1000 Per Month: ಪ್ರತಿ ತಿಂಗಳು 1000 ರೂ.ಬ್ಯಾಂಕ್ ಖಾತೆಗೆ! ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ನೆರವಾಗಲು ಹೊಸ ಯೋಜನೆ

Tamil Nadu Budget 2022: ವಿದ್ಯಾರ್ಥಿಗಳು ಈಗಾಗಲೇ ಇತರ ವಿದ್ಯಾರ್ಥಿವೇತನವನ್ನು ಪಡೆಯುತ್ತಿದ್ದರೂ, ಈ ಯೋಜನೆಯಡಿ ಹೆಚ್ಚುವರಿ ಸಹಾಯವನ್ನು ಪಡೆಯಬಹುದಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಮುಂದುವರೆಸಲು ಹಲವು ಯೋಜನೆಗಳ ಮೂಲಕಕ ನೆರವು ಪಡೆದುಕೊಳ್ಳಬಹುದಾಗಿದೆ. ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸರ್ಕಾರ, ಸಂಘ ಸಂಸ್ಥೆಗಳು ಆರ್ಥಿಕ ನೆರವು ನೀಡುತ್ತವೆ. ಇದೀಗ ವಿದ್ಯಾರ್ಥಿಗಳಿಗೆ ಹೊಸ ಆರ್ಥಿಕ ನೆರವಿನ ಘೋಷಣೆಯಾಗಿದೆ. 6 ರಿಂದ 12 ನೇ ತರಗತಿಯ ವಿದ್ಯಾರ್ಥಿನಿಯರು ಈ ಆರ್ಥಿಕ ನೆರವಿನ ಮೂಲಕ ವಿದ್ಯಾಭ್ಯಾಸ ಮಾಡಬಹುದಾಗಿದೆ.  ತಮಿಳುನಾಡು ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ (Tamil Nadu Finance Minister Palanivel Thiaga Rajan) ಇಂದು ತಮಿಳುನಾಡು ವಿಧಾನಸಭೆಯನ್ನು ತಮಿಳುನಾಡು ರಾಜ್ಯದ 2022-23ನೇ ಸಾಲಿನ ಬಜೆಟ್ (Tamil Nadu Budget 2022-23) ಮಂಡಿಸಿದರು. ಡಿಎಂಕೆ (DMK) ಅಧಿಕಾರಕ್ಕೆ ಬಂದ ನಂತರ ಪೂರ್ಣ ಪ್ರಮಾಣದಲ್ಲಿ ಮಂಡನೆಯಾಗುತ್ತಿರುವ ಮೊದಲ ಬಜೆಟ್ ಇದಾಗಿದೆ. 

ಕಾಲೇಜು ಸೇರಿ ಉನ್ನತ ಶಿಕ್ಷಣದಿಂದ (Higher Education) ಹೊರಗುಳಿಯುವುದನ್ನು ತಡೆಯುವ ಉದ್ದೇಶದಿಂದ ಹೆಣ್ಣು ಮಕ್ಕಳು (College Students) ವ್ಯಾಸಂಗ ಮುಗಿಸುವವರೆಗೆ ತಿಂಗಳಿಗೆ ಒಂದು ಸಾವಿರ ರೂಪಾಯಿ ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿ ತಮಿಳುನಾಡು ಸರ್ಕಾರ ಬಜೆಟ್​ನಲ್ಲಿ ಘೋಷಿಸಿದೆ. ಈಮೂಲಕ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ನೆರವಾಗುವ ಯೋಜನೆಯನ್ನು ತಮಿಳುನಾಡು ಸರ್ಕಾರ ಹಮ್ಮಿಕೊಂಡಿದೆ.

ನೇರ ಬ್ಯಾಂಕ್​ ಖಾತೆಗೆ ಜಮಾ
ಹೆಣ್ಣು ಮಕ್ಕಳು ಉನ್ನತ ಶಿಕ್ಷಣದಿಂದ ಹೊರಗುಳಿಯುವುದನ್ನು ತಡೆಯುವ ನಿಟ್ಟಿನಲ್ಲಿ ಕಾಲೇಜು ಸೇರಿ ವ್ಯಾಸಂಗ ಮುಗಿಸುವವರೆಗೆ ಪ್ರತಿ ತಿಂಗಳಿಗೆ ಒಂದು ಸಾವಿರ ರೂಪಾಯಿ ಹಣವನ್ನು ವಿದ್ಯಾರ್ಥಿನಿಯರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.

ಯಾವ ವಿದ್ಯಾರ್ಥಿಗಳಿಗೆ ದೊರೆಯಲಿದೆ?
6 ರಿಂದ 12 ನೇ ತರಗತಿಯವರೆಗೆ ಸರ್ಕಾರಿ ಶಾಲೆಗಳಿಗೆ ದಾಖಲಾದ ಎಲ್ಲಾ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಮಾಸಿಕ ರೂ.1,000 / - ಪದವಿಪೂರ್ವ / ಪದವಿ / ವೃತ್ತಿಪರ ಅಧ್ಯಯನಗಳಲ್ಲಿ ನೇರವಾಗಿ ಜಮಾ ಮಾಡಲಾಗುತ್ತದೆ.

ವಿದ್ಯಾರ್ಥಿಗಳು ಈಗಾಗಲೇ ಇತರ ವಿದ್ಯಾರ್ಥಿವೇತನವನ್ನು ಪಡೆಯುತ್ತಿದ್ದರೂ, ಈ ಯೋಜನೆಯಡಿ ಹೆಚ್ಚುವರಿ ಸಹಾಯವನ್ನು ಪಡೆಯಬಹುದಾಗಿದೆ.

ಈ ಕಾರ್ಯಕ್ರಮದ ಮೂಲಕ ಪ್ರತಿ ವರ್ಷ ಸುಮಾರು ಆರು ಲಕ್ಷ ವಿದ್ಯಾರ್ಥಿಗಳು ಪ್ರಯೋಜನ ಪಡೆಯುವ ಅವಕಾಶವಿದೆ. ಈ ಹೊಸ ಉಪಕ್ರಮಕ್ಕೆ ಬಜೆಟ್‌ನಲ್ಲಿ 698 ಕೋಟಿ ಮೀಸಲಿಡಲಾಗಿದೆ.

ಇದನ್ನೂ ಓದಿ: Top 3 Scholarships: ಮಾರ್ಚ್ ಮುಗಿಯುವ ಮುನ್ನ ಈ ಸ್ಕಾಲರ್​ಶಿಪ್​ಗಳಿಗೆ ಅರ್ಜಿ ಸಲ್ಲಿಸಿ!

ಸಚಿವ ಪಳನಿವೇಲ್ ತ್ಯಾಗರಾಜನ್ ಮಾತನಾಡಿ, 38 ಜಿಲ್ಲೆಗಳಲ್ಲಿ 1.8 ಲಕ್ಷ ಸ್ವಯಂಸೇವಕರನ್ನು ಜೊತೆಗೂಡಿಸಿಕೊಂಡು ವಿಶೇಷ ಪ್ರಾಯೋಗಿಕ ಶಿಕ್ಷಣ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.

200 ಕೋಟಿ ಮೀಸಲು
ಕಳೆದ ಎರಡು ವರ್ಷಗಳಿಂದ ಸಾಂಕ್ರಾಮಿಕ ರೋಗದಿಂದ ಶಿಕ್ಷಣ ಕ್ಷೇತ್ರಕ್ಕೆ ಹಿನ್ನೆಡೆ ಉಂಟಾಗಿತ್ತು. ಮುಂಬರುವ ಆರ್ಥಿಕ ವರ್ಷದಲ್ಲಿ ವಿಶೇಷ ಪ್ರಾಯೋಗಿಕ ಶಿಕ್ಷಣ ಕಾರ್ಯಕ್ರಮವನ್ನು ಸಕ್ರಿಯಗೊಳಿಸಲು 200 ಕೋಟಿ ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ.

ತಮಿಳುನಾಡಿನ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಿದೆ. ಹೀಗಾಗಿ ಮೂಳಲೂರು ರಾಮಾಮೃತಂ ಅಮ್ಮಯ್ಯರ್ ಸ್ಮಾರಕ ವಿವಾಹ ಧನಸಹಾಯ ಯೋಜನೆಯನ್ನು ಮೂಳಲೂರು ರಾಮಾಮೃತಂ ಅಮ್ಮಯ್ಯರ್ ಉನ್ನತ ಶಿಕ್ಷಣ ಖಾತ್ರಿ ಯೋಜನೆಯಾಗಿ ಪರಿವರ್ತಿಸಲಾಗುತ್ತದೆ ಎಂದು ಸಹ ಬಜೆಟ್​ನಲ್ಲಿ ಘೋಷಿಸಲಾಗಿದೆ.

ಇದನ್ನೂ ಓದಿ: Cow Dung Jewellery: ಗೋವಿನ ಸಗಣಿಯಿಂದ ಸುಂದರ ಆಭರಣ ತಯಾರಿಸಿ! ನೀವೂ ಧರಿಸಲು ವಿವರ ತಿಳಿದುಕೊಳ್ಳಿ

ಮುಂದಿನ ಐದು ವರ್ಷಗಳಲ್ಲಿ ಎಲ್ಲಾ ಸರ್ಕಾರಿ ಶಾಲೆಗಳನ್ನು ಆಧುನೀಕರಿಸಲು ಪ್ರೊಫೆಸರ್ ಅನ್ಪಳಗನ್ ಶಾಲಾ ಅಭಿವೃದ್ಧಿ ಕಾರ್ಯಕ್ರಮ ಎಂಬ ಬೃಹತ್ ಯೋಜನೆಯನ್ನು ಸರ್ಕಾರ ಜಾರಿಗೆ ತರಲಿದೆ. ಈ ಯೋಜನೆಯಡಿ ಸಾರ್ವಜನಿಕ ಶಾಲೆಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳೊಂದಿಗೆ 18,000 ಹೊಸ ತರಗತಿ ಕೊಠಡಿಗಳನ್ನು ನಿರ್ಮಿಸಲಾಗುವುದು ಎಂದು ಬಜೆಟ್​ನಲ್ಲಿ ಘೋಷಿಸಲಾಗಿದೆ.
Published by:guruganesh bhat
First published: