• Home
  • »
  • News
  • »
  • business
  • »
  • TATA Nexon 85 ಸಾವಿರ ಕಿಮೀ ಓಡೋಕೆ ಖರ್ಚಾಗಿದ್ದೆಷ್ಟು? ಇದಕ್ಕೆ ಹೇಳೋದು ಎಲೆಕ್ಟ್ರಿಕ್​ ಕಾರ್​ ಬೆಸ್ಟ್​ ಅಂತ!

TATA Nexon 85 ಸಾವಿರ ಕಿಮೀ ಓಡೋಕೆ ಖರ್ಚಾಗಿದ್ದೆಷ್ಟು? ಇದಕ್ಕೆ ಹೇಳೋದು ಎಲೆಕ್ಟ್ರಿಕ್​ ಕಾರ್​ ಬೆಸ್ಟ್​ ಅಂತ!

ಟಾಟಾ ನೆಕ್ಸಾನ್​ ಎಲೆಕ್ಟ್ರಿಕ್​ ಕಾರ್​

ಟಾಟಾ ನೆಕ್ಸಾನ್​ ಎಲೆಕ್ಟ್ರಿಕ್​ ಕಾರ್​

ನೆಕ್ಸಾನ್ ಇವಿಯು ಮಾರುಕಟ್ಟೆಯ 70% ಕ್ಕಿಂತ ಹೆಚ್ಚಿನ ಸ್ಥಾನವನ್ನು ವಶಪಡಿಸಿಕೊಳ್ಳುವ ಮೂಲಕ ಭಾರತೀಯ EV ವಿಭಾಗದಲ್ಲಿ ಪ್ರಾಬಲ್ಯ ಸಾಧಿಸಿದೆ.

  • Share this:

ಟಾಟಾ ನೆಕ್ಸಾನ್ EV (Tata Nexon EV) ಮಾಲೀಕರು 2 ವರ್ಷಗಳ ತಮ್ಮ ನೆಕ್ಸಾನ್ ಪ್ರಯಾಣವನ್ನು ಹಂಚಿಕೊಂಡಿದ್ದು ಸುಮಾರು 85,000 ಕಿಮೀ ಚಾಲನೆ ಮಾಡಿದ್ದಾರೆ ಹಾಗೂ ಈ ಇಲೆಕ್ಟ್ರಿಕ್ ವಾಹನ (Electric Vehicles) ದ ಚಾರ್ಜಿಂಗ್ (Charging) ವೆಚ್ಚವನ್ನು ಹಂಚಿಕೊಂಡಿದ್ದಾರೆ. ಎಲೆಕ್ಟ್ರಿಕ್ ವಿಭಾಗದಲ್ಲಿ ನೆಕ್ಸಾನ್ EV ಯು ಉದ್ಯಮವನ್ನು ಮುನ್ನಡೆಸುವಲ್ಲಿ ದೃಢಕಾಯವಾಗಿ ಮುಂದುವರಿದಿದೆ. ನೆಕ್ಸಾನ್ ಇವಿಯು ಮಾರುಕಟ್ಟೆಯ 70% ಕ್ಕಿಂತ ಹೆಚ್ಚಿನ ಸ್ಥಾನವನ್ನು ವಶಪಡಿಸಿಕೊಳ್ಳುವ ಮೂಲಕ ಭಾರತೀಯ EV ವಿಭಾಗದಲ್ಲಿ ಪ್ರಾಬಲ್ಯ ಸಾಧಿಸಿದೆ. ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಯ ಮೇಲೆ ಪ್ರಾಬಲ್ಯ ಸಾಧಿಸಿದರೆ ಅಚ್ಚರಿಯೇನಿಲ್ಲ.


ಭಾರತೀಯ EV ವಿಭಾಗದಲ್ಲಿ ಪ್ರಾಬಲ್ಯ ಸಾಧಿಸಿರುವ ನೆಕ್ಸಾನ್ EV


ನಿಜವಾಗಿ ಹೇಳಬೇಕೆಂದರೆ ಟಾಟಾ ಮೋಟರ್ಸ್ ಇತ್ತೀಚೆಗೆ 50,000 ನೇ ಇವಿಯನ್ನು ಉತ್ಪಾದನಾ ಶ್ರೇಣಿಯಿಂದ ಪಡೆಯುವ ಅಭೂತಪೂರ್ವ ಮೈಲಿಗಲ್ಲನ್ನು ಸಾಧಿಸಿದೆ. ಈ ಕ್ಷೇತ್ರ ಅಭಿವೃದ್ಧಿಯತ್ತ ಸಾಗುತ್ತಿದೆ ಎಂಬುದಕ್ಕೆ ಇದು ಜ್ವಲಂತ ಸಾಕ್ಷಿಯಾಗಿದೆ. ನೆಕ್ಸಾನ್ EV ಹೊಂದಲು ತಗುಲುವ ಖರ್ಚುವೆಚ್ಚಗಳೇನು ಎಂಬುದನ್ನು ತಿಳಿದುಕೊಳ್ಳೋಣ


ಟಾಟಾ ನೆಕ್ಸಾನ್ EV ಚಾರ್ಜಿಂಗ್ ವೆಚ್ಚವೇನು?


ನೆಕ್ಸಾನ್ EV ಯ ಮಾಲೀಕರಾಗಿರುವ ಮನು ಎಮ್ ಎಂಬುವವರು ಫೇಸ್‌ಬುಕ್‌ನಲ್ಲಿ ವಾಹನ ಹಾಗೂ ಅದರ ವಿಶೇಷತೆ ಚಾರ್ಜಿಂಗ್ ದರಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಮನು ಅವರು ನೆಕ್ಸಾನ್ ವಾಹನವನ್ನು ದಿನಕ್ಕೆ 114 ಕಿ.ಮೀ ನಂತೆ ಚಾಲನೆ ಮಾಡುವ ಮೂಲಕ ಕೇವಲ 2 ವರ್ಷಗಳಲ್ಲಿ ಸುಮಾರು 85,000 ಕಿ.ಮೀಗಳಷ್ಟು ಓಡಾಟ ನಡೆಸಿದ್ದಾರೆ.


ಇದನ್ನು ಆಧರಿಸಿ ವಿದ್ಯುತ್ ಬೆಲೆಗಳಿಗೆ ಸಂಬಂಧಿಸಿದ ವೆಚ್ಚ, ವೇಗ ಹಾಗೂ ನಿಧಾನಗತಿಯ ಚಾರ್ಜಿಂಗ್, ಸ್ಟೆಬಿಲೈಸರ್ ನಷ್ಟಗಳು, ಚಾಲನಾ ವಿಧಾನ ಹಾಗೂ ಇನ್ನಷ್ಟು ಮಾಹಿತಿ ಒಳಗೊಂಡಂತೆ ಕೋಷ್ಟಕವನ್ನು ರೂಪಿಸಿದ್ದಾರೆ. ಪ್ರತಿ ಯೂನಿಟ್‌ಗೆ ವಿದ್ಯುತ್ ವೆಚ್ಚ ಸುಮಾರು ರೂ 9.26 ರಂತೆ ಇವಿಯ ಶಕ್ತಿಯ ಬಳಕೆ 129 KWh/km ಪರಿಗಣಿಸಿ ಚಾರ್ಜಿಂಗ್ ಮೌಲ್ಯ ರೂ 1.01 ಲಕ್ಷ ಎಂದು ಲೆಕ್ಕಹಾಕಿದ್ದಾರೆ.


ಇದನ್ನೂ ಓದಿ: ಈ ಸ್ಪೀಡ್​ನಲ್ಲಿ ನಿಮ್ಮ ಬೈಕ್​ ಓಡಿಸಿದ್ರೆ ಬೆಸ್ಟ್​ ಮೈಲೇಜ್​ ಬರುತ್ತಂತೆ, ಟ್ರೈ ಮಾಡಿ ನೋಡಿ!


ಹೆಚ್ಚು ಕೈಗೆಟುಕುವ ಮತ್ತು ವೆಚ್ಚ-ಪರಿಣಾಮಕಾರಿ


ಮನು ಹೇಳುವಂತೆ ಸ್ಟೆಬಿಲೈಸರ್ ನಷ್ಟಗಳನ್ನು ಹೊರತುಪಡಿಸಿದರೆ ಇದು 95,500 ರೂಪಾಯಿ ಖರ್ಚಾಗುತ್ತೆ . ಇನ್ನು ಪ್ರತಿ ಕಿ.ಮೀಗೆ ಚಾರ್ಜಿಂಗ್ ವೆಚ್ಚವನ್ನು ಲೆಕ್ಕಹಾಕುವುದಾದರೆ ಅದು 1.13 ರೂಗಳಾಗಿರುತ್ತದೆ ಎಂಬುದು ಮನು ಹೇಳಿಕೆಯಾಗಿದೆ. ಇದು ಡಿಸಿ ವೇಗದ ಚಾರ್ಜಿಂಗ್ ಸನ್ನಿವೇಶವನ್ನು ಒಳಗೊಂಡಿದೆ ಎಂಬುದು ಇಲ್ಲಿ ಮುಖ್ಯವಾದುದು.


ಎಸಿ ಪವರ್‌ನೊಂದಿಗೆ ಮನೆಯಲ್ಲೇ ಚಾರ್ಜ್ ಮಾಡುವುದು ಕೊಂಚ ದುಬಾರಿ ಎನಿಸುತ್ತದೆ. ಐಸಿ- ಇಂಟಿಗ್ರೇಟೆಡ್ ಸರ್ಕ್ಯೂಟ್ ಚಾಲಿತ ಪ್ರತಿರೂಪಗಳಿಗಿಂತ ಗಮನಾರ್ಹವಾಗಿ ಹೆಚ್ಚು ಕೈಗೆಟುಕುವ ಮತ್ತು ವೆಚ್ಚ-ಪರಿಣಾಮಕಾರಿ ಎಂಬುದು ಮನು ಅವರ ಸಲಹೆಯಾಗಿದೆ.


ನೆಕ್ಸಾನ್ EV ವಿಶೇಷತೆಗಳೇನು?


ಟಾಟಾ ನೆಕ್ಸಾನ್ EV, 30.2kWh ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದ್ದು ಇದು ARAI (ಅಟೊಮೆಟೀವ್ ಟೆಸ್ಟಿಂಗ್) ಹಕ್ಕು ಪಡೆದ 312 ಕಿ.ಮೀ ವ್ಯಾಪ್ತಿಯನ್ನು ಒದಗಿಸುತ್ತದೆ. ವಾಹನವು 129 ಪಿಎಸ್ ಗರಿಷ್ಠ ಪವರ್ ಮತ್ತು 245 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.


ಇದನ್ನೂ ಓದಿ: ಬಿಡುಗಡೆಗೆ ಸಿದ್ಧವಾಗ್ತಿದೆ ಟಾಟಾ ಸಿಯೆರಾ, ನೋಟದಲ್ಲೇ ​ಎಲ್ಲರನ್ನೂ ಕ್ಲೀನ್​ ಬೋಲ್ಡ್​ ಮಾಡ್ತಿದೆ!


ಇನ್ನು ನೆಕ್ಸಾನ್ EV ಯ ಮ್ಯಾಕ್ಸ್ ಆವೃತ್ತಿಯು 141 bhp ಮತ್ತು 250 Nm ಅನ್ನು ನೀಡುತ್ತದೆ ಹಾಗೂ 40.5 kWh ಬ್ಯಾಟರಿ ಪ್ಯಾಕ್ ಅನ್ನು ARAI ಪ್ರಮಾಣೀಕರಿಸಿದ 437 ಕಿಮೀ ವ್ಯಾಪ್ತಿಯೊಂದಿಗೆ ಒದಗಿಸುತ್ತದೆ. ನೆಕ್ಸಾನ್ EV ಬೆಲೆ ರೂ 14.99 ಲಕ್ಷದಿಂದ ಪ್ರಾರಂಭವಾಗುತ್ತವೆ ಮತ್ತು ರೂ 20.04 ಲಕ್ಷದವರೆಗೆ, ಎಕ್ಸ್ ಶೋ ರೂಂ ಬೆಲೆ ಏರಿಕೆಯಾಗುತ್ತದೆ. ಎಲೆಕ್ಟ್ರಿಕ್ ವಾಹನಗಳು ದಿನದಿಂದ ಜನಪ್ರಿಯತೆಯನ್ನು ಗಳಿಸುತ್ತಿದ್ದು ಮಾರಾಟವು ಹೆಚ್ಚು ಕ್ಷಿಪ್ರವಾಗಿ ತಿಂಗಳಿನಿಂದ ತಿಂಗಳಿಗೆ ಹೆಚ್ಚುತ್ತಿದ್ದು ಈ ಸಮಯದಲ್ಲಿ ಮಾಲೀಕತ್ವದ ವೆಚ್ಚದಂತಹ ವಿಷಯಗಳು ನಿರ್ಣಾಯಕವಾಗುತ್ತವೆ.

First published: