ಭಾರತದ ನಂಬರ್ ಒನ್ ಪ್ಯಾಕೇಜ್ಡ್ ಮಿನರಲ್ ವಾಟರ್ ಕಂಪೆನಿ (Mineral Water Company) ಎನಿಸಿರುವ ಬಿಸ್ಲೇರಿಯ ಮಾರಾಟ ವಿಚಾರ ಸುದ್ದಿಯಲ್ಲಿತ್ತು ಮತ್ತು ಅದನ್ನು ಟಾಟಾ ಕಂಪನಿ 7 ಸಾವಿರ ಕೋಟಿ ರೂಪಾಯಿಗೆ ಸ್ವಾಧೀನ ಪಡಿಸಿಕೊಂಡಿರುವುದಾಗಿ ವರದಿಗಳು ಕೇಳಿ ಬಂದಿದ್ದವು. ಇನ್ನೇನೂ ಪ್ರತಿಷ್ಠಿತ ಬ್ರ್ಯಾಂಡ್ ಟಾಟಾ (TATA) ತೆಕ್ಕೆಗೆ ಹೋಯಿತು ಎನ್ನುವಷ್ಟರಲ್ಲಿ ಬಿಸ್ಲೇರಿ (Bisleri) ಇಂಟರ್ನ್ಯಾಷನಲ್ ಅಧ್ಯಕ್ಷ ದಿ. ರಮೇಶ್ ಚೌಹಾಣ್ ಅವರ ಪುತ್ರಿ ಜಯಂತಿ ಚೌಹಾಣ್ ಯೂಟರ್ನ್ ಹೊಡೆದಿದ್ದು, ಬಹುಕೋಟಿಯ ಬಾಟಲ್ ವಾಟರ್ ಕಂಪನಿಯನ್ನು ಮುನ್ನಡೆಸಲು ನಿರ್ಧರಿಸಿದ್ದಾರೆ.
ಬಿಸ್ಲೇರಿ ಸಂಸ್ಥೆಯನ್ನು ಮುನ್ನಡೆಸಲಿರುವ ರಮೇಶ್ ಚೌಹಾಣ್ ಪುತ್ರಿ ಜಯಂತಿ ಚೌಹಾಣ್
ಹೌದು, ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (ಟಿಸಿಪಿಎಲ್) ಬಿಸ್ಲೆರಿ ಕಂಪನಿಯ ಸ್ವಾಧೀನ ಪ್ರಕ್ರಿಯೆಯಿಂದ ಹಿಂದೆ ಸರಿದಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆ ಬಿಸ್ಲೆರಿ ಅಂತಾರಾಷ್ಟ್ರೀಯ ಮುಖ್ಯಸ್ಥ ರಮೇಶ್ ಚೌಹಾಣ್ ಅವರ ಪುತ್ರಿ ಜಯಂತಿ ಚೌಹಾಣ್ ಅವರೇ ವಾಟರ್ ಬಾಟಲ್ ಕಂಪನಿಯ ಮುಖ್ಯಸ್ಥರಾಗಿ ತಮ್ಮ ತಂದೆಯ ಬಹುಕೋಟಿ ವ್ಯವಹಾರವನ್ನು ಮುನ್ನೆಡೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಸಂಸ್ಥೆಯನ್ನು ಮಾರಾಟ ಮಾಡಲು ಬಯಸುವುದಿಲ್ಲ
ತಮ್ಮ ಪುತ್ರಿ ಜಯಂತಿ ವೃತ್ತಿಪರ ತಂಡದೊಂದಿಗೆ ಕಂಪನಿಯನ್ನು ಮುನ್ನಡೆಸುತ್ತಾರೆ ಹಾಗಾಗಿ ನಾವು ಸಂಸ್ಥೆಯನ್ನು ಮಾರಾಟ ಮಾಡಲು ಬಯಸುವುದಿಲ್ಲ ಎಂದು ಬಿಸ್ಲೇರಿ ಅಧ್ಯಕ್ಷ ರಮೇಶ್ ಚೌಹಾಣ್ ತಿಳಿಸಿದ್ದಾರೆ. 38 ರ ಹರೆಯದ ಜಯಂತಿ ಚೌಹಾಣ್ ರಮೇಶ್ ಚೌಹಾಣ್ ಅವರ ಏಕೈಕ ಪುತ್ರಿ ಮತ್ತು ಪ್ರಸ್ತುತ ಕಂಪನಿಯ ಉಪಾಧ್ಯಕ್ಷರಾಗಿದ್ದಾರೆ.
ಇದನ್ನೂ ಓದಿ: ಹಬ್ಬಕ್ಕೂ ಮುನ್ನವೇ ಬೆಲ್ಲದಂತ ಸುದ್ದಿ; ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ ದರ ಇಳಿಕೆ
ಜಯಂತಿ ಚೌಹಾಣ್ ಯಾರು?
ರಮೇಶ್ ಚೌಹಾಣ್ ಅವರ ಪುತ್ರಿ ಜಯಂತಿ ಚೌಹಾಣ್ ಪ್ರಾಡಕ್ಟ್ ಡೆವಲಪ್‌ಮೆಂಟ್ ಕೋರ್ಸ್‌ನಲ್ಲಿ ಪದವಿ ಪಡೆದಿದ್ದಾರೆ. ಜಯಂತಿ ಅವರು ಲಾಸ್ ಏಂಜಲೀಸ್‌ನ ಫ್ಯಾಶನ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ ಮತ್ತು ಮರ್ಚಂಡೈಸಿಂಗ್‌ನ ಕೋರ್ಸ್ ಅನ್ನು ಸಹ ಪೂರ್ಣಗೊಳಿಸಿದ್ದಾರೆ. ಫ್ಯಾಶನ್ ಸ್ಟೈಲಿಂಗ್‌ನಲ್ಲಿ ಕೂಡ ಪರಿಣಿತಿ ಹೊಂದಿದ್ದಾರೆ. ಛಾಯಾಗ್ರಾಹಣ ಬಗ್ಗೆ ಕೂಡ ಅರಿವನ್ನು ಪಡೆದಿದ್ದಾರೆ. ತಮ್ಮ24 ರ ಹರೆಯದಲ್ಲಿ ಜಯಂತಿಯವರು ಬಿಸ್ಲೇರಿ ಸಂಸ್ಥೆಗೆ ಉಪಾಧ್ಯಕ್ಷರಾಗಿ ಸೇರ್ಪಡೆಗೊಂಡರು. ಕಂಪನಿಯ ಯಾಂತ್ರೀಕರಣದಲ್ಲಿ ಜಯಂತಿಯವರ ಪಾಲು ಅತ್ಯಂತ ಪ್ರಮುಖವಾದುದು.
ಒಪ್ಪಂದ ರದ್ದುಗೊಳಿಸಿದ ಟಾಟಾ ಗ್ರೂಪ್
82 ರ ಹರೆಯದ ಚೌಹಾಣ್ ಈ ಹಿಂದೆ ಬ್ರ್ಯಾಂಡ್ ಅನ್ನು ಟಾಟಾ ಗ್ರೂಪ್‌ಗೆ ಅಂದಾಜು 7,000 ಕೋಟಿ ರೂ.ಗೆ ಮಾರಾಟ ಮಾಡಲು ಒಪ್ಪಿಕೊಂಡಿದ್ದರು. ಅದಾಗ್ಯೂ ಬ್ರ್ಯಾಂಡ್ ತೀರ್ಮಾನಕ್ಕೆ ಬಾರದಿರುವುದರಿಂದ ಟಾಟಾ ಸಂಸ್ಥೆ ಒಪ್ಪಂದವನ್ನು ರದ್ದುಗೊಳಿಸಿತು ಎಂದು ವರದಿಯಾಗಿದೆ.
ಟಾಟಾ ಗ್ರೂಪ್ ಸ್ವಾಧೀನಪಡಿಸುವ ಪ್ರಕ್ರಿಯೆಗಾಗಿ ಸುಮಾರು ಎರಡು ವರ್ಷಗಳ ಹಿಂದೆಯೇ ಬಿಸ್ಲೇರಿ ಬ್ರ್ಯಾಂಡ್‌ನೊಂದಿಗೆ ಮಾತುಕತೆ ಆರಂಭಿಸಿದ್ದರು ಆದರೆ ರಮೇಶ್ ಚೌಹಾಣ್ ಅವರ ಪುತ್ರಿ ಜಯಂತಿಯವರೇ ಸಂಸ್ಥೆಯನ್ನು ಮುನ್ನಡೆಸುವ ನಿರ್ಧಾರ ಖಚಿತಪಡಿಸಿದ ನಂತರ ಮಾತುಕತೆಯನ್ನು ರದ್ದುಪಡಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಅಂತರಾಷ್ಟ್ರೀಯ ಒಪ್ಪಂದ ಅಥವಾ ಬದ್ಧತೆಯನ್ನು ನಡೆಸಿಲ್ಲ
ಬಿಸ್ಲೆರಿ ವ್ಯವಹಾರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಜಯಂತಿ ಸಂಸ್ಥೆಯ ಪೋರ್ಟ್‌ಫೋಲಿಯೊದ ಭಾಗವೆಂದೆನಿಸಿರುವ ವೇದಿಕಾ ಬ್ರ್ಯಾಂಡ್‌ನತ್ತ ಹೆಚ್ಚಿನ ಗಮನ ಕೇಂದ್ರೀಕರಿಸಿದ್ದಾರೆ. ಟಾಟಾ ಗ್ರೂಪ್ ಬಿಸ್ಲೇರಿಯನ್ನು ಸ್ವಾಧೀನಪಡಿಸಿಕೊಳ್ಳಲು ನಡೆಸಬೇಕಾದ ಎಲ್ಲಾ ಕಾರ್ಯಂತ್ರಗಳನ್ನು ಯೋಜಿಸಿದ್ದು ತನ್ನ ವಶಕ್ಕೆ ಪಡೆದುಕೊಳ್ಳಲು ಸಾಕಷ್ಟು ಪ್ರಯತ್ನಿಸಿತು ಆದರೆ ಬಿಸ್ಲೇರಿಯನ್ನು ತಮ್ಮ ಪುತ್ರಿಯೇ ನಡೆಸಲಿದ್ದಾರೆ ಎಂದು ರಮೇಶ್ ಚೌಹಾಣ್ ತಿಳಿಯಪಡಿಸಿದ್ದಾರೆ ಎಂದು ಟಾಟಾ ತಿಳಿಸಿದೆ.
ಕಂಪನಿಯ ಬೆಳವಣಿಗೆಯ ಕಾರ್ಯತಂತ್ರದ ಪ್ರಮುಖ ಭಾಗವಾಗಿ ಸ್ವಾಧೀನಪಡಿಸಿಕೊಳ್ಳುವಿಕೆಗಳು ಉಳಿದಿವೆ ಎಂದು ಟಾಟಾ ಗ್ರಾಹಕರ ವ್ಯವಸ್ಥಾಪಕ ನಿರ್ದೇಶಕ ಸುನಿಲ್ ಡಿಸೋಜಾ ತಿಳಿಸಿದ್ದರು. ಕಂಪನಿಯು ಬಿಸ್ಲೆರಿಯೊಂದಿಗೆ ಯಾವುದೇ ಅಂತರಾಷ್ಟ್ರೀಯ ಒಪ್ಪಂದ ಅಥವಾ ಬದ್ಧತೆಯನ್ನು ನಡೆಸಿಲ್ಲ ಎಂದು ಟಾಟಾ ಗ್ರೂಪ್ ಎಫ್‌ಎಂಸಿಜಿ ವಿಭಾಗ ತಿಳಿಸಿದೆ.
ವಹಿವಾಟಿಗೆ ಸಂಬಂಧಿಸಿದಂತೆ ಬಿಸ್ಲೇರಿಯೊಂದಿಗೆ ಮಾತುಕತೆಯನ್ನು ನಿಲ್ಲಿಸಿದೆ ಮತ್ತು ಕಂಪನಿಯು ಈ ವಿಷಯದಲ್ಲಿ ಯಾವುದೇ ನಿರ್ಣಾಯಕ ಒಪ್ಪಂದ ಅಥವಾ ಬದ್ಧತೆಯನ್ನು ಪ್ರದರ್ಶಿಸಿಲ್ಲ ಎಂದು ಖಚಿತಪಡಿಸುತ್ತದೆ ಎಂದು ಟಾಟಾ ಗ್ರೂಪ್ ಖಾತ್ರಿಪಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ