RIL: $2 ಬಿಲಿಯನ್ ಷೇರುದಾರರ ಒಪ್ಪಂದಕ್ಕೆ ಸಹಿ ಹಾಕಿದ ರಿಲಯನ್ಸ್ ಮತ್ತು ಯುಎಇಯ ತಜೀಜ್

TAZIZ EDC ಮತ್ತು PVC ಜಂಟಿ ಉದ್ಯಮವು ಕ್ಲೋರ್-ಅಲ್ಕಲಿ, ಎಥಿಲೀನ್ ಡೈಕ್ಲೋರೈಡ್ (EDC) ಮತ್ತು ಪಾಲಿವಿನೈಲ್ ಕ್ಲೋರೈಡ್ (PVC) ಗಾಗಿ ಉತ್ಪಾದನಾ ಸೌಲಭ್ಯವನ್ನು ನಿರ್ಮಿಸುತ್ತದೆ ಮತ್ತು ನಿರ್ವಹಿಸುತ್ತದೆ. ಇಂತಹ ರಾಸಾಯನಿಕಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಮೊದಲ ಬಾರಿಗೆ ಉತ್ಪಾದಿಸಲಾಗುತ್ತದೆ. ಇದು ಸ್ಥಳೀಯ ಉತ್ಪಾದಕರಿಗೆ ಆದಾಯದ ಹೊಸ ಮಾರ್ಗಗಳನ್ನು ತೆರೆಯುತ್ತದೆ.

ಮುಖೇಶ್ ಅಂಬಾನಿ- ಡಾ. ಸುಲ್ತಾನ್ ಅಲ್ ಜಾಬರ್

ಮುಖೇಶ್ ಅಂಬಾನಿ- ಡಾ. ಸುಲ್ತಾನ್ ಅಲ್ ಜಾಬರ್

  • Share this:
    ಅಬುಧಾಬಿ ಕೆಮಿಕಲ್ಸ್ ಡಿರೈವೇಟಿವ್ಸ್ ಕಂಪನಿ ಆರ್‌ಎಸ್‌ಸಿ ಲಿಮಿಟೆಡ್ (TA’ZIZ) ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ರುವಾಯಿಸ್‌ನಲ್ಲಿ ತಝೀಜ್‌ (TAZIZ ) ಇಂಡಸ್ಟ್ರಿಯಲ್‌ ಕೆಮಿಕಲ್‌ ವಲಯ ಸ್ಥಾಪನೆಗೆ ಷೇರುದಾರರ ಒಪ್ಪಂದಕ್ಕೆ ಸಹಿ ಹಾಕಿವೆ. ಷೇರುದಾರರ ಒಪ್ಪಂದವು $2 ಬಿಲಿಯನ್ ಮೌಲ್ಯದ್ದಾಗಿದೆ. ಜಂಟಿ ಉದ್ಯಮವನ್ನು ರುವೈಸ್‌ನ (Ruwais) ತಾಝಿಜ್ ಇಂಡಸ್ಟ್ರಿಯಲ್ ಕೆಮಿಕಲ್ಸ್ ವಲಯದಲ್ಲಿ ಸ್ಥಾಪಿಸಲಾಗುವುದು.

    TAZIZ EDC ಮತ್ತು PVC ಜಂಟಿ ಉದ್ಯಮವು ಕ್ಲೋರ್-ಅಲ್ಕಲಿ, ಎಥಿಲೀನ್ ಡೈಕ್ಲೋರೈಡ್ (EDC) ಮತ್ತು ಪಾಲಿವಿನೈಲ್ ಕ್ಲೋರೈಡ್ (PVC) ಗಾಗಿ ಉತ್ಪಾದನಾ ಸೌಲಭ್ಯವನ್ನು ನಿರ್ಮಿಸುತ್ತದೆ ಮತ್ತು ನಿರ್ವಹಿಸುತ್ತದೆ. ಇಂತಹ ರಾಸಾಯನಿಕಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಮೊದಲ ಬಾರಿಗೆ ಉತ್ಪಾದಿಸಲಾಗುತ್ತದೆ. ಇದು ಸ್ಥಳೀಯ ಉತ್ಪಾದಕರಿಗೆ ಆದಾಯದ ಹೊಸ ಮಾರ್ಗಗಳನ್ನು ತೆರೆಯುತ್ತದೆ.

    ರಿಲಯನ್ಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಅವರು ADNOC ಪ್ರಧಾನ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಔಪಚಾರಿಕ ಷೇರುದಾರರ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಅಂಬಾನಿ ಅವರು ಹಿಸ್ ಎಕ್ಸೆಲೆನ್ಸಿ ಡಾ. ಸುಲ್ತಾನ್ ಅಲ್ ಜಾಬರ್, ಯುಎಇ ಕೈಗಾರಿಕೆ ಮತ್ತು ಸುಧಾರಿತ ತಂತ್ರಜ್ಞಾನ ಸಚಿವ ಮತ್ತು ADNOC ವ್ಯವಸ್ಥಾಪಕ ನಿರ್ದೇಶಕ ಮತ್ತು ಗ್ರೂಪ್ CEO ಅವರನ್ನು ಭೇಟಿ ಮಾಡಿದರು ಮತ್ತು ಹೈಡ್ರೋಕಾರ್ಬನ್ ಮೌಲ್ಯ ಸರಪಳಿ, ಹೊಸ ಶಕ್ತಿ ಮತ್ತು ಡಿಕಾರ್ಬನೈಸೇಶನ್‌ನಲ್ಲಿ ಪಾಲುದಾರಿಕೆ ಮತ್ತು ಬೆಳವಣಿಗೆ ಅವಕಾಶಗಳ ಕುರಿತು ಚರ್ಚಿಸಿದರು.

    ಇದನ್ನೂ ಓದಿ: MTNL: ಕೇವಲ 21 ರೂ.ಗೆ ಒಂದು ವರ್ಷದ ಪ್ರಯೋಜನ ಒದಗಿಸಿರುವ ಎಮ್​ಟಿಎನ್​ಎಲ್​!

    ಮುಖೇಶ್ ಅಂಬಾನಿ ಮಾತನಾಡಿ, "ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ತಾಝೀಜ್‌ ನಡುವಿನ ಜಂಟಿ ಉದ್ಯಮದ ತ್ವರಿತ ಪ್ರಗತಿಯನ್ನು ನನಗೆ ತುಂಬಾ ಸಂತೋಷ ಉಂಟುಮಾಡಿದೆ. ಈ ಜಂಟಿ ಉದ್ಯಮವು ಭಾರತ ಮತ್ತು ಯುಎಇ ನಡುವಿನ ಬಲವಾದ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ಯುಎಇ ಮುಕ್ತ ವ್ಯಾಪಾರದಿಂದ ಪ್ರಯೋಜನ ಪಡೆದುಕೊಳ್ಳುತ್ತಿದೆ. ಈ ವರ್ಷದ ಫೆಬ್ರವರಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.ಇದು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವನ್ನು ಉತ್ತೇಜಿಸುತ್ತದೆ” ಎಂದರು.

    ಇದನ್ನೂ ಓದಿ: Kia EV6: ಅಧಿಕ ಮೈಲೇಜ್​ ನೀಡುವ ಕಾರು ಪರಿಚಯಿಸಲಿರುವ ಕಿಯಾ! ಒಂದು ಬಾರಿ ಚಾರ್ಜ್​ ಮಾಡಿದ್ರೆ 528 KM ಚಲಿಸುತ್ತೆ!

    ಡಾ. ಅಲ್ ಜಬರ್ ಮಾತನಾಡಿ "ರಿಲಯನ್ಸ್ ಒಂದು ಪ್ರಮುಖ ಪಾಲುದಾರ ಮತ್ತು ತಾಝಿಜ್‌ನಲ್ಲಿನ ನಮ್ಮ ಸಹಯೋಗವು ಯುಎಇ ಮತ್ತು ಭಾರತದ ನಡುವಿನ ಆಳ ಮತ್ತು ಸೌಹಾರ್ದ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುತ್ತದೆ. ಇದು ಕೈಗಾರಿಕಾ ಮತ್ತು ಇಂಧನ ಸಹಕಾರದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ” ಎಂದರು.

    ನವೀಕರಿಸಬಹುದಾದ ಶಕ್ತಿ ಮತ್ತು ಪರಿಸರ ಸ್ನೇಹಿ ಹೈಡ್ರೋಜನ್‌ ಕ್ಷೇತ್ರದಲ್ಲಿ ಸಹಯೋಗಕ್ಕಾಗಿ ಸಂಭಾವ್ಯ ಅವಕಾಶಗಳನ್ನು ಅನ್ವೇಷಿಸಲು ಮುಖೇಶ್ ಅಂಬಾನಿ ಮಸ್ದರ್‌ನ ಸಿಇಒ ಮೊಹಮ್ಮದ್ ಜಮೀಲ್ ಅಲ್ ರಾಮ್ಹಿ ಅವರನ್ನು ಭೇಟಿ ಮಾಡಿದರು.
    Published by:Harshith AS
    First published: