Infosys ಶುರು ಮಾಡೋಕೆ ಪತಿಗೆ ಸಾಲ ಕೊಟ್ಟಿದ್ರಂತೆ ಸುಧಾ ಮೂರ್ತಿ! ಈ ಬಗ್ಗೆ ಅವರೇ ಹೇಳಿದ್ದಾರೆ ನೋಡಿ

ಸುಧಾ ಮೂರ್ತಿ

ಸುಧಾ ಮೂರ್ತಿ

ಈ ಕಂಪನಿಯನ್ನು ಶುರು ಮಾಡಲು ತಮ್ಮ ಪತಿ ಎನ್.ಆರ್.ನಾರಾಯಣ ಮೂರ್ತಿ ಅವರಿಗೆ 10,000 ರೂಪಾಯಿಗಳನ್ನು ಸಾಲವಾಗಿ ನೀಡುವ ಮೂಲಕ ಇನ್ಫೋಸಿಸ್ ನ "ಮೊದಲ ಹೂಡಿಕೆದಾರ" ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು ಸುಧಾ ಮೂರ್ತಿಅವರು ಎಂಬುದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ.

  • Trending Desk
  • 4-MIN READ
  • Last Updated :
  • Share this:

ಇಂದು ಸಾವಿರಾರು ಉದ್ಯೋಗಿಗಳು (Employees) ಕೆಲಸ ಮಾಡುತ್ತಿರುವ ಜನಪ್ರಿಯ ಐಟಿ ಕಂಪನಿಗಳಲ್ಲಿ ಇನ್ಫೋಸಿಸ್ ಕಂಪನಿ (Infosys Company) ಸಹ ಒಂದು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದರೆ ಈಗ ಹೆಮ್ಮರವಾಗಿ ಬೆಳೆದ ಇನ್ಫೋಸಿಸ್ ಕಂಪನಿ ಒಂದೊಮ್ಮೆ ಕೇವಲ ಬೆರಳೆಣಿಕೆಯಷ್ಟು ಜನರು ಸೇರಿಕೊಂಡು ಶುರು ಮಾಡಿದ್ದು ಅಂತ ಬಹುತೇಕರಿಗೆ ಗೊತ್ತಿದೆ. ಈ ಕಂಪನಿಯನ್ನು ಶುರು ಮಾಡಲು ತಮ್ಮ ಪತಿ ಎನ್.ಆರ್.ನಾರಾಯಣ ಮೂರ್ತಿ (SR Naryana Murthy) ಅವರಿಗೆ 10,000 ರೂಪಾಯಿಗಳನ್ನು ಸಾಲವಾಗಿ ನೀಡುವ ಮೂಲಕ ಇನ್ಫೋಸಿಸ್ ನ "ಮೊದಲ ಹೂಡಿಕೆದಾರ" ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು ಸುಧಾ ಮೂರ್ತಿ (Sudha Murthy) ಅವರು ಎಂಬುದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ.


ಇನ್ಫೋಸಿಸ್​ ಶುರು ಮಾಡೋಕೆ ಸಾಲ ಕೊಟ್ಟಿದ್ರಂತೆ ಸುಧಾ ಮೂರ್ತಿ!


ಪತ್ನಿ ಸುಧಾ ಮೂರ್ತಿ ಅವರು ಕೊಟ್ಟ ಸಾಲದಲ್ಲಿ ಶುರು ಮಾಡಿದ ಚಿಕ್ಕ ಕಂಪನಿ ಈಗ ದೊಡ್ಡ ಐಟಿ ಕಂಪನಿಯಾಗಿದೆ. ಆ ಹಣದಿಂದ, ನಾರಾಯಣ ಮೂರ್ತಿಯವರು ಕಂಪನಿಯನ್ನು ಚಿಕ್ಕದಾಗಿ ಶುರು ಮಾಡಿದ್ದು, ಈಗ ಅದು 17.53 ಬಿಲಿಯನ್ ಡಾಲರ್ ಕಂಪನಿಯಾಗಿ ಬೆಳೆಸಿದ್ದಾರೆ ಮತ್ತು ಇದು ಇದೀಗ 40 ವರ್ಷಗಳನ್ನು ಪೂರೈಸಿದೆ ಅಂತ ಹೇಳಬಹುದು.


ಈ ಬಗ್ಗೆ ಸುಧಾ ಮೂರ್ತಿ ಹೇಳಿದ್ದಿಷ್ಟು!


"ನಾನು ತುಂಬಾನೇ ಸಂತೋಷವಾಗಿದ್ದೇನೆ, ಏಕೆಂದರೆ ಆಗ ಹೂಡಿಕೆ ಮಾಡಿದ 10,000 ರೂಪಾಯಿ ಈಗ ಬಿಲಿಯನ್ ಡಾಲರ್ ಆಗುತ್ತದೆ ಎಂದು ನಾನು ಎಂದಿಗೂ ಕನಸು ಕಂಡಿರಲಿಲ್ಲ" ಎಂದು ಲೇಖಕಿ ಮತ್ತು ಲೋಕೋಪಕಾರಿ ಸುಧಾ ಮೂರ್ತಿ ಅವರು ಸುದ್ದಿ ಮಾಧ್ಯಮಕ್ಕೆ ನೀಡಿದ ಒಂದು ವಿಶೇಷ ಸಂದರ್ಶನದಲ್ಲಿ ಹೇಳಿದರು.


"ಬಹುಶಃ ನಾನು ಭಾರತದಲ್ಲಿಯೇ ಅತ್ಯುತ್ತಮ ಹೂಡಿಕೆದಾರಳಾಗಿರಬಹುದು ಅಥವಾ ಬಹುಶಃ ಜಗತ್ತಿನಲ್ಲಿಯೇ ಅಂತ ಹೇಳಬಹುದು... ನನಗೆ ಅದು ನಿಖರವಾಗಿ ಗೊತ್ತಿಲ್ಲ" ಎಂದು ಸುಧಾ ಹೇಳಿದರು.


ಇದನ್ನೂ ಓದಿ: ಕಾರ್ಪೋರೇಟ್‌ ಕೆಲಸ ಬಿಟ್ಟು ರಾಗಿ ಸಾಮ್ರಾಜ್ಯ ಸೃಷ್ಟಿಸಿದ ಈ ವ್ಯಕ್ತಿ, ವಾರ್ಷಿಕ ವಹಿವಾಟು 1.7 ಕೋಟಿ!


7 ಇಂಜಿನಿಯರ್ ಗಳಿಂದ ಶುರುವಾಗಿತ್ತಂತೆ ಇನ್ಫೋಸಿಸ್


ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ನಾಸ್ಡಾಕ್-ಪಟ್ಟಿ ಮಾಡಲಾದ ಐಟಿ ಕಂಪನಿ ಇನ್ಫೋಸಿಸ್ ಅನ್ನು 1981 ರಲ್ಲಿ ಬರೀ ಏಳು ಎಂಜಿನಿಯರ್ ಗಳು ಸೇರಿಕೊಂಡು ಸ್ಥಾಪಿಸಿದ್ದರು. ಕಳೆದ ವರ್ಷ, ಇದು ಮಾರುಕಟ್ಟೆ ಬಂಡವಾಳೀಕರಣದಲ್ಲಿ 100 ಬಿಲಿಯನ್ ಡಾಲರ್ ತಲುಪಿದ ನಾಲ್ಕನೇ ಭಾರತೀಯ ಕಂಪನಿಯಾಗಿದೆ.


ಇದೆಲ್ಲವನ್ನೂ ದಾಟಿದ ನಂತರ, ಸುಧಾ ಮೂರ್ತಿ ಅವರು ಕಂಪನಿಯನ್ನು ಪ್ರಾರಂಭಿಸಲು ಬಯಸುವವರಿಗೆ ಏನಂತ ಸಲಹೆ ನೀಡಿದ್ದಾರೆ ನೋಡಿ. "ಈ ಪೀಳಿಗೆಯು ತಾಳ್ಮೆಯನ್ನು ಹೊಂದಿರಬೇಕು ಎಂದು ನಾನು ಭಾವಿಸುತ್ತೇನೆ. ಒಂದು ದಿನದಲ್ಲಿ ಏನೂ ಆಗುವುದಿಲ್ಲ. ರೋಮ್ ಅನ್ನು ಅವರು ಹೇಳಿದಂತೆ ಒಂದೇ ದಿನದಲ್ಲಿ ನಿರ್ಮಿಸಲಾಗಿಲ್ಲ. ಒಂದು ಕಂಪನಿಯನ್ನು ನಿರ್ಮಿಸಲು ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಆ ಎಲ್ಲಾ ವಿಷಯಗಳು ಅತ್ಯಗತ್ಯವಾಗುತ್ತವೆ. ಆದರೆ ಇದಕ್ಕೆಲ್ಲಾ ಮುಖ್ಯವಾದದ್ದು ಎಂದರೆ ನೀವು ತಾಳ್ಮೆಯನ್ನು ಹೊಂದಿರಬೇಕು" ಎಂದು ಅವರು ಹೇಳಿದರು.


ಕಷ್ಟಪಟ್ಟು ಕೆಲಸ ಮಾಡಿದರೆ ಯಶಸ್ಸು!


"ಏಳೆಂಟು ವರ್ಷಗಳ ನಂತರ ನಮ್ಮ ಕಂಪನಿಯು ಉತ್ತಮವಾಗಿ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದ್ದು. ನಾವು ಒಂದೇ ವರ್ಷದಲ್ಲಿ ಇಷ್ಟೊಂದು ಬೆಳೆದಿದ್ದೇವೆ ಎಂದಲ್ಲ. ಆದ್ದರಿಂದ ತಾಳ್ಮೆಯಿಂದಿರುವುದು ಮುಖ್ಯವಾಗುತ್ತದೆ. ಕಷ್ಟಪಟ್ಟು ಕೆಲಸ ಮಾಡಿದರೆ ಯಶಸ್ಸು ನಿಮ್ಮನ್ನು ಹಿಂಬಾಲಿಸುಕೊಂಡು ಬರುತ್ತದೆ. ನೀವು ಹಣದ ಹಿಂದೆ ಓಡಿದರೆ, ಹಣವು ನಿಮ್ಮಿಂದ ದೂರ ಓಡಿ ಹೋಗುತ್ತದೆ. ನೀವು ಸದುದ್ದೇಶವನ್ನು ಇಟ್ಟುಕೊಂಡು ಕೆಲಸ ಮಾಡಿದರೆ, ಯಶಸ್ಸು ಖಂಡಿತವಾಗಿಯೂ ನಿಮ್ಮನ್ನು ಹಿಂಬಾಲಿಸುತ್ತದೆ" ಎಂದು ಹೇಳಿದರು.


ಅಳಿಯ ರಿಷಿ ಸುನಕ್ ಬಗ್ಗೆ ಏನ್ ಹೇಳ್ತಾರೆ ಸುಧಾ ಮೂರ್ತಿ?


ಅಕ್ಟೋಬರ್ 25 ರಂದು ಬ್ರಿಟನ್ ಪ್ರಧಾನಿಯಾದ ತಮ್ಮ ಅಳಿಯ ರಿಷಿ ಸುನಕ್ ಅವರ ಬಗ್ಗೆಯೂ ಸುಧಾ ಮೂರ್ತಿ ಅವರು ಮಾತನಾಡಿ "ಅವರು ಪ್ರಧಾನಿಯಾಗಿದ್ದಕ್ಕೆ ನನಗೆ ತುಂಬಾನೇ ಸಂತೋಷವಾಗಿದೆ, ಅದಕ್ಕಿಂತ ಹೆಚ್ಚೇನೂ ಇಲ್ಲ" ಎಂದು ಅವರು ಹೇಳಿದರು.


ಇದನ್ನೂ ಓದಿ: ಕೃಷಿಯಲ್ಲಿ ನಷ್ಟ; ಕೈ ಕಟ್ಟಿ ಕೂರದೇ ಕೋಳಿ ಸಾಕಾಣಿಕೆಯಲ್ಲಿ ಯಶಸ್ಸು ಕಂಡ ರೈತ


ಬ್ರಿಟನ್ ನಲ್ಲಿ ತನ್ನ ಅಳಿಯನ ಪ್ರಗತಿಯನ್ನು ಫಾಲೋ ಮಾಡ್ತೀರಾ ಅಂತ ಕೇಳಿದ್ದಕ್ಕೆ, "ನಾನು ನನ್ನ ಸ್ವಂತ ದೇಶದ ಆಗುಹೋಗುಗಳ ಬಗ್ಗೆ ನೋಡುತ್ತೇನೆ, ಅವರು ಆ ದೇಶವನ್ನು ನೋಡಿಕೊಳ್ಳುತ್ತಾರೆ" ಎಂದು ಅವರು ತಮಾಷೆಯಿಂದ ಹೇಳಿದರು. “ಅವರೊಂದಿಗೆ ಯಾವುದೇ ರಾಜಕೀಯ ವಿಷಯಗಳ ಬಗ್ಗೆ ಮಾತಾಡುವುದಿಲ್ಲ, ಅವರು ನಮಗೆ ಯಾವಾಗಲೂ ಅಳಿಯ ಅಷ್ಟೇ. ನಾನು ಅವರಿಗೆ ಶುಭ ಹಾರೈಸುತ್ತೇನೆ” ಎಂದು ಹೇಳಿದರು.

Published by:ವಾಸುದೇವ್ ಎಂ
First published: