ಆಕರ್ಷಕ ಆಫೀಸ್, ಜ್ಯೂಸ್ ಬಾರ್, ಕೆಫೆಟೇರಿಯಾ ಅಂತೆಯೇ ಇನ್ನಿತರ ಸೌಲಭ್ಯಗಳನ್ನೊದಗಿಸುವ ಗೂಗಲ್ ಹಾಗೂ ಟ್ವಿಟರ್‌ನಂತಹ ಕಂಪನಿಗಳು ಟೆಕ್ ವಲಯದಲ್ಲೇ ಅತ್ಯುತ್ತಮ ಉದ್ಯೋಗ ತಾಣಗಳು ಎಂಬ ಹೆಸರು ಗಿಟ್ಟಿಸಿಕೊಂಡಿದ್ದವು. ಇಲ್ಲಿ ಉದ್ಯೋಗ ದೊರೆತರೆ ಅದು ಉದ್ಯೋಗಿಯ (Employee) ಅದೃಷ್ಟ ಎಂದೇ ಭಾವಿಸಲಾಗಿತ್ತು ಆದರೆ ಕೋವಿಡ್‌ನ ನಂತರ ಲಾಕ್‌ಡೌನ್ (Lockdown) ಪ್ರಭಾವಕ್ಕೊಳಗಾದ ಕಂಪನಿಗಳು ಉದ್ಯೋಗಿ ವಜಾಗೊಳಿಸುವಿಕೆಯಂತಹ ಕಠಿಣ ಕ್ರಮಗಳನ್ನು ಕೈಗೊಂಡವು ಅಂತೆಯೇ ಉದ್ಯೋಗ ಸಂಸ್ಥೆಗಳನ್ನು ಉದ್ಯೋಗಿ ನೋಡುವ ವಿಧವೇ ಬದಲಾಯಿತು.
ಉದ್ಯೋಗಿಗಳೇ ತಮ್ಮ ಪ್ರಾಶಸ್ತ್ಯ ಎಂದು ಹೇಳಿಕೊಳ್ಳುತ್ತಿದ್ದ ಅದೆಷ್ಟೋ ಸಂಸ್ಥೆಗಳು ನಿರ್ದಾಕ್ಷಿಣ್ಯವಾಗಿ ಉದ್ಯೋಗಿಗಳನ್ನು ಸಂಸ್ಥೆಗಳಿಂದ ಕಿತ್ತುಹಾಕುತ್ತಿವೆ. ಇನ್ನು ಕೆಲವು ಸಂಸ್ಥೆಗಳು ಉದ್ಯೋಗಿಗಳನ್ನು ಇಂತಹ ಸಂಕಷ್ಟದ ಸಮಯದಲ್ಲಿ ವಜಾಗೊಳಿಸದೆಯೇ ಇರಿಸಿಕೊಂಡಿವೆ ಹಾಗೂ ಉದ್ಯೋಗ ಕಡಿತವನ್ನು ವಿರೋಧಿಸಿವೆ.
ಭಾರತದ 25 ಅತ್ಯುತ್ತಮ ಕಂಪನಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಟಾಟಾ ಕನ್ಸಲ್ಟೆನ್ಸಿ
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಲಿಂಕ್ಡ್‌ಇನ್‌ನ ಭಾರತದ 25 ಅತ್ಯುತ್ತಮ ಕಂಪನಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ತಂತ್ರಜ್ಞಾನದಿಂದ ಆರಂಭಿಸಿ ಹಣಕಾಸು, ಗೇಮಿಂಗ್ ಕ್ಷೇತ್ರದವರೆಗೆ ಲಿಂಕ್ಡ್‌ಇನ್ ಟಾಪ್ ಕಂಪನಿಗಳ ಏಳನೇ ವಾರ್ಷಿಕ ಆವೃತ್ತಿಯು ವಿವಿಧ ಉದ್ಯಮ ಸಂಸ್ಥೆಗಳನ್ನೊಳಗೊಂಡಿದೆ.
ಪಟ್ಟಿಯಲ್ಲಿ ಸ್ಥಾನ ಪಡೆಯಲು ಲಿಂಕ್ಡ್‌ಇನ್ ಮಾನದಂಡಗಳಿಗೆ ಒಳಪಟ್ಟಿರಬೇಕು
ಈ ವರ್ಷದ ಪಟ್ಟಿಯಲ್ಲಿ ಸಂಸ್ಥೆಯು ಕೆಲವೊಂದು ಬದಲಾವಣೆಗಳನ್ನು ಮಾಡಿದ್ದು ಕಳೆದ ವರ್ಷ ಪ್ರಾಬಲ್ಯ ಹೊಂದಿದ್ದ ಟೆಕ್ ಕಂಪನಿಗಳ ಬದಲಿಗೆ ಹಣಕಾಸು ಸೇವೆಗಳು, ಉತ್ಪಾದನೆ ಮತ್ತು ಗೇಮಿಂಗ್‌ನಂತಹ ಕ್ಷೇತ್ರಗಳಿಗೆ ಪ್ರಾಶಸ್ತ್ಯ ನೀಡಿದೆ.
ಇದನ್ನೂ ಓದಿ: Vir Bike: ಒಂದೇ ಒಂದು ರೂಪಾಯಿಗೆ 14 ಕಿಮೀ ಸಂಚರಿಸುತ್ತೆ ಈ ಎಲೆಕ್ಟ್ರಿಕ್ ಸೈಕಲ್!
ಟಾಪ್ ಕಂಪನಿಯನ್ನು ಗುರುತಿಸಲು ಲಿಂಕ್ಡ್‌ಇನ್ ಕೆಲವೊಂದು ಮಾನದಂಡಗಳನ್ನು ಅಳವಡಿಸಿದ್ದು ಸಂಸ್ಥೆಯು ಆ ಮಾನದಂಡಗಳಿಗೆ ಹೊಂದಿರುವುದು ಕಡ್ಡಾಯವಾಗಿದೆ. ಕಂಪನಿಯ ಸಾಮರ್ಥ್ಯ, ಕೌಶಲ್ಯಗಳ ಬೆಳವಣಿಗೆ; ಕಂಪನಿಯ ಸ್ಥಿರತೆ; ಅವಕಾಶ, ದೇಶದಲ್ಲಿ ಶೈಕ್ಷಣಿಕ ಹಿನ್ನೆಲೆ ಹಾಗೂ ಉದ್ಯೋಗಿ ಉಪಸ್ಥಿತಿ, ವಜಾಗೊಳಿಸುವಿಕೆ, ಉದ್ಯೋಗಿ ಕ್ಷೀಣತೆ ಮೊದಲಾದ ಅಂಶಗಳಿಗೂ ಪ್ರಾಧಾನ್ಯತೆ ನೀಡಿ ಇದೆಲ್ಲವನ್ನೂ ಗಮನದಲ್ಲಿರಿಸಿಕೊಂಡು ಟಾಪ್ ಕಂಪನಿಗಳನ್ನು ಆಯ್ಕೆಮಾಡಿಕೊಂಡಿದೆ.
ಲಿಂಕ್ಡ್‌ಇನ್ ಪಟ್ಟಿಗೆ ಅರ್ಹಗೊಳ್ಳಲು ಕಂಪನಿಯು ಡಿಸೆಂಬರ್ 31, 2022 ರಿಂದ ಇಲ್ಲಿಯವರೆಗೆ ಕನಿಷ್ಠ 500 ಉದ್ಯೋಗಿಗಳನ್ನು ಹೊಂದಿರಬೇಕು.
ಲಿಂಕ್ಡ್‌ಇನ್ ಅನರ್ಹತೆಯನ್ನು ಗುರುತಿಸಿದ್ದು ಹೇಗೆ?
ಜನವರಿ 1, 2022 ಮತ್ತು ಪಟ್ಟಿ ಬಿಡುಗಡೆಯ ನಡುವಿನ ಸಾರ್ವಜನಿಕ ಪ್ರಕಟಣೆಗಳ ಆಧಾರದ ಮೇಲೆ ತನ್ನ ಉದ್ಯೋಗಿಗಳ 10% ಕ್ಕಿಂತ ಹೆಚ್ಚು ವಜಾಗಳನ್ನು ಘೋಷಿಸಿದ ಕಂಪನಿಗಳನ್ನು ಅನರ್ಹವೆಂದು ಪರಿಗಣಿಸಲಾಗಿದೆ. ಅದೇ ರೀತಿ, ಮೆಥಡಾಲಜಿ ಕಾಲಾವಧಿಯಲ್ಲಿ 10% ಕ್ಕಿಂತ ಹೆಚ್ಚಿನ ಅಟ್ರಿಷನ್ ದರವನ್ನು ಹೊಂದಿರುವ ಕಂಪನಿಗಳನ್ನು ಸಹ ಅನರ್ಹವೆಂದು ಪರಿಗಣಿಸಲಾಗಿದೆ.
2023 ರ ಭಾರತದ ಅಗ್ರ ಕಂಪನಿಗಳು ಎಂದು ಸ್ಥಾನ ಪಡೆದುಕೊಂಡಿರುವ ಸಂಸ್ಥೆಗಳು ಈ ರೀತಿ ಇವೆ ಹಾಗೂ ಅದರಲ್ಲಿ ಅಮೆಜಾನ್ ಅನ್ನು ಮೀರಿ ಟಿಸಿಎಸ್ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದೆ.
1.ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ