• Home
  • »
  • News
  • »
  • business
  • »
  • IT Stocks: ಟಿಸಿಎಸ್-ಇನ್ಫೋಸಿಸ್ ಷೇರುಗಳಲ್ಲಿ ಭಾರಿ ಕುಸಿತ, ಐಟಿ ಷೇರುಗಳನ್ನು ಯಾವಾಗ ಖರೀದಿಸಿದರೆ ಉತ್ತಮ?

IT Stocks: ಟಿಸಿಎಸ್-ಇನ್ಫೋಸಿಸ್ ಷೇರುಗಳಲ್ಲಿ ಭಾರಿ ಕುಸಿತ, ಐಟಿ ಷೇರುಗಳನ್ನು ಯಾವಾಗ ಖರೀದಿಸಿದರೆ ಉತ್ತಮ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಪ್ರಸ್ತುತ ಟಾಟಾ ಕನ್ಸೆಲ್ಟನ್ಸಿ ಹಾಗೂ ಇನ್ಫೋಸಿಸ್ ಈ ಎರಡೂ ಸಂಸ್ಥೆಗಳ ಷೇರುಗಳು ಸ್ಟಾಕ್ ಮಾರುಕಟ್ಟೆಯಲ್ಲಿ ಸಾಕಷ್ಟು ಕುಸಿದಿವೆ. ಅಲ್ಲದೆ, ಈ ಕುಸಿಯುವಿಕೆಯನ್ನು ಗಮನದಲ್ಲಿರಿಸಿಕೊಂಡು ಕ್ಷೇತ್ರದ ವಿಶ್ಲೇಷಕರು ಮುಂಬರುವ ಸಮಯದಲ್ಲಿ ಮತ್ತಷ್ಟು ಕುಸಿಯುವಿಕೆಯ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ಮುಂದೆ ಓದಿ ...
  • Share this:

ಈ ವರ್ಷ ಮಾಹಿತಿ ತಂತ್ರಜ್ಞಾನ (Technology) ಕ್ಷೇತ್ರಕ್ಕೆ ಸಾಕಷ್ಟು ಕಹಿ ಅನುಭವ ತಂದಿದೆ ಎಂದೇ ಹೇಳಬಹುದು. ಏಕೆಂದರೆ, ಈ ಕ್ಷೇತ್ರದ ತೃಪ್ತಿಕರವಲ್ಲದ ಪ್ರದರ್ಶನದಿಂದಾಗಿ ಪ್ರಸ್ತುತ ಟಾಟಾ ಕನ್ಸೆಲ್ಟನ್ಸಿ (Tata Consultancy) ಹಾಗೂ ಇನ್ಫೋಸಿಸ್ (Infosys) ಈ ಎರಡೂ ಸಂಸ್ಥೆಗಳ ಷೇರುಗಳು ಸ್ಟಾಕ್ ಮಾರುಕಟ್ಟೆಯಲ್ಲಿ ಸಾಕಷ್ಟು ಕುಸಿದಿವೆ. ಅಲ್ಲದೆ, ಈ ಕುಸಿಯುವಿಕೆಯನ್ನು ಗಮನದಲ್ಲಿರಿಸಿಕೊಂಡು ಕ್ಷೇತ್ರದ ವಿಶ್ಲೇಷಕರು ಮುಂಬರುವ ಸಮಯದಲ್ಲಿ ಮತ್ತಷ್ಟು ಕುಸಿಯುವಿಕೆಯ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಡಾಲರ್ ಆದಾಯವು ಐಟಿ ಕಂಪನಿಗಳಿಗೆ (IT Company) ಮತ್ತೆ ಪೆಟ್ಟು ಕೊಡಬಹುದೆಂದು ಅಂದಾಜಿಸಲಾಗಿದೆ. ಅಂದರೆ ಆದಾಯ ಮತ್ತಷ್ಟು ಕುಸಿಯುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ವರ್ಷ ಐಟಿ ಇಂಡೆಕ್ಸ್ ಸೂಚ್ಯಂಕವು (IT Index Index) ಭಾರಿ ಪೆಟ್ಟು ತಿಂದ ಕ್ಷೇತ್ರವಾಗಿದ್ದು ಏನಿಲ್ಲವೆಂದರೂ ಇದು 27% ರಷ್ಟು ಕುಸಿತ ಕಂಡಿದೆ.


ದಾಖಲೆ ಮಟ್ಟದ ಕುಸಿತ 
ಐಟಿ ದಿಗ್ಗಜ ಕಂಪೆನಿಯಾದ ಟಿಸಿಎಸ್ ಷೇರುಗಳ ಬೆಲೆ ದಾಖಲೆಯ ಕುಸಿತದ ಬೆಲೆಯಲ್ಲಿ ಟ್ರೇಡ್ ಆಗುತ್ತಿದ್ದು ಕಳೆದ ಜುಲೈ ಇದರ ಬೆಲೆ ರೂ. 2,973 ಆಗಿತ್ತು. 2022 ರಲ್ಲಿ ಈ ಸ್ಟಾಕ್ ಬೆಲೆಯು ಏನಿಲ್ಲವೆಂದರೂ ಶೇ. 20ರಷ್ಟು ಕುಸಿತವಾಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಅಂದರೆ ಜೂನ್ ಗೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಸಂಸ್ಥೆಯ ಸ್ಟಾಕ್ ಬೆಲೆಗಳಲ್ಲಿ ಶೇ. 5 ರಷ್ಟು ವೃದ್ಧಿಯಾಗಿತ್ತು.


ಏತನ್ಮಧ್ಯೆ ಇನ್ಫೋಸಿಸ್ ಸಂಸ್ಥೆಯ ಷೇರಿನಲ್ಲೂ ಸಹ ಕುಸಿತವಾಗಿದೆ. ಬಾಂಬೆ ಸ್ಟಾಕ್ ಎಕ್ಸ್ಚೆಂಜ್ ನಲ್ಲಿ ಗುರುವಾರದಂದು ಸಂಸ್ಥೆಯ ಷೇರು ಬೆಲೆ ರೂ. 1,360 ಆಗಿತ್ತು. ಇದು 52 ವಾರಗಳಲ್ಲೇ ಅತಿ ಕಡಿಮೆ ಬೆಲೆಯಾಗಿದೆ. ಇನ್ಫೋಸಿಸ್ ಸಂಸ್ಥೆಯ ಷೇರು ಬೆಲೆಯಲ್ಲಿ ಈ ವರ್ಷ 27% ರಷ್ಟು ಕುಸಿತ ಕಂಡುಬಂದಿದೆ. ಆದರೆ ಇದೇ ಸಮಯದಲ್ಲಿ ಕಳೆದ ವರ್ಷ ಸಂಸ್ಥೆಯು ಮೂರು ಪ್ರತಿಶತದಷ್ಟು ಪ್ರಗತಿ/ವೃದ್ಧಿ ತೋರಿಸಿತ್ತು.


ಬಡ್ಡಿದರ ಹೆಚ್ಚಿಸಿದ ಅಮೆರಿಕದಲ್ಲಿ ಫೆಡರಲ್ ಬಾಡಿ
ಇನ್ನೊಂದೆಡೆ ಅಮೆರಿಕದಲ್ಲಿ ಫೆಡರಲ್ ಬಾಡಿಯು ಬಡ್ಡಿದರ ಹೆಚ್ಚಿಸಿದ್ದು ಮಾರುಕಟ್ಟೆಯಲ್ಲಿ ಪ್ರತಿಕೂಲ ವಾತಾವರಣ ಸೃಷ್ಟಿಸುವಲ್ಲಿ ತನ್ನದೆ ಆದ ಪಾತ್ರವಹಿಸುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಡಾಲರ್, ರೂಪಾಯಿ ಎದುರು ಬಲಗೊಳ್ಳುತ್ತಿರುವುದು ಭಾರತದ ಐಟಿ ಕಂಪನಿಗಳಿಗೆ ಉತ್ತಮ ವಾತಾವರಣ ಸೃಷ್ಟಿಸಬಹುದಾಗಿದ್ದು ಐಟಿ ಸ್ಟಾಕುಗಳು ಮತ್ತೆ ಚೇತರಿಸಿಕೊಳ್ಳಬಹುದೆಂಬ ನಿರೀಕ್ಷೆ ಇದ್ದೆ ಇದೆ.


ಇದನ್ನೂ ಓದಿ: Wipro: ವಿಪ್ರೋ ಸಂಸ್ಥೆಯಿಂದ 300 ಉದ್ಯೋಗಿಗಳ ವಜಾ, ಕಂಪನಿ ನಿಯಮ ಉಲ್ಲಂಘನೆಗೆ ಶಿಕ್ಷೆ!


ಪ್ರಸ್ತುತ ಈ ಎರಡೂ ದಿಗ್ಗಜ ಐಟಿ ಕಂಪನಿಗಳ ಷೇರುಗಳು ಒಂದು ರೀತಿಯಲ್ಲಿ ವರ್ತಿಸುತ್ತಿವೆಯಾದರೂ, ಹೂಡಿಕೆದಾರರು ಅಥವಾ ಗ್ರಾಹಕರು ಸದ್ಯದ ಪರಿಸ್ಥಿತಿಯ ಅವಲೋಕನ ಗಮನಿಸಿ ಷೇರು ತೆಗೆದುಕೊಳ್ಳಲು ಬಯಸಿದರೆ ಅವರು ಟಿಸಿಎಸ್ ಷೇರು ಖರೀದಿಯನ್ನು ನಿರ್ಣಯಿಸುವುದು ಉತ್ತಮವಾಗಿದೆ ಎಂದು ಐಐಎಫ್‍ಎಲ್ ಸೆಕ್ಯೂರಿಟೀಸ್ ಸಂಸ್ಥೆಯ ಉಪಾಧ್ಯಕ್ಷರಾದ ಅನುಜ್ ಗುಪ್ತಾ ಹೇಳುತ್ತಾರೆ.


ದೀರ್ಘಾವಧಿಯ ಆದಾಯ ಬಯಸುವ ಹೂಡಿಕೆದಾರರಿಗೆ ಈ ಷೇರುಗಳು ಬೆಸ್ಟ್  
ಇನ್ನು, ಎಸ್‍ಎಂಸಿ ಗ್ಲೋಬಲ್ ಸೆಕ್ಯೂರಿಟೀಸ್ ಸಂಸ್ಥೆಯ ಮುದಿತ್ ಗೋಯಲ್ ಅವರ ಪ್ರಕಾರ, ಸದ್ಯದ ಪರಿಸ್ಥಿತಿಯಲ್ಲಿ ಟಿಸಿಎಸ್ ಹಾಗೂ ಇನ್ಫೋಸಿಸ್ ಈ ಎರಡೂ ಸಂಸ್ಥೆಗಳ ಷೇರುಗಳು ಖಂಡಿತವಾಗಿಯೂ ಉತ್ತಮವಾಗಿದ್ದು ದೀರ್ಘಾವಧಿಯ ಆದಾಯ ಬಯಸುವ ಹೂಡಿಕೆದಾರರು ಇವುಗಳನ್ನು ಕೊಳ್ಳಬಹುದು, ಏಕೆಂದರೆ ಇವು ಉತ್ತಮವಾದ ತಕ್ಷಣ ಬೆಂಬಲ ಹಾಗೂ ಸುರಕ್ಷಿತ ಬೆಲೆಗಳನ್ನು ಹೊಂದಿವೆ.


ಇದನ್ನೂ ಓದಿ:  Ritesh Agarwal: ಭಾರೀ ಏರಿಕೆ ಕಂಡ ಓಯೋ ಆದಾಯ, ಸಂಭಾವನೆ ಹೆಚ್ಚಿಸಿಕೊಂಡ ಸಿಇಒ ರಿತೇಶ್‌!


ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಷಯವೆಂದರೆ ಈ ಹಿಂದೆ ಐಟಿ ಕಂಪೆನಿಗಳು ಭಾರತದಲ್ಲಿ ಉದ್ಯೋಗಿಗಳಿಗೆ ಸಾಕಷ್ಟು ಬೋನಸ್, ವೇರಿಯೇಬಲ್ ಪೇ ಮುಂತಾದವುಗಳನ್ನು ನೀಡುತ್ತಿದ್ದವು. ಆದರೆ, ಈ ಬಾರಿ ಆರ್ಥಿಕ ಹಿಂಜರಿತದ ಪರಿಸ್ಥಿತಿಯು ಅಮೆರಿಕ ಹಾಗೂ ಯುರೋಪ್ ದೇಶಗಳಲ್ಲಿ ಉಂಟಾಗುವ ನಿಚ್ಚಳ ಸಾಧ್ಯತೆಯಿದ್ದು ಆ ಭಾಗದ ಗ್ರಾಹಕರೂ ಸಹ ನಷ್ಟ ಅನುಭವಿಸುವ ಎಲ್ಲ ಸಾಧ್ಯತೆಯಿದೆ. ಹಾಗಾಗಿ ಇದರಿಂದ ಭಾರತದ ಐಟಿ ಕಂಪನಿಗಳಿಗೆ ಆದಾಯದಲ್ಲಿ ತೊಡಕು ಉಂಟಾಗುವ ಸಾಧ್ಯತೆ ಇರುವುದರಿಂದ ಇದನ್ನು ನಿಭಾಯಿಸಲು ಈಗಾಗಲೇ ಬಹಳಷ್ಟು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಬೋನಸ್ ನೀಡುವಿಕೆಯನ್ನು ಕಡಿತಗೊಳಿಸಿವೆ.

Published by:Ashwini Prabhu
First published: