ಸಂಪಾದನೆ (Earning) ಮಾಡುವುದಷ್ಟೇ ಮುಖ್ಯವಲ್ಲ. ಸಂಪಾದನೆ ಮಾಡಿದ ಹಣವನ್ನೂ (Money) ಉಳಿಸುವುದು (Savings) ಅತೀ ಮುಖ್ಯವಾದದ್ದು ಎಂದರೆ ತಪ್ಪಾಗಲ್ಲ. ಹೀಗಾಗಿ ನಮ್ಮ ಜನ ದುಡಿದ ಹಣವನ್ನು ಬ್ಯಾಂಕ್ನಲ್ಲಿ (Bank) ಯಾವುದೋ ಒಂದು ಅಕೌಂಟ್ ಮಾಡಿಸಿ ಸೇವ್ ಮಾಡುತ್ತಾರೆ. ಹಣವನ್ನು ಸುರಕ್ಷಿತವಾಗಿಡುವ ಉದ್ದೇಶದಿಂದ ನಾವು ಬ್ಯಾಂಕ್ ಖಾತೆಗಳಲ್ಲಿ ಹಣವನ್ನು ಇಡುತ್ತೇವೆ. ಬ್ಯಾಂಕ್‌ಗಳು ಗ್ರಾಹಕರಿಗೆ ಉಳಿತಾಯ (Savings Account) , ಚಾಲ್ತಿ ಖಾತೆ ಅಥವಾ ಉಳಿತಾಯ ಯೋಜನೆಗಳಂತಹ ಸೌಲಭ್ಯಗಳನ್ನು ಒದಗಿಸುತ್ತವೆ. ಇದಲ್ಲದೆ, ಹೆಚ್ಚಿನ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಲಾಕರ್ (Bank Locker) ಸೌಲಭ್ಯಗಳನ್ನು ಒದಗಿಸುತ್ತವೆ. ಇದಕ್ಕಾಗಿ ಪ್ರತ್ಯೇಕ ಶುಲ್ಕ ವಿಧಿಸಲಾಗುತ್ತದೆ.
ಬ್ಯಾಂಕ್ ಲಾಕರ್‌ನಲ್ಲಿ ಹಣ ಇಡುವ ಮುನ್ನ ಹುಷಾರ್!
ಈ ಲಾಕರ್‌ನಲ್ಲಿ ಗ್ರಾಹಕರು ಚಿನ್ನ, ಬೆಳ್ಳಿ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಸಂಗ್ರಹಿಸಬಹುದು. ಈ ಸೌಲಭ್ಯವನ್ನು ಹೆಚ್ಚು ಸುರಕ್ಷಿತವೆಂದು ಪರಿಗಣಿಸಲಾಗಿದೆ. ಎಷ್ಟೋ ಜನ ಈ ಸೌಲಭ್ಯದ ಪ್ರಯೋಜನ ಪಡೆಯುತ್ತಾರೆ. ಆದರೆ ಈಗ ಗ್ರಾಹಕರು ಲಾಕರ್ ಸೌಲಭ್ಯ ಪಡೆಯುವ ಮುನ್ನ ಸಾವಿರ ಸಲ ಯೋಚನೆ ಮಾಡುವಂತಾಗಿದೆ.
ಅಲ್ಲದೆ, ಲಾಕರ್ ಸೌಲಭ್ಯಕ್ಕೆ ಸಂಬಂಧಿಸಿದ ಮೂಲ ನಿಯಮಗಳನ್ನು ಸಂಬಂಧಪಟ್ಟ ಬ್ಯಾಂಕ್ ಅನುಸರಿಸಿದೆಯೇ ಅಥವಾ ಇಲ್ಲವೇ ಎಂಬುದನ್ನು ಗ್ರಾಹಕರು ಪರಿಶೀಲಿಸಬೇಕಾಗುತ್ತದೆ. ಇಷ್ಟೆಲ್ಲ ಹೇಳಲು ಪ್ರಮುಖ ಕಾರಣವಿದೆ. ಉದಯಪುರದ ಬ್ಯಾಂಕ್ ಲಾಕರ್‌ನಲ್ಲಿ ಇಟ್ಟಿದ್ದ ನೋಟುಗಳನ್ನು ಸಂಪೂರ್ಣವಾಗಿ ಗೆದ್ದಲು ಹುಳಗಳು ತಿಂದಿವೆ.
ಬ್ಯಾಂಕ್ ಲಾಕರ್ನಲ್ಲಿಟ್ಟ ಹಣ ತಿಂದ ಹುಳಗಳು!
ಇದರಿಂದ ಗ್ರಾಹಕರೊಬ್ಬರು ಅಪಾರ ನಷ್ಟ ಅನುಭವಿಸಿದ್ದಾರೆ. ಕುತೂಹಲಕಾರಿಯಾಗಿ, ಗ್ರಾಹಕರು ಈ ವಿಷಯವನ್ನು ಬ್ಯಾಂಕ್ ಉದ್ಯೋಗಿಗಳ ಗಮನಕ್ಕೆ ತಂದಾಗ, ಅವರು ಬೇಜವಾಬ್ದಾರಿ ಉತ್ತರ ಕೊಟ್ಟು ಜಾರಿಕೊಂಡಿದ್ದಾರೆ. ಇತ್ತ ಲಾಕರ್ನಲ್ಲಿಟ್ಟ ಹಣ ಕಳೆದುಕೊಂಡ ಗ್ರಾಹಕರು ಕಂಗಾಲಾಗಿದ್ದಾರೆ. ಈ ಬಗ್ಗೆ `ಆಜ್ ತಕ್' ವರದಿ ಮಾಡಿದೆ.
ಇದನ್ನೂ ಓದಿ: ಇದು ಅಂಚೆ ಕಚೇರಿಯ ಸೂಪರ್ ಹಿಟ್ ಯೋಜನೆ; ಸೇಫ್ ಆಗಿರುತ್ತೆ ನಿಮ್ಮ ಹೂಡಿಕೆ
ಪಂಜಾಬ್ ನ್ಯಾಷನಲ್ ಬ್ಯಾಂಕ್ ಲಾಕರ್ನಲ್ಲಿದ್ದ ಹಣ!
ರಾಜಸ್ಥಾನದ ಉದಯಪುರದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಮಹಿಳಾ ಗ್ರಾಹಕರೊಬ್ಬರು ಬ್ಯಾಂಕ್‌ನಲ್ಲಿದ್ದ ಲಾಕರ್ ಅನ್ನು ತೆರೆದಾಗ ನೋಟುಗಳನ್ನು ಗೆದ್ದಲು ಹುಳಗಳು ತಿಂದಿರುವುದು ಪತ್ತೆಯಾಗಿದೆ.ಇದನ್ನು ನೋಡಿದ ಮಹಿಳೆ ಬೆಚ್ಚಿಬಿದ್ದಿದ್ದಾಳೆ. ಅವಳು ಈ ಬಗ್ಗೆ ಬ್ಯಾಂಕ್ ಸಿಬ್ಬಂದಿಗೆ ದೂರು ನೀಡಿದ್ದಾರೆ. ಆದರೆ ನೌಕರರು ಇದರಿಂದ ಏನೋ ಒಂದು ಹೇಳಿ ತಪ್ಪಿಸಿಕೊಂಡಿದ್ದಾರೆ.
ದೂರು ಕೊಟ್ರು ಬ್ಯಾಂಕ್ ಸಿಬ್ಬಂದಿ ಡೋಂಟ್ ಕೇರ್!
`ಬ್ಯಾಂಕ್ ಆಡಳಿತ ಮಂಡಳಿ ಕೀಟಬಾಧೆಯನ್ನು ನಿಯಂತ್ರಿಸದ ಕಾರಣ ಹೀಗಾಯಿತು. ನನ್ನ ಹಣವನ್ನೆಲ್ಲ ಗೆದ್ದಲು ಹುಳಗಳು ತಿಂದು ಹಾಕಿದೆ. ಇದರಿಂದ ನನಗೆ ಅಪಾರ ನಷ್ಟ ಉಂಟಾಗಿದೆ. ಹಣದ ಹೊರತಾಗಿ ಇನ್ನು ಕೆಲವು ವಸ್ತುಗಳನ್ನು ಲಾಕರ್ ನಲ್ಲಿಟ್ಟಿದ್ದೆ. ಅದೂ ಹಾಳಾಗಿರಬೇಕು, ಈ ಬಗ್ಗೆ ಬ್ಯಾಂಕ್ ಆಡಳಿತ ಮಂಡಳಿಗೆ ದೂರು ನೀಡಲಾಗಿದೆ,'' ಎಂದು ಸಂತ್ರಸ್ತರು ತಿಳಿಸಿದ್ದಾರೆ.
ಇದೇ ವೇಳೆ ಬ್ಯಾಂಕ್ ನಲ್ಲಿ 20ರಿಂದ 25 ಲಾಕರ್ ಗಳು ಖಾಲಿಯಾಗುವ ಸಾಧ್ಯತೆ ಇದೆ. ಬ್ಯಾಂಕ್ ಸಿಬ್ಬಂದಿ ಸಕಾಲದಲ್ಲಿ ಕ್ರಮಕೈಗೊಂಡಿದ್ದರೆ ಲಾಕರ್‌ಗಳಲ್ಲಿ ಇಟ್ಟಿರುವ ಸಾಮಗ್ರಿಗಳಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಆದರೆ ಬ್ಯಾಂಕ್ ನೌಕರರು ನಿರ್ಲಕ್ಷ್ಯ ವಹಿಸಿರುವುದರಿಂದ ಜನಸಾಮಾನ್ಯರು ಪರದಾಡುವಂತಾಗಿದೆ.
`ಗ್ರಾಹಕರು ನಷ್ಟವಾಗಿರುವ ಬಗ್ಗೆ ಬ್ಯಾಂಕ್ ನ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಸಮಸ್ಯೆಯನ್ನು ಪರಿಹರಿಸಲು ಸಂಬಂಧಿಸಿದ ಗ್ರಾಹಕರನ್ನು ಬ್ಯಾಂಕ್ ಶಾಖೆಗೆ ಮರಳಿ ಕರೆಯಲಾಗಿದೆ. ಪ್ರವಾಹದಿಂದಾಗಿ ಬ್ಯಾಂಕ್‌ನ ಒಳಭಾಗಕ್ಕೆ ಹಾನಿಯಾಗಿದೆ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಯಾದವ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ