ಮುಂಬರುವ 2023ರ ಕೇಂದ್ರ ಸರ್ಕಾರದ ಬಜೆಟ್ (Union Budget) ಅನ್ನು ಕೇಂದ್ರ ಹಣಕಾಸು ಸಚಿವೆ (Union Finance Minister) ನಿರ್ಮಲಾ ಸೀತಾರಾಮನ್ (Nirmala Sitharaman) ಫೆಬ್ರವರಿ 1 ರಂದು ಮಂಡಿಸಲಿದ್ದಾರೆ. ಸಂಬಳದಾರರು ಮತ್ತು ವೃತ್ತಿಪರರು ಸೇರಿದಂತೆ ತೆರಿಗೆದಾರರು ಬಜೆಟ್ನಿಂದ ಹಲವಾರು ತೆರಿಗೆ ಪರಿಹಾರ (Tax relief) ನಿರೀಕ್ಷೆಗಳನ್ನು ಹೊಂದಿದ್ದಾರೆ. ಅದಾಗ್ಯೂ ಬಜೆಟ್ನಲ್ಲಿ ಯಾವುದೇ ದೊಡ್ಡ ಘೋಷಣೆಯಾಗದಿರಬಹುದು ಎಂದು ಹಲವು ತಜ್ಞರು ನಂಬಿದ್ದಾರೆ. ಅಂದಹಾಗೆ 2023ರ ಬಜೆಟ್ ಸರ್ಕಾರದ ಪ್ರಮುಖ ಬಜೆಟ್ ಆಗಲಿದೆ. ಇದು 2024 ರ ಚುನಾವಣೆಗೆ (Election) ಮೊದಲು ಸರ್ಕಾರವು ಪ್ರಸ್ತುತಪಡಿಸುವ ಕೊನೆಯ ಪೂರ್ಣ ಬಜೆಟ್ ಆಗಿದೆ. ಈ ಬಜೆಟ್ನಲ್ಲಿ ವೆಚ್ಚದ ಮೇಲೆ ಒತ್ತಡ ಇರುತ್ತದೆ ಮತ್ತು ಸಾಮಾನ್ಯವಾಗಿ, ಅಂತಹ ಸಂದರ್ಭಗಳಲ್ಲಿ, ನಾವು ಸರ್ಕಾರದಿಂದ ಯಾವುದೇ ದೊಡ್ಡ ಪರಿಹಾರವನ್ನು ನಿರೀಕ್ಷಿಸಲಾಗುವುದಿಲ್ಲ ಎಂಬುದಾಗಿ ವೇದ್ ಜೈನ್ & ಅಸೋಸಿಯೇಟ್ಸ್ ಪಾಲುದಾರ ಅಂಕಿತ್ ಜೈನ್ ತಿಳಿಸಿದ್ದಾರೆ.
ಆದಾಗ್ಯೂ, ಬಜೆಟ್ನಿಂದ ಉದ್ಯೋಗ ನಿರತ ವೃತ್ತಿಪರರಿಗೆ ಇನ್ನೂ ಕೆಲವು ನಿರೀಕ್ಷೆಗಳಿವೆ. ಅಂತಹ ನಿರೀಕ್ಷೆಗಳ ಪಟ್ಟಿ ಇಲ್ಲಿದೆ:
ಪೂರ್ವಭಾವಿ ತೆರಿಗೆಯ ಯೋಜನೆ
2016 ರ ಬಜೆಟ್ನಲ್ಲಿ, ಸರ್ಕಾರವು ಪೂರ್ವಭಾವಿ ತೆರಿಗೆಯ ಯೋಜನೆಯನ್ನು ಪರಿಚಯಿಸಿದ್ದು, ಇದರಲ್ಲಿ ವೃತ್ತಿಪರರ ಅರ್ಧದಷ್ಟು ರಸೀದಿಗಳನ್ನು ಮಾತ್ರ ಅವರ ಆದಾಯವಾಗಿ ತೆರಿಗೆ ವಿಧಿಸಲಾಗುತ್ತದೆ. ರೂ 50 ಲಕ್ಷದವರೆಗೆ ವಾರ್ಷಿಕ ಆದಾಯವನ್ನು ಪಡೆಯುವ ವೃತ್ತಿಪರರು ಮಾತ್ರ ಈ ಯೋಜನೆಯಲ್ಲಿ ಆಯ್ಕೆಗೊಳ್ಳಲು ಅರ್ಹರಾಗಿದ್ದಾರೆ. ಅಂಕಿತ್ ಹೇಳುವಂತೆ ಸರಕಾರವು ಈ ಮಿತಿಯನ್ನು ರೂ 50 ಲಕ್ಷದಿಂದ ರೂ 75 ಲಕ್ಷ ಅಥವಾ ರೂ 1 ಕೋಟಿಗೆ ಹೆಚ್ಚಿಸಬಹುದು ಎಂದು ತಿಳಿಸಿದ್ದಾರೆ.
ಟಿಡಿಎಸ್ ಸ್ಪಷ್ಟತೆ
MVAC ಯ ಪಾಲುದಾರರಾದ ಜ್ಯೋತಿಕಾ ಜೈನ್, ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್ನಲ್ಲಿ ಸುಪ್ರೀಂ ಕೋರ್ಟ್ನ ತೀರ್ಪಿನ ಹಿನ್ನೆಲೆಯಲ್ಲಿ ಸ್ಪೆಕ್ಟ್ರಮ್ನಾದ್ಯಂತದ ವೃತ್ತಿಪರರು ಸೆಕ್ಷನ್ 194-R ನ ನಿಬಂಧನೆಗಳ ಅನುಷ್ಠಾನದ ಬಗ್ಗೆ ಸ್ಪಷ್ಟತೆಯನ್ನು ನಿರೀಕ್ಷಿಸುತ್ತಾರೆ ಎಂದು ಹೇಳುತ್ತಾರೆ.
ಇದನ್ನೂ ಓದಿ: Pension Scheme: ಹಳೆಯ ಪಿಂಚಣಿ ಯೋಜನೆಗೆ ನೌಕರರ ಆಗ್ರಹ! ಇದು ರಾಜಕೀಯ ದಾಳವೋ, ಆರ್ಥಿಕತೆಗೆ ಶಾಪವೋ?
ಸಮಯಾವಕಾಶದ ನಿರೀಕ್ಷೆ
ಸಾಲ ವಜಾಗೊಳಿಸುವಿಕೆಯು ಲಾಭ ಅಥವಾ ಅಗತ್ಯವಲ್ಲ ಎಂದು ಸರಕಾರವು ಸ್ಪಷ್ಟವಾಗಿ ತಿಳಿಯಪಡಿಸಬೇಕು ಹಾಗೂ ವಿಭಾಗ 194-R ಅಡಿಯಲ್ಲಿ ಟಿಡಿಎಸ್ ವ್ಯಾಪ್ತಿಯಿಂದ ಹೊರಗೆ ಇಡಬೇಕು ಎಂದು ಜ್ಯೋತಿಕಾ ತಿಳಿಸಿದ್ದಾರೆ. ಈ ಸಮಯದಲ್ಲಿ ಉಂಟಾಗುವ ಪ್ರಾಯೋಗಿಕ ತೊಂದರೆಗಳನ್ನು ಗಮನದಲ್ಲಿರಿಸಿಕೊಂಡು ಕೆಲವು ತಿಂಗಳ ಸಮಯವಕಾಶವನ್ನು ನೀಡಬೇಕು ಹಾಗೂ ನಿಬಂಧನೆಯ ಪರಿಣಾಮಕಾರಿ ದಿನಾಂಕವನ್ನು ಅದಕ್ಕೆ ಅನುಗುಣವಾಗಿ ಮುಂದೂಡಬೇಕು ಎಂಬುದು ಜ್ಯೋತಿಕಾ ಅಭಿಪ್ರಾಯವಾಗಿದೆ.
ತೆರಿಗೆ ನಿಯಮ ಬದಲಾವಣೆ
2014 ರಿಂದ ತೆರಿಗೆ ನಿಯಮಗಳನ್ನು ಮಾರ್ಪಡಿಸಲಾಗಿಲ್ಲ. ಮೂಲ ವಿನಾಯಿತಿ ಮಿತಿಯನ್ನು 5 ಲಕ್ಷ ರೂ.ಗಳಿಗೆ ಹೆಚ್ಚಿಸಿದಾಗ, 10 ಲಕ್ಷ ರೂ.ಗಳಿಂದ ಆದಾಯಕ್ಕೆ ಅತ್ಯಧಿಕ ತೆರಿಗೆ ದರವು ಅನ್ವಯವಾಗುವುದು ಮುಂದುವರೆದಿದೆ.
ಸರಕಾರವು ಈ ದರವನ್ನು ಪ್ರಸ್ತುತ ರೂ 10 ಲಕ್ಷದಿಂದ ರೂ 20 ಲಕ್ಷಕ್ಕೆ ಹೆಚ್ಚಿಸಬಹುದು ಎಂದು ಭಾವಿಸುವುದಾಗಿ ಅಂಕಿತ್ ತಿಳಿಸಿದ್ದು ಇನ್ನುಳಿದ ವಿಭಾಗಗಳಲ್ಲಿಯೂ ರೂ 15 ಲಕ್ಷದಿಂದ ದರಗಳನ್ನು ರೂ 30 ಲಕ್ಷಕ್ಕೆ ಏರಿಸಬಹುದು ಎಂದು ಅಂಕಿತ್ ನುಡಿದಿದ್ದಾರೆ.
ಮೂಲ ವಿನಾಯಿತಿ ಮಿತಿಯಲ್ಲಿ ಹೆಚ್ಚಳ
ವೃತ್ತಿಪರರು ಮಾತ್ರವಲ್ಲದೆ ಯಾವುದೇ ವ್ಯಕ್ತಿಗೂ ಸಾಮಾನ್ಯವಾಗಿ ನಿರೀಕ್ಷಿಸುವ ಅಂಶವೆಂದರೆ ಪ್ರಸ್ತುತ ರೂ.2.5 ಲಕ್ಷದಿಂದ ಮೂಲ ವಿನಾಯಿತಿ ಮಿತಿಯನ್ನು ಹೆಚ್ಚಿಸುವುದು ಎಂದು ಜ್ಯೋತಿಕಾ ತಿಳಿಸಿದ್ದಾರೆ.
ಇದನ್ನೂ ಓದಿ: Small Saving Schemes: ಹೊಸ ವರ್ಷದಂದು ಕೇಂದ್ರದಿಂದ ಮಧ್ಯಮ ವರ್ಗಕ್ಕೆ ಗುಡ್ ನ್ಯೂಸ್?
ತೆರಿಗೆ ವಿನಾಯಿತಿ ಮಿತಿ ಎಷ್ಟಿರುತ್ತದೆ?
ರೂ 5 ಲಕ್ಷದವರೆಗಿನ ಆದಾಯ ಹೊಂದಿರುವವರು ಸೆಕ್ಷನ್ 87A ಅಡಿಯಲ್ಲಿ ರಿಯಾಯಿತಿಯನ್ನು ಪಡೆಯುತ್ತಾರೆ, ಆದಾಯ ತೆರಿಗೆ ಲೆಕ್ಕಾಚಾರದಲ್ಲಿ ಮೂಲಭೂತ ಹಂತವನ್ನು ಸರಳಗೊಳಿಸುವ ಮೂಲಕ ವಿನಾಯಿತಿ ಮಿತಿಯನ್ನು ಕನಿಷ್ಠ ರೂ 5 ಲಕ್ಷದವರೆಗೆ ಹೆಚ್ಚಿಸುವುದು ಸರಿಯಾದ ತೀರ್ಮಾನವಾಗಿದೆ ಎಂದು ಜ್ಯೋತಿಕಾ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ