ಇದು ಫಾಸ್ಟ್ ಫುಡ್ (Fast Food) ಯುಗ. ಟಕ್ ಅಂತ ಆರ್ಡರ್ (Order) ಮಾಡಿದ್ರೆ, 10 ರಿಂದ 30 ನಿಮಿಷದೊಳಗೆ ನಿಮ್ಮ ಮನೆ ಬಾಗಿಲಿಗೆ ಊಟ (Food) ಬಂದಿರುತ್ತೆ. ಇದಕ್ಕೆ ಮುಖ್ಯ ಕಾರಣ ಅಂದರೆ, ಡೆಲಿವರಿ ಬಾಯ್ಸ್ (Delivery Boys) . ಹೌದು, ಮಳೆ (Rain) ಬರಲಿ, ಸುಡುವ ಬಿಸಿಲೇ ಇರಲಿ. ಸರಿಯಾದ ಸಮಯಕ್ಕೆ ಆರ್ಡರ್ ತಲುಪಿಸುವುದು ಡೆಲಿವರಿ ಬಾಯ್ಸ್. ಅವರ ಹೊಟ್ಟೆ ತುಂಬಿಸಿಕೊಳ್ಳದಿದ್ದರೂ, ಕಸ್ಟಮರ್ (Customer) ಅವರ ಹೊಟ್ಟೆ ತುಂಬಿಸುತ್ತಾರೆ. ಈ ಹಿಂದೆ ಫುಡ್ ಡೆಲಿವರಿ (Food Delivery) ಮಾಡಲು ಸೈಕಲ್ (Cycle) ತುಳಿಯುತ್ತಾ ಹೋಗುತ್ತಿರುವರನ್ನು ನೋಡಿದ್ದೇವೆ. ಆದರೆ. ಕೆಲವು ದಿನಗಳ ಹಿಂದೆ ಡೆಲಿವರಿ ಬಾಯ್ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿತ್ತು. ಇದಕ್ಕೆ ಕಾರಣ, ಸ್ಕೂಟರ್, ಬೈಕ್ ಅಥವಾ ಬೈಸಿಕಲ್ನಲ್ಲಿ ಆ ವ್ಯಕ್ತಿ ಹೋಗುತ್ತಿರಲಿಲ್ಲ. ಈ ಸ್ವಿಗ್ಗಿ ಹುಡುಗ ಫುಡ್ ಡೆಲಿವರಿ ಮಾಡಲು ಕುದುರೆ (Horse) ಯ ಮೇಲೆ ಹೋಗುತ್ತಿದ್ದ. ಈತನ ಫೋಟೊ ಹಾಗೂ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಈ ಸ್ವಿಗ್ಗಿ ಡೆಲಿವರಿ ಬಾಯ್ಗಾಗಿ ಹುಡುಕ್ತಿದೆ ಕಂಪನಿ!
ಮುಂಬೈ ರಸ್ತೆಗಳಲ್ಲಿ ಹೋಗುತ್ತಿದ್ದ. ಈ ಆಹಾರವನ್ನು ನಿಖರವಾಗಿ ತಲುಪಿಸುವ ರಾಜಕುಮಾರ ಯಾರು? ಈ ಬಗ್ಗೆ ನೆಟ್ಟಿಗರು ಕುತೂಹಲ ಮೂಡಿಸಿದ್ದರು. ಇದೀಗ ಸ್ವಿಗ್ಗಿ ಕಂಪನಿಯಿಂದಲೇ ನೇರವಾಗಿ ಈ ಯುವಕನ ಹುಡುಕಾಟ ಶುರುವಾಗಿದೆ. ಈ ಯುವಕನನ್ನು ಹುಡುಕುವ ವ್ಯಕ್ತಿಯು 5000 ಸ್ವಿಗ್ಗಿ ಹಣವನ್ನು ಬಹುಮಾನವಾಗಿ ಪಡೆಯುತ್ತಾನೆ. ಈ ಬಗ್ಗೆ ಸ್ವಿಗ್ಗಿ ತಮ್ಮ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಈತನ ಸುಳಿವು ಕೊಟ್ರೆ ಸಿಗುತ್ತೆ 5000 ಕ್ಯಾಶ್!
“ಆ ಕುದುರೆಯು ಚಂಡಮಾರುತವೋ ಅಥವಾ ಮಿಂಚೋ? ಆ ಯುವಕನ ಬೆನ್ನಿನ ಚೀಲದಲ್ಲಿ ಏನಿದೆ? ಮಳೆಗಾಲದಲ್ಲಿ ಮುಂಬೈನ ಆ ರಸ್ತೆಯನ್ನು ದಾಟಲು ಅವನು ಏಕೆ ಬಯಸುತ್ತಾನೆ? ಅವನು ಆರ್ಡರ್ ನೀಡಲು ಹೋದಾಗ ಅವನು ಕುದುರೆಯನ್ನು ಎಲ್ಲಿ ನಿಲ್ಲಿಸಿದನು? ಈ ಯುವಕ ಯಾರು? ” ಎಂದು ಸ್ವಿಗ್ಗಿ ತಮ್ಮ ಟ್ವೀಟ್ನಲ್ಲಿ ಕೇಳಿದ್ದಾರೆ. “ಇಂದು ಎಲ್ಲಿ ನೋಡಿದರೂ ರಕ್ಷಣೆಯ ಭಾವನೆಯ ಅಲೆಯು ಹರಿಯುತ್ತಿದೆ. ಆದರೆ, ಅವರು ತಮ್ಮ ಟ್ವೀಟ್ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: 1 ವರ್ಷದಲ್ಲಿ ಎಲ್ಪಿಜಿ ಬೆಲೆ ಎಷ್ಟು ಹೆಚ್ಚಾಗಿದೆ ನೋಡಿ, ಅದ್ರಲ್ಲೂ ಇವರಿಗೆ ಮಾತ್ರ ಸಬ್ಸಿಡಿ!
ಸಿಕ್ಕಾಪಟ್ಟೆ ವೈರಲ್ ಆಯ್ತು ಕುದುರೆ ಸವಾರನ ವಿಡಿಯೋ!
ಈ ಕುದುರೆ ಸವಾರನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ನಿಟ್ಟಿನಲ್ಲಿ ಹಲವಾರು ಮೀಮ್ಗಳು ಕೂಡ ಸೃಷ್ಟಿಯಾಗಿವೆ. "ಇವನು ನನ್ನ ಕನಸಿನ ರಾಜಕುಮಾರ, ಕುದುರೆಯ ಮೇಲೆ ಕುಳಿತು ನನಗೆ ಪಿಜ್ಜಾ ತರುತ್ತಾನೆ" ಎಂದು ವಿಡಿಯೋದಲ್ಲಿ ಕಾಮೆಂಟ್ಗಳು ಬಂದಿತ್ತು. ಈ ಹಲವು ಕಾಮೆಂಟ್ಗಳಿಗೆ ಸ್ವಿಗ್ಗಿ ಕೂಡ ಪ್ರತ್ಯುತ್ತರ ನೀಡುತ್ತಿದೆ.
ಮುಂಬೈನಲ್ಲಿ ಮಳೆಗಾಲದಲ್ಲಿ ಅನೇಕ ವಿಚಿತ್ರ ಘಟನೆಗಳನ್ನು ನಡೆಯುತ್ತವೆ. ಒಂದು ಕಡೆ, Swiggy ನ ಡೆಲಿವರಿ ಬಾಯ್ ಕುದುರೆಯ ಮೇಲೆ ಆರ್ಡರ್ ತಲುಪಿಸಲು ಹೋಗುತ್ತಾನೆ. ಮತ್ತೊಂದೆಡೆ, ಉಬರ್ ಕ್ಯಾಬ್ ವಿಮಾನ ಟಿಕೆಟ್ಗಿಂತ ಹೆಚ್ಚಿನ ಶುಲ್ಕವನ್ನು ಜನರಿಗೆ ವಿಧಿಸುತ್ತಿದೆ. ಮುಂಬೈನ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಸ್ಕ್ರೀನ್ ಶಾಟ್ ಹಾಕಿದ್ದರು. ಕೇವಲ 50 ಕಿ.ಮೀಗೆ 3000 ರೂ.ಗೆ ಉಬರ್ ಬೇಡಿಕೆ ಇಟ್ಟಿದ್ದಾರಂತೆ.
ಇದನ್ನೂ ಓದಿ: ಓಲಾ-ಊಬರ್ ಎಲ್ಲಾ ಹಳೆದಾಯ್ತು! ಶೀಘ್ರದಲ್ಲೇ ಶುರುವಾಗುತ್ತೆ ಏರ್ ಟ್ಯಾಕ್ಸಿ ಸೇವೆ
ಸಿಕ್ಕಾಪಟ್ಟೆ ದುಬಾರಿ ಊಬರ್ ರೈಡ್!
ವ್ಯಕ್ತಿಯ ಹೆಸರು ಶ್ರವಣಕುಮಾರ್ ಸುವರ್ಣ. "ನನ್ನ ಉಬರ್ ರೈಡ್ಗಿಂತ ಗೋವಾಗೆ ವಿಮಾನ ಟಿಕೆಟ್ ಕೂಡ ಅಗ್ಗವಾಗಿದೆ" ಎಂಬ ಶೀರ್ಷಿಕೆಯೊಂದಿಗೆ ಅವರು ಈ ಸ್ಕ್ರೀನ್ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಈ ಸ್ಕ್ರೀನ್ಶಾಟ್ನಲ್ಲಿ, ಉಬರ್ ಗೋ 3,041 ರೂ.ಗೆ ಬೇಡಿಕೆಯಿಟ್ಟಿದ್ರೆ, ಉಬರ್ ಪ್ರೀಮಿಯಂ ರೂ. 4,081 ತೋರಿಸುತ್ತಿದೆ ಮತ್ತು ಉಬರ್ ಎಕ್ಸ್ಎಲ್ ರೂ. 5,159 ತೋರಿಸುತ್ತಿದೆ. ಇದು ಅವರ ಮಾಮೂಲಿ ದರವಲ್ಲ ಎಂದೂ ಸುವರ್ಣ ಹೇಳಿದ್ದಾರೆ.
ಇದೇ ಮಾರ್ಗಕ್ಕೆ 800ರಿಂದ 1000 ರೂ.ವರೆಗೆ ವಸೂಲಿ ಮಾಡುತ್ತಿದ್ದು, ಈಗ ಮಳೆಯಾಗುತ್ತಿರುವುದರಿಂದ ದರ ಹೆಚ್ಚಿಸಲಾಗಿದೆ ಎಂದರು. ಟ್ವಿಟರ್ನಲ್ಲೂ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ