಾರ, ಮನೆಯಲ್ಲೂ ಛೀಮಾರಿ! ಇಂದು ಏಷ್ಯಾದ ನಂಬರ್​ 1 ಶ್ರೀಮಂತ ಟ್ರಾನ್ಸ್​​ಜೆಂಡರ್​!

ಜಕ್ರಜುಟಾಟಿಪ್ 

ಜಕ್ರಜುಟಾಟಿಪ್ 

ಈಗ ಈ ಮಂಗಳಮುಖಿ ಇತ್ತೀಚೆಗೆ ಮಿಸ್​​​ ಯೂನಿವರ್ಸ್​ ಸಂಸ್ಥೆ (Miss Universe Company) ಯನ್ನು ಖರೀದಿಸಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಸುಮಾರು 1.65 ಶತಕೋಟಿ ಕೊಟ್ಟು ಈ ಮಿಸ್​​ ಯೂನಿವರ್ಸ್​ ಸಂಸ್ಥೆಯನ್ನು ಖರೀದಿಸಿದ್ದಾರೆ.

  • Share this:

ನಮ್ಮ ಸಮಾಜದಲ್ಲಿ ಇಂದಿಗೂ ಮಂಗಳಮುಖಿಯರಿಗೆ (Transgender) ಸರಿಯಾದ ಗೌರವ ಸಿಗುತ್ತಿಲ್ಲ. ಆದರೂ ಮಂಗಳಮುಖಿಯರು ಎಲ್ಲ ಕ್ಷೇತ್ರದಲ್ಲೂ ಹೆಸರು ಮಾಡುತ್ತಿದ್ದಾರೆ. ಇನ್ನೂ ಕೆಲವರು ಮಂಗಳಮುಖಿಯರ ಹೆಸರಿನಲ್ಲಿ ಭಿಕ್ಷಾಟನೆ ಮಾಡುತ್ತಿರುವುದನ್ನು ಎಲ್ಲರೂ ನೋಡಿರುತ್ತೆವೆ. ಆದರೆ, ಈ ಜಗತ್ತಿ(World) ನಲ್ಲಿ ಯಶಸ್ಸಿನ ಉತ್ತುಂಗವನ್ನು ಮುಟ್ಟುತ್ತಿರುವ ಅನೇಕ ಮಂಗಳಮುಖಿಯರು. ಇಂದು ನಾವು ಅಂಥವರಲ್ಲಿ ಒಬ್ಬರ ಮಂಗಳಮುಖಿಯ ಕಥೆಯನ್ನು ನಿಮಗೆ ಹೇಳಲಿದ್ದೇವೆ. ಈಗ ಈ ಮಂಗಳಮುಖಿ ಇತ್ತೀಚೆಗೆ ಮಿಸ್​​​ ಯೂನಿವರ್ಸ್​ ಸಂಸ್ಥೆ (Miss Universe Company) ಯನ್ನು ಖರೀದಿಸಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಸುಮಾರು 1.65 ಶತಕೋಟಿ ಕೊಟ್ಟು ಈ ಮಿಸ್​​ ಯೂನಿವರ್ಸ್​ ಸಂಸ್ಥೆಯನ್ನು ಖರೀದಿಸಿದ್ದಾರೆ.


ಒಂದು ಕಾಲದಲ್ಲಿ ಈ ಸಂಸ್ಥೆಯ ಮಾಲೀಕರಾಗಿದ್ದವರು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​. ಈ ಮಿಸ್​ ಯೂನಿವರ್ಸ್​ ಸಂಸ್ಥೆಯು 71 ವರ್ಷಗಳ ಹಿಂದಿನಿಂದಲೂ ಮಿಸ್​ ಯೂನಿವರ್ಸ್​ ಸ್ಪರ್ಧೆಯನ್ನು ಆಯೋಜಿಸುತ್ತದೆ. ಇದು ಪ್ರಪಂಚದ 165 ದೇಶಗಳಿಂದಲೂ ಈ ಸ್ಫರ್ಧೆಯಲ್ಲಿ ಭಾಗವಹಿಸುತ್ತಾರೆ.


ಮಿಸ್​ ಯೂನಿವರ್ಸ್ ಸಂಸ್ಥೆ ಖರೀದಿಸಿದ ಜಕ್ರಜುಟಾಟಿಪ್​!


ಇಂದು ಇಲ್ಲಿ ಹೇಳುತ್ತಿರುವ ಮಂಗಳಮುಖಿಯ ಹೆಸರು ಜಕ್ರಜುಟಾಟಿಪ್. ಅವರು ಥೈಲ್ಯಾಂಡ್‌ನ ಮಹಿಳಾ ಉದ್ಯಮಿ. ಅನ್ನಿ JKN ಗ್ಲೋಬಲ್ ಗ್ರೂಪ್‌ನ CEO ಮತ್ತು ಕಂಪನಿಯ ಅತಿದೊಡ್ಡ ಷೇರುದಾರರಾಗಿದ್ದಾರೆ. ಜಕ್ರಜುಟಾಟಿಪ್​ ಥೈಲ್ಯಾಂಡ್‌ನಲ್ಲಿ ಪ್ರಸಿದ್ಧರಾಗಿದ್ದಾರೆ. ಅವರ ಕಂಪನಿಯು ಹಲವಾರು ಸೌಂದರ್ಯ ಸ್ಪರ್ಧೆಗಳನ್ನು ನಡೆಸುತ್ತದೆ, ಪ್ರಾಜೆಕ್ಟ್ ರನ್ವೇ ಮತ್ತು ಶಾರ್ಕ್ ಟ್ಯಾಂಕ್ ಸ್ಪರ್ಧೆ ನಡೆಸುತ್ತೆ.


ಯಶಸ್ಸಿನ ಹಾದಿ ತುಂಬೆಲ್ಲಾ ಮುಳ್ಳು!


ತೃತೀಯಲಿಂಗಿಯಾಗಿದ್ದ ಅವರು ಯಶಸ್ವಿ ಉದ್ಯಮಿಯಾಗುವ ಪಯಣ ಸುಲಭವಾಗಿರಲಿಲ್ಲ. ಟೈಮ್ಸ್ ಆಫ್ ಇಂಡಿಯಾ ಕೆಲವು ವರ್ಷಗಳ ಹಿಂದೆ ಜಕ್ರಜುಟಾಟಿಪ್ ಕಥೆಯನ್ನು ಪ್ರಕಟಿಸಿತು. ಜಕ್ರಜುಟಾಟಿಪ್ ಆಗಾಗ್ಗೆ ಭಾರತಕ್ಕೆ ಭೇಟಿ ನೀಡುತ್ತಾರೆ. ಅವರ ಕಂಪನಿಯು ಥೈಲ್ಯಾಂಡ್‌ನಲ್ಲಿ ಬಾಲಿವುಡ್ ಚಲನಚಿತ್ರಗಳನ್ನು ಪ್ರಸಾರ ಮಾಡುತ್ತದೆ.


ಇದನ್ನೂ ಓದಿ: ಸಾಂಪ್ರದಾಯಿಕ ವಿಧಾನದಲ್ಲಿ ತೆಂಗಿನ ಎಣ್ಣೆ ತಯಾರಿಕೆ, ಕೇರಳದ ತಾಯಿ-ಮಗಳ ಯಶಸ್ಸಿನ ಕಥೆ ಇದು!


ಜಕ್ರಜುಟಾಟಿಪ್ ತನ್ನ ಹೋರಾಟದ ಬಗ್ಗೆ ಹಲವಾರು ಬಾರಿ ಮಾತನಾಡಿದ್ದಾರೆ. ತಾನು ಥೈಲ್ಯಾಂಡ್‌ನಲ್ಲಿ ಚೀನಾದ ಕುಟುಂಬದಲ್ಲಿ ಜನಿಸಿದೆ ಎಂದು ಹೇಳಿದ್ದಾರೆ. ಜಕ್ರಜುಟಾಟಿಪ್ ಒಬ್ಬರೇ ಮಗ. ಮೊದಲು ಬಾಲಕರ ಶಾಲೆಯಲ್ಲಿ ಶಿಕ್ಷಣ ಪಡೆದುಕೊಂಡಿದ್ದರು. ಆ ಸಮಯದಲ್ಲಿ ಅವರು ಸಾಕಷ್ಟು ದೈಹಿಕ ಕಿರುಕುಳ ಅನುಭವಿಸಿದ್ದರಂತೆ. ಗಂಡಾಗಿ ಹುಟ್ಟಿದ್ದರೂ ಹೆಣ್ಣಿನಂತೆ ವರ್ತಿಸೋಕೆ, ಮಾತನಾಡುವುದಕ್ಕೆ ಶುರು ಮಾಡಿದ್ದರಂತೆ.


12ನೇ ವಯಸ್ಸಿಗೆ ಅತ್ಯಾಚಾರ!


12 ನೇ ವಯಸ್ಸಿನಲ್ಲಿ, ಅವರ ಶಿಕ್ಷಕರೊಬ್ಬರು ಇವರ ಮೇಲೆ ಅತ್ಯಾಚಾರ ಮಾಡಿದ್ದರಂತೆ. ಈ ಘಟನೆ ಬಳಿಕ ಜಕ್ರಜುಟಾಟಿಪ್ ಜನರೊಂದಿಗೆ ಹೆಚ್ಚಾಗಿ ಬೆರೆಯುತ್ತಿರಲಿಲ್ವಂತೆ. ಕೊನೆಗೆ ಇದರಿಂದ ಹೊರಬರಬೇಕು ಅಂತ ನಿರ್ಧರಿಸಿದ್ದರು. ಚ್ಚಿನ ವಿದ್ಯಾಭ್ಯಾಸಕ್ಕಾಗಿ ಆಸ್ಟ್ರೇಲಿಯಾಕ್ಕೆ ಹೋದರು. ಅಲ್ಲಿ ಅವರು ಹೆಣ್ಣಾಗಿ ಬದಲಾದರು.


ಖಿನ್ನತೆಗೆ ಒಳಗಾಗಿದ್ದ ಪೋಷಕರು!


ಜಕ್ರಜುಟಾಟಿಪ್ ಅವರ ಸ್ಥಿತಿ ಕಂಡು ಅವರ ಪೋಷಕರು ಖಿನ್ನತೆಗೆ ಒಳಗಾಗಿದ್ದರಂತೆ. ಕೊನೆಗೆ ಸುಮಾರು ನಾಲ್ಕು ವರ್ಷಗಳ ಕಾಲ ಮನೆಯಿಂದ ದೂರವಿದ್ದರು. ಹೀಗಿದ್ದಾಗ ಇವರಿಗೆ ಹೆಗಲು ನೀಡಿದ್ದು ಅವರ ಸಹೋದರಿಯಂತೆ.


ಇದನ್ನೂ ಓದಿ: ಹವ್ಯಾಸದಿಂದ ಸಣ್ಣ ಉದ್ಯಮವಾಗಿ ಬೆಳೆದ ಬಬಲ್‌ ಟ್ರೋವ್​, ಈ ಹ್ಯಾಂಡ್‌ಮೇಡ್‌ ಸೋಪ್​ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್!


ನಂತರ ಇಬ್ಬರು ಸಹೋದರಿಯರು ಕಂಪನಿಯನ್ನು ಸ್ಥಾಪಿಸಿದರು ಮತ್ತು ವ್ಯಾಪಾರದ ಜಗತ್ತಿಗೆ ಕಾಲಿಟ್ಟರು. ಈ ಉತ್ಸಾಹದಿಂದಾಗಿಯೇ ಅವರು ಇಂದು ಏಷ್ಯಾದ ಮೊದಲ ಟ್ರಾನ್ಸ್ಜೆಂಡರ್ ಸಿಇಒ ಆಗಿದ್ದಾರೆ. ಅವರ ಕಂಪನಿಯು ಮಿಸ್ ಯೂನಿವರ್ಸ್ ಸಂಸ್ಥೆಯನ್ನು ಖರೀದಿಸಿದೆ. ಇಂದು ಅವರು ಸುಮಾರು 17 ಕೋಟಿ ಡಾಲರ್ ಅಂದರೆ 14 ಬಿಲಿಯನ್ ರೂಪಾಯಿ ಆಸ್ತಿ ಹೊಂದಿದ್ದಾರೆ.

Published by:ವಾಸುದೇವ್ ಎಂ
First published: