ಯಾವುದೇ ಬ್ಯುಸಿನೆಸ್ (Business )ಮಾಡುವುದಿದ್ದರೆ ಅದಕ್ಕೆ ಹೂಡಿಕೆ, ಮಾರುಕಟ್ಟೆ ಹಾಗೂ ಬ್ಯುಸಿನೆಸ್ (Business Idea) ಮಾಡುವ ಸ್ಥಳ ಮುಖ್ಯವಾಗಿರುತ್ತದೆ. ಇದೆಲ್ಲಾ ಅಂಶಗಳನ್ನು ಗಮನದಲ್ಲಿರಿಸಿಕೊಂಡು ನೀವು ವ್ಯಾಪಾರ ನಡೆಸುತ್ತೀರಿ ಎಂದಾದಲ್ಲಿ ವ್ಯಾಪಾರದಲ್ಲಿ ನಷ್ಟ ಕಡಿಮೆ ಇರುತ್ತದೆ ಎಂಬುದು ತಜ್ಞರ ಅನಿಸಿಕೆಯಾಗಿದೆ. ಹಾಗಿದ್ದರೆ ನೀವು ಈ ಬೇಸಿಗೆಯಲ್ಲಿ ಈ ಬ್ಯುಸಿನೆಸ್ ಮಾಡಿದರೆ ಕಂಡಿತವಾಗಿ ಲಾಭವಾಗುವುದು ಖಂಡಿತ ಎನ್ನಬಹುದು.
ಐಸ್‌ಕ್ರೀಮ್ ಪಾರ್ಲರ್ ಬ್ಯುಸಿನೆಸ್ ಆರಂಭಿಸುವುದು ಹೇಗೆ?
ಚಳಿಗಾಲ ಮುಗಿದು ಬೇಸಿಗೆ ಕಾಲಿಟ್ಟಿದೆ ಈ ಸಮಯದಲ್ಲಿ ಮಾಡುವ ಬ್ಯುಸಿನೆಸ್‌ಗಳು ಆ ಕಾಲಕ್ಕೆ ತಕ್ಕಂತಿರಬೇಕು. ಬೇಸಿಗೆಯಲ್ಲಿ ತಂಪು ಪಾನೀಯಗಳು ಹಾಗೂ ಐಸ್‌ಕ್ರೀಮ್‌ನಂತಹ ತಣ್ಣಗಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿರುತ್ತದೆ. ಹಾಗಾಗಿ ಬೇಸಿಗೆಗೆ ಸೂಕ್ತವಾಗಿರುವಂತಹ ಜೊತೆಗೆ ಹೆಚ್ಚು ಲಾಭ ತರುವಂತಹ ಬ್ಯುಸಿನೆಸ್ ಅಂದರೆ ಅದು ಐಸ್‌ಕ್ರೀಮ್ ಬ್ಯುಸಿನೆಸ್ ಆಗಿದೆ. ಕಡಿಮೆ ಹೂಡಿಕೆಯಲ್ಲಿ ಮಾಡಬಹುದಾದ ಈ ಬ್ಯುಸಿನೆಸ್‌ಗೆ ಅಷ್ಟೊಂದು ಶ್ರಮ ಹಾಕಬೇಕಾದ ಅಗತ್ಯವೂ ಇಲ್ಲ. ಬೇಸಿಗೆಯಲ್ಲಿ ಐಸ್‌ಕ್ರೀಮ್‌ಗೆ ಬೇಡಿಕೆ ಕೂಡ ಉತ್ತಮವಾಗಿರುತ್ತದೆ. ಹಾಗಾಗಿ ಐಸ್‌ಕ್ರೀಮ್ ಪಾರ್ಲರ್ ಬ್ಯುಸಿನೆಸ್ ಅನ್ನು ಆರಾಮವಾಗಿ ಆರಂಭಿಸಬಹುದಾಗಿದೆ.
ಐಸ್‌ಕ್ರೀಮ್ ಮಾರಾಟ:
ನಿಮ್ಮದೇ ಐಸ್‌ಕ್ರೀಮ್ ಪಾರ್ಲರ್ ಅನ್ನು ಹೊಂದಿರುವುದು ಎಂದರೆ ಲಾಭ ಕೂಡ ಇದ್ದೇ ಇದೆ. ದೊಡ್ಡ ಕಂಪನಿಗಳು ಐಸ್ ಕ್ರೀಮ್ ಪಾರ್ಲರ್ ಫ್ರ್ಯಾಂಚೈಸ್ ನೀಡುತ್ತವೆ. ಹಾಗಾಗಿ ನಿಮ್ಮ ಸ್ವಂತ ಪಾರ್ಲರ್ ಅನ್ನು ತೆರೆಯುವ ಮೂಲಕ ನೀವು ಒಂದೇ ಸ್ಥಳದಲ್ಲಿ ಅನೇಕ ಬ್ರ್ಯಾಂಡ್‌ಗಳ ಐಸ್‌ಕ್ರೀಮ್‌ಗಳನ್ನು ಮಾರಾಟ ಮಾಡಬಹುದು. ಐಸ್‌ಕ್ರೀಮ್ ತಯಾರಿಯನ್ನು ನೀವೇ ಮಾಡಬಹುದು ಹಾಗೂ ಅದನ್ನು ನೀಡಬಹುದು. ಇದರಿಂದ ನಿಮ್ಮ ಐಸ್‌ಕ್ರೀಮ್ ಮಾರಾಟ ಹೆಚ್ಚುತ್ತದೆ. ಐದು ಲಕ್ಷ ಹೂಡಿಕೆಯಲ್ಲಿ ನಿಮಗೆ ಪಾರ್ಲರ್ ಆರಂಭಿಸಬಹುದಾಗಿದೆ.
ಇದನ್ನೂ ಓದಿ: ICICI Lombard: ಐಸಿಐಸಿಐ ಗ್ರಾಹಕರಿಗೆ ಗುಡ್ ನ್ಯೂಸ್, ಇನ್ಮುಂದೆ ಒಂದು ರೂಪಾಯಿನೂ ಪಾವತಿಸಬೇಕಿಲ್ಲ!
ಐಸ್ ಕ್ರೀಮ್ ತಯಾರಿಸಲು ಬೇಕಾಗುವ ಪದಾರ್ಥಗಳು:
ಐಸ್ ಕ್ರೀಮ್ ತಯಾರಿಸಲು ಹಾಲು, ಹಾಲಿನ ಪುಡಿ, ಕ್ರೀಮ್, ಸಕ್ಕರೆ, ಬೆಣ್ಣೆ ಮತ್ತು ಮೊಟ್ಟೆಯಂತಹ ಪದಾರ್ಥಗಳು ಬೇಕಾಗುತ್ತವೆ. ಇವೆಲ್ಲವೂ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತವೆ. ಈ ವಸ್ತುಗಳ ಜೊತೆಗೆ, ನಿಮಗೆ ಕಲರ್ ಪೌಡರ್, ಫ್ಲೇವರ್ ಪೌಡರ್ ಕೂಡ ಅಗತ್ಯವಿರುತ್ತದೆ.
ಐಸ್ ಕ್ರೀಮ್ ಮೇಕರ್:
ಐಸ್ ಕ್ರೀಮ್ ತಯಾರಿಸಲು ಹಲವು ರೀತಿಯ ಯಂತ್ರಗಳು ಬೇಕಾಗುತ್ತವೆ. ಫ್ರಿಡ್ಜ್, ಮಿಕ್ಸರ್, ಥರ್ಮಾಕೋಲ್ ಐಸ್ ಕೂಲರ್ ಬಾಕ್ಸ್, ಕೂಲಿಂಗ್ ಕಂಡೆನ್ಸರ್, ಉಪ್ಪು ನೀರಿನ ಟ್ಯಾಂಕ್ ಇತ್ಯಾದಿಗಳನ್ನು ಖರೀದಿಸಬೇಕು. ಈ ಎಲ್ಲಾ ವಸ್ತುಗಳು ರೂ 2 ಲಕ್ಷ ಬೆಲೆಯಲ್ಲಿ ಖರೀದಿಸಬಹುದು ಹಾಗೂ ಮಾರುಕಟ್ಟೆಯಲ್ಲಿ ಸ್ವಯಂಚಾಲಿತ ಐಸ್ ಕ್ರೀಮ್ ಯಂತ್ರವೂ ಲಭ್ಯವಿದೆ. ಈ ಯಂತ್ರದಿಂದ ಐಸ್ ಕ್ರೀಮ್ ಅನ್ನು ತ್ವರಿತವಾಗಿ ತಯಾರಿಸಬಹುದು.
ಕಂಪನಿ ನೋಂದಣಿ:
ವ್ಯವಹಾರವನ್ನು ಪ್ರಾರಂಭಿಸುವ ಮೊದಲು ಕಂಪನಿಯ ಹೆಸರನ್ನು ನೋಂದಾಯಿಸಬೇಕು. ಐಸ್ ಕ್ರೀಂ ಎಂಬುದು ಆಹಾರ ಉತ್ಪನ್ನದಲ್ಲಿ ಒಳಗೊಂಡಿರುವುದರಿಂದ ಅದಕ್ಕಾಗಿ ನೀವು FSSAI ನಿಂದ ಪರವಾನಗಿ ಪಡೆಯಬೇಕು.
ಮಾರ್ಕೆಟಿಂಗ್ ಪ್ರಚಾರ:
ನಿಮ್ಮ ಐಸ್ ಕ್ರೀಮ್ ಪಾರ್ಲರ್ ಅನ್ನು ಪ್ರಾರಂಭಿಸುವುದಾದರೆ ಸ್ಥಳ ಬಹಳ ಮುಖ್ಯವಾಗಿದೆ. ಆ ರೀತಿಯಲ್ಲಿ, ಐಸ್‌ಕ್ರೀಮ್ ಪಾರ್ಲರ್ ಬ್ಯುಸಿನೆಸ್‌ನಲ್ಲಿ ಲಾಭ ಗಳಿಸಬಹುದಾಗಿದೆ. ರುಚಿಕರವಾದ ಐಸ್ ಕ್ರೀಮ್ ಮಾರಾಟ ಮಾಡಿದರೆ, ಗ್ರಾಹಕರು ನಿಮ್ಮ ಐಸ್‌ಕ್ರೀಮ್ ಪಾರ್ಲರ್‌ಗೆ ಹೆಚ್ಚು ಹೆಚ್ಚು ಬರುತ್ತಾರೆ. ಐಸ್ ಕ್ರೀಮ್ ಪಾರ್ಲರ್ ಜಾಹೀರಾತು ಮಾಡಬೇಕು ಎಂದಾದಲ್ಲಿ ಸ್ಥಳೀಯವಾಗಿ ಅಥವಾ ಸಾಮಾಜಿಕ ಮಾಧ್ಯಮದ ಮೂಲಕ ಮಾಡಬಹುದಾಗಿದೆ.
ಐಸ್‌ಕ್ರೀಮ್ ಪಾರ್ಲರ್‌ನಿಂದ ಬೇರೆ ಯಾವ ರೀತಿಯ ಬ್ಯುಸಿನೆಸ್ ಮಾಡಬಹುದು
ಐಸ್‌ಕ್ರೀಮ್ ತಯಾರಿಸುವುದು ಹೇಗೆ ಎಂಬುದು ತಿಳಿದಿದ್ದರೆ, ಯಂತ್ರಗಳನ್ನು ಬಳಸಿಕೊಂಡು ಪಾರ್ಲರ್ ಆರಂಭಿಸುವುದು ಕಷ್ಟವಲ್ಲ. ನೀವೇ ತಯಾರಿಸಿದ ಐಸ್‌ಕ್ರೀಮ್ ಅನ್ನು ಹೋಟೆಲ್ ಅಥವಾ ಸ್ಥಳೀಯ ಅಂಗಡಿಗೆ ಐಸ್‌ಕ್ರೀಮ್ ಸರಬರಾಜು ಮಾಡುವ ಮೂಲಕ ಹೆಚ್ಚಿನ ಆದಾಯ ಸಂಪಾದಿಸಬಹುದಾಗಿದೆ.
ಐಸ್‌ಕ್ರೀಮ್ ತಯಾರಿಸಲು ಕಷ್ಟವಾದರೆ ಪ್ರಸಿದ್ಧ ಕಂಪನಿಯಿಂದ ಫ್ರಾಂಚೈಸಿ ಪಡೆದು ಐಸ್‌ಕ್ರೀಮ್ ಮಾರಾಟ ಮಾಡಬಹುದು. ಒಟ್ಟಿನಲ್ಲಿ ಐಸ್‌ಕ್ರೀಮ್ ಎಷ್ಟೇ ಮಾರಾಟ ಮಾಡಿದರೂ ಲಾಭವೇ ಹೆಚ್ಚು. ಆದರೆ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ