Googleನಲ್ಲೂ ಜನ ಕೆಲಸ ಕಳೆದುಕೊಳ್ಳೋ ದಿನ ಬೇಗ ಬರುತ್ತಂತೆ, Sundar Pichai ಹೀಗಂದ್ರು!

ಹಳೆ ಗಾದೆ ಮಾತೊಂದಿದೆ. ಅದೇನೆಂದರೆ “ಆಡು ಮುಟ್ಟದ ಗಿಡವಿಲ್ಲ” ಎಂದು ಇಂದಿನ ಕಾಲಕ್ಕೆ ಅದನ್ನು ಸ್ವಲ್ಪ ಬದಲಾಯಿಸಿದರೆ “ಗೂಗಲ್‌ ಮುಟ್ಟದ ಯಾವ ಕ್ಷೇತ್ರವೂ ಇಲ್ಲ” ಎಂದು ಹೇಳಬಹುದಷ್ಟು ಗೂಗಲ್‌ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದರೂ ತಪ್ಪಾಗಲಾರದು. ಆದರೆ ಈ ಲೇಖನದಲ್ಲಿ ಗೂಗಲ್‌ನ ಕೆಲವು ಆತಂರಿಕ ಸಮಸ್ಯೆಗಳ ಕುರಿತು ಕೆಲ ಮಾಹಿತಿಗಳನ್ನು ಇಲ್ಲಿ ಹಂಚಿಕೊಳ್ಳಲಿದ್ದೇವೆ.

ಸುಂದರ್‌ ಪಿಚೈ

ಸುಂದರ್‌ ಪಿಚೈ

  • Share this:
ಜಗತ್ತನ್ನು ಆಳುತ್ತಿರುವ ಕಂಪನಿಗಳಲ್ಲಿ (Company) ಅಗ್ರ ಸ್ಥಾನ ಇರುವುದು ಎಂದರೆ ಅದು ಗೂಗಲ್‌ ಕಂಪನಿ ಆಗಿದೆ. ಗೂಗಲ್‌ ಅಲ್ಲಿ (Google) ಕೆಲಸ ಮಾಡುವುದೇ ಭಾಗ್ಯ ಎಂದುಕೊಳ್ಳುವ ಅನೇಕ ಉದ್ಯೋಗಿಗಳು (Employees) ಇದ್ದಾರೆ. ಈ ಗೂಗಲ್‌ ಅಷ್ಟರ ಮಟ್ಟಿಗೆ ಜಗತ್ತಿನಾದ್ಯಂತ ಪ್ರಸಿದ್ದಿಯನ್ನು ಪಡೆದಿದೆ. ಇನ್ನು ಈ ಗೂಗಲ್‌ ಎಲ್ಲ ಕಡೆಯೂ ತನ್ನ ಪ್ರಭಾವವನ್ನು ಬೀರುತ್ತಲೇ ಇದೆ. ಹಳೆ ಗಾದೆ ಮಾತೊಂದಿದೆ. ಅದೇನೆಂದರೆ “ಆಡು ಮುಟ್ಟದ ಗಿಡವಿಲ್ಲ” ಎಂದು ಇಂದಿನ ಕಾಲಕ್ಕೆ ಅದನ್ನು ಸ್ವಲ್ಪ ಬದಲಾಯಿಸಿದರೆ “ಗೂಗಲ್‌ ಮುಟ್ಟದ ಯಾವ ಕ್ಷೇತ್ರವೂ ಇಲ್ಲ” ಎಂದು ಹೇಳಬಹುದಷ್ಟು ಗೂಗಲ್‌ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದರೂ ತಪ್ಪಾಗಲಾರದು. ಆದರೆ ಈ ಲೇಖನದಲ್ಲಿ ಗೂಗಲ್‌ನ ಕೆಲವು ಆತಂರಿಕ ಸಮಸ್ಯೆಗಳ (Problems) ಕುರಿತು ಕೆಲ ಮಾಹಿತಿಗಳನ್ನು ಇಲ್ಲಿ ಹಂಚಿಕೊಳ್ಳಲಿದ್ದೇವೆ.

ಈಗೀನ ಗೂಗಲ್‌ನ ಸಿಇಒ ಸುಂದರ್ ಪಿಚೈ ಎಂದು ಎಲ್ಲರಿಗೂ ತಿಳಿದಿರುವ ವಿಚಾರ ಆಗಿದೆ. ಇವರು ತಮ್ಮ ಗೂಗಲ್‌ ಕಂಪನಿಯ ಅನೇಕ ಉದ್ಯೋಗಿಗಳ ಕಾರ್ಯಕ್ಷಮತೆಯಿಂದ ಸಂತೋಷವಾಗಿಲ್ಲ ಎಂದು ಹೇಳಿಕೆಯಿಂದ ತಿಳಿದು ಬರುತ್ತಿದೆ.

ಹಾಗಿದ್ರೆ ಅವರು ನೀಡಿರುವ ಹೇಳಿಕೆಯೇನು?
ಗೂಗಲ್‌ ಉದ್ಯೋಗಿಗಳಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಮತ್ತು ತಮ್ಮ ಉತ್ಪನ್ನಗಳನ್ನು ಸುಧಾರಿಸಲು ಮತ್ತು ಗ್ರಾಹಕರಿಗೆ ಸಹಾಯ ಮಾಡಲು ಹೇಗೆ ಹೆಚ್ಚು ಗಮನಹರಿಸಬೇಕು ಎಂಬುದರ ಕುರಿತಾಗಿ ಕಂಪನಿಯ ಕಾರ್ಯ ನಿರ್ವಾಹಕರು ಸಭೆ ನಡೆಸಿದಾಗ ಸುಂದರ್‌ ಪಿಚೈ ಈ ಹೇಳಿಕೆ ನೀಡುವ ಮೂಲಕ ಕಂಪನಿಯ ಉದ್ಯೋಗಿಗಳಿಗೆ ಎಚ್ಚರಿಕೆ ಗಂಟೆ ಬಾರಿಸಿದ್ದಾರೆ.

ಇದನ್ನೂ ಓದಿ:  Walmart lays off: ಹಣದುಬ್ಬರದ ಎಫೆಕ್ಟ್: 200 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದ ವಾಲ್​​ಮಾರ್ಟ್

ಸುಂದರ ಪಿಚೈ ಅವರ ಪ್ರಕಾರ “ಗೂಗಲ್‌ ಕಂಪನಿಯಲ್ಲಿ ಮುಂಚೆಗಿಂತ ಈಗ ಕೆಲಸದ ಉತ್ಪಾದಕತೆ ಕಡಿಮೆ ಆಗಿದೆ. ಆದರೆ ಇಲ್ಲಿ ಕೆಲಸ ಮಾಡುವವರ ಸಂಖ್ಯೆ ಅಧಿಕವಾಗಿದೆ. ಆದರೆ ಕೆಲಸ ಉತ್ಪಾದಕತೆ ಮಾತ್ರ ಹೆಚ್ಚಾಗುತ್ತಿಲ್ಲ. ಇದು ಏಕೆ ಎಂದು ನನಗೂ ತಿಳಿಯುತ್ತಿಲ್ಲ. ಕೆಲಸಗಾರರು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲವೇ ಎಂಬುದು ನನ್ನ ಕಾಡುತ್ತಿರುವ ಮೂಲಭೂತ ಪ್ರಶ್ನೆ ಆಗಿದೆ” ಎಂದು ಕಂಪನಿಯ ಉತ್ಪಾದಕತೆ ಕಡಿಮೆ ಆಗಿರುವುದರ ಬಗ್ಗೆ ತಮ್ಮ ಆತಂಕವನ್ನು ಇಲ್ಲಿ ಹೇಳಿದ್ದಾರೆ.

ಸಿಎನ್‌ಬಿಸಿ ವರದಿ ಏನು ಹೇಳುತ್ತಿದೆ?
ಸಿಎನ್‌ಬಿಸಿ ವರದಿ ಹೇಳುವ ಆಧಾರದ ಮೇಲೆ “ಸುಂದರ್‌ ಪಿಚೈ ಅವರು ಉದ್ಯೋಗಿಗಳಿಗೆ ಹೆಚ್ಚು ಮಿಷನ್-ಕೇಂದ್ರಿತವಾಗಿ ಕೆಲಸ ನಿರ್ವಹಿಸಿ, ನಮ್ಮ ಕಂಪನಿಯ ಉತ್ಪನ್ನಗಳ ಮೇಲೆ ಹೆಚ್ಚು ಗಮನಹರಿಸಿ, ಹೆಚ್ಚು ಗ್ರಾಹಕ ಕೇಂದ್ರಿತ ಸಂಸ್ಕೃತಿಯನ್ನು ರಚಿಸಿ ಎಂದು ತಮ್ಮ ಕಂಪನಿಯ ಉದ್ಯೋಗಿಗಳನ್ನು ಕೇಳಿಕೊಂಡಿದ್ದಾರೆ. ನಾವು ಗ್ರಾಹಕರ ಗೊಂದಲವನ್ನು ಕಡಿಮೆ ಮಾಡುವ ಕೆಲಸ ಮಾಡಬೇಕಾಗಿದೆ ಹಾಗೂ ಉತ್ಪನ್ನದ ಶ್ರೇಷ್ಠತೆ ಮತ್ತು ಉತ್ಪಾದಕತೆ ಎರಡನ್ನು ಹೇಗೆ ಉತ್ತಮಗೊಳಿಸಬೇಕು ಎಂಬುದರ ಕುರಿತು ಯೋಚಿಸಬೇಕು" ಎಂದು ಪಿಚೈ ಹೇಳಿದ್ದಾರೆ, ಎಂದು ಹೇಳಿದೆ.

ಇದರ ಕುರಿತು ಗೂಗಲ್‌ ವರದಿ ಏನ್‌ ಹೇಳಿದೆ?
2022 ರ ಎರಡನೇ ತ್ರೈಮಾಸಿಕವು ಗಳಿಕೆ ಮತ್ತು ಆದಾಯದ ವಿಷಯದಲ್ಲಿ "ನಿರೀಕ್ಷೆಗಿಂತ ದುರ್ಬಲವಾಗಿದೆ" ಎಂದು ಗೂಗಲ್‌ ವರದಿ ಮಾಡಿದ ಕೆಲವೇ ದಿನಗಳಲ್ಲಿ ಉದ್ಯೋಗಿಗಳ ಕುರಿತು ಪಿಚೈ ಹೇಳಿರುವ ಈ ಸುದ್ದಿ ಹೊರಗಡೆ ಬಂದಿದೆ, ಇದು ಮೊದಲ ತ್ರೈಮಾಸಿಕದಲ್ಲಿಯೂ ಕೂಡ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ತ್ರೈಮಾಸಿಕದಲ್ಲಿ ಸಾಫ್ಟ್‌ವೇರ್ ದೈತ್ಯವಾಗಿರುವ ಗೂಗಲ್‌ ಶೇಕಡಾ 13 ರಷ್ಟು ತನ್ನ ಲಾಭವನ್ನು ಕಡಿಮೆ ದಾಖಲಿಸಿದೆ ಎಂದು ಮೂಲಗಳು ಹೇಳುತ್ತಿವೆ.

ಇದರ ಪರಿಣಾಮವೇನು?
ಇದರ ಪರಿಣಾಮವಾಗಿ ಗೂಗಲ್‌ ದಕ್ಷತೆ ಮತ್ತು ಉತ್ಪಾದಕತೆ, ಕೌಶಲ್ಯಗಳ ಕೊರತೆ ಮತ್ತು ವೆಚ್ಚವನ್ನು ಉಳಿಸಲು ಕಂಪನಿಯು ಶೀಘ್ರದಲ್ಲೇ ಕೆಲವು ಉದ್ಯೋಗಿಗಳನ್ನು ವಜಾಗೊಳಿಸಬಹುದು ಎಂದು ಗೂಗಲ್‌ ಕಂಪನಿಯ ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಇದರ ಪರಿಣಾಮ, ಉತ್ತಮ ಕೆಲಸ ಮಾಡದೇ ಇರುವ ಉದ್ಯೋಗಿಗಳ ಮೇಲಾಗುವ ಸಾಧ್ಯತೆ ಇದೆ.

ಇದನ್ನೂ ಓದಿ:  Frog and Snake: ಹಾವು, ಕಪ್ಪೆಗಳಿಂದ ಆರ್ಥಿಕತೆಗೆ 1.2 ಲಕ್ಷ ಕೋಟಿ ರೂ. ನಷ್ಟವಂತೆ! ಶಾಕ್ ಆಗ್ಬೇಡಿ ವಿಷಯ ತಿಳ್ಕೊಳ್ಳಿ

ಕಂಪನಿಯು ನೇಮಕಾತಿ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ ಎಂದು ಹೇಳಿದ ಕೆಲವೇ ವಾರಗಳ ನಂತರ ಈ ಪ್ರಕಟಣೆಯು ಬಂದಿದೆ. ಆರ್ಥಿಕ ಹಿಂಜರಿತದ ಭಯದಿಂದಾಗಿ ಹಲವಾರು ದೊಡ್ಡ ಟೆಕ್ ಕಂಪನಿಗಳು ನೂರಾರು ಉದ್ಯೋಗಿಗಳನ್ನು ವಜಾಗೊಳಿಸಿವೆ ಅಥವಾ ನೇಮಕಾತಿಯನ್ನು ನಿಧಾನಗೊಳಿಸಿವೆ. ಹಾಗೆಯೇ ಗೂಗಲ್‌ ಕೂಡ ಮಾಡಬಹುದು.
Published by:Ashwini Prabhu
First published: