Investment Benefits: ಮಗಳ ಶಿಕ್ಷಣ, ಮದುವೆ ಚಿಂತೆಯೇ? ಇಂದಿನಿಂದಲೇ ಹೂಡಿಕೆ ಮಾಡಿ 65 ಲಕ್ಷ ರೂ. ಪಡೆಯಿರಿ

ಈ ಯೋಜನೆ ನಿಮ್ಮ ಮಗಳ ಉತ್ತಮ ಭವಿಷ್ಯಕ್ಕಾಗಿ ಉಪಯುಕ್ತವಾಗಿರುತ್ತದೆ. ಬಹುತೇಕ ಮಧ್ಯಮ ವರ್ಗದ ಜನ ಈ ಯೋಜನೆ ಅಡಿಯಲ್ಲಿ ಹಣ ಹೂಡಿಕೆ ಮಾಡುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಧ್ಯಮ ವರ್ಗದಲ್ಲಿ (Middle Class) ಹೆಣ್ಣು ಮಕ್ಕಳು (Girl Child) ಹುಟ್ಟಿದ್ರೆ ಅವರ ಭವಿಷ್ಯಕ್ಕಾಗಿ ಪೋಷಕರು (Parents) ಅಂದಿನಿಂದಲೇ ಹಣ ಹೂಡಿಕೆ (Money Investment) ಮಾಡಲು ನಿರ್ಧರಿಸುತ್ತಾರೆ. ಈ ಸಮಯದಲ್ಲಿ ಕೈಯಲ್ಲಿರುವ ದೊಡ್ಡ ಮೊತ್ತವನ್ನು FD ರೂಪದಲ್ಲಿ ಸಂಗ್ರಹಿಸುತ್ತಾರೆ. ಇನ್ನು ದಿನನಿತ್ಯ ದುಡಿಯುವ ವರ್ಗಕ್ಕೆ ಸರ್ಕಾರ ಅನೇಕ ಯೋಜನೆಗಳು ತಂದಿದೆ. ಇಲ್ಲಿ ನೀವೂ  ಪ್ರತಿದಿನ ಹಣ ಹೂಡಿಕೆ ಮಾಡಬಹುದಾಗಿದೆ. ಇದರಿಂದಾಗಿ ಮಗಳ ಶಿಕ್ಷಣ ಅಥವಾ ಮದುವೆಗೆ ಹಣದ ಅಗತ್ಯವನ್ನು ಈಗ ಸುಲಭವಾಗಿ ಪೂರೈಸಬಹುದು. ಇದಕ್ಕಾಗಿ ನೀವು ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana) ಯಲ್ಲಿ ಹಣ ಹೂಡಿಕೆ ಮಾಡಬೇಕು. ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗಳ ಹೆಸರಿನಲ್ಲಿ ಈ ಖಾತೆಯನ್ನು ತೆರೆಯಬಹುದು.

ದಿನಕ್ಕೆ 100 ರೂಪಾಯಿಗಳನ್ನು ಉಳಿಸುವ ಮೂಲಕ ನೀವು 15 ಲಕ್ಷ ರೂಪಾಯಿಗಳ ದೊಡ್ಡ ಮೊತ್ತದ ನಿಧಿಯನ್ನು ರಚಿಸಬಹುದು. ಇದರ ಜೊತೆಗೆ ನಿಮ್ಮ ಮಗಳಿಗಾಗಿ 416 ರೂಪಾಯಿಗಳನ್ನು ಉಳಿಸುವ ಮೂಲಕ 65 ಲಕ್ಷ ರೂಪಾಯಿ ಹಣ ಸಂಗ್ರಹಿಸಬಹುದು. ಇದು ನಿಮ್ಮ ಮಗಳ ಉತ್ತಮ ಭವಿಷ್ಯಕ್ಕಾಗಿ ಉಪಯುಕ್ತವಾಗಿರುತ್ತದೆ. ಬಹುತೇಕ ಮಧ್ಯಮ ವರ್ಗದ ಜನ ಈ ಯೋಜನೆ ಅಡಿಯಲ್ಲಿ ಹಣ ಹೂಡಿಕೆ ಮಾಡುತ್ತಿದ್ದಾರೆ.

ಇದನ್ನೂ ಓದಿ:  Business Idea: ನಿಮ್ಮ ಉದ್ಯೋಗದ ಜೊತೆ 50 ಸಾವಿರ ಹೂಡಿಕೆ ಮಾಡಿ ವ್ಯವಹಾರ ಆರಂಭಿಸಿ; ತಿಂಗಳಿಗೆ ಲಕ್ಷಕ್ಕೂ ಅಧಿಕ ಆದಾಯ

ಸುಕನ್ಯಾ ಸಮೃದ್ಧಿ ಯೋಜನೆ ಎಂದರೇನು ಗೊತ್ತಾ?

ಸುಕನ್ಯಾ ಸಮೃದ್ಧಿ ಯೋಜನೆ (SSY) ಹೆಣ್ಣು ಮಕ್ಕಳಿಗಾಗಿ ಕೇಂದ್ರ ಸರ್ಕಾರದ ಸಣ್ಣ ಉಳಿತಾಯ ಯೋಜನೆಯಾಗಿದೆ. ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಯಡಿ SSY ಪ್ರಾರಂಭಿಸಲಾಗಿದೆ. ಸಣ್ಣ ಉಳಿತಾಯ ಯೋಜನೆಯಲ್ಲಿ ಸುಕನ್ಯಾ ಉತ್ತಮ ಬಡ್ಡಿ ದರದ ಯೋಜನೆಯಾಗಿದೆ.

ಖಾತೆ ತೆರೆಯುವುದು ಹೇಗೆ?

ಈ ಯೋಜನೆಯಲ್ಲಿ, ಯಾವುದೇ ವ್ಯಕ್ತಿಯು ತನ್ನ ಇಬ್ಬರು ಹೆಣ್ಣುಮಕ್ಕಳ ಖಾತೆಯನ್ನು ತೆರೆಯಬಹುದು. ಕನಿಷ್ಠ 250 ರೂಪಾಯಿ ಠೇವಣಿಯೊಂದಿಗೆ 10 ವರ್ಷಕ್ಕಿಂತ ಮೊದಲು ಹೆಣ್ಣು ಮಗು ಜನಿಸಿದ ನಂತರ ಸುಕನ್ಯಾ ಸಮೃದ್ಧಿ ಯೋಜನೆಯಡಿ ಖಾತೆಯನ್ನು ತೆರೆಯಬಹುದು.

ಖಾತೆಯನ್ನು ಎಲ್ಲಿ ತೆರೆಯಲಾಗುತ್ತದೆ?

ಸುಕನ್ಯಾ ಸಮೃದ್ಧಿ ಯೋಜನೆಯಡಿ ಖಾತೆಯನ್ನು ಯಾವುದೇ ಅಂಚೆ ಕಛೇರಿ ಅಥವಾ ವಾಣಿಜ್ಯ ಶಾಖೆಯ ಯಾವುದೇ ಅಧಿಕೃತ ಶಾಖೆಯಲ್ಲಿ ತೆರೆಯಬಹುದು. 21 ನೇ ವಯಸ್ಸಿನಲ್ಲಿ, ಹೆಣ್ಣು ಮಕ್ಕಳು ಈ ಖಾತೆಯಿಂದ ಹಣವನ್ನು ಹಿಂಪಡೆಯಬಹುದು.

ನೀವು ಎಷ್ಟು ಹೂಡಿಕೆ ಮಾಡಬಹುದು?

ಪ್ರಸಕ್ತ ಹಣಕಾಸು ವರ್ಷದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ, ನೀವು ವಾರ್ಷಿಕವಾಗಿ ಗರಿಷ್ಠ 1.5 ಲಕ್ಷ ರೂಪಾಯಿಗಳವರೆಗೆ ಠೇವಣಿ ಮಾಡಬಹುದು. ಸದ್ಯ ಶೇ.7.6ರಷ್ಟು ಬಡ್ಡಿ ಸಿಗುತ್ತಿದೆ. ಈ ಯೋಜನೆಯಲ್ಲಿ 9 ವರ್ಷ 4 ತಿಂಗಳಲ್ಲಿ ಮೊತ್ತ ದ್ವಿಗುಣಗೊಳ್ಳಲಿದೆ.

ಇದನ್ನೂ ಓದಿ:  Cement Price: ಮನೆ ಕಟ್ಟುತ್ತಿರೋರಿಗೆ Bad News; ಸಿಮೆಂಟ್ ಬೆಲೆಯಲ್ಲಿ ಹೆಚ್ಚಳ

65 ಲಕ್ಷ ರೂಪಾಯಿ ಪಡೆಯುವುದು ಹೇಗೆ ಗೊತ್ತಾ?

>> ಈ ಯೋಜನೆಯಲ್ಲಿ ನೀವು ಪ್ರತಿ ತಿಂಗಳು ರೂ 3000 ಅಂದರೆ ವಾರ್ಷಿಕ ರೂ 36,000 ಹೂಡಿಕೆ ಮಾಡಿದರೆ, ನೀವು 14 ವರ್ಷಗಳ ನಂತರ 7.6 ಪರ್ಸೆಂಟ್ ವಾರ್ಷಿಕ ಕಾಂಪೌಂಡಿಂಗ್‌ನಲ್ಲಿ ರೂ 9,11,574 ಪಡೆಯುತ್ತೀರಿ.

>> 21 ವರ್ಷಗಳು ಅಂದರೆ ಮೆಚ್ಯೂರಿಟಿಯಲ್ಲಿ ಈ ಮೊತ್ತವು ಸುಮಾರು 15,22,221 ರೂ ಆಗಿರುತ್ತದೆ. ಅಂದರೆ ನಿತ್ಯ 100 ರೂಪಾಯಿ ಉಳಿಸಿ ಠೇವಣಿ ಇಟ್ಟರೆ ಮಗಳಿಗೆ 15 ಲಕ್ಷ ರೂಪಾಯಿ ನಿಧಿ ರಚಿಸಬಹುದು.

>> ಅದೇ ಸಮಯದಲ್ಲಿ, ಪ್ರತಿದಿನ ರೂ 416 ವರೆಗೆ ಉಳಿಸುವ ಮೂಲಕ, ನೀವು 65 ಲಕ್ಷ ರೂಪಾಯಿಗಳನ್ನು ಸೇರಿಸಬಹುದು.

ಈ ಖಾತೆಯು ಎಷ್ಟು ಕಾಲ ಮುಂದುವರಿಯುತ್ತದೆ?

ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯನ್ನು ತೆರೆದ ನಂತರ, ಹೆಣ್ಣು ಮಗುವಿಗೆ 21 ವರ್ಷ ವಯಸ್ಸಾಗುವವರೆಗೆ ಅಥವಾ 18 ವರ್ಷ ವಯಸ್ಸಿನ ನಂತರ ಅವಳು ಮದುವೆಯಾಗುವವರೆಗೆ ಅದನ್ನು ಮುಂದುವರಿಸಬಹುದು.
Published by:Mahmadrafik K
First published: