• Home
  • »
  • News
  • »
  • business
  • »
  • Tata Nexon: ಮಾರಾಟದಲ್ಲಿ ಕುಸಿತ ಕಂಡರೂ ಅಗ್ರಸ್ಥಾನ ಕಾಯ್ದುಕೊಂಡ ಟಾಟಾ, ಎಸ್‌ಯುವಿಯ ಸ್ಟೈಲಿಶ್ ಲುಕ್ ವೈರಲ್

Tata Nexon: ಮಾರಾಟದಲ್ಲಿ ಕುಸಿತ ಕಂಡರೂ ಅಗ್ರಸ್ಥಾನ ಕಾಯ್ದುಕೊಂಡ ಟಾಟಾ, ಎಸ್‌ಯುವಿಯ ಸ್ಟೈಲಿಶ್ ಲುಕ್ ವೈರಲ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Tata Nexon: ಸುರಕ್ಷತೆ ಹಾಗೂ ವೈಶಿಷ್ಟ್ಯಗಳ ವಿಭಾಗದಲ್ಲಿ ಅತ್ಯುತ್ತಮ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ SUV ನೆಕ್ಸಾನ್, ದೇಶದಲ್ಲೇ ಅತ್ಯುತ್ತಮವಾಗಿ ಮಾರಾಟವಾಗಿರುವ ಎಸ್‌ಯುವಿ ಶ್ರೇಣಿಯಲ್ಲಿ ಅಗ್ರಸ್ಥಾನವನ್ನು ಕಾಯ್ದಿರಿಸಿಕೊಂಡಿದೆ. 

  • Share this:

ಸುರಕ್ಷತೆ ಹಾಗೂ ವೈಶಿಷ್ಟ್ಯಗಳ ವಿಭಾಗದಲ್ಲಿ ಅತ್ಯುತ್ತಮ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ SUV ನೆಕ್ಸಾನ್ (Tata Nexon) , ದೇಶದಲ್ಲೇ ಅತ್ಯುತ್ತಮವಾಗಿ ಮಾರಾಟವಾಗಿರುವ SUV ಶ್ರೇಣಿಯಲ್ಲಿ ಅಗ್ರಸ್ಥಾನವನ್ನು ಕಾಯ್ದಿರಿಸಿಕೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದಾಗ ಮಾರಾಟದಲ್ಲಿ 7% ಇಳಿಕೆಯನ್ನು ಕಂಡರೂ ಟಾಪ್ ಸ್ಥಾನದಲ್ಲಿದೆ. ಇದೀಗ ಸ್ವಲ್ಪ ಸಮಯದವರೆಗೆ ಟಾಪ್ 3 ನೇ ಸ್ಥಾನದಲ್ಲಿರುವ SUV, ಇನ್ನಷ್ಟು ಸಮಯದವರೆಗೆ ತನ್ನ ಸ್ಥಾನವನ್ನು ಕಾಯ್ದಿರಿಸಿಕೊಳ್ಳುವುದು ಖಚಿತವಾಗಿದೆ. ಇದೀಗ ಹೊಸ ವರ್ಷಕ್ಕಾಗಿ ನೆಕ್ಸಾನ್‌ನ SUV ಇನ್ನಷ್ಟು ಸ್ಟೈಲಿಶ್ ಆದರೆ ಹೇಗೆ ಎಂಬ ಉದ್ದೇಶದಿಂದ ವಿನ್ಯಾಸಕಾರರೊಬ್ಬರು ತಮ್ಮದೇ ಕಲ್ಪನೆಯ ಎಸ್‌ಯುವಿಯ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಕಾರಿನಲ್ಲಿ ಅವರು ಮಾಡಿರುವ ಮಾರ್ಪಾಡುಗಳೇನು? ಪ್ರಚಲಿತ ನೆಕ್ಸಾನ್ ಎಸ್‌ಯುವಿಗಿಂತ ಈ SUV ಹೇಗೆ ಭಿನ್ನವಾಗಿದೆ ಎಂಬುದನ್ನು ನೋಡೋಣ. 


ಬಾಕ್ಸ್ ರಚನೆಯೊಂದಿಗೆ ಹೊಸ ಎಸ್‌ಯುವಿ:


ದೇಶದ ಮೂರನೇ ಅತಿದೊಡ್ಡ ಕಾರು ತಯಾರಕ ಟಾಟಾ ಮೋಟಾರ್ಸ್‌ನ ಸಬ್-ಕಾಂಪ್ಯಾಕ್ಟ್ ಅನ್ನು ಅತ್ಯಂತ ಪ್ರತಿಭಾವಂತ ಕಲಾವಿದರೊಬ್ಬರು ಕಾರಿನ ಮೇಲ್ಭಾಗದಲ್ಲಿ ಬಾಕ್ಸ್ ಮಾದರಿಯೊಂದಿಗಿನ ರಚನೆಯೊಂದಿಗೆ ಮರುರೂಪಿಸಿದ್ದು, ಈ ಇಮೇಜ್‌ಗಳನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಕಾರಿನ ಹೊಸ ವಿನ್ಯಾಸಕ್ಕೆ ಯಾರು ಕೂಡ ಮನಸೋಲುವುದು ಖಂಡಿತ.


ಹೊಸ ವರ್ಷಕ್ಕೆ ಸ್ಟೈಲಿಶ್ ಎಸ್‌ಯುವಿ:


Bozzconcepts ಹೆಸರಿನ ಡಿಜಿಟಲ್ ಕಲಾವಿದರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಇನ್ನಷ್ಟು ಸುಂದರ ಹಾಗೂ ವಿನ್ಯಾಸಗೊಳಿಸಿದ ಟಾಟಾ ನೆಕ್ಸಾನ್‌ನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ನೆಕ್ಸಾನ್ ಅನ್ನು ವಿನ್ಯಾಸಕಾರರು ತಮ್ಮ ಪ್ರತಿಭೆಗೆ ತಕ್ಕಂತೆ ಸುಂದರಗೊಳಿಸಿದ್ದು, 2023 ಅನ್ನು ನಾವು ಈ ರೀತಿ ಸ್ವಾಗತಿಸುತ್ತಿದ್ದೇವೆ ಎಂಬ ಶೀರ್ಷಿಕೆಯೊಂದಿಗೆ ಎಸ್‌ಯುವಿ ಯ ಸ್ಟೈಲಿಶ್ ಇಮೇಜ್‌ಗಳನ್ನು ಹಂಚಿಕೊಂಡಿದ್ದಾರೆ.


ವಿನ್ಯಾಸಕಾರನ ಕೈಚಳಕದಲ್ಲಿ ಮೂಡಿಬಂದ ನೆಕ್ಸಾನ್:


ತಮ್ಮ ಕಾನ್ಸೆಪ್ಟ್‌ಗಳಲ್ಲಿ ಟಾಟಾ ನೆಕ್ಸಾನ್ BLUARC KIT ಅತ್ಯಂತ ಆಕರ್ಷಕ ರೂಪದಲ್ಲಿ ಮೂಡಿಬಂದಿದೆ ಎಂಬ ವಿವರಗಳನ್ನು ಈ ಕಲಾವಿದರು ನೀಡಿದ್ದು, ನೆಕ್ಸಾನ್ ಹೀಗಿದ್ದರೆ ಹೇಗೆ ಎಂಬ ತಮ್ಮ ಮನದ ಅಭಿಲಾಶೆಯನ್ನು ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ಹಂಚಿಕೊಳ್ಳುವುದರ ಮೂಲಕ ಹೊಸ ವರ್ಷದ ಶುಭಾಶಯವನ್ನು ನೆಕ್ಸಾನ್ ಅಭಿಮಾನಿಗಳಿಗೆ ನೀಡಿದ್ದಾರೆ.


ಇದನ್ನೂ ಓದಿ: RBI New Rules: ಬ್ಯಾಂಕ್ ಗ್ರಾಹಕರಿಗೆ RBI ಬಿಗ್​ ರಿಲೀಫ್, ಹೊಸ ನಿಯಮಗಳು ಜಾರಿ!


ಬಣ್ಣ ಆಕಾರ ಸೂಪರ್: 


ಇನ್‌ಸ್ಟಾದಲ್ಲಿರುವ ಚಿತ್ರಗಳಿಂದ ನೆಕ್ಸಾನ್ ಗ್ರಾಫೈಟ್ ಬೂದು ಬಣ್ಣದಲ್ಲಿ ಮಿಂಚಿದ್ದು ವೈಡ್‌ಬಾಡಿ ವಿನ್ಯಾಸದೊಂದಿಗೆ ಬಂದಿದೆ. ಕಾರಿನ ಮುಂಭಾಗದಲ್ಲಿ ವಿನ್ಯಾಸಕಾರರು ನೆಕ್ಸಾನ್‌ಗೆ ಗಂಭೀರ ಹಾಗೂ ಆಕರ್ಷಕ ರೂಪಾಂತರವನ್ನು ನೀಡಿದ್ದಾರೆ. ಬಂಪರ್ ಅನ್ನು ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಿದ್ದು ಫಾಗ್ ಲ್ಯಾಂಪ್ಸ್‌ಗಳಿರುವ ಸ್ಥಳದಲ್ಲಿ ಕೂಡ ವಿನ್ಯಾಸಕಾರ ತಮ್ಮ ಕಲ್ಪನೆಯನ್ನು ಒಡಮೂಡಿಸಿದ್ದಾರೆ.


ನೆಕ್ಸಾನ್ ಹಿಂಭಾಗದಲ್ಲಿ ಹೊಸ ವಿನ್ಯಾಸ:


ನೆಕ್ಸಾನ್ ಇದೀಗ ಬಳಕೆಯಲ್ಲಿರುವ ನೆಕ್ಸಾನ್‌ಗಿಂತಲೂ ಅಗಲವಾಗಿದ್ದು, ಎಸ್‌ಯುವಿಗೆ ಇನ್ನಷ್ಟು ಸ್ಟೈಲಿಶ್ ನೋಟವನ್ನು ವಿನ್ಯಾಸಕಾರ ನೀಡಿರುವುದು ಗಮನಿಸಬಹುದಾಗಿದೆ. ಕಡಿಮೆ ಪ್ರೊಫೈಲ್‌ಗಳ ಟಯರ್‌ಗಳೊಂದಿಗೆ ಕಸ್ಟಮ ವೀಲ್‌ಗಳನ್ನು ನೆಕ್ಸಾನ್ ಹೊಂದಿದೆ. ಕಾರಿನ ಹಿಂಭಾಗ ಕೂಡ ಬದಲಾಗಿದ್ದು, ಹೊಸದಾಗಿ ಪರಿಷ್ಕರಿಸಿದ ಬಂಪರ್ ಅನ್ನು ನಾವಿಲ್ಲಿ ಕಾಣಬಹುದಾಗಿದೆ. ಕಾರಿನ ನಂಬರ್‌ಪ್ಲೇಟ್ ಪ್ಲೇಸ್‌ಮೆಂಟ್ ಕೂಡ ವಿಭಿನ್ನವಾಗಿರುವುದನ್ನು ಚಿತ್ರದಿಂದ ಗಮನಿಸಬಹುದಾಗಿದೆ.


ಕಾರಿನ ಮೇಲ್ಭಾಗದಲ್ಲಿದೆ ಬಾಕ್ಸ್ ಕ್ಯಾರಿಯರ್:


ಕಾರಿನಲ್ಲಿ ಇನ್ನಷ್ಟು ಗಮನ ಸೆಳೆಯುವ ಅಂಶವೆಂದರೆ ಮೇಲ್ಭಾಗದಲ್ಲಿ ಅಳವಡಿಸಲಾಗಿರುವ ಬಾಕ್ಸ್ ಕ್ಯಾರಿಯರ್ ಆಗಿದೆ. ಕಸ್ಟಮ್ ಬ್ಯಾನೆಟ್ ಅನ್ನು ಎಸ್‌ಯುವಿ ಒಳಗೊಂಡಿದ್ದು ನೋಡಿದೊಡನೆ ಖರೀದಿಸಿಬಿಡಬೇಕು ಎನ್ನುವ ಹಂಬಲವನ್ನು ನೆಕ್ಸಾನ್ ಪ್ರಿಯರಲ್ಲಿ ಉಂಟಾಗುವಂತೆ ಮಾಡುತ್ತಿದೆ.




ಕಲ್ಪಿತ ಮಾದರಿಯಾದರೂ ಸ್ಟೈಲಿಶ್ ಆಗಿರುವ ಎಸ್‌ಯುವಿ:


ಕಲಾವಿದ ತಮ್ಮ ಕೈಚಳಕದಿಂದ ಅತ್ಯಂತ ನವೀನ ಮಾದರಿಯ ಎಸ್‌ಯುವಿಯನ್ನು ನಿರ್ಮಿಸಿದ್ದು, ಇಂತಹುದೇ ವಿವಿಧ ವಿನ್ಯಾಸಗಳನ್ನು ನಿರ್ಮಿಸುವವರಿಗೆ ಈ ಚಿತ್ರಗಳು ಸ್ಫೂರ್ತಿಯಾಗಲಿದೆ.


ಮಾರಾಟದಲ್ಲಿ ಕುಸಿತ ಕಂಡರೂ ಅಗ್ರಸ್ಥಾನದಲ್ಲಿ ನೆಕ್ಸಾನ್:


ಮಾರುಕಟ್ಟೆಯಲ್ಲಿ ಟಾಟಾ ನೆಕ್ಸಾನ್‌ನ ಮಾರಾಟಕ್ಕೆ ಸಂಬಂಧಿಸಿದಂತೆ ಅಂಕಿಅಂಶಗಳನ್ನು ನೋಡುವುದಾದರೆ ಡಿಸೆಂಬರ್ 2022 ರಲ್ಲಿ ನೆಕ್ಸಾನ್‌ನ 12,053 ಯುನಿಟ್‌ಗಳು ಮಾರಾಟವಾಗಿದೆ ಹಾಗೂ ಕಳೆದ ವರ್ಷ ಇದೇ ಸಮಯಕ್ಕೆ ನೆಕ್ಸಾನ್‌ನ 12,899 ಯುನಿಟ್‌ಗಳು ಮಾರಾಟವಾಗಿರುವುದನ್ನು ಗಮನಿಸಬಹುದಾಗಿದೆ. ನೆಕ್ಸಾನ್ ತನ್ನ ಬೇಡಿಕೆಯಲ್ಲಿ 7% ದಷ್ಟು ಕುಸಿತವನ್ನು ಕಂಡಿದ್ದರೂ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.

Published by:shrikrishna bhat
First published: