Success Story: 145 ಕೋಟಿ ಭರ್ಜರಿ ಆಫರ್ ತಿರಸ್ಕರಿಸಿ ತನ್ನದೇ ಸ್ವಂತ ಕಂಪನಿ ಸ್ಥಾಪಿಸಿದ ಯುವತಿ!

ಸುನೀರಾ ಮದಾನಿ

ಸುನೀರಾ ಮದಾನಿ

ಸುನೀರಾ ಮದಾನಿ ಮತ್ತು ಅವರ ಸಹೋದರ ಸಾಲ್ ರೆಹಮೆತುಲ್ಲಾ ಅವರು 2014 ರಲ್ಲಿ ಸ್ಟಾಕ್ಸ್ ಸ್ಟಾರ್ಟಪ್ ಅನ್ನು ಪ್ರಾರಂಭಿಸಿದರು. ಸ್ಟಾಕ್ಸ್ ಪೇಮೆಂಟ್ ಪ್ಲ್ಯಾಟ್‌ಫಾರ್ಮ್ ಆಗಿದ್ದು, ಇತರ ಪೇಮೆಂಟ್ ಪ್ಲ್ಯಾಟ್‌ಫಾರ್ಮ್‌ಗಳಿಗಿಂತ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತದೆ.

  • Share this:
  • published by :

ಜೀವನದಲ್ಲಿ ಯಶಸ್ಸು ಪಡೆಯಲು ಒಮ್ಮೊಮ್ಮೆ ಅದೃಷ್ಟದ ಆಟವನ್ನು ಆಡಬೇಕಾಗುತ್ತದೆ ಅಂತೆಯೇ ಸೋಲಿನಿಂದಲೂ ಪಾಠ (Lesson)  ಕಲಿಯಬೇಕಾಗುತ್ತದೆ. ಬ್ಯುಸಿನೆಸ್ ಕ್ಷೇತ್ರದಲ್ಲಿ ಈ ಅಂಶಗಳು ಅತ್ಯಂತ ಪರಿಣಾಮಕಾರಿಯಾಗಿರುವ ಸತ್ಯಗಳಾಗಿವೆ (Truth). 34 ರ ಹರೆಯದ ಸುನೀರಾ ಮದಾನಿ ಮಹಿಳಾ ಉದ್ಯಮಿಯಾಗಿ ಹೆಸರು ಗಳಿಸಿದವರು. ಆಕೆ ತಮ್ಮ ವೃತ್ತಿ ಬದುಕಿನಲ್ಲಿ ಯಶಸ್ಸು ಸಾಧಿಸಿದ್ದಾರೆ ಎಂದರೆ ಅದಕ್ಕೆ ಆಕೆ ಪಟ್ಟ ಪರಿಶ್ರಮವೇ ಕಾರಣ (Reason).


8200 ಕೋಟಿ ಒಡೆತನದ ಸ್ಟಾರ್ಟಪ್ ಮಾಲಕಿ


ಸುನೀರಾ ಯಶಸ್ವಿ ಸ್ಟಾರ್ಟಪ್ ನಡೆಸುತ್ತಿರುವ ಸಾಹಸೋದ್ಯಮಿ ಮಾತ್ರವಲ್ಲ ಆಕೆ 30,000 ಮಹಿಳಾ ಸಿಇಒಗಳ ಸ್ವಯಂ-ಸಂಘವನ್ನು ರಚಿಸಿದ ದಿಟ್ಟೆ. ಇದೆಲ್ಲಾ ಆಕೆ ಸಾಧಿಸಿದ್ದು ತಮ್ಮ 34 ರ ಹರೆಯದಲ್ಲೇ ಎಂದರೆ ಆಕೆ ಎಷ್ಟೊಂದು ಛಲಗಾತಿ ಎಂಬುದು ಅರಿವಾಗುತ್ತದೆ.


ಬಿಲಿಯನ್ ಡಾಲರ್ ಕಂಪನಿಯ ಒಡತಿಯಾಗಿರುವ ಸುನೀರಾ ಅಮೆರಿಕಾದಂತಹ ದೇಶದಲ್ಲಿ ಏಕಾಂಗಿಯಾಗಿ ಹೋರಾಟ ನಡೆಸಿದವರು ಹಾಗೂ ಈ ಮಟ್ಟಕ್ಕೆ ಬೆಳೆದು ನಿಂತವರು. ಅವರ ಸಾಹಸಗಾಥೆ ಎಂತಹವರಿಗೂ ಪ್ರೇರಣಾದಾಯಕ.


300 ಉದ್ಯೋಗಿಗಳಿಗೆ ಉದ್ಯೋಗ ನೀಡಿರುವ ಸಂಸ್ಥೆ


ಸುನೀರಾ ಮದಾನಿ ಮತ್ತು ಅವರ ಸಹೋದರ ಸಾಲ್ ರೆಹಮೆತುಲ್ಲಾ ಅವರು 2014 ರಲ್ಲಿ ಸ್ಟಾಕ್ಸ್ ಸ್ಟಾರ್ಟಪ್ ಅನ್ನು ಪ್ರಾರಂಭಿಸಿದರು. ಸ್ಟಾಕ್ಸ್ ಪೇಮೆಂಟ್ ಪ್ಲ್ಯಾಟ್‌ಫಾರ್ಮ್ ಆಗಿದ್ದು, ಇತರ ಪೇಮೆಂಟ್ ಪ್ಲ್ಯಾಟ್‌ಫಾರ್ಮ್‌ಗಳಿಗಿಂತ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತದೆ.


ಸ್ಟಾಕ್ಸ್ ಚಂದಾದಾರಿಕೆ ಆಧಾರಿತ ಮಾಸಿಕ ಶುಲ್ಕವನ್ನು ವಿಧಿಸುವ ಪಾವತಿ ಪ್ಲ್ಯಾಟ್‌ಫಾರ್ಮ್ ಆಗಿದ್ದು ಕಳೆದ ಎಂಟು ವರ್ಷಗಳಲ್ಲಿ 300 ಉದ್ಯೋಗಿಗಳಿಗೆ ಉದ್ಯೋಗವನ್ನು ಒದಗಿಸುವ ಮೂಲಕ $23 ಬಿಲಿಯನ್ ಮೌಲ್ಯದ ವಹಿವಾಟುಗಳನ್ನು ಪೂರ್ಣಗೊಳಿಸಿ ಯಶಸ್ವಿಯಾಗಿದೆ.


ಇದನ್ನೂ ಓದಿ: Post Office: ರಿಸ್ಕ್​ ಇಲ್ಲದೇ ನಿಮ್ಮ ಹಣ ಡಬಲ್​ ಮಾಡ್ಬೇಕಾ? ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿ!


ಬ್ಯುಸಿನೆಸ್‌ನತ್ತ ಒಲವು ತೋರಿದ ಅಣ್ಣ ತಂಗಿ


ಆಕೆಯ ಪೋಷಕರು ಪಾಕ್‌ನ ಕರಾಚಿಯಿಂದ ವಲಸೆ ಬಂದವರು. ಜೀವನ ನಿರ್ವಹಣೆಗಾಗಿ ಸುನೀರಾ ಪೋಷಕರು ಬೇರೆ ಬೇರೆ ಬ್ಯುಸಿನೆಸ್‌ಗಳನ್ನು ನಡೆಸಿದರು ಸ್ಟೋರ್‌ಗಳಿಂದ ಆರಂಭಿಸಿ ಕೆಫೆಗಳವರೆಗೆ ವಹಿವಾಟು ನಡೆಸಿದ್ದಾರೆ. ಆದರೆ ಅಷ್ಟೇ ಸೋಲನ್ನು ಅನುಭವಿಸಿದ್ದಾರೆ.


ಸುನೀರಾ ಫ್ಲೋರಿಡಾ ವಿಶ್ವವಿದ್ಯಾಲಯದಿಂದ ಓದು ಮುಗಿಸಿದ ನಂತರ ಅಟ್ಲಾಂಟಾ-ಆಧಾರಿತ ಪಾವತಿ ಪ್ರೊಸೆಸರ್ ಫಸ್ಟ್ ಡೇಟಾದೊಂದಿಗೆ ಕೆಲಸ ಮಾಡಿದರು. ಹೀಗೆ ಶೇಕಡಾವಾರು ಆಧಾರಿತ ವಹಿವಾಟುಗಳನ್ನು ನಡೆಸುವ ವಿಷಯಗಳನ್ನು ಅರಿತುಕೊಂಡರು.


ಪೋಷಕರ ಸಹಾಯದೊಂದಿಗೆ ಸುನೀರಾ ಹಾಗೂ ಆಕೆಯ ಸಹೋದರ ಆರು ತಿಂಗಳು ಕೆಲಸಕ್ಕೆ ರಜೆ ಹಾಕಿ ಬ್ಯುಸಿನೆಸ್ ಕಡೆಗೆ ಒಲವು ತೋರಿದರು.


145 ಕೋಟಿ ಒಪ್ಪಂದ ನಿರಾಕರಿಸಿದ ಸುನೀರಾ


ಒರ್ಲ್ಯಾಂಡೊದಲ್ಲಿ ತಮ್ಮ ವ್ಯವಹಾರಗಳನ್ನು ಆರಂಭಿಸಿದ ಸುನೀರಾ 100 ಕ್ಲೈಂಟ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡರು ಅಂತೆಯೇ ಅವರುಗಳು ಸ್ಟಾಕ್ಸ್ ಅನ್ನು ಖರೀದಿಸಲು ಅವರಿಗೆ $17.5 ಮಿಲಿಯನ್ ಡಾಲರ್ ಒಪ್ಪಂದವನ್ನು ಸುನೀರಾ ಅವರೊಂದಿಗೆ ಮಾಡಲು ಮುಂದಾದರು.


ಆದರೆ ಸುನೀರಾ ಹಾಗೂ ಸಹೋದರ ಈ ಒಪ್ಪಂದವನ್ನು ನಿರಾಕರಿಸಿದರು ಹಾಗೂ ತಾವು ಅತಿ ದೊಡ್ಡ ಪ್ರಮಾಣದಲ್ಲಿ ಬ್ಯುಸಿನೆಸ್ ಮಾಡಬೇಕೆಂದುಕೊಂಡಿದ್ದೇವೆ ಎಂಬುದಾಗಿ ತಿಳಿಸಿದರು.




ಮಹಿಳಾ ಸಿಇಒ ಗಳಿಗಾಗಿ ಸಿಇಒ ಸ್ಕೂಲ್ ಆರಂಭಿಸಿದ ಸುನೀರಾ


ತಮ್ಮ ಸಂಬಳದ ಹಣದಲ್ಲಿಯೇ ಇವರಿಬ್ಬರೂ ಜೀವನ ನಡೆಸುತ್ತಿದ್ದರು ಹಾಗೂ ನಾಲ್ಕು ತಿಂಗಳ ಸಂಬಳದ ಹಣ ಮಾತ್ರ ಕೈಯಲ್ಲಿ ಉಳಿದಾಗ 500000 ಡಾಲರ್ ಸಾಲವನ್ನು ತೆಗೆದುಕೊಂಡರು.


ಆದರೆ ಇವರಿಬ್ಬರ ಪರಿಶ್ರಮದ ಫಲದಿಂದ ಒಂದು ಶತಕೋಟಿ ಡಾಲರ್‌ಗಿಂತ ಹೆಚ್ಚಿನ ಮೌಲ್ಯದಲ್ಲಿ ಒಟ್ಟು ನಿಧಿಯಲ್ಲಿ $263 ಮಿಲಿಯನ್ ಗಳಿಸಿದ್ದರು. ಅಂತೆಯೇ ಸಿಇಒ ಸ್ಕೂಲ್ ಎಂಬ ಗುಂಪನ್ನು ಸಹ ಸುನೀರಾ ಆರಂಭಿಸಿದರು.


ಸುನೀರಾ ಮಹಿಳಾ ಸಮುದಾಯವನ್ನು ಸ್ಥಾಪಿಸಿರುವ ಉದ್ದೇಶ ಅವರಿಗೆ ಸಹಾಯ ಮಾಡುವ ಸದುದ್ದೇಶದಿಂದ ಎಂದು ತಿಳಿಸಿದ್ದಾರೆ. ಸಂಪನ್ಮೂಲ, ಕೋರ್ಸ್‌ಗಳು, ವರ್ಕ್‌ಶಾಪ್‌ಗಳು ಹೀಗೆ ಮಹಿಳಾ ಉದ್ಯಮಿಗಳಿಗೆ ಪ್ರತಿಯೊಂದು ಬಗೆಯಲ್ಲೂ ಆನ್‌ಲೈನ್ ಸಮುದಾಯ ಸಹಾಯ ಮಾಡುತ್ತದೆ.

top videos


    ನಿಮಗೆ ಎಲ್ಲಾ ವಿಧದಲ್ಲಿಯೂ ಅದೃಷ್ಟ ಹುಡುಕಿಕೊಂಡು ಬರಬಹುದು. ಆದರೆ ಯಾವುದು ಅತ್ಯುತ್ತಮವೋ ಅದನ್ನು ಆಯ್ದುಕೊಳ್ಳಿ ಎಂದು ಸುನೀರಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಪೋಡ್‌ಕಾಸ್ಟ್ ಚಾನಲ್ ಅನ್ನು ಕೂಡ ಸುನೀರಾ ನಡೆಸುತ್ತಿದ್ದು, ಮಿಲಾ ಹಾಗೂ ಆನಾ ಹೆಸರಿನ ಇಬ್ಬರು ಮುದ್ದಾದ ಹೆಣ್ಮಕ್ಕಳ ತಾಯಿ ಕೂಡ ಹೌದು.

    First published: