ಹೂಡಿಕೆದಾರರೇ ಗಮನಿಸಿ : 18 ಸಾವಿರ ಕೋಟಿ ರೂ. ಮೌಲ್ಯದ ಷೇರುಗಳ ಮರು ಖರೀದಿಯನ್ನು ಅನುಮೋದಿಸಿದ TCS

ಈ ಹಿಂದೆ ಜನವರಿ 12, 2022 ರಂದು, ಟಿಸಿಎಸ್ ಸಂಸ್ಥೆಯ ನಿರ್ದೇಶಕರ ಮಂಡಳಿಯು (TCS Director Board) 1 ರೂ. ಮುಖಬೆಲೆಯ ಸುಮಾರು 400,00,000 ಈಕ್ವಿಟಿ ಷೇರು(Equity Share)ಗಳನ್ನು ಪ್ರತಿ ಷೇರಿಗೆ 4,500 ರೂ. ಬೆಲೆ ನೀಡಿ ಒಟ್ಟು 18,000 ಕೋಟಿ ರೂ.ಗಳ ಮೊತ್ತದ ಷೇರು(Total Share value)ಗಳನ್ನು ಮರು ಖರೀದಿ ಮಾಡುವುದಾಗಿ ಘೋಷಿಸಿತ್ತು.

ಟಿಸಿಎಸ್

ಟಿಸಿಎಸ್

  • Share this:
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS Tata Consultancy Services) ಕಂಪನಿಯ ಸದಸ್ಯರು ಅಂಚೆ ಮತಪತ್ರದ (Postal Ballot) ಮೂಲಕ ವಿಶೇಷ ನಿರ್ಣಯವನ್ನು ಅಂಗೀಕರಿಸುವ ಮೂಲಕ 18,000 ಕೋಟಿ ರೂ. ವರೆಗಿನ ಷೇರು(Share)ಗಳ ಮರು ಖರೀದಿಯನ್ನು ಅನುಮೋದಿಸಿದ್ದಾರೆ ಎಂದು ಟಿಸಿಎಸ್ ತಿಳಿಸಿದೆ. ಕಂಪನಿಯ ಸದಸ್ಯರು ಪೋಸ್ಟಲ್ ಬ್ಯಾಲೆಟ್ ಮೂಲಕ ವಿಶೇಷ ನಿರ್ಣಯವನ್ನು ಅಂಗೀಕರಿಸುವ ಮೂಲಕ ಮರುಖರೀದಿಯನ್ನು ಅನುಮೋದಿಸಿದ್ದಾರೆ ಎಂದು ಕಂಪನಿಯು ಸ್ಟಾಕ್ ಎಕ್ಸ್‌ ಚೇಂಜ್‌ (Stock Exchange)ಗೆ ಸಂಬಂಧಿಸಿದಂತೆ ದಾಖಲಾತಿಯೊಂದರಲ್ಲಿ ತಿಳಿಸಿದೆ. ಈ ಹಿಂದೆ ಜನವರಿ 12, 2022 ರಂದು, ಟಿಸಿಎಸ್ ಸಂಸ್ಥೆಯ ನಿರ್ದೇಶಕರ ಮಂಡಳಿಯು (TCS Director Board) 1 ರೂ. ಮುಖಬೆಲೆಯ ಸುಮಾರು 400,00,000 ಈಕ್ವಿಟಿ ಷೇರು(Equity Share)ಗಳನ್ನು ಪ್ರತಿ ಷೇರಿಗೆ 4,500 ರೂ. ಬೆಲೆ ನೀಡಿ ಒಟ್ಟು 18,000 ಕೋಟಿ ರೂ.ಗಳ ಮೊತ್ತದ ಷೇರು(Total Share value)ಗಳನ್ನು ಮರು ಖರೀದಿ ಮಾಡುವುದಾಗಿ ಘೋಷಿಸಿತ್ತು.

ಅರ್ಹ ಅಭ್ಯರ್ಥಿಗಳು

ಈ ಪ್ರಕ್ರಿಯೆಯಲ್ಲಿ ಅರ್ಹವಾದ ಅಭ್ಯರ್ಥಿಗಳನ್ನು ಗುರುತಿಸುವ ಸಂಬಂಧ ಫೆಬ್ರುವರಿ 23, 2022, ಬುಧವಾರ ಟಿಸಿಎಸ್ ಸಂಸ್ಥೆಯು ಮರುಖರೀದಿಯಲ್ಲಿ ಭಾಗವಹಿಸಲು ಅರ್ಹರಾಗಿರುವ ಈಕ್ವಿಟಿ ಷೇರುದಾರರ ಹೆಸರುಗಳನ್ನು ನಿರ್ಧರಿಸುವ ದಿನವನ್ನಾಗಿ ನಿಗದಿಪಡಿಸಿರುವುದು ತಿಳಿದು ಬಂದಿದೆ.

ಇದರಲ್ಲಿ ಭಾಗವಹಿಸಲಿರುವ ಟಾಟಾ ಸನ್ಸ್ ಹಾಗೂ ಟಾಟಾ ಇನ್ವೆಸ್ಟ್ಮೆಂಟ್ ಕಾರ್ಪೊರೇಷನ್

ಈ ಸಂಬಂಧ ಅರ್ಜಿ ಭರ್ತಿ ಮಾಡುವ ಪಟ್ಟಿಯಲ್ಲಿ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಪ್ರವರ್ತಕರಾಗಿರುವ ಟಾಟಾ ಸನ್ಸ್ ಮತ್ತು ಟಾಟಾ ಇನ್ವೆಸ್ಟ್‌ ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ಈ ಎರಡೂ ಕಂಪನಿಗಳು 2.88 ಕೋಟಿ ಷೇರುಗಳನ್ನು ಟೆಂಡರ್ ಮಾಡುವ ಮೂಲಕ ಟಿಸಿಎಸ್ ಐಟಿ ಸಂಸ್ಥೆಯ ಈ ದೊಡ್ಡದಾದ 18,000 ಕೋಟಿ ರೂ. ಮೊತ್ತದ ಷೇರು ಮರುಖರೀದಿ ಪ್ರಕ್ರಿಯೆಯಲ್ಲಿ ಭಾಗವಹಿಸುವ ಇಂಗಿತವನ್ನು ವ್ಯಕ್ತಪಡಿಸಿರುವುದಾಗಿ ಟಿಸಿಎಸ್ ಹೇಳಿದೆ.

ಮತದಾನ ಮತ್ತು ಫಲಿತಾಂಶದ ದಿನಾಂಕಗಳು

ಕಂಪನಿಯ ಪೋಸ್ಟಲ್ ಬ್ಯಾಲೆಟ್ ನೋಟಿಸ್‌ನಲ್ಲಿ ಈಗಾಗಲೇ ಬರೆದಿರುವಂತೆ, ರಿಮೋಟ್ ಇ-ವೋಟಿಂಗ್ ಅವಧಿಯು ಜನವರಿ 14, 2022 ರಿಂದ ಪ್ರಾರಂಭವಾಗುತ್ತದೆ ಹಾಗೂ ಫೆಬ್ರುವರಿ 12, 2022 ರಂದು ಕೊನೆಗೊಳ್ಳುತ್ತದೆ. ಅಂಚೆ ಮತಪತ್ರದ ಫಲಿತಾಂಶಗಳನ್ನು ಫೆಬ್ರವರಿ 15, 2022 ರಂದು ಪ್ರಕಟಿಸಲಾಗುವುದು ಎಂದು ಅದರಲ್ಲಿ ಹೇಳಲಾಗಿದೆ.

ಇದನ್ನೂ ಓದಿ:  LPG Price: ಗ್ರಾಹಕರೇ ಗಮನಿಸಿ, ಈ ಕಾರಣಕ್ಕೆ ಏಪ್ರಿಲ್ ನಲ್ಲಿ ದುಪ್ಪಟ್ಟು ಆಗಲಿದೆಯಂತೆ LPG ಬೆಲೆ

ಇದರಲ್ಲಿ ಸುಮಾರು 266.91 ಕೋಟಿ ಷೇರುಗಳನ್ನು ಹೊಂದಿರುವ ಟಾಟಾ ಸನ್ಸ್ 2.88 ಕೋಟಿ ಷೇರುಗಳನ್ನು ಟೆಂಡರ್ ಮಾಡಲು ಉದ್ದೇಶಿಸಿದ್ದರೆ, 10,23,685 ಷೇರುಗಳನ್ನು ಹೊಂದಿರುವ ಟಾಟಾ ಇನ್ವೆಸ್ಟ್‌ ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ 11,055 ಷೇರುಗಳನ್ನು ಟೆಂಡರ್ ಮಾಡಲು ಉದ್ದೇಶಿಸಿರುವುದಾಗಿ ತಿಳಿದುಬಂದಿದೆ.

ಟಿಸಿಎಸ್‌ನಿಂದ ಈ ಹಿಂದೆಯೂ ಮರುಖರೀದಿ

ಟಿಸಿಎಸ್ ಈ ಹಿಂದೆಯೂ ಮರುಖರೀದಿ ಪ್ರಕ್ರಿಯೆ ನಡೆಸಿದೆ. ಸಂಸ್ಥೆಯ ಸುಮಾರು 16,000 ಕೋಟಿ ರೂಪಾಯಿ ಮೌಲ್ಯದ ಮರುಖರೀದಿಯು ಈ ಹಿಂದೆ ಡಿಸೆಂಬರ್ 18, 2020 ರಂದು ಪ್ರಾರಂಭವಾಗಿ ಜನವರಿ 1, 2021 ರಂದು ಕೊನೆಗೊಂಡಿತ್ತು. ಇದರಲ್ಲಿ ಟಾಟಾ ಸನ್ಸ್ ಸಂಸ್ಥೆಯು 9,997.5 ಕೋಟಿ ಮೌಲ್ಯದ ಷೇರುಗಳನ್ನು ಟೆಂಡರ್ ಮಾಡಿತ್ತು.

ಆ ಸಮಯದಲ್ಲಿ 5.33 ಕೋಟಿಗೂ ಹೆಚ್ಚು ಈಕ್ವಿಟಿ ಷೇರುಗಳನ್ನು ಖರೀದಿಸಲಾಗಿತ್ತು (ಆಫರ್ ಬೆಲೆ 3,000 ರೂ. ನಿಗದಿಪಡಿಸಲಾಗಿತ್ತು) ಹಾಗೂ ಈ ಪ್ರಕ್ರಿಯೆಯಲ್ಲಿ ಟಾಟಾ ಸನ್ಸ್ ಅವರ ಒಟ್ಟು 3,33,25,118 ಷೇರುಗಳನ್ನು ಮರುಖರೀದಿ ಪ್ರಸ್ತಾಪದ ಅಡಿಯಲ್ಲಿ ಸ್ವೀಕರಿಸಲಾಗಿತ್ತು.

2017 ಮತ್ತು 2018ರಲ್ಲೂ, ಟಿಸಿಎಸ್ ಎರಡು ಬಾರಿ 16,000 ಕೋಟಿ ರೂ. ಈಕ್ವಿಟಿ ಷೇರು ಮರು ಖರೀದಿ ಪ್ರಕ್ರಿಯೆ ನಡೆಸಿದೆ. 2018ರಲ್ಲಿ ಷೇರುಗಳನ್ನು ಟಿಸಿಎಸ್ ಪ್ರತಿ ಷೇರಿಗೆ 2,100 ರೂ. ದರ ನೀಡಿ ಖರೀದಿಸಿತ್ತು, ಅಂದಿನ ಸ್ಟಾಕ್ ಬೆಲೆಗೆ ಇದು ಶೇ.14 ಪ್ರೀಮಿಯಂ ಹೊಂದಿತ್ತು. ಆ ಸಂದರ್ಭದಲ್ಲಿ ಟಿಸಿಎಸ್ ಒಟ್ಟು 7.61 ಕೋಟಿ ಈಕ್ವಿಟಿ ಷೇರುಗಳನ್ನು ಖರೀದಿಸಿತ್ತು. ಅದರಂತೆ 2017ರಲ್ಲಿಯೂ ಸಹ ರೂ 16,000-ಕೋಟಿ ಷೇರು ಮರುಖರೀದಿ ಪ್ರಕ್ರಿಯೆ ನಡೆಸಿದ್ದ ಟಿಸಿಎಸ್ ಅಂದಿನ ಮಾರುಕಟ್ಟೆ ಮೌಲ್ಯಕ್ಕೆ ಪ್ರೀಮಿಯಂ ಸೇರಿಸಿ ಪ್ರತಿ ಷೇರಿಗೆ 2,850 ರೂ. ಬೆಲೆ ನೀಡಿ ಸ್ವತಃ ತಾನೇ ಖರೀದಿ ಮಾಡಿತ್ತು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಟಿಸಿಎಸ್ ತ್ರೈಮಾಸಿಕ ಫಲಿತಾಂಶಗಳು

ಕಳೆದ ತಿಂಗಳು ಡಿಸೆಂಬರ್ 2021ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯು ತನ್ನ ಗಳಿಕೆಯ ವರದಿ ನೀಡಿದೆ. ಇದರಲ್ಲಿ ಅದು ತನ್ನ ನಿವ್ವಳ ಲಾಭ 9,769 ಕೋಟಿ ರೂ. ದಾಖಲಿಸಿದ್ದು ಶೇ.12.2 ಏರಿಕೆಯನ್ನು ದಾಖಲಿಸಿದೆ.

ಮುಂಬೈ ಮೂಲದ ಈ ಸಂಸ್ಥೆಯು ತನ್ನ ತ್ರೈಮಾಸಿಕದಲ್ಲಿ ವರದಿಯಲ್ಲಿ ದಾಖಲಿಸಿದ ಆದಾಯದಲ್ಲಿ ಶೇ.16.3 ರಷ್ಟು ಏರಿಕೆಯಾಗಿದ್ದನ್ನು ತಿಳಿಸಿದೆ.

ಇದನ್ನೂ ಓದಿ:  2022ರಲ್ಲಿ ಹೆಚ್ಚುವರಿ ಆದಾಯ ಮೂಲಗಳೊಂದಿಗೆ ನಿಮ್ಮ ಹೂಡಿಕೆಯನ್ನು ಹೇಗೆ ವೈವಿಧ್ಯಗೊಳಿಸುವುದು ಎಂಬುದು ಇಲ್ಲಿದೆ

ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಕಂಪನಿಯ ಆದಾಯ 42,015 ಕೋಟಿ ರೂ. ಆಗಿದ್ದು ಅದು ಈ ಬಾರಿ 48,885 ಕೋಟಿ ರೂ.ಗೆ ಏರಿದೆ. ಕಂಪನಿಯು ಪ್ರತಿ ಷೇರಿಗೆ ರೂ. 7 ಲಾಭಾಂಶವನ್ನು ಸಹ ಘೋಷಿಸಿದೆ.
Published by:Mahmadrafik K
First published: