• Home
  • »
  • News
  • »
  • business
  • »
  • Elon Musk: ಟ್ವಿಟರ್​ನಲ್ಲಿ ಮುಳುಗಿ, ಟೆಸ್ಲಾ ಮರೆತ್ರಾ ಎಲಾನ್​ ಮಸ್ಕ್​? ಹೂಡಿಕೆದಾರರಿಗೆ ಟೆನ್ಶನ್​!

Elon Musk: ಟ್ವಿಟರ್​ನಲ್ಲಿ ಮುಳುಗಿ, ಟೆಸ್ಲಾ ಮರೆತ್ರಾ ಎಲಾನ್​ ಮಸ್ಕ್​? ಹೂಡಿಕೆದಾರರಿಗೆ ಟೆನ್ಶನ್​!

ಎಲಾನ್​ ಮಸ್ಕ್​​

ಎಲಾನ್​ ಮಸ್ಕ್​​

ಟ್ವಿಟರ್‌ ಅನ್ನು ಸ್ವಾಧೀನಪಡಿಸಿಕೊಂಡ ನಂತರ ಜಾಲತಾಣದ ಸಂಪೂರ್ಣ ಬದಲಾವಣೆಯನ್ನು ಹಂತ ಹಂತವಾಗಿ ನಡೆಸಿಕೊಂಡು ಬರುತ್ತಿರುವ ಮಸ್ಕ್, ಟ್ವಿಟರ್ ಅನ್ನು ತಮ್ಮ ಇಚ್ಛೆಗೆ ತಕ್ಕಂತೆ ಬದಲಿಸುತ್ತಿದ್ದಾರೆ.

  • Share this:

ಟ್ವಿಟರ್ (Twitter) ತಾಣವನ್ನು $ 44 ಶತಕೋಟಿಗೆ ಸ್ವಾಧೀನಪಡಿಸಿಕೊಂಡ ವಿಶ್ವ ಕುಬೇರ ಎಲಾನ್​ ಮಸ್ಕ್, ಸಂಸ್ಥೆಯ ಪ್ರಧಾನ ಕಚೇರಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ರಾತ್ರಿಪೂರ್ತಿ ಕೆಲಸಮಾಡಿ ಇಲ್ಲಿಯೇ ರಾತ್ರಿ ನಿದ್ರಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಕೋಟ್ಯಧಿಪತಿ ಮ್ಯಾನೇಜರ್ ಎಂದು ತನ್ನನ್ನು ತಾನೇ ಹೊಗಳಿಕೊಂಡಿರುವ ಮಸ್ಕ್, ಬಿಕ್ಕಟ್ಟಿನ ಕ್ಷಣಗಳಲ್ಲಿ ದೀರ್ಘಕಾಲ ಕೆಲಸ ಮಾಡುವ ಒಲವು ಹೊಂದಿರುವ ವ್ಯಕ್ತಿಯಾಗಿದ್ದಾರೆ ಹಾಗೂ ಈ ಪ್ರವೃತ್ತಿಯೇ ಮಸ್ಕ್ ಅವರ ಬ್ರ್ಯಾಂಡ್ ಅನ್ನು ಪ್ರಸಿದ್ಧಗೊಳಿಸಿದೆ.


ಟೆಸ್ಲಾ ಹೂಡಿಕೆದಾರರ ಚಿಂತೆಗೆ ಕಾರಣವೇನು?


ಟ್ವಿಟರ್‌ ಅನ್ನು ಸ್ವಾಧೀನಪಡಿಸಿಕೊಂಡ ನಂತರ ಜಾಲತಾಣದ ಸಂಪೂರ್ಣ ಬದಲಾವಣೆಯನ್ನು ಹಂತ ಹಂತವಾಗಿ ನಡೆಸಿಕೊಂಡು ಬರುತ್ತಿರುವ ಮಸ್ಕ್, ಟ್ವಿಟರ್ ಅನ್ನು ತಮ್ಮ ಇಚ್ಛೆಗೆ ತಕ್ಕಂತೆ ಬದಲಿಸುತ್ತಿದ್ದಾರೆ. ಇದೀಗ ಮಸ್ಕ್ ಅವರ ನಡೆ ಯಾವ ರೀತಿಯದ್ದು ಎಂಬುದನ್ನು ಊಹಿಸಲು ಆಗದೇ ಟೆಸ್ಲಾ ಹೂಡಿಕೆದಾರರು ಚಿಂತಿತರಾಗಿದ್ದಾರೆ.


ವಿಶ್ವದ ಅತ್ಯಂತ ಬೆಲೆ ಬಾಳುವ ಕಾರು ತಯಾರಕ ಸಂಸ್ಥೆಯ ಸಿಇಒ ಆಗಿ ತಮ್ಮ ಪಾತ್ರವನ್ನು ಹೇಗೆ ನಿರ್ವಹಿಸುತ್ತಾರೆ ಮತ್ತು ಯಾವ ರೀತಿ ಕೇಂದ್ರೀಕರಿಸುತ್ತಾರೆಂಬ ಮಸ್ಕ್ ಸಾಮರ್ಥ್ಯದ ಬಗ್ಗೆ ಹೂಡಿಕೆದಾರರ ತಳಮಳ ವ್ಯಕ್ತಪಡಿಸಿದ್ದಾರೆ.


ಟೆಸ್ಲಾಗಿಂತ ಟ್ವಿಟರ್ ಮೇಲೆ ಹೆಚ್ಚು ಗಮನಹರಿಸಿರುವ ಮಸ್ಕ್


ಟೆಸ್ಲಾ ಹೂಡಿಕೆದಾರರ ನಿರಾಶೆಗೊಳ್ಳಲಿದ್ದಾರೆ ಎಂದು ತಿಳಿಸಿರುವ ವೆಂಚರ್ ಕ್ಯಾಪಿಟಲ್ ಸಂಸ್ಥೆಯ ಲೌಪ್ ವೆಂಚರ್ಸ್‌ನ ವ್ಯವಸ್ಥಾಪಕ ಪಾಲುದಾರ ಜೀನ್ ಮನ್‌ಸ್ಟರ್, ಟೆಸ್ಲಾದಲ್ಲಿ ಸಮಯ ವಿನಿಯೋಗಿಸುವುದಕ್ಕಿಂತ ಹೆಚ್ಚು ಎಲಾನ್​ ಮಸ್ಕ್ ಟ್ವಿಟರ್‌ನಲ್ಲಿ ಕಾಲ ಕಳೆಯಲಿದ್ದಾರೆ ಎಂದು ಹೇಳಿದ್ದಾರೆ.


ಟೆಸ್ಲಾದಲ್ಲಿ $56 ಶತಕೋಟಿ ವೇತನ ಪ್ಯಾಕೇಜ್ ಸಮರ್ಥನೆಯಾಗಿದೆಯೇ ಎಂಬುದರ ಕುರಿತು ನ್ಯಾಯಾಲಯದಲ್ಲಿ ಸಾಕ್ಷ್ಯನೀಡುವ ನಿರೀಕ್ಷೆಯಿರುವ ಮಸ್ಕ್, ರಾಯಿಟರ್ಸ್ ಪ್ರತಿಕ್ರಿಯೆಗೆ ಉತ್ತರಿಸಲಿಲ್ಲ ಎಂಬುದು ತಿಳಿದುಬಂದಿದೆ.


ಟೆಸ್ಲಾ ಷೇರುಗಳ ಕುಸಿತ


ಟ್ವಿಟರ್‌ನಲ್ಲಿ ಮಾತ್ರವಲ್ಲದೆ ಟೆಸ್ಲಾ ಕೂಡ ನನ್ನ ಕಾರ್ಯಾಚರಣೆಯ ಭಾಗವಾಗಿದೆ ಎಂದು ತಿಳಿಸಿರುವ ಮಸ್ಕ್, ಈ ವಾರ ಎಲೆಕ್ಟ್ರಿಕ್ ವಾಹನ ತಯಾರಿಕಾ ವಿಭಾಗದಲ್ಲಿ ಕೆಲಸ ಮಾಡುವುದಾಗಿ ಟ್ವೀಟ್ ಮಾಡಿದ್ದಾರೆ. ಟೆಸ್ಲಾ ಕ್ಯಾಲಿಫೋರ್ನಿಯಾದ ಪಾಲೊ ಆಲ್ಟೊದಲ್ಲಿ ಕಚೇರಿಯನ್ನು ಹೊಂದಿದೆ ಮತ್ತು ಕ್ಯಾಲಿಫೋರ್ನಿಯಾದ ಫ್ರೀಮಾಂಟ್‌ನಲ್ಲಿ ಕಾರ್ಖಾನೆಯನ್ನು ಹೊಂದಿದೆ.


ಏಪ್ರಿಲ್ ಆರಂಭದಿಂದ ಟೆಸ್ಲಾ ಷೇರುಗಳು 50% ದಷ್ಟು ಕುಸಿದಿದ್ದು, ಟ್ವಿಟರ್‌ನಲ್ಲಿ ಷೇರುಗಳನ್ನು ತೆಗೆದುಕೊಂಡಿರುವುದಾಗಿ ಬಹಿರಂಗಪಡಿಸಿದ್ದಾರೆ. ಮಸ್ಕ್, ಟ್ವಿಟರ್ ಷೇರುಗಳನ್ನು ಬಹಿರಂಗಪಡಿಸಿದಾಗಿನಿಂದ ಒಟ್ಟು $20 ಬಿಲಿಯನ್ ಮೌಲ್ಯದ ಮಸ್ಕ್ ಅವರ ಟೆಸ್ಲಾ ಷೇರುಗಳ ಮಾರಾಟವು ಒತ್ತಡವನ್ನು ಇನ್ನಷ್ಟು ಹೆಚ್ಚಿಸಿದೆ.


ಇದನ್ನೂ ಓದಿ: ಪ್ರತಿ ತಿಂಗಳು 12,500 ರೂಪಾಯಿ ಉಳಿಸಿದ್ರೆ, 2.27 ಕೋಟಿ ಸಿಗುತ್ತೆ! ಅದೇಗಪ್ಪಾ ಅಂತೀರಾ? ಇಲ್ಲಿ ನೋಡಿ


ಟೆಸ್ಲಾಗಿಂತ ಟ್ವಿಟರ್ ಕಡೆಗೆ ಒಲವು


ಟೆಸ್ಲಾ ಚೀನಾದಲ್ಲಿನ ಬೇಡಿಕೆಯ ಒತ್ತಡದಿಂದ ಯುನೈಟೆಡ್ ಸ್ಟೇಟ್ಸ್‌ನಲ್ಲಿ ತನ್ನ "ಆಟೋಪೈಲಟ್" ಚಾಲಕ ಸಹಾಯ ತಂತ್ರಜ್ಞಾನದ ಸಾಮರ್ಥ್ಯಗಳ ಕುರಿತು ನಿಯಂತ್ರಕ ತನಿಖೆಗೆ ಸವಾಲುಗಳ ಪಟ್ಟಿಯನ್ನು ಎದುರಿಸುತ್ತಿದೆ. ರಾಯಿಟರ್ಸ್ ತಿಳಿಸಿರುವಂತೆ, ಟ್ವಿಟರ್ ಅನ್ನು ಪುನಃ ಸಿದ್ಧಗೊಳಿಸುವ ಮಸ್ಕ್ ಅವರ ಟ್ವೀಟ್‌ಗಳು ಅಕ್ಟೋಬರ್‌ನಲ್ಲಿ ಮಸ್ಕ್ ಸ್ವಾಧೀನಪಡಿಸಿಕೊಂಡ ಪ್ಲಾಟ್‌ಫಾರ್ಮ್‌ನಲ್ಲಿ ಅವರ ಪೋಸ್ಟಿಂಗ್‌ಗಳ ಮೂರನೇ ಎರಡಕ್ಕಿಂತ ಹೆಚ್ಚಿದೆ ಎಂಬುದಾಗಿ ವರದಿ ಮಾಡಿದೆ.


ಟೆಸ್ಲಾ ಕುರಿತು ಮಸ್ಕ್ ನವೆಂಬರ್ 1 ರಿಂದ ನವೆಂಬರ್ 15 ರವರೆಗೆ ಮಾಡಿರುವ ಟ್ವೀಟ್‌ಗಳಲ್ಲಿ 3% ದಷ್ಟನ್ನು ಹೊಂದಿದ್ದು, ಇದು ಹಿಂದಿನ ಎಂಟು ತಿಂಗಳಿಗಿಂತ ಸರಾಸರಿ 16% ಇಳಿಕೆಯಾಗಿದೆ ಎಂದು ವರದಿಯಾಗಿದೆ.


ಟೆಸ್ಲಾದಲ್ಲಿ ಮಸ್ಕ್ ಅವಲಂಬನೆ ಕಡಿಮೆ ಇದೆ


ಮುಂದಿನ ಆರರಿಂದ 12 ತಿಂಗಳುಗಳವರೆಗೆ ಟ್ವಿಟರ್ ಮಸ್ಕ್ ಅವರ ಗಮನವನ್ನು ತನ್ನತ್ತ ಸೆಳೆಯಲಿದ್ದು ಅವರು ತಮ್ಮ ಸಂಪೂರ್ಣ ಸಮಯವನ್ನು ಜಾಲತಾಣಕ್ಕಾಗಿ ವಿನಿಯೋಗಿಸಲಿದ್ದಾರೆ ಎಂದು ಮನ್‌ಸ್ಟರ್ ತಿಳಿಸಿದ್ದಾರೆ. ಹಿಂದೆಂದಿಗಿಂತಲೂ ಟೆಸ್ಲಾ ಹೆಚ್ಚು ಅಭಿವೃದ್ಧಿಯನ್ನು ಕಂಡುಕೊಂಡಿದ್ದು ಮಸ್ಕ್ ಮೇಲೆ ಕಡಿಮೆ ಅವಲಂಬಿತವಾಗಿದೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: ಅಂಚೆ ಕಚೇರಿಯ 4 ಅದ್ಭುತ ಯೋಜನೆ, 400 ರೂಪಾಯಿ ಉಳಿಸಿ 40 ಲಕ್ಷ ಗಳಿಸಿ!


ಆಗಸ್ಟ್‌ನಲ್ಲಿ ನಡೆದ ಟೆಸ್ಲಾ ವಾರ್ಷಿಕ ಸಭೆಯಲ್ಲಿ ಮಸ್ಕ್ ತನ್ನ ಸಹೋದ್ಯೋಗಿಗಳ ಪ್ರಶ್ನೆಗೆ ಉತ್ತರಿಸುತ್ತಾ ನಾವಿಲ್ಲಿ ತುಂಬಾ ಪ್ರತಿಭಾವಂತ ತಂಡವನ್ನು ಹೊಂದಿದ್ದೇವೆ. ಏಲಿಯನ್‌ಗಳಿಂದ ಅಪಹರಣಕ್ಕೊಳಗಾದರೂ ಅಥವಾ ಗ್ರಹಕ್ಕೆ ಹಿಂತಿರುಗಿದರೂ ಟೆಸ್ಲಾ ಉತ್ತಮವಾಗಿಯೇ ಕಾರ್ಯನಿರ್ವಹಿಸಲಿದೆ ಎಂಬ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಬಿಲಿಯನೇರ್ ಹೂಡಿಕೆದಾರ ಟಿಮ್ ಡ್ರೇಪರ್ ಹೇಳುವಂತೆ ಎಲೋನ್ ಮಸ್ಕ್, ಮಾಡಬೇಕು ಅಂದುಕೊಂಡಿದ್ದನ್ನು ಕ್ಷಣದಲ್ಲೇ ಕೈಗೂಡವಂತೆ ಮಾಡುವ ಉದ್ಯಮಿ. ನಿಜಕ್ಕೂ ಆತ ಒಬ್ಬ ಅದ್ಭುತ ವ್ಯಕ್ತಿ ಎಂದು ಹೊಗಳಿದ್ದಾರೆ.

Published by:ವಾಸುದೇವ್ ಎಂ
First published: