ಹೊಸದಿಲ್ಲಿ: ಟಾಟಾ ಗ್ರೂಪ್ (TATA Group) ದೇಶದ ಪ್ರತಿಷ್ಠಿತ ಉದ್ಯಮವಾಗಿದ್ದು, ದೇಶವಲ್ಲದೇ ಪ್ರಪಂಚದಾದ್ಯಂತ ಹೆಮ್ಮರವಾಗಿ ಬೆಳೆದು ನಿಂತಿದೆ. ಟಾಟಾ-ಮಾಲೀಕತ್ವದಲ್ಲಿ ಹಲವು ಕಂಪನಿಗಳಿದ್ದು, ಅದರಲ್ಲಿ ಟೈಟಾನ್ ಕಂಪನಿಯು (Titan India) ಕೂಡ ಪ್ರಮುಖವಾದುದು. ಹಣದುಬ್ಬರದ ನಡುವೆಯೂ ಕಂಪನಿಯನ್ನು ಮತ್ತಷ್ಟು ವಿಸ್ತರಿಸಲು ನೋಡುತ್ತಿರುವ ಟಾಟಾ ಗ್ರೂಪ್ ಟೈಟಾನ್ ಅನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಯೋಜನೆಗಳನ್ನು ರೂಪಿಸುತ್ತಿದೆ.
ಮಾರುಕಟ್ಟೆಯನ್ನು ವಿಸ್ತರಿಸುವ ಸಾಧ್ಯತೆ
ಕಂಪನಿಯ ಲಾಭ, ಸದ್ಯದ ಪರಿಸ್ಥಿತಿ ಮತ್ತು ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕ ಸಿ.ಕೆ.ವೆಂಕಟರಾಮನ್ 'ಟೈಟಾನ್ ಇಂಡಿಯಾ ಮುಂದಿನ ಹಣಕಾಸು ವರ್ಷ 2024ರಲ್ಲಿ ಹೆಚ್ಚಿನ ಮಾರುಕಟ್ಟೆ ಪಾಲನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ. ಜೊತೆಗೆ ವ್ಯಾಪಾರವನ್ನು ವಿಸ್ತರಿಸಲು ಇನ್ನೂ ಕೆಲವು ಬ್ರ್ಯಾಂಚ್ ಮತ್ತು ಮಳಿಗೆಗಳನ್ನು ತೆರೆಯಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: Home Loan: ಗೃಹ ಸಾಲ ಪಡೆಯಲು ನಿರ್ಧರಿಸಿದ್ದೀರಾ? ಹಾಗಿದ್ದರೆ ಈ ಬ್ಯಾಂಕ್‌ಗಳು ನಿಮಗೆ ಕಡಿಮೆ ಬಡ್ಡಿ ದರದಲ್ಲಿ ನೀಡುತ್ತೆ ಲೋನ್
FY24 ರಲ್ಲಿ ಹಣದುಬ್ಬರದ ಒತ್ತಡದ ಹೊರತಾಗಿಯೂ ಹಲವಾರು ಉತ್ಪನ್ನಗಳಲ್ಲಿ ಹೆಚ್ಚಿನ ಮಾರುಕಟ್ಟೆ ಪಾಲನ್ನು ಪಡೆದುಕೊಳ್ಳಲು, ತನ್ನ ವ್ಯವಹಾರವನ್ನು ವಿಸ್ತರಿಸಲು ಮತ್ತು ಗ್ರಾಹಕರಿಗೆ ವೆಚ್ಚವನ್ನು ವರ್ಗಾಯಿಸಲು ಅವಕಾಶವನ್ನು ನೋಡುತ್ತಿರುವ ಟೈಟಾನ್ ಇಂಡಿಯಾ ಮುಂದೆ ಸಹ ಉದ್ಯಮದಲ್ಲಿ ಸಾಕಷ್ಟು ಬೆಳವಣಿಗೆ ಕಾಣಲಿದೆ ಎಂದು ಸಿ.ಕೆ.ವೆಂಕಟರಾಮನ್ ತಿಳಿಸಿದರು. ಟೈಟಾನ್‌ನ ಮೇಲ್ಮಧ್ಯಮ ವರ್ಗ ಮತ್ತು ಅದಕ್ಕಿಂತ ಹೆಚ್ಚಿನವರನ್ನು ಗ್ರಾಹಕರನ್ನಾಗಿ ಹೊಂದಿದೆ. ಇದು ಹಣದುಬ್ಬರದ ಒತ್ತಡದ ಹೊರತಾಗಿಯೂ ಕಂಪನಿ ಮೇಲುಗೈ ಸಾಧಿಸಲು ದಾರಿ ಮಾಡಿಕೊಟ್ಟಿದೆ ಎಂದು ಹೇಳಿದರು.
ಪ್ರಸ್ತುತ ಆಭರಣಗಳು, ಕಣ್ಣಿನ ಆರೈಕೆ, ಧರಿಸಬಹುದಾದ ವಸ್ತುಗಳು, ಸ್ಮಾರ್ಟ್ ವೇರಬಲ್ಸ್ ಮತ್ತು ಸೀರೆಗಳಂತಹ ಹಲವು ವಿಭಾಗಗಳಲ್ಲಿ ಕಂಪನಿಯ ಮಾರುಕಟ್ಟೆ ಪಾಲು ತುಂಬಾ ಕಡಿಮೆಯಾಗಿದೆ. ಆದ್ದರಿಂದ, ಮುಂದಿನ ಹಲವು ವರ್ಷಗಳಲ್ಲಿ ಮಾರುಕಟ್ಟೆ ಪಾಲಿನಲ್ಲಿ ಲಾಭದ ಅವಕಾಶವು ತುಂಬಾ ಹೆಚ್ಚಾಗಿರುತ್ತದೆ. ಈ ಎಲ್ಲಾ ಅಂಶಗಳು ಕಂಪನಿಯ ಮುಂದಿನ ಬೆಳವಣಿಗೆಗೆ ಪೂರಕವಾಗಿದೆ ಎಂದು ಸಿ.ಕೆ.ವೆಂಕಟರಾಮನ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಟೈಟಾನ್ ಕಂಪನಿಗೆ ಮೂಲ ಆದಾಯ ಆಭರಣ ವ್ಯವಹಾರ
ಟೈಟಾನ್ ಕಂಪನಿಗೆ ಅದರ 80% ಆದಾಯವು ಆಭರಣ ವ್ಯವಹಾರದಿಂದ ಬರುವುದರಿಂದ ಈ ವರ್ಗದಲ್ಲಿ ಹೆಚ್ಚು ಹೂಡಿಕೆ ಮಾಡಲು ಮತ್ತು ಯೋಜನೆಗಳನ್ನು ರೂಪಿಸಲು ಕಂಪನಿಯು ನಿರ್ಧಾರ ಮಾಡಿದೆ. ಟೈಟಾನ್ ಕಂಪನಿಯು ತನಿಷ್ಕ್, ಕ್ಯಾರಟ್ಲೇನ್, ಮಿಯಾ ಮತ್ತು ಜೋಯಾ ಸೇರಿದಂತೆ ಅನೇಕ ಬ್ರಾಂಡ್‌ಗಳನ್ನು ಹೊಂದಿದೆ. 'ಈ ಬ್ರಾಂಡ್‌ಗಳಲ್ಲಿ ಜೋಯಾ ವೇಗವಾಗಿ ಬೆಳೆಯುತ್ತಿದ್ದು, ಕಳೆದ ಆರು ತಿಂಗಳಲ್ಲಿ ಆದಾಯ ₹100 ಕೋಟಿಯಿಂದ ₹200 ಕೋಟಿಗೆ ಏರಿಕೆ ಕಂಡಿದೆ. 2027ರ ವೇಳೆಗೆ ಜೋಯಾದ ಗ್ರಾಹಕರ ನೆಲೆಯಲ್ಲಿ ಐದುಪಟ್ಟು ಬೆಳವಣಿಗೆಯನ್ನು ಕಂಪನಿ ನಿರೀಕ್ಷಿಸುತ್ತದೆ' ಎಂದು ಸಿ.ಕೆ.ವೆಂಕಟರಾಮನ್ ತಿಳಿಸಿದರು.
ಇದನ್ನೂ ಓದಿ: RBI Repo Rate Hike: ಸಾಲಗಾರರಿಗೆ ಮತ್ತೆ ಶಾಕ್ ನೀಡಿದ ಆರ್ಬಿಐ, 6ನೇ ಬಾರಿ ರೆಪೋ ದರ ಹೆಚ್ಚಳ!
ಹೊಸ ಮಳಿಗೆ ಆರಂಭ
ಅಷ್ಟೇ ಅಲ್ಲದೇ ಟೈಟಾನ್‌ನ ಐಷಾರಾಮಿ ಆಭರಣ ಬ್ರಾಂಡ್ ಆಗಿರುವ ಜೋಯಾ ಮುಂಬೈನ ತಾಜ್ ಮಹಲ್ ಪ್ಯಾಲೇಸ್‌ನಲ್ಲಿ ತನ್ನ ಮಳಿಗೆಯನ್ನು ತೆರೆಯಲು ಸಜ್ಜಾಗಿದ್ದು, ಈ ಮೂಲಕ ಏಳನೇ ಮಳಿಗೆಯನ್ನು ಆರಂಭಿಸಲು ಟೈಟಾನ್ ಕಂಪನಿ ಮುಂದಾಗಿದೆ.
ಆಭರಣದ ಕ್ಷೇತ್ರದಲ್ಲಿ ಟೈಟಾನ್ ಸಂಪೂರ್ಣ ಲಾಭದಾಯಕವಾಗಿದ್ದು, ಕಂಪನಿಗೆ ಇದರ ಕೊಡುಗೆ ದೊಡ್ಡದು. FY24 ರಲ್ಲಿ ಸುಗಂಧ ದ್ರವ್ಯಗಳು, ಮಹಿಳೆಯರ ಬ್ಯಾಗ್‌ಗಳು, ಸ್ಮಾರ್ಟ್ ವೇರಬಲ್‌ಗಳು ಮತ್ತು ಕನ್ನಡಕಗಳಲ್ಲಿ ಇನ್ನೂ ಸಹ ಹೆಚ್ಚಿನ ಬೆಳವಣಿಗೆಯನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ಆನ್‌ಲೈನ್ ಮಾರಾಟಕ್ಕೆ ಒತ್ತು
ಮುಂಬರುವ ಹಣಕಾಸು ವರ್ಷದಲ್ಲಿ, ಟೈಟಾನ್ ತನ್ನ ಓಮ್ನಿ-ಚಾನೆಲ್ (ಆನ್‌ಲೈನ್ ವೇದಿಕೆ) ವಿಧಾನವನ್ನು ಹೆಚ್ಚಿನ ರೀತಿಯಲ್ಲಿ ಕಾರ್ಯಗತಗೊಳಿಸಲು ಯೋಜಿಸುತ್ತಿದೆ. ಈ ಹಣಕಾಸು ವರ್ಷದಲ್ಲಿ ಕಂಪನಿಯು ಆನ್‌ಲೈನ್ ವಿಭಾಗದಿಂದ ಹೆಚ್ಚಿನ ಮಟ್ಟದಲ್ಲಿ ಲಾಭ ಪಡೆದುಕೊಂಡಿದೆ. ಹೀಗಾಗಿ ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಿದ್ದು, ಇದಕ್ಕೆ ಬೇಕಾದ ಎಲ್ಲಾ ಟೆಕ್ ಸೌಲಭ್ಯವನ್ನೂ ಇನ್ನೂ ಪರಿಣಾಮಕಾರಿಯಾಗಿ ಹೆಚ್ಚಿಸಲಿದೆ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ