• Home
 • »
 • News
 • »
 • business
 • »
 • Tata Motorsನ ಹೊಸ ಪಿಕಪ್ ಲೈನ್ – ಶಕ್ತಿಶಾಲಿ, ಕೈಗೆಟುಕುವ ದರ, ಒಂದೇ ಬಾರಿಗೆ ಹಲವಾರು ಕೆಲಸ

Tata Motorsನ ಹೊಸ ಪಿಕಪ್ ಲೈನ್ – ಶಕ್ತಿಶಾಲಿ, ಕೈಗೆಟುಕುವ ದರ, ಒಂದೇ ಬಾರಿಗೆ ಹಲವಾರು ಕೆಲಸ

ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್

Tata Motors ನ ಪಿಕಪ್ ಶ್ರೇಣಿಯು Yodha 2.0, Intra V20 bi-fuel ಮತ್ತು Intra V50 ಅನ್ನು ಒಳಗೊಂಡಿದೆ. ಹಿಂದೆಂದಿಗಿಂತಲೂ ಆಕರ್ಷಕ ನೋಟ ಮತ್ತು ಉತ್ತಮ ವೈಶಿಷ್ಟ್ಯಗಳೊಂದಿಗೆ, ಈ ಪಿಕಪ್‌ಗಳು ಕೃಷಿಯಿಂದ ವ್ಯಾಪಾರದವರೆಗೆ ಎಲ್ಲದರಲ್ಲೂ ನಿಮ್ಮ ಬೆಂಬಲಕ್ಕೆ ನಿಲ್ಲುತ್ತವೆ.

 • Share this:

  Tata Motors ದೇಶದ ಪ್ರಮುಖ ವಾಣಿಜ್ಯ ವಾಹನ ತಯಾರಕ ಸಂಸ್ಥೆಯಾಗಿದೆ. ಈ ಬಾರಿ ಕಂಪೆನಿಯು ತನ್ನ ಅಸ್ತಿತ್ವದಲ್ಲಿರುವ ಪಿಕಪ್ ಶ್ರೇಣಿಯನ್ನು ನವೀಕರಿಸಿದೆ. Yodha 2.0, Intra V20 ಜೈವಿಕ ಇಂಧನ ಮತ್ತು Intra V50 ಈಗ ಮಾರುಕಟ್ಟೆಯಲ್ಲಿವೆ. Yodha 2.0 ರ ಮೊದಲ ನೋಟವನ್ನು ಕಂಪೆನಿಯು 2020 ಆಟೋ ಎಕ್ಸ್ಪೋದಲ್ಲಿ ಪ್ರದರ್ಶಿಸಿದೆ. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಈ ಟ್ರಕ್ ಅನ್ನು ನಿಗದಿಪಡಿಸಿದ ಸಮಯದ ನಂತರದಲ್ಲಿ ಪ್ರಾರಂಭಿಸಲಾಗಿದೆ. Tata Intra V50 ಬಗ್ಗೆ ಹೇಳುವುದಾದರೆ, ಇದು ಹೆಚ್ಚು ಪ್ರೀಮಿಯಂ ಪಿಕಪ್ ಆಗಿದೆ. ಇದರಲ್ಲಿ AC ಯೊಂದಿಗೆ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಲಭ್ಯವಿದೆ.


  ಕೃಷಿಯಿಂದ ಹಿಡಿದು ಸರಕು ಸಾಗಣೆಯವರೆಗೆ ಎಲ್ಲವೂ ಪರಿಪೂರ್ಣವಾಗಿದೆ


  Yodha 2.0, Intra V20 Bio-Fuel ಮತ್ತು Intra V50 ರ ವಿಶೇಷತೆಯೆಂದರೆ ಅವುಗಳನ್ನು ಒಂದೇ ಸಮಯದಲ್ಲಿ ಅನೇಕ ಪ್ರದೇಶಗಳಲ್ಲಿ ಬಳಸಬಹುದು. ಇದು ಕೃಷಿ ಕೆಲಸಕ್ಕೂ ಉಪಯುಕ್ತವಾಗಿದೆ ಮತ್ತು ಕೋಳಿ ಮತ್ತು ಡೈರಿ ವಲಯದಲ್ಲಿಯೂ ಬಳಸಬಹುದು. ಅಲ್ಲದೆ, ಅದು FMCG ಅಥವಾ ಇ-ಕಾಮರ್ಸ್ ಅಥವಾ ಲಾಜಿಸ್ಟಿಕ್ಸ್ ವಲಯವಾಗಿರಬಹುದು, ಈ ಪಿಕಪ್‌ಗಳು ನಿಮಗೆ ಹೇಳಿ ಮಾಡಿಸಿದಂತಿವೆ. ಇವುಗಳು ವೆಚ್ಚಕ್ಕಿಂತ ಗರಿಷ್ಠ ಲಾಭವನ್ನು ಹೊಂದಿವೆ. ಈ ಪಿಕಪ್‌ಗಳ 750 ಯುನಿಟ್‌ಗಳನ್ನು ಈಗಾಗಲೇ ದೇಶಾದ್ಯಂತ ಇರುವ ಡೀಲರ್‌ಶಿಪ್‌ಗಳಿಗೆ ತಲುಪಿಸಲಾಗಿದೆ ಎಂದು ಕಂಪೆನಿ ಹೇಳಿದೆ.


  ಪಿಕಪ್ ಬಿಡುಗಡೆ ಸಮಾರಂಭದಲ್ಲಿ Tata Motors ನ ಕಾರ್ಯನಿರ್ವಾಹಕ ನಿರ್ದೇಶಕ ಗಿರೀಶ್ ವಾಘ್ ಮಾತನಾಡಿ, “ನಮ್ಮ ಸಣ್ಣ ವಾಣಿಜ್ಯ ವಾಹನಗಳು ಲಕ್ಷಾಂತರ ಜನರಿಗೆ ಉದ್ಯೋಗ ನೀಡುತ್ತಿವೆ ಮತ್ತು ಅವರ ಕನಸುಗಳನ್ನು ಈಡೇರಿಸುತ್ತಿವೆ. ನಾವು ವ್ಯಾಪಾರವನ್ನು ಬೆಳೆಸುವುದರಿಂದ ಹಿಡಿದು ಅವರ ಜೀವನವನ್ನು ಉತ್ತಮಗೊಳಿಸುವವರೆಗೆ ಕೆಲಸ ಮಾಡುತ್ತಿದ್ದೇವೆ. ನಮ್ಮ ಗ್ರಾಹಕರು ಕೇವಲ ನಗರಗಳಿಗೆ ಸೀಮಿತವಾಗಿಲ್ಲ, ಆದರೆ ಸಣ್ಣ ಪಟ್ಟಣಗಳಿಂದ ಹಳ್ಳಿಗಳವರೆಗೂ ಗ್ರಾಹಕರಿದ್ದು, Tata Motors ಲಕ್ಷಾಂತರ ಜನರ ಜೀವನವನ್ನು ಬದಲಾಯಿಸುತ್ತಿದೆ” ಎಂದಿದ್ದಾರೆ.


  Yodha 2.0 ಎಂದಿಗಿಂತಲೂ ಉತ್ತಮವಾಗಿದೆ ಮತ್ತು ಸಮರ್ಥವಾಗಿದೆ


  ವೈಶಿಷ್ಟ್ಯಗಳ ಕುರಿತು ಮಾತನಾಡುವುದಾದರೆ, ಹೊಸ ತಲೆಮಾರಿನ Yodha 2.0 ಪಿಕಪ್ ವಿನ್ಯಾಸದಲ್ಲಿ ಆಕರ್ಷಕವಾಗಿದೆ ಮತ್ತು ಉತ್ತಮ ಸ್ಥಳಾವಕಾಶ ಮತ್ತು ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಹೊಸ ಕ್ರೋಮ್ ಗ್ರಿಲ್ ಟಚ್‌ಅಪ್ ಅನ್ನು ಪಡೆಯುತ್ತದೆ. ಅಲ್ಲದೆ, ಅದರ ನೋಟವು ಸಾಕಷ್ಟು ಖಡಕ್ ಆಗಿದೆ. ಈ ಬಾರಿ ಫಾಗ್ ಲ್ಯಾಂಪ್‌ಗಳಲ್ಲಿ LED DRL ಗಳನ್ನೂ ಅಳವಡಿಸಲಾಗಿದೆ. ಪಿಕಪ್ ಆಗಿರುವುದರಿಂದ, Tata ವಾಹನದಲ್ಲಿ ನೀವು ಬಹಳಷ್ಟು ಲೋಡಿಂಗ್ ಆಯ್ಕೆಗಳನ್ನು ಪಡೆಯುತ್ತೀರಿ. ಸಾಮರ್ಥ್ಯದ ದೃಷ್ಟಿಯಿಂದಲೂ ಇದು ಹೆಚ್ಚು ಶಕ್ತಿಶಾಲಿಯಾಗಿದೆ. ಇದು ಗರಿಷ್ಠ 2 ಟನ್‌ಗಳಷ್ಟು ಭಾರವನ್ನು ಎತ್ತಬಲ್ಲದು. ಇದು ಸಿಂಗಲ್-ಕ್ಯಾಬಿನ್ ಮತ್ತು ಆಕ್ಷನ್-ಕ್ಯಾಬಿನ್‌ನಲ್ಲಿ ಮುಂಭಾಗದ ಸಸ್ಪೆನ್ಶನ್ ಆಯ್ಕೆ ಮತ್ತು 4X4 ಆಯ್ಕೆಯೊಂದಿಗೆ ಬರುತ್ತದೆ.


  ಗರಿಷ್ಠ ಲೋಡ್ ಸಾಮರ್ಥ್ಯ: 2000 kg


  250Nm ಟಾರ್ಕ್‌ನೊಂದಿಗೆ 2.2L ಡೀಸೆಲ್ ಎಂಜಿನ್‌ನಿಂದ ಚಾಲಿತವಾಗಿದೆ


  ಗ್ರೇಡ್ ದಕ್ಷತೆಯು 30% ವರೆಗೆ ಇದ್ದು, ಇದೇ ಅತ್ಯಧಿಕವಾಗಿದೆ


  ಮೆಟಾಲಿಕ್ ಬಂಪರ್‌ಗಳು ಮತ್ತು ಫೆಂಡರ್‌ಗಳನ್ನು ಒಳಗೊಂಡ ಖಡಕ್ ಲುಕ್


  Tata Intra V50 ಹಿಂದೆಂದಿಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿದೆ


  Tata Intra V50 ಬಗ್ಗೆ ಹೇಳುವುದಾದರೆ, ಇದು ಹೊಸ ಕ್ರೋಮ್ ಗ್ರಿಲ್ ಸೆಟಪ್ ಅನ್ನು ಸಹ ಪಡೆಯುತ್ತದೆ. ಇದು AC ಮತ್ತು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯನ್ನು ಸಹ ಹೊಂದಿದೆ. ಅಲ್ಲದೆ, ಇದು 1.5 ಟನ್‌ಗಳಷ್ಟು ಪೇಲೋಡ್ ಸಾಮರ್ಥ್ಯವನ್ನು ಹೊಂದಿದ್ದು, ಇದು ಅತ್ಯಂತ ಉಪಯುಕ್ತವಾಗುವಂತೆ ಮಾಡಿದೆ. ಇದು V30 ಯಲ್ಲಿರುವ ಅದೇ ರೀತಿಯ 1.5L ಡೀಸೆಲ್ ಎಂಜಿನ್ ಅನ್ನು ಹೊಂದಿದ್ದು, 220 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು CNG ದ್ವಿ-ಇಂಧನ ಆಯ್ಕೆಯನ್ನು ಹೊಂದಿದೆ. V20 CNG ಯೊಂದಿಗೆ, ಇದು 700 ಕಿಮೀ ವ್ಯಾಪ್ತಿಯವರೆಗೂ ತಲುಪಿಸುತ್ತದೆ.


  ಇದರ ವಿಶೇಷ ಲಕ್ಷಣಗಳು ಹೀಗಿವೆ:


  ಅತ್ಯಧಿಕ ದರದ ಪೇಲೋಡ್ ಸಾಮರ್ಥ್ಯ: 1500 kg


  220Nm ಟಾರ್ಕ್‌ನೊಂದಿಗೆ 1.5L ಡೀಸೆಲ್ ಎಂಜಿನ್‌ನಿಂದ ಚಾಲಿತವಾಗಿದೆ


  ಉದ್ದವಾದ ಲೋಡ್ ಬಾಡಿ 2960mm


  1000 kg ಪೇಲೋಡ್ ಸಾಮರ್ಥ್ಯದೊಂದಿಗೆ Intra V20 Bio-Fuel


  Intra V20 ದೇಶದ ಮೊದಲ 1000kg ಸಾಮರ್ಥ್ಯದ ಜೈವಿಕ ಇಂಧನ ಪಿಕಪ್ ಆಗಿದೆ. ಇದರ ಶ್ರೇಣಿಯು 700km ವರೆಗಿನ ವರ್ಗದಲ್ಲಿ ಅತ್ಯಧಿಕವಾಗಿದೆ. Tata Motors Intra V20 ಪಿಕಪ್‌ನ ಅದ್ಭುತ ಸಾಮರ್ಥ್ಯವು ಅಚ್ಚರಿ ಉಂಟು ಮಾಡುವಂತಿದೆ. ಇದು ದೇಶದ ಮೊದಲ ಜೈವಿಕ ಇಂಧನ (CNG + ಪೆಟ್ರೋಲ್) ವಾಣಿಜ್ಯ ವಾಹನವಾಗಿದೆ. ಅಲ್ಲದೆ, ಇದು ಈ ವಿಭಾಗದಲ್ಲಿ ಮೊದಲ 1000kg ಪೇಲೋಡ್ ವಾಣಿಜ್ಯ ವಾಹನವಾಗಿದೆ. Intra V20 ರ ಶಕ್ತಿ ಮತ್ತು ಸಾಮರ್ಥ್ಯದೊಂದಿಗೆ, ಇದು ಬಜೆಟ್ ಸ್ನೇಹಿಯಾಗಿದೆ, ಏಕೆಂದರೆ ಇದು CNG ಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಇದು ಕಡಿಮೆ ವೆಚ್ಚದಾಯಕವಾಗಿದೆ.


  Tata Intra V20 ಬಯೋ ಫ್ಯೂಯಲ್ ವೈಶಿಷ್ಟ್ಯಗಳು


  106Nm ಟಾರ್ಕ್‌ನೊಂದಿಗೆ 1.2L ಜೈವಿಕ ಇಂಧನ ಎಂಜಿನ್‌ನಿಂದ ಚಾಲಿತವಾಗಿದೆ


  ಜೈವಿಕ ಇಂಧನ ವಾಣಿಜ್ಯ ವಾಹನಗಳ ಶ್ರೇಣಿಯಲ್ಲಿ ಅತಿ ಹೆಚ್ಚು ಪೇಲೋಡ್ ಸಾಮರ್ಥ್ಯ: 1000kg


  ಅತಿ ಹೆಚ್ಚಿನ ಶ್ರೇಣಿ: 700 ಕಿ.ಮೀ


  ಇದರೊಂದಿಗೆ, Tata Motors ನೊಂದಿಗೆ, ಖರೀದಿಸಿದ ನಂತರವೂ ನೀವು ಉತ್ತಮ ಸೌಲಭ್ಯಗಳನ್ನು ಪಡೆಯುತ್ತೀರಿ. ಈ ಎಲ್ಲಾ ಪ್ರಯೋಜನಗಳು Sampoorna Seva 2.0 (ಸಂಪೂರ್ಣ ಸೇವಾ 2.0) ಅಡಿಯಲ್ಲಿ ಲಭ್ಯವಿರುತ್ತವೆ:


  Tata Zippy: 48 ಗಂಟೆಗಳಲ್ಲಿ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡುತ್ತದೆ *


  Tata Alert: ವಾರಂಟಿ ಇರುವ ವಾಹನಗಳಿಗಾಗಿ ರಸ್ತೆಬದಿಯ ಸಹಾಯ ಕಾರ್ಯಕ್ರಮ, 24 ಗಂಟೆಗಳ ಒಳಗೆ*


  Tata Guru: ದುರಸ್ತಿ ಮತ್ತು ಸೇವೆಗಾಗಿ ದೇಶದಾದ್ಯಂತ 50,000+ ಕ್ಕೂ ಹೆಚ್ಚು ನುರಿತ ತಂತ್ರಜ್ಞರು


  Tata Bandhu: ಎಲ್ಲಾ ಪಾಲುದಾರರು, ಚಾಲಕರು, ಮೆಕ್ಯಾನಿಕ್‌ಗಳು ಮತ್ತು ವಾಹನ ಮಾಲೀಕರು ಒಟ್ಟಿಗೆ ಸೇರುವ ರೀತಿಯ ಮತ್ತು ವಿಶೇಷವಾದ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ.

  Published by:Rahul TS
  First published: