Good Idea: ಇವ್ರು ಒಂದು ರೂಪಾಯಿ ಕರೆಂಟ್ ಬಿಲ್​ನ್ನೂ ಕಟ್ಟಲ್ವಂತೆ!

ಕರೆಂಟ್ ಬಿಲ್ (ಸಾಂದರ್ಭಿಕ ಚಿತ್ರ)

ಕರೆಂಟ್ ಬಿಲ್ (ಸಾಂದರ್ಭಿಕ ಚಿತ್ರ)

ಪುದುಚೇರಿಯ ಇವರು ನಿರ್ಮಿಸಿದ ಮನೆ ಎರಡು ಅಂತಸ್ತಿನ 1,400 ಚದರ ಅಡಿಯಲ್ಲಿ ನಿರ್ಮಿಸಲಾದ ಹಸಿರು ಚಾಲಿತ ಮನೆಯಾಗಿದ್ದು ಲಿವಿಂಗ್ ಏರಿಯಾವನ್ನು ಹೊಂದಿದೆ.

 • Share this:

  ನಗರ ಜೀವನ ಎಂದರೆ ವಿಪರೀತ ಖರ್ಚುವೆಚ್ಚಗಳು ಇದ್ದೇ ಇರುತ್ತವೆ. ಇಲ್ಲಿ ಜೀವನ ನಿರ್ವಹಿಸಬೇಕು ಎಂದರೆ ಪತಿ, ಪತ್ನಿ ಇಬ್ಬರು ದುಡಿಯಬೇಕು ಅಂದರೆ ಮಾತ್ರವೇ ಹೆಚ್ಚುವರಿ ಖರ್ಚುಗಳನ್ನು ಸರಿದೂಗಿಸಲು ಸಾಧ್ಯ. ನಗರವಾಸಿಗಳು ಕೂಡ ಆದಷ್ಟು ಖರ್ಚು ಕಡಿಮೆ ಮಾಡುವಂತಹ ವ್ಯವಸ್ಥೆಯನ್ನೇ ಅನ್ವೇಷಿಸುತ್ತಾರೆ. ಆದರೆ ಪುದುಚೇರಿಯ ಸಹೋದರರಾದ ಡಾ ಬ್ರಹ್ಮಾನಂದ ಮೊಹಾಂತಿ ಮತ್ತು ಹಾರ್ಡಿ ಮೊಹಾಂತಿ, 2001 ರಲ್ಲಿ, ಪುದುಚೇರಿಯಲ್ಲಿ ಸೌರಶಕ್ತಿ ಚಾಲಿತ ಮನೆಯನ್ನು (Solar Home) ನಿರ್ಮಿಸಲು ಮುಂದಾದರು. ನಗರ ಕುಟುಂಬಗಳು ಸುಸ್ಥಿರ ಜೀವನಶೈಲಿಯನ್ನು (Lifestyle) ಹೇಗೆ ಅಳವಡಿಸಿಕೊಳ್ಳಬಹುದು ಎಂಬುದನ್ನು ತೋರಿಸಲು ಇವರಿಬ್ಬರು ಬಯಸಿದ್ದರು.


  ಪುದುಚೇರಿಯ ಇವರು ನಿರ್ಮಿಸಿದ ಮನೆ ಎರಡು ಅಂತಸ್ತಿನ 1,400 ಚದರ ಅಡಿಯಲ್ಲಿ ನಿರ್ಮಿಸಲಾದ ಹಸಿರು ಚಾಲಿತ ಮನೆಯಾಗಿದ್ದು ಲಿವಿಂಗ್ ಏರಿಯಾವನ್ನು ಹೊಂದಿದೆ. ಇಂಗಾಲದ ಬಳಕೆಯನ್ನು ಕಡಿಮೆ ಮಾಡಲು ಬಾಹ್ಯ ವಿನ್ಯಾಸ, ಒಳಾಂಗಣ ಮತ್ತು ಮನೆಯ ಅಗತ್ಯ ವಸ್ತುಗಳನ್ನು ನಿಯೋಜಿತವಾಗಿ ಯೋಜಿಸಲಾಗಿದೆ.


  ನೈಸರ್ಗಿಕ ಗಾಳಿ ಬೆಳಕು
  ಹಗಲು ಬೆಳಕು ಮತ್ತು ಉತ್ತಮ ಗಾಳಿ ಮನೆಯೊಳಗೆ ಓಡಾಡುವಷ್ಟು ಅತ್ಯುತ್ತಮವಾಗಿ ಮನೆಯನ್ನು ನಿರ್ಮಿಸಲಾಗಿದೆ. ಲಿವಿಂಗ್ ರೂಮ್ ಮತ್ತು ಇತರ ಸ್ಥಳಗಳು ಹವಾನಿಯಂತ್ರಣಗಳನ್ನು ಹೊಂದಿಲ್ಲ. ಆದರೆ ಫ್ಯಾನ್‌ಗಳು ಮತ್ತು ನೈಸರ್ಗಿಕ ಗಾಳಿಯು ಮನೆಯೊಳಗೆ ಓಡಾಡುವಂತೆ ವ್ಯವಸ್ಥೆಗೊಳಿಸಲಾಗಿದೆ ಎಂದು ಮೊಹಾಂತಿ ತಿಳಿಸಿದ್ದಾರೆ. 


  ಮೊದಲಿಗೆ ಸ್ನೇಹಿತರು ಆಫ್-ಗ್ರಿಡ್ ಸೌರ ವಿದ್ಯುತ್ ವ್ಯವಸ್ಥೆಯನ್ನು ಸ್ಥಾಪಿಸಿದರು. ಅದು ದಿನಕ್ಕೆ 4.8 kWh ವಿದ್ಯುತ್ ಉತ್ಪಾದಿಸುತ್ತದೆ. ಮನೆಯ ಅಗತ್ಯ ಅಗತ್ಯಗಳನ್ನು ಪೂರೈಸುತ್ತದೆ. ಏಳು ಸದಸ್ಯರ ನಗರ ಕುಟುಂಬದ ಅಗತ್ಯಗಳನ್ನು ಎಷ್ಟು ದೂರದ ಗ್ರಿಡ್ ಸೌರಶಕ್ತಿ ಪೂರೈಸುತ್ತದೆ ಎಂಬುದನ್ನು ಪರೀಕ್ಷಿಸಲು ಇದನ್ನು ನಡೆಸಲಾಯಿತು ಎಂದು ಮೊಹಾಂತಿ ತಿಳಿಸಿದ್ದಾರೆ.


  ಶಕ್ತಿ ಸಮರ್ಥ ಉಪಕರಣಗಳ ಖರೀದಿ
  ಉತ್ಪಾದಿಸಿದ ವಿದ್ಯುತ್ ಬಳಸುವ ಉಪಕರಣಗಳ ಬಗ್ಗೆ ಅರಿವಿಲ್ಲದೆ ಸೌರ ಫಲಕಗಳನ್ನು ಸ್ಥಾಪಿಸುವುದು ಸುಸ್ಥಿರತೆಗೆ ದುಬಾರಿ ಮತ್ತು ಅಲ್ಪಾವಧಿಯ ಮಾರ್ಗವಾಗಿದೆ. ಹಾಗಾಗಿ ಅದನ್ನಿಲ್ಲಿ ಅನುಸರಿಸಿಲ್ಲ. ಶಕ್ತಿ-ಸಮರ್ಥ ಉಪಕರಣಗಳನ್ನು ಮಾತ್ರ ಖರೀದಿಸಲು ನಿರ್ಧರಿಸಿದ್ದೇವೆ ಎಂಬುದು ಮೊಹಂತಿ ಅಭಿಪ್ರಾಯವಾಗಿದೆ.
  ಕೈಗಾರಿಕಾ ಉದ್ದೇಶಗಳಿಗಾಗಿ ಹೆಚ್ಚಾಗಿ ಬಳಸಲಾಗುತ್ತಿದ್ದುದರಿಂದ ಕಡಿಮೆ ಸಂಖ್ಯೆಯಲ್ಲಿ ಅದನ್ನು ಒದಗಿಸುವಂತೆ ಮನವೊಲಿಸಲು ಕಂಪನಿಯ ಮುಖ್ಯಸ್ಥರನ್ನು ಸಂಪರ್ಕಿಸಲಾಯಿತು. ಆ ಸಮಯದಲ್ಲಿ ಅದು ದುಬಾರಿಯಾಗಿತ್ತು ಆದರೆ ಬಳಸಿದ ನಂತರ ಯೋಗ್ಯ ಉತ್ಪನ್ನವಾಗಿದೆ ಎಂದು ಮೊಹಂತಿ ಅಂದಿನ ದಿನಗಳನ್ನು ನೆನಪಿಸಿಕೊಂಡರು.


  ವಿದ್ಯುತ್ ಬಿಲ್ ಶೂನ್ಯ
  ಒಂದು ಸಾಮಾನ್ಯ ನಗರ ಕುಟುಂಬವು ಭಾರತದಲ್ಲಿ ತಿಂಗಳಿಗೆ ಸುಮಾರು 300-600 ಯೂನಿಟ್ ವಿದ್ಯುತ್ ಅನ್ನು ಬಳಸುತ್ತಿದ್ದರೆ, ಅವರ ವಿದ್ಯುತ್ ಬಿಲ್ ಶೂನ್ಯವಾಗಿರುತ್ತದೆ ಎಂದು ಬ್ರಹ್ಮಾನಂದ್ ಹಂಚಿಕೊಳ್ಳುತ್ತಾರೆ. ಮೋಡ ಕವಿದ ವಾತಾವರಣದಲ್ಲಿಯೂ ಸೌರ ಫಲಕಗಳು ವಿದ್ಯುತ್ ಉತ್ಪಾದಿಸುತ್ತಿದ್ದುದರಿಂದ ಮೀಟರ್ ಶುಲ್ಕವನ್ನು ಮಾತ್ರವೇ ಅವರು ಪಾವತಿಸುತ್ತಿದ್ದರು ಎಂಬುದು ಬ್ರಹ್ಮಾನಂದ್ ಹೇಳಿಕೆಯಾಗಿದೆ.


  ಅಗತ್ಯಕ್ಕಿಂತ ಹೆಚ್ಚು ವಿದ್ಯುತ್ ಉತ್ಪಾದಿಸುತ್ತಿದೆ
  ಆಫ್-ಗ್ರಿಡ್ ವ್ಯವಸ್ಥೆಯಲ್ಲಿ, ಬ್ಯಾಟರಿಯು ಸಾಮಾನ್ಯವಾಗಿ ಸ್ವೀಕರಿಸುವ 70 ಪ್ರತಿಶತದಷ್ಟು ವಿದ್ಯುಚ್ಛಕ್ತಿಯನ್ನು ನೀಡುತ್ತದೆ, ಉಳಿದ ಮೊತ್ತವು ಚಾರ್ಜಿಂಗ್ ಮತ್ತು ಡಿಸ್ಚಾರ್ಜ್‌ನಲ್ಲಿ ಒಳಗೊಂಡಿರುವ ಪರಿವರ್ತನೆಗಳ ಸಮಯದಲ್ಲಿ ಕಳೆದುಹೋಗುತ್ತದೆ.


  ಇದನ್ನೂ ಓದಿ: Bengaluru ಹುಡುಗನ ಸ್ಟಾರ್ಟಪ್​ ಕಥೆ ಕೇಳಿ, ಜಸ್ಟ್ ಬಿದಿರಿನಿಂದ ತಿಂಗಳಿಗೆ 2 ಕೋಟಿ ಆದಾಯ!


  4.8 kWh ವಿದ್ಯುತ್ ಅನ್ನು ಸಂಗ್ರಹಿಸಬಲ್ಲ ಬ್ಯಾಟರಿಗಳೊಂದಿಗೆ 900-ವ್ಯಾಟ್ ಆಫ್-ಗ್ರಿಡ್ ಸೌರ ವಿದ್ಯುತ್ ವ್ಯವಸ್ಥೆಯೊಂದಿಗೆ ವಿದ್ಯುತ್ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದೇವೆ ಎಂಬುದು ಬ್ರಹ್ಮಾನಂದ್ ಮಾತಾಗಿದೆ. ನಾಲ್ಕೈದು ವರ್ಷಗಳ ನಂತರ ಬ್ಯಾಟರಿ ಸಾಮರ್ಥ್ಯ ಕಡಿಮೆಯಾಗತೊಡಗಿತು. ಆಗ ಗ್ರಿಡ್ ಇಂಟರಾಕ್ಟಿವ್ ರೂಫ್‌ಟಾಪ್ ಸೌರ ವ್ಯವಸ್ಥೆಯನ್ನು ಬಳಸಲು ನಿರ್ಧರಿಸಿದರು ಎಂದು ಬ್ರಹ್ಮಾನಂದ್ ತಿಳಿಸಿದ್ದಾರೆ.


  ಇದನ್ನೂ ಓದಿ: Startup: ಕಡಿಮೆ ಖರ್ಚು, ಹೆಚ್ಚು ಲಾಭ! ಸೌರ ಉಪಕರಣಗಳ ಸ್ಟಾರ್ಟಪ್‌ನಿಂದ ಕೋಟಿಗಟ್ಟಲೆ ಆದಾಯ


  2010 ರಲ್ಲಿ ಜವಾಹರಲಾಲ್ ನೆಹರು ರಾಷ್ಟ್ರೀಯ ಸೌರ ಮಿಷನ್ ಅನ್ನು ಪ್ರಾರಂಭಿಸಿದಾಗ, ಅನೇಕ ರಾಜ್ಯ ಸರ್ಕಾರಗಳು [ಸೌರ] ದ್ಯುತಿವಿದ್ಯುಜ್ಜನಕ ಮೇಲ್ಛಾವಣಿ ಕಾರ್ಯಕ್ರಮಗಳನ್ನು ಉತ್ತೇಜಿಸಿದವು ಎಂಬುದು ಬ್ರಹ್ಮಾನಂದ್ ಮಾತಾಗಿದೆ.

  Published by:ಗುರುಗಣೇಶ ಡಬ್ಗುಳಿ
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು