ಟೆಸ್ಲಾ ಇಂಕ್ ಥೈಲ್ಯಾಂಡ್ನಲ್ಲಿ ಎರಡು ಎಲೆಕ್ಟ್ರಿಕ್ ವೆಹಿಕಲ್ (ಇವಿ) ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಜಪಾನ್ ತಯಾರಕರ ಪ್ರಾಬಲ್ಯವಿರುವ ಪ್ರಾದೇಶಿಕ ಅಟೋಸ್ ಹಬ್ಗೆ ತನ್ನ ಮೊದಲ ಪ್ರವೇಶವನ್ನು ಈ ಮೂಲಕ ಗುರುತಿಸಿಕೊಂಡಿದೆ. 1.7 ಮಿಲಿಯನ್ ಬಹ್ಟ್ನಿಂದ 2.5 ಮಿಲಿಯನ್ ಬಹ್ಟ್ (($48,447 ರಿಂದ $71,205) ಬೆಲೆಯೊಂದಿಗೆ ಎರಡು ವಾಹನಗಳ ಬಿಡುಗಡೆಯು ತೆರಿಗೆ ಕಡಿತ ಮತ್ತು ಸಬ್ಸಿಡಿಗಳನ್ನು ನೀಡುವ ಮೂಲಕ ಇಲೆಕ್ಟ್ರಿಕ್ ವೆಹಿಕಲ್ ಅಳವಡಿಕೆ ಮತ್ತು ಉತ್ಪಾದನೆಗೆ ಒತ್ತು ನೀಡುತ್ತಿದೆ.
ಚೈನೀಸ್ ಬ್ರ್ಯಾಂಡ್ಗಳಿಗೆ ಕಠಿಣ ಪೈಪೋಟಿ
ಯುಎಸ್ ವಾಹನ ತಯಾರಕ ಸಂಸ್ಥೆ ತೆಸ್ಲಾ, ಆನ್ಲೈನ್ ವ್ಯವಸ್ಥೆಗಳ ಮೂಲಕ ತಯಾರಿಸಿದ ಇಲೆಕ್ಟ್ರಿಕ್ ವೆಹಿಕಲ್ಗಳನ್ನು ಆಗ್ನೇಯ ಏಷ್ಯಾದ ಎರಡನೇ ಅತಿದೊಡ್ಡ ಆರ್ಥಿಕತೆಯಲ್ಲಿ ಮಾರಾಟ ಮಾಡಲು ಪ್ರಾರಂಭಿಸಲು ಯೋಜಿಸಿದೆ. ಮುಂದಿನ ವರ್ಷದ ಆರಂಭದಲ್ಲಿ ವಾಹನಗಳ ಡೆಲಿವರಿ ಪ್ರಾರಂಭವಾಗಲಿದೆ ಎಂದು ವರದಿಗಳು ತಿಳಿಸಿವೆ.
ಚೈನೀಸ್ ಬ್ರ್ಯಾಂಡ್ಗಳಾದ BYD ಹಾಗೂ ಗ್ರೇಟ್ ವಾಲ್ ಮೋಟಾರ್ಸ್ನಂತಹ ಸಂಸ್ಥೆಗಳಿಂದ ಕಠಿಣ ಸ್ಪರ್ಧೆಯನ್ನು ತೆಸ್ಲಾ ಎದುರಿಸಲಿದ್ದು, ಇತ್ತೀಚಿನ ವರ್ಷಗಳಲ್ಲಿ ಗ್ರಾಹಕರನ್ನು ತಲುಪಲು 800,000 ಬಹ್ಟ್ನಿಂದ ಪ್ರಾರಂಭವಾಗುವ ಬೆಲೆಗಳೊಂದಿಗೆ ಎಲೆಕ್ಟ್ರಿಕ್ ವಾಹನಗಳನ್ನು ವಿತರಿಸಲು ಶೋರೂಮ್ಗಳು ಮತ್ತು ವಿತರಣಾ ಪಾಲುದಾರರನ್ನು ಸ್ಥಾಪಿಸಿದೆ. ಸೇಲ್ಸ್ ಟಾರ್ಗೆಟ್ಗಳ ಕುರಿತು ತೆಸ್ಲಾ ಮಾಹಿತಿ ನೀಡಿಲ್ಲ. ಅದಾಗ್ಯೂ ಸ್ಥಳೀಯ ಬ್ರ್ಯಾಂಡ್ಗಳಿಗೆ ಭರ್ಜರಿ ಪೈಪೋಟಿ ನೀಡುವ ಮೂಲಕ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುವ ಎಲ್ಲಾ ಯೋಜನೆಗಳನ್ನು ತೆಸ್ಲಾ ಕಾರ್ಯರೂಪಕ್ಕೆ ತಂದಿದೆ.
ಇದನ್ನೂ ಓದಿ: ನೀವು ಯಾವಾಗಲೂ ರೈಲಿನಲ್ಲಿ ಪ್ರಯಾಣ ಮಾಡ್ತೀರಾ? ಹೊಸ ರೂಲ್ಸ್ ಬಗ್ಗೆ ಮೊದಲು ತಿಳಿದುಕೊಳ್ಳಿ!
ಅಂತರಾಷ್ಟ್ರೀಯ ಮಟ್ಟದಲ್ಲಿ ಗುರಿ ಇರಿಸಿರುವ ತೆಸ್ಲಾ
ಟೊಯೋಟಾ ಮೋಟಾರ್ ಕಾರ್ಪೊರೇಶನ್ ಹಾಗೂ ಹೋಂಡಾ ಮೋಟರ್ ಕೋ ಲಿಮಿಟೆಡ್ನಂತಹ ಕಂಪನಿಗಳಿಗೆ ಏಷ್ಯಾದ ನಾಲ್ಕನೇ ಅತಿದೊಡ್ಡ ಸ್ವಯಂ ಜೋಡಣೆ ಮತ್ತು ರಫ್ತು ಕೇಂದ್ರವಾಗಿರುವ ಥಾಯ್ಲೆಂಡ್ ವಾರ್ಷಿಕವಾಗಿ ಸುಮಾರು 1.5 ಮಿಲಿಯನ್ನಿಂದ 2 ಮಿಲಿಯನ್ ವಾಹನಗಳನ್ನು ಉತ್ಪಾದಿಸುತ್ತದೆ ಹಾಗೂ ಇದರಲ್ಲಿ ಅರ್ಧದಷ್ಟನ್ನು ರಫ್ತು ಮಾಡುತ್ತದೆ. ತೆಸ್ಲಾ ಕೂಡ ತನ್ನ ಎರಡು ಎಲೆಕ್ಟ್ರಿಕ್ ವಾಹನಗಳ ಬಿಡುಗಡೆಯನ್ನು ಥಾಯ್ಲೆಂಡ್ನಲ್ಲಿ ಮಾಡಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಕೂಡ ಸಂಸ್ಥೆ ಗುರಿಇರಿಸಿರುವುದು ಖಾತ್ರಿಯಾಗಿದೆ.
ತೆಸ್ಲಾದ ಇಲೆಕ್ಟ್ರಿಕ್ ವಾಹನಗಳತ್ತ ದೌಡಾಯಿಸುತ್ತಿರುವ ಗ್ರಾಹಕರು
ಇಂಧನ ಆಧಾರಿತ ವಾಹನಗಳನ್ನು ವಿಶೇಷವಾಗಿ ಜಪಾನೀಸ್ ಬ್ರ್ಯಾಂಡ್ಗಳಿಂದ ತಯಾರಿಸಲಾಗುತ್ತಿದ್ದು ಮಾರುಕಟ್ಟೆಯ ಮೇಲೆ ಪ್ರಾಬಲ್ಯ ಸಾಧಿಸಿವೆ ಅದಾಗ್ಯೂ ತೆಸ್ಲಾದ ಇವಿಗಳು ನಿಧಾನವಾಗಿ ಈ ಪ್ರಾಬಲ್ಯದ ಮೇಲೆ ಹಿಡಿತ ಸಾಧಿಸುವ ಪ್ರಯತ್ನದಲ್ಲಿದ್ದು 2022 ರ ಮೊದಲ ಹತ್ತು ತಿಂಗಳಲ್ಲಿ ಸುಮಾರು 7,000 ಹೊಸ ಬ್ಯಾಟರಿ EV ಗಳನ್ನು ನೋಂದಾಯಿಸಲಾಗಿದೆ ಎಂದು ಥೈಲ್ಯಾಂಡ್ ಆಟೋಮೋಟಿವ್ ಇನ್ಸ್ಟಿಟ್ಯೂಟ್ ತಿಳಿಸಿದ್ದು, ಕಳೆದ ವರ್ಷಕ್ಕಿಂತ 2,000 ಹೆಚ್ಚಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ: ಗ್ರಾಹಕರಿಗೆ ಹೊಸ ವರ್ಷದ ಉಡುಗೊರೆ, ಈ ಬ್ಯಾಂಕ್ನಿಂದ ಪ್ರಮುಖ ಘೋಷಣೆ!
30% ವಾಹನಗಳು ಎಲೆಕ್ಟ್ರಿಕ್ ಆಗಿರಬೇಕು ಸರಕಾರದ ಹೇಳಿಕೆ
ಸೆಂಟ್ರಲ್ ಬ್ಯಾಂಕಾಕ್ನ ಐಷಾರಾಮಿ ಮಾಲ್ನಲ್ಲಿ ತೆಸ್ಲಾ ತನ್ನ ಇಲೆಕ್ಟ್ರಿಕ್ ವಾಹನಗಳ ಬಿಡುಗಡೆಯನ್ನು ಪ್ರದರ್ಶಿಸಿದ ನಂತರ ಇವಿಗಳನ್ನು ಖರೀದಿಸಲು ಮುಂದೆಬರುತ್ತಿರುವ ಗ್ರಾಹಕರ ಸಂಖ್ಯೆಯಲ್ಲೂ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಇತರ ಇವಿ ಬ್ರ್ಯಾಂಡ್ಗಳಿಗಿಂತ ತೆಸ್ಲಾದ ಇವಿಗಳ ಬೆಲೆಗಳ ವಿಶ್ಲೇಷಣೆಯನ್ನು ಯಾರೂ ಗಮನಿಸುತ್ತಿಲ್ಲ ಹಾಗೂ ವ್ಯತ್ಯಾಸಗಳನ್ನು ನೋಡುತ್ತಿಲ್ಲ ಎಂದು ತಿಳಸಿರುವ ಸಂಸ್ಥೆಯ ಉದ್ಯೋಗಿ ತಿಟಿಪುನ್ ಪೈಸಿರಿಕುಲ್ ನಾನು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಉತ್ಸುಕನಾಗಿರುವೆ ಅಂತೆಯೇ ಕಾರಿನ ಮರು-ಮಾರಾಟದ ಮೌಲ್ಯವೂ ಅಧಿಕವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ