• Home
  • »
  • News
  • »
  • business
  • »
  • Hybrid work mode: ಮಹೀಂದ್ರಾ ಸಂಸ್ಥೆಯ ಕಚೇರಿ ಕೆಲಸಕ್ಕೆ ಬೇಕಾಗಿರುವುದು ಕೇವಲ ಶೇ.50ಷ್ಟು ಸ್ಥಳಾವಕಾಶ!

Hybrid work mode: ಮಹೀಂದ್ರಾ ಸಂಸ್ಥೆಯ ಕಚೇರಿ ಕೆಲಸಕ್ಕೆ ಬೇಕಾಗಿರುವುದು ಕೇವಲ ಶೇ.50ಷ್ಟು ಸ್ಥಳಾವಕಾಶ!

ಟೆಕ್ ಮಹೀಂದ್ರಾ

ಟೆಕ್ ಮಹೀಂದ್ರಾ

ಹೆಚ್ಚಾಗಿ ಯುವ ಸಮುದಾಯದವರೇ ಕೆಲಸಕ್ಕೆಂದು ಕಚೇರಿಗೆ ಮರಳಲು ಬಯಸಿದ್ದಾರೆ. ಮಧ್ಯವಯಸ್ಕರು ನಿತ್ಯ ಡ್ರೈವಿಂಗ್ ಮಾಡುವ ಗೋಜಿಲ್ಲದೆ ಮನೆಯಿಂದಲೇ ಕೆಲಸ ನಿರ್ವಹಣೆ ಮಾಡುವುದಕ್ಕೆ ಆದ್ಯತೆ ನೀಡಿದ್ದಾರೆ ಎಂದು ಗುರ್ನಾನಿ ಹೇಳುತ್ತಾರೆ.

  • Share this:

ತಂತ್ರಜ್ಞಾನ(Technology)ವನ್ನು ಒಂದು ವರವೋ ಅಥವಾ ಅಡ್ಡಿಯೋ, ಏನಾದರೂ ಕರೆಯಿರಿ ಆದರೆ ಒಂದಂತೂ ಸತ್ಯ, ಅದೇನೆಂದರೆ ಕೋವಿಡ್ ಸಾಂಕ್ರಾಮಿಕ (COVID Pandemic) ಪಿಡುಗಿನ ನಂತರ ಜಗತ್ತಿನಾದ್ಯಂತ ಬಹಳಷ್ಟು ಕಂಪನಿಗಳು ಕಚೇರಿಯಿಂದಲೇ ಕೆಲಸ (Office Work) ನಿರ್ವಹಿಸಬೇಕೆಂಬ ಕಟ್ಟುನಿಟ್ಟಾದ ಕ್ರಮಕ್ಕೆ ತಮ್ಮನ್ನು ತಾವು ಅಗತ್ಯವಾಗಿ ಅಂಟಿಕೊಂಡಿರಲು ಬಯಸುತ್ತಿಲ್ಲ. ಇತ್ತೀಚೆಗೆ ಐಟಿ ಸಂಸ್ಥೆಯಾದ ಟೆಕ್ ಮಹೀಂದ್ರಾ (Tech Mahindra) ಮುಂಬರುವ ತಿಂಗಳುಗಳಲ್ಲಿ ಕೆಲಸ ನಿರ್ವಹಿಸಲು ಕಂಪನಿಯ 50%ಕ್ಕಿಂತ ಕಡಿಮೆ ಕಚೇರಿ ಸ್ಥಳಗಳನ್ನು ಬಳಸಲು ಯೋಜಿಸಿದೆ ಎಂಬುದಾಗಿ ತಿಳಿದು ಬಂದಿದೆ. ಇದೀಗ ಕಂಪನಿ ಕೇವಲ ಓರ್ವ ಉದ್ಯೋಗಿಗೆ 60 ಚದರ ಅಡಿ ಸ್ಥಳ ನೀಡಲು ಕಂಪನಿ ನಿರ್ಧರಿಸಿದೆ.


ಫಾರ್ಚೂನ್ ಇಂಡಿಯಾಗೆ ನೀಡಿದ ಹೇಳಿಕೆಯಲ್ಲಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸಿಪಿ ಗುರ್ನಾನಿ “ರಿಯಲ್ ಎಸ್ಟೇಟ್ ದೃಷ್ಟಿಕೋನದಿಂದ ನೋಡಿದಾಗ, ನನಗೆ ಕೆಲಸದ ಸ್ಥಳದ 50%ಕ್ಕಿಂತ ಹೆಚ್ಚು ಸ್ಥಳದ ಅಗತ್ಯವಿಲ್ಲ. ನನ್ನ ಸ್ವಂತ ಅನಿಸಿಕೆಯಂತೆ ಕೆಲಸ ನಿರ್ವಹಿಸಲು ಸದ್ಯ ಲಭ್ಯವಿರುವ ಸ್ಥಳದ 40%ರಷ್ಟು ಸ್ಥಳಾವಕಾಶ ಇದ್ದರೆ ಸಾಕು. ಪ್ರತಿ ಉದ್ಯೋಗಿಗೆ, ನಾನು 150 ಚದರ ಅಡಿ ಜಾಗವನ್ನು ಒದಗಿಸಿದ್ದರೆ, ನಾನು ಈಗ ಅವರಿಗೆ ಕೇವಲ 60 ಚದರ ಅಡಿಗಳನ್ನು ನೀಡಲಿದ್ದೇನೆ. ಏಕೆಂದರೆ ನಾನು ಫ್ಲೆಕ್ಸಿಬಲ್ ಆಗಿ ಕೆಲಸ ಮಾಡಬಲ್ಲೆ” ಎಂದು ಹೇಳಿದ್ದಾರೆ.


ಎರಡು ಭಿನ್ನ ಅಭಿಪ್ರಾಯಗಳು


ನಮ್ಮ ಆಂತರಿಕ ಸಮೀಕ್ಷೆಗಳ ಪ್ರಕಾರ, ಹೆಚ್ಚಾಗಿ ಯುವ ಸಮುದಾಯದವರೇ ಕೆಲಸಕ್ಕೆಂದು ಕಚೇರಿಗೆ ಮರಳಲು ಬಯಸಿದ್ದಾರೆ. ಮಧ್ಯವಯಸ್ಕರು ನಿತ್ಯ ಡ್ರೈವಿಂಗ್ ಮಾಡುವ ಗೋಜಿಲ್ಲದೆ ಮನೆಯಿಂದಲೇ ಕೆಲಸ ನಿರ್ವಹಣೆ ಮಾಡುವುದಕ್ಕೆ ಆದ್ಯತೆ ನೀಡಿದ್ದಾರೆ ಎಂದು ಗುರ್ನಾನಿ ಹೇಳುತ್ತಾರೆ.


ಇದನ್ನೂ ಓದಿ:  FDs for senior citizens: ಈ ಖಾಸಗಿ ಬ್ಯಾಂಕುಗಳು ಹಿರಿಯ ನಾಗರಿಕರ FD ಮೇಲೆ ನೀಡುತ್ತವೆ ಹೆಚ್ಚಿನ ಬಡ್ಡಿದರ


ವೇಗ ಪಡೆದುಕೊಳ್ಳುತ್ತಿರುವ ಹೈಬ್ರಿಡ್ ಯುಗ


ಕಳೆದೆರಡು ವರ್ಷಗಳಲ್ಲಿ ಯಾವ ಸ್ಥಳದಿಂದಾದರೂ ಸಮರ್ಥವಾಗಿ ಕೆಲಸ ಮಾಡಲು ಉದ್ಯೋಗಿಗಳನ್ನು ಸಕ್ರಿಯಗೊಳಿಸಿದ ತಂತ್ರಜ್ಞಾನದ ಅರ್ಹತೆಯ ಮೇಲೆ ಒತ್ತು ನೀಡುವ ಮೂಲಕ ಗುರ್ನಾನಿ ತಮ್ಮ ತಾರ್ಕಿಕ ನಿಲುವನ್ನು ಬೆಂಬಲಿಸುತ್ತಾ "ಕೆಲಸದ ಜಗತ್ತು ಬದಲಾಗಿದೆ. ಕೃತಕ ಬುದ್ಧಿಮತ್ತೆ, ಯಾಂತ್ರೀಕೃತಗೊಂಡ, ಭದ್ರತೆ, ವಿಸ್ತೃತವಾದ ವೇದಿಕೆಗಳು. ಅನುಕೂಲ ಮಾಡಿಕೊಟ್ಟಿವೆ. ಇಂದೇನಿದ್ದರೂ ಹೈಬ್ರಿಡ್ ಯುಗ.


ತಂತ್ರಜ್ಞಾನವು ಇದನ್ನು ಸಾಬೀತುಪಡಿಸಿದೆ. ಇಂದು ಯಾವ ಕಾರ್ಯಗಳು, ಯಾವ ಕ್ಷೇತ್ರಗಳಿಗೆ ಹೆಚ್ಚು ಪರಸ್ಪರ ಕ್ರಿಯೆಯ ಅಗತ್ಯವಿದೆ ಎಂಬುದೊಂದೇ ಗಮನ ಹರಿಸಬೇಕಾದ ವಿಷಯವಾಗಿದೆ” ಎಂದು ಗುರ್ನಾನಿ ಹೇಳುತ್ತಾರೆ.


ವಾಸ್ತವವಾಗಿ, ಸಾಂಪ್ರದಾಯಿಕ ಕಚೇರಿ ಸ್ಥಳಗಳ ಗುತ್ತಿಗೆಯ ವಿಷಯದಲ್ಲಿ, ಕೋವಿಡ್-19 ಪೂರ್ವದ ಮಟ್ಟಗಳಿಗೆ ಹೋಲಿಸಿದರೆ ತಂತ್ರಜ್ಞಾನ ಕಂಪನಿಗಳ ಸರಾಸರಿ ಒಪ್ಪಂದದ ಗಾತ್ರವು 2021ರಲ್ಲಿ ಪ್ಯಾನ್-ಇಂಡಿಯಾದಲ್ಲಿ 15%ರಷ್ಟು ಕಡಿಮೆಯಾಗಿದೆ ಎಂದು ಪ್ರಾಪರ್ಟಿ ಕನ್ಸಲ್ಟೆಂಟ್‌ ಆಗಿರುವ ಕೊಲಿಯರ್ಸ್‌ ಹೊರಹಾಕಿರುವ ಡೇಟಾ ತೋರಿಸುತ್ತದೆ.


ಸಣ್ಣ ಶಾಖಾ ಕಚೇರಿ ತೆರೆಯುವ ಪ್ಲಾನ್


ಸಂಸ್ಥೆಯ ವಿಶ್ಲೇಷಕರು ಹೇಳುವ ಪ್ರಕಾರ, ತಂತ್ರಜ್ಞಾನ ಕಂಪನಿಗಳು ಹಬ್ ಮತ್ತು ಸ್ಪೋಕ್ ಆಫೀಸ್ ಮಾದರಿಯನ್ನು ಅನ್ವೇಷಿಸುತ್ತಿವೆ. ಇದರಲ್ಲಿ ಟೆಕ್ ಕಾರಿಡಾರ್‌ ನಲ್ಲಿ ಒಂದು ಮುಖ್ಯ ಕಚೇರಿ ಮತ್ತು ವಸತಿ ಸ್ಥಳಗಳ ಬಳಿ ಅನೇಕ ಸಣ್ಣ ಶಾಖಾ ಕಚೇರಿಗಳನ್ನು ಹೊಂದುವ ಆಲೋಚನೆ ಇದೆ ಎಂದು ವಿವರಿಸುತ್ತಾರೆ.


"ಈ ಬದಲಾವಣೆಯು ಮುಂದೆ ವೇಗವನ್ನು ಪಡೆಯುವ ಸಾಧ್ಯತೆಯಿದೆ. ಭವಿಷ್ಯದಲ್ಲಿ ದೊಡ್ಡ ದೊಡ್ಡ ಒಪ್ಪಂದಗಳ ಮುಂದೆ ಸಣ್ಣ ಮತ್ತು ಮಧ್ಯಮ ಗಾತ್ರದ ಒಪ್ಪಂದಗಳು ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುವ ನಿರೀಕ್ಷೆ ಇದೆ,”ಎಂದು ಏಷ್ಯಾ ಅಟ್ ಕಾಲಿಯರ್ಸ್‌ನ, ಮಾರುಕಟ್ಟೆ ಅಭಿವೃದ್ಧಿ, ಭಾರತ ವಿಭಾಗದ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ರಮೇಶ್ ನಾಯರ್ ಹೇಳುತ್ತಾರೆ.


ನುರಿತ ಪ್ರತಿಭೆಗಳಿಗೆ ಅವಕಾಶ


ಹೈಬ್ರಿಡ್ ವರ್ಕ್ ಮಾದರಿಯು ಕಾರ್ಪೊರೇಟ್‌ಗಳಿಗೆ ಎರಡು ಮತ್ತು ಮೂರು ಶ್ರೇಣಿಯ ನಗರಗಳಿಂದ ಕಡಿಮೆ ವೆಚ್ಚದಲ್ಲಿ ನುರಿತ ಪ್ರತಿಭೆಗಳನ್ನು ನೇಮಿಸಿಕೊಳ್ಳಲು ಅವಕಾಶವನ್ನು ನೀಡುತ್ತದೆ, ಹಲವಾರು ಐಟಿ ಕಂಪನಿಗಳು ಅಂತಹ ಉದ್ಯೋಗಿಗಳಿಗೆ ಅವಕಾಶ ಕಲ್ಪಿಸಲು ಸಹ ಆದ್ಯತೆ ನೀಡುತ್ತಿವೆ.


ಇದನ್ನೂ ಓದಿ;  LPG Price: ಗ್ರಾಹಕರೇ ಗಮನಿಸಿ, ಈ ಕಾರಣಕ್ಕೆ ಏಪ್ರಿಲ್ ನಲ್ಲಿ ದುಪ್ಪಟ್ಟು ಆಗಲಿದೆಯಂತೆ LPG ಬೆಲೆ


"ಈಗಾಗಲೇ ಅತ್ಯುತ್ತಮ ಏಳು ನಗರಗಳ ಸುಮಾರು 60%ರಷ್ಟು ಉದ್ಯೋಗಿಗಳು ತಮ್ಮ ಊರುಗಳಿಗೆ ಮರಳಿದ್ದು ಅವರಲ್ಲಿ ಸಂಭಾವ್ಯ 10%ರಷ್ಟು ಜನರು ಮತ್ತೆ ತಮ್ಮ ಮೂಲ ಕೆಲಸದ ಕೇಂದ್ರಗಳಿಗೆ ಹಿಂತಿರುಗುವುದಿಲ್ಲ" ಎಂದು Awfis ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ಆಗಿರುವ ಅಮಿತ್ ರಮಣಿ ಈ ಹಿಂದೆ ಹೇಳಿದ್ದರೆಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಟೆಕ್ ಮಹೀಂದ್ರಾ ಎರಡು ಮತ್ತು ಮೂರನೇ ಹಂತದ ನಗರಗಳ ಪ್ರತಿಭೆಗಳನ್ನು ನೇಮಿಸಿಕೊಳ್ಳಲು ಉತ್ಸುಕವಾಗಿದೆ ಎಂದು ಹೇಳಲಾಗಿದೆ.


ಸಣ್ಣ ಕ್ಯಾಂಪಸ್ ಗಳ ಸ್ಥಾಪನೆ


ಇದನ್ನು ಪುಷ್ಟಿಕರಿಸುವಂತೆ ಸಂಸ್ಥೆಯು ಈಗಾಗಲೇ ಭುವನೇಶ್ವರ, ನಾಗ್ಪುರ, ವಿಜಯವಾಡ ಮತ್ತು ಕೊಯಮತ್ತೂರು ಸೇರಿದಂತೆ 9 ಸ್ಥಳಗಳಿಂದ ಸುಮಾರು 8,000 ಉದ್ಯೋಗಿಗಳನ್ನು ನೇಮಿಸಿಕೊಂಡಿದೆ. ಆದರೆ, ಈ ಸಂಬಂಧ ಸಂಸ್ಥೆಯು ಸಹ-ಕೆಲಸದ ಸ್ಥಳಗಳನ್ನು ನಿಗದಿ ಮಾಡಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಕಂಪನಿಯು ಇನ್ನೂ ಬಹಿರಂಗಪಡಿಸಿಲ್ಲ. ಅಂತಹ ಕೆಲವು ಸ್ಥಳಗಳಲ್ಲಿ ಅವರು ಸಣ್ಣ ಕ್ಯಾಂಪಸ್‌ ಗಳನ್ನು ಸ್ಥಾಪಿಸಿದ್ದಾರೆ ಎಂದು ತಿಳಿದುಬಂದಿದೆ.


ಪ್ರಸ್ತುತ, ಹೈಬ್ರಿಡ್ ವರ್ಕ್ ಮಾದರಿಯ ಪರಿಕಲ್ಪನೆಯು ವ್ಯಾಪಕವಾಗಿ ಎಲ್ಲೆಡೆ ಸ್ವೀಕರಿಸಲ್ಪಡುತ್ತಿದೆ. ಉದಾಹರಣೆಗೆ, ಇ-ಕಾಮರ್ಸ್ ಸ್ಟಾರ್ಟಪ್ ಆಗಿರುವ ಮೀಶೋ ಕಂಪನಿ ಸಂಪೂರ್ಣವಾಗಿ ಹೈಬ್ರಿಡ್ ವರ್ಕ್ ಮಾದರಿಗೆ ಬದಲಾಯಿಸಿಕೊಳ್ಳಲು ನಿರ್ಧರಿಸಿದೆ.


ಕೆಲಸದ ಸ್ಥಳ ಆಯ್ಕೆ ನೀಡುತ್ತಿರುವ ಮೀಶೋ


ಸಂಸ್ಥೆಯು ತನ್ನ ಉದ್ಯೋಗಿಗಳಿಗೆ ಮನೆ, ಕಚೇರಿ ಅಥವಾ ಅವರ ಆಯ್ಕೆಯನುಸಾರವಾಗಿ ಯಾವುದೇ ಸ್ಥಳದಿಂದ ಕೆಲಸ ಮಾಡುವ ಆಯ್ಕೆಯನ್ನು ನೀಡುತ್ತಿದೆ. ಉದ್ಯೋಗಿಗಳ ಬೇಡಿಕೆಯ ಆಧಾರದ ಮೇಲೆ, ಕಂಪನಿಯು ಹೆಚ್ಚಿನ ಪ್ರತಿಭೆ ಸಾಂದ್ರತೆಯಿರುವ ಸ್ಥಳಗಳಲ್ಲಿ ಸ್ಯಾಟಲೈಟ್ ಕಚೇರಿಗಳನ್ನು ಸ್ಥಾಪಿಸಲು ಪರಿಗಣಿಸುತ್ತದೆ. ಮೀಶೋದ ಈ ರಚನೆಯನ್ನು 'ಗಡಿರಹಿತ ಕಾರ್ಯಸ್ಥಳದ ಮಾದರಿ' ಎಂದು ವಿವರಿಸಲಾಗಿದೆ.

Published by:Mahmadrafik K
First published: