Tax Saving Scheme: ಈ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಿ ತೆರಿಗೆ ಉಳಿಸಿ

ಇಲ್ಲಿ ನೀವು ಹೂಡಿಕೆಯ ಮೇಲೆ ತೆರಿಗೆ ವಿನಾಯಿತಿಯನ್ನು (Tax savings) ಪಡೆಯುತ್ತೀರಿ. ಈ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ, ನೀವು ಮುಕ್ತಾಯದ ಸಮಯದಲ್ಲಿ ಉತ್ತಮ ಮೊತ್ತವನ್ನು ಸಂಗ್ರಹಿಸಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Tax Saving Schemes: ಯೋಜಿತ ಹೂಡಿಕೆ (Planned Investment) ಯಾವಾಗಲೂ ಉತ್ತಮ ಆದಾಯ(Good Returns)ವನ್ನು ತರುತ್ತದೆ. ಇಂದಿನ ಯುಗದಲ್ಲಿ, ಅಂತಹ ಅನೇಕ ಹೂಡಿಕೆ ಆಯ್ಕೆಗಳು ಮಾರುಕಟ್ಟೆ(Market)ಗಳಲ್ಲಿ ಲಭ್ಯ ಇವೆ. ಇಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಕಡಿಮೆ ಸಮಯದಲ್ಲಿ ಉತ್ತಮ ಲಾಭವನ್ನು ಪಡೆದುಕೊಳ್ಳಬಹುದು. ಮತ್ತೊಂದೆಡೆ ಅಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸಿದರೆ, ಅಲ್ಲಿ ನೀವು ತೆರಿಗೆ ಪ್ರಯೋಜನ ಅಥವಾ ಉಳಿತಾಯಗಳನ್ನು ಪಡೆಯಬಹುದು. ಈ ಸಂಚಿಕೆಯಲ್ಲಿ ಇಂದು ನಾವು ಅಂತಹ ಕೆಲವು ಯೋಜನೆಗಳ ಬಗ್ಗೆ ಹೇಳುತ್ತಿದ್ದೇವೆ. ಇಲ್ಲಿ ನೀವು ಹೂಡಿಕೆಯ ಮೇಲೆ ತೆರಿಗೆ ವಿನಾಯಿತಿಯನ್ನು (Tax savings) ಪಡೆಯುತ್ತೀರಿ. ಈ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ, ನೀವು ಮುಕ್ತಾಯದ ಸಮಯದಲ್ಲಿ ಉತ್ತಮ ಮೊತ್ತವನ್ನು ಸಂಗ್ರಹಿಸಬಹುದು.

ನಿಮ್ಮ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ನೀವು ಈ ಹಣವನ್ನು ಬಳಸಬಹುದು. ಇದಲ್ಲದೇ ಈ ಹಣವನ್ನು ಮಗಳ ಮದುವೆ ಅಥವಾ ಮಕ್ಕಳ ವಿದ್ಯಾಭ್ಯಾಸಕ್ಕೂ ಬಳಸಬಹುದು. ಈ ಸಂಚಿಕೆಯಲ್ಲಿ ಈ ತೆರಿಗೆ ಉಳಿತಾಯ ಯೋಜನೆಗಳ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ- National Saving Certificate

ತೆರಿಗೆ ಉಳಿಸುವ ಉದ್ದೇಶದಿಂದ ನೀವು ಯಾವುದೇ ಯೋಜನೆಯಲ್ಲಿ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ, ಈ ಯೋಜನೆಯು ನಿಮಗೆ ಉತ್ತಮ ಆಯ್ಕೆಯಾಗಿದೆ. ಈ ಯೋಜನೆಯನ್ನು ಅಂಚೆ ಕಚೇರಿಯಿಂದ ನಿರ್ವಹಿಸಲಾಗುತ್ತಿದೆ. ಅದರಲ್ಲಿ ಹೂಡಿಕೆ ಮಾಡಿದರೆ, ನೀವು ಶೇಕಡಾ 6.8 ರ ಬಡ್ಡಿದರವನ್ನು ಪಡೆಯುತ್ತೀರಿ. ಇದಲ್ಲದೇ ಆದಾಯ ತೆರಿಗೆಯ ಸೆಕ್ಷನ್ 80ಸಿ ಅಡಿಯಲ್ಲಿ 1.50 ಲಕ್ಷ ವಿನಾಯತಿಯೂ ಲಭ್ಯವಿದೆ.

ಇದನ್ನೂ ಓದಿ: Union Budget 2022: ಈ ಬಾರಿ ಯಾವ ವಸ್ತು ಅಗ್ಗ? ಯಾವುದು ದುಬಾರಿ? ಇಲ್ಲಿದೆ ಮಾಹಿತಿ

ರಾಷ್ಟ್ರೀಯ ಪಿಂಚಣಿ ಯೋಜನೆ National Pension Scheme

ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗಿಗಳು ಈ ವಿಶೇಷ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ, ನೀವು ಆದಾಯ ತೆರಿಗೆಯ ಸೆಕ್ಷನ್ 80C ಅಡಿಯಲ್ಲಿ 1.5 ಲಕ್ಷ ರೂಪಾಯಿಗಳನ್ನು ಉಳಿಸುತ್ತೀರಿ.

ಇದಲ್ಲದೆ, ಆದಾಯ ತೆರಿಗೆಯ ಸೆಕ್ಷನ್ 80CCD (1B) ಅಡಿಯಲ್ಲಿ ನೀವು ಹೆಚ್ಚುವರಿ 50 ಸಾವಿರ ರೂಪಾಯಿಗಳನ್ನು ಉಳಿಸಬಹುದು.

ಸಾರ್ವಜನಿಕ ಭವಿಷ್ಯ ನಿಧಿ PPF public provident fund

ನೀವು ಈ ಯೋಜನೆಯಲ್ಲಿ ಒಟ್ಟು 15 ವರ್ಷಗಳವರೆಗೆ ಹೂಡಿಕೆ ಮಾಡಬೇಕು. ಹೂಡಿಕೆಯ ಸಮಯದಲ್ಲಿ, ನೀವು ಪ್ರತಿ ತಿಂಗಳು ನಿಮ್ಮ ಸಾರ್ವಜನಿಕ ಭವಿಷ್ಯ ಖಾತೆಯಲ್ಲಿ 500 ರೂ. ಹೂಡಿಕೆ ಮಾಡಬೇಕಾಗುತ್ತದೆ. ನಿಮ್ಮ ಸಂಬಳಕ್ಕೆ ಅನುಗುಣವಾಗಿ PPF ನಲ್ಲಿ ಹಣ ಹೂಡಿಕೆ ಮಾಡಬಹುದು.

ಇದನ್ನೂ ಓದಿ: Union Budget 2022: ಮಹಿಳಾ ಸಬಲೀಕರಣಕ್ಕೆ ಒತ್ತು; ಬಜೆಟ್ ನಲ್ಲಿ ಮಹಿಳೆಯರಿಗೆ ಏನು ಲಾಭ-ನಷ್ಟ?

ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಆದಾಯ ತೆರಿಗೆಯ ಸೆಕ್ಷನ್ 8iನಚೊಮ0C ಅಡಿಯಲ್ಲಿ ನೀವು 1.5 ಲಕ್ಷ ರೂಪಾಯಿಗಳ ಕಡಿತವನ್ನು ಪಡೆಯುತ್ತೀರಿ. ಯಾವುದೇ ಸರ್ಕಾರಿ ಬ್ಯಾಂಕ್ (Government Bank) ಅಥವಾ ಪೋಸ್ಟ್ ಆಫೀಸ್ (Post Office) ಶಾಖೆಗೆ ಭೇಟಿ ನೀಡುವ ಮೂಲಕ ನಿಮ್ಮ ಸಾರ್ವಜನಿಕ ಭವಿಷ್ಯ ಖಾತೆಯನ್ನು ನೀವು ಸುಲಭವಾಗಿ ತೆರೆಯಬಹುದು.

ತೆರಿಗೆದಾರರಿಗೆ ಬಜೆಟ್ ನಲ್ಲಿ ಬಿಗ್ ರಿಲೀಫ್

ಮಧ್ಯಮ ವರ್ಗದ ಜನರಿಗೆ (Middle Class People) ಆದಾಯ ತೆರಿಗೆ (Income Tax) ಸಲ್ಲಿಸಲು ಸಮಯಾವಕಾಶ ನೀಡಿದೆ. ತೆರಿಗೆ ಸಲ್ಲಿಸುವ ವೇಳೆಯಲ್ಲಾದ ತಪ್ಪುಗಳಿಂದ ಹೆಚ್ಚು ದಂಡ ಪಾವತಿಸುವ ಪರಿಸ್ಥಿತಿಯಲ್ಲಿ ಸಿಲುಕಿದ್ದ ಜನರಿಗೆ ನಿರ್ಮಲಾ ಸೀತಾರಾಮನ್ ಬಿಗ್ ರಿಲೀಫ್ ನೀಡಿದ್ದಾರೆ.

ತೆರಿಗೆ ರಿಟರ್ನ್ಸ್ (IT Returns) ವೇಳೆಯಲ್ಲಾದ ತಪ್ಪುಗಳನ್ನ ಸರಿಪಡಿಸಿಕೊಳ್ಳಲು ಎರಡು ವರ್ಷದ ಸಮಯಾವಕಾಶ ನೀಡಲಾಗಿದೆ. ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದೇ, ಸದ್ಯ ಇರೋ ನಿಯಮಗಳನ್ನು ಮುಂದುವರಿಸಿಕೊಂಡು ಹೋಗಲು ಸರ್ಕಾರ ನಿರ್ಧರಿಸಿದೆ.
Published by:Mahmadrafik K
First published: